
ಸಾಮಾನ್ಯವಾಗಿ, ಹವಾಮಾನ ಇಲಾಖೆಯು ಎಲ್ಲಾ ಋತುಮಾನಗಳಲ್ಲೂ ಹವಾಮಾನದ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ. ಹವಾಮಾನ ವೈಪರೀತ್ಯಗಳು ಮತ್ತು ಅವುಗಳ ತೀವ್ರತೆಯನ್ನು ಜನರಿಗೆ ತಿಳಿಸಲು ನಿರ್ದಿಷ್ಟವಾಗಿ ಬಣ್ಣ ಆಧಾರಿತ ಎಚ್ಚರಿಕೆಗಳನ್ನು ನೀಡಲಾಗುತ್ತದೆ. ಅವುಗಳನ್ನು ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣಗಳಲ್ಲಿ ಸಂಕೇತಗಳಾಗಿ ಬಳಸಲಾಗುತ್ತದೆ. ಇಷ್ಟಕ್ಕೂ IMDಯ ಕೆಂಪು, ಕಿತ್ತಳೆ, ಹಳದಿ, ಹಸಿರು ಅಲರ್ಟ್ ಎಂದರೆ ಏನು? ಆ ಬಗ್ಗೆ ಇಲ್ಲಿದೆ ಮಾಹಿತಿ.
ಗ್ರೀನ್ ಅಲರ್ಟ್
ಗ್ರೀನ್ ಅಲರ್ಟ್ ವೇಳೆ ಜನರು ಗಾಬರಿ ಪಡುವ ಅಗತ್ಯವಿಲ್ಲ, ಯಾವುದೇ ಎಚ್ಚರಿಕೆಯ ಫಲಕಗಳಿದ್ದರೆ ಮಾತ್ರ ಹವಾಮಾನ ಇಲಾಖೆಯಿಂದ ಈ ಗ್ರೀನ್ ಅಲರ್ಟ್ ಬಿಡುಗಡೆ ಮಾಡಲಾಗುತ್ತದೆ. ಇದು ಹೆಚ್ಚು ಅಪಾಯಕಾರಿಯಲ್ಲ ಎಂಬುದನ್ನು ಹೇಳುತ್ತದೆ.
ಬಿಸಿಲ ಧಗೆ ಮಧ್ಯೆ ಸ್ವಲ್ಪ ರಿಲ್ಯಾಕ್ಸ್..ಟ್ರಾಫಿಕ್ ಸಿಗ್ನಲ್‌ನಲ್ಲಿ ಗ್ರೀನ್ ರೂಫ್ ಹಾಕಿದ ಸರ್ಕಾರ, ವೀಡಿಯೋ ವೈರಲ್
ಯೆಲ್ಲೋ ಅಲರ್ಟ್
ಯೆಲ್ಲೋ ಅಲರ್ಟ್ ಎಚ್ಚರಿಕೆಯು ಕೆಟ್ಟ ಹವಾಮಾನವನ್ನು ಸೂಚಿಸುತ್ತದೆ. ಹವಾಮಾನ ಇಲಾಖೆ ಈ ಹಳದಿ ಎಚ್ಚರಿಕೆಯನ್ನು ನೀಡಿದರೆ ಜನರು ತುಂಬಾ ಜಾಗರೂಕರಾಗಿರಬೇಕು. ಯಾಕೆಂದರೆ ಇದು ದೈನಂದಿನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಆರೆಂಜ್ ಅಲರ್ಟ್
ಹವಾಮಾನ ಪರಿಸ್ಥಿತಿಗಳು ಕೆಟ್ಟದಾಗಿದ್ದಾಗ ಮಾತ್ರ ಆರೆಂಜ್ ಅಲರ್ಟ್ ನೀಡಲಾಗುತ್ತದೆ. ಈ ಅಲರ್ಟ್ ನೀಡಿದಾಗ ಮೀನುಗಾರಿಕೆ, ಸಂಚಾರ, ರೈಲು ಮತ್ತು ವಿಮಾನಯಾನಕ್ಕೆ ಅಡಚಣೆ ಉಂಟಾಗುತ್ತದೆ. ಆದ್ದರಿಂದ, ಈ ಎಚ್ಚರಿಕೆ ಜಾರಿಯಲ್ಲಿರುವಾಗ ಜನರು ದೂರದ ಸ್ಥಳಗಳಿಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಸೂಚಿಸಲಾಗುತ್ತದೆ
ರೆಡ್ ಅಲರ್ಟ್
ಹವಾಮಾನ ಪರಿಸ್ಥಿತಿಗಳು ತುಂಬಾ ಕೆಟ್ಟದಾಗಿದ್ದಾಗ ಮಾತ್ರ ಈ ರೆಡ್ ಅಲರ್ಟ್‌ನ್ನು ನೀಡಲಾಗುತ್ತದೆ. ಈ ಕೋಡ್ ಅಪಾಯದ ಸಂಕೇತವಾಗಿದೆ. ಈ ಎಚ್ಚರಿಕೆ ಜಾರಿಯಲ್ಲಿರುವಾಗ ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತದೆ. ಇಲ್ಲದಿದ್ದರೆ ಈ ಕೆಟ್ಟ ಹವಾಮಾನ ಪರಿಸ್ಥಿತಿ ಜೀವ ತೆಗೆಯುವಷ್ಟೂ ಅಪಾಯಕಾರಿಯಾಗಿದೆ.
ರಾಜ್ಯದ 25 ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದ ಉಷ್ಣಾಂಶ; ರಾಯಚೂರಲ್ಲಿ 46.7 ಡಿಗ್ರಿ ದಾಖಲು
ಸದ್ಯ ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲಿನ ತಾಪ ಕಾಣಿಸಿಕೊಂಡಿದೆ. ಆಗೀಗ ಮಾತ್ರ ಸ್ಪಲ್ಪ ಮಳೆ ಸುರಿದು ವಾತಾವರಣ ತಂಪಾಗುತ್ತಿದೆ. ಹವಾಮಾನ ಇಲಾಖೆ ಪ್ರಕಾರ ರಾಜ್ಯದಲ್ಲಿ ಈ ಬಿಸಿಗಾಳಿ ಮುಂದಿನ 3 ದಿನಗಳ ಕಾಲ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.