ಹೊಟ್ಟೆಗೆ ಹಾಕೋದನ್ನು ಬಿಟ್ಟರೂ ತೆಳ್ಳಗೆ ಆಗ್ತಿಲ್ವಲ್ಲಾ? ಏಕಿರಬಹುದು?

First Published Oct 13, 2021, 5:57 PM IST

ಸಾಮಾನ್ಯವಾಗಿ ನಾವು ತೂಕ ಕಳೆದುಕೊಳ್ಳುವ (weight lose) ಬಗ್ಗೆ ಯೋಚಿಸಿದಾಗ ಮೊದಲು ಮಾಡೋದು ನಮ್ಮ ಆಹಾರ ಯೋಜನೆ ಮತ್ತು ಸರಿಯಾದ ಎಕ್ಸರ್ ಸೈಜ್ (Exercise) ಮಾಡುವ ಬಗ್ಗೆ. ಈ ದಿನಗಳಲ್ಲಿ ಒಂದು ರೀತಿಯ ಆಹಾರ ಯೋಜನೆ ಅಂತರ್ಜಾಲದಲ್ಲಿ ಲಭ್ಯವಿದೆ ಮತ್ತು ಜನರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ತಮ್ಮ ಆಹಾರವನ್ನು ಬದಲಾಯಿಸುತ್ತಾರೆ. 

ಹಲವು ಡಯಟಿಂಗ್ ಗಳಲ್ಲಿ (Dieting)  ಒಂದು ಬಹಳ ಜನಪ್ರಿಯ ಡಯಟಿಂಗ್ ಶೈಲಿ ಎಂದರೆ ಮಧ್ಯಂತರ ಉಪವಾಸ (Intermittent Fasting ). ಇದು ತುಂಬಾ ಜನಪ್ರಿಯವಾಗುತ್ತಿದೆ. ಇಂಟರ್ಮಿಟೆಂಟ್ ಉಪವಾಸ ಹೆಚ್ಚು ಜನಪ್ರಿಯತೆ ಪಡೆದಿರುವುದು ಏಕೆಂದರೆ ಇದು ವಾಸ್ತವವಾಗಿ ಆಹಾರ ಕ್ರಮಕ್ಕಿಂತ ಹೆಚ್ಚಿನ ರೀತಿಯಲ್ಲಿ ಜೀವನಶೈಲಿಯ (Lifestyle) ಬದಲಾವಣೆಯಾಗಿದೆ. 

ಡಯಟ್ ನಲ್ಲಿ ತೂಕ ಕಳೆದುಕೊಳ್ಳುವುದರ ಜೊತೆಗೆ ಮತ್ತು ಅನೇಕ ಆರೋಗ್ಯ (Health) ಸಮಸ್ಯೆಗಳನ್ನು ದೂರವಿಡುತ್ತದೆ ಎಂದು ಸಂಶೋಧನೆ (reserach) ಸೂಚಿಸುತ್ತದೆ. ಆದಾಗ್ಯೂ ಅದು ಕಾಣುವಷ್ಟು ಸುಲಭವಲ್ಲ. ಯಾವುದೇ ತಪ್ಪುಗಳು (Mistakes) ಇದ್ದರೆ, ಪರಿಣಾಮವು ಗೋಚರಿಸುವುದಿಲ್ಲ ಮತ್ತು ತೂಕ ಇಳಿಸುವಲ್ಲಿ ಪರಿಣಾಮಕಾರಿಯಲ್ಲ.

ವಿಭಿನ್ನ ವಿಧಾನ (different approach) 
ಒಬ್ಬ ವ್ಯಕ್ತಿಯು ತೂಕ ವನ್ನು ಕಳೆದುಕೊಳ್ಳಲು ಬಯಸಿದಾಗ ಇಂಟರ್ಮಿಟೆಂಟ್ ಉಪವಾಸ ಮಾಡುತ್ತಾನೆ. ಉಪವಾಸ ಮತ್ತು ತಿನ್ನುವ ಅವಧಿಗಳ ನಡುವೆ 16 ಗಂಟೆಗಳ ಚಕ್ರವಿದೆ, ಇದರಲ್ಲಿ ಯಾವಾಗ ತಿನ್ನಬೇಕು ಎಂದು ನಿರ್ಧರಿಸಲಾಗುತ್ತದೆ. ವಾಸ್ತವವಾಗಿ, ಏನು ತಿನ್ನಬೇಕು ಎಂಬುದು ಮುಖ್ಯವಲ್ಲ. ಆದರೆ ನೀವು ಸಮಯಕ್ಕೆ ಸರಿಯಾಗಿ ತಿನ್ನದಿದ್ದರೆ, ಪರಿಣಾಮ ಕಡಿಮೆಯಾಗಬಹುದು.

ಹಠಾತ್ ಆಹಾರ ಬದಲಾವಣೆಗಳು (Quick changes in Food)
ಅನೇಕ ಜನರು ಮಧ್ಯಂತರ ಉಪವಾಸವನ್ನು ಮಾಡಲು ದೀರ್ಘ ಅಂತರವನ್ನು ಅಳವಡಿಸಿಕೊಳ್ಳುವ ಮೂಲಕ ಮೊದಲ ದಿನ ತಿನ್ನಲು ಪ್ರಾರಂಭಿಸುತ್ತಾರೆ, ಇದು ತಪ್ಪು ಮಾರ್ಗವಾಗಿದೆ. ಇದರಿಂದ ಸರಿಯಾದ ಪರಿಣಾಮ ಪಡೆಯಲು ಸಾಧ್ಯವಾಗೋದಿಲ್ಲ. 

ಊಟದ ನಡುವೆ ಉಪವಾಸವನ್ನು ಪ್ರಾರಂಭಿಸಿದಾಗ ಉಪವಾಸ (fasting) ಮಾಡುವ ಮಾರ್ಗವೆಂದರೆ ಮೊದಲು ಅಲ್ಪಾವಧಿಯಲ್ಲಿ ಉಪವಾಸ ಮಾಡುವುದು ಮತ್ತು ಕ್ರಮೇಣ ಅದನ್ನು ಹೆಚ್ಚಿಸುವುದು. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ ಮತ್ತು ಬದಲಾಗುತ್ತಿರುವ ಆಹಾರ ಯೋಜನೆಗೆ ದೇಹವು ಹೊಂದಿಕೊಳ್ಳುವಂತೆ ಮಾಡುತ್ತದೆ.

ತಪ್ಪು ಯೋಜನೆಯನ್ನು ಅಳವಡಿಸಿಕೊಳ್ಳುವುದು (wrong planning) 
ಮೊದಲೇ ಹೇಳಿದಂತೆ ನಿಧಾನವಾಗಿ ಉಪವಾಸ ಮಾಡುವ ಬದಲು ಒಮ್ಮೆ 24 ಗಂಟೆಗಳ ಕಾಲ ಉಪವಾಸ ಮಾಡಿದರೆ ಅದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ. ಒಂದು ಯೋಜನೆಯನ್ನು ಮಾಡಿ ಮತ್ತು ಅದನ್ನು ನಿಧಾನವಾಗಿ ಅನುಸರಿಸಿ. ಆಗ ಮಾತ್ರ ನೀವು ಸರಿಯಾದ ರೀತಿಯಲ್ಲಿ ಇಂಟರ್ಮಿಟೆಂಟ್ ಉಪವಾಸವನ್ನು ಮಾಡಲು ಸಾಧ್ಯವಾಗುತ್ತದೆ.

ವಿರಾಮದಲ್ಲಿ ಹೆಚ್ಚು ಕ್ಯಾಲೊರಿಗಳನ್ನು ತಿನ್ನುವುದು(having More calories) 
ಕೆಲವೊಮ್ಮೆ ಜನರು ದಿನವಿಡೀ ಉಪವಾಸ ಮಾಡಿ ನಂತರ ಹೆಚ್ಚಿನ ಕ್ಯಾಲೊರಿಗಳನ್ನು ತೆಗೆದುಕೊಳ್ಳುತ್ತಾರೆ, ಇದು ಹಾನಿಕಾರಕ.
ಕೆಲವರು ಅಂತರದ ಸಮಯದಲ್ಲಿ ಹೆಚ್ಚಿನ ಕ್ಯಾಲೊರಿ ಆಹಾರವನ್ನು ತಿನ್ನಲು ಪ್ರಾರಂಭಿಸುತ್ತಾರೆ, ಇದರಿಂದ ತೂಕ ಇಳಿಕೆಯಾಗುವ ಬದಲು ಏರಿಕೆಯಾಗುತ್ತದೆ. 

ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸದಿರುವುದು (not following healthy diet)
ಊಟದಲ್ಲಿ ಅನಾರೋಗ್ಯಕರ ಮತ್ತು ಹುರಿದ ಆಹಾರವನ್ನು ಸೇವಿಸಿದರೂ, ಮಧ್ಯಂತರ ಉಪವಾಸದಿಂದ ನಿಮಗೆ ಪ್ರಯೋಜನವಾಗುವುದಿಲ್ಲ. ಯಾಕೆಂದರೆ ಎಣ್ಣೆಯಲ್ಲಿ ಕರಿದ, ಹುರಿದ ಆಹಾರಗಳು ಅನಾರೋಗ್ಯಕರವಾಗಿ ತೂಕ ಹೆಚ್ಚಿಸಲು ಕಾರಣವಾಗುತ್ತದೆ. 

ಕಡಿಮೆ ನೀರು ಕುಡಿಯುವುದು (Drinking less water)
ಕೆಲವರು ಉಪವಾಸದ ಸಮಯದಲ್ಲಿ ಕಡಿಮೆ ನೀರನ್ನು ಕುಡಿಯಲು ಪ್ರಾರಂಭಿಸುತ್ತಾರೆ, ಇದು ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು ಮತ್ತು ಶಕ್ತಿಯ ಮಟ್ಟವು ಕಡಿಮೆಯಾಗಲು ಕಾರಣವಾಗಬಹುದು. ಮಧ್ಯಂತರ ಉಪವಾಸದ ಸಮಯದಲ್ಲಿ ಸಾಧ್ಯವಾದಷ್ಟು ನೀರನ್ನು ಕುಡಿಯಿರಿ.

click me!