Rahul Gandhi: ಸಮೀಕ್ಷೆಗಳೇ ಬೇಕಿಲ್ಲ..ಫಲಿತಾಂಶ ಸ್ಪಷ್ಟ ಅಂದದ್ದೇಕೆ ಮೋದಿ? ಸತ್ಯವಾಯ್ತಾ ಪ್ರಧಾನಿ ಹೇಳಿದ್ದ ರಾಹುಲ್ ಭವಿಷ್ಯ ?

May 4, 2024, 4:37 PM IST

ಕಾಂಗ್ರೆಸ್ ಪಾಳಯದ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ(Amethi) ಮಾಯವಾಯ್ತು ಗಾಂಧಿ ಪರಿವಾರದ ಠಿಕಾಣಿ. ವಾಯನಾಡ್‌ನಲ್ಲಿ ಸ್ಪರ್ಧಿಸಿದ ರಾಹುಲ್ ಗಾಂಧಿ(Rahul Gandhi), ಈಗ ಅಮೇಥಿನೂ ಬಿಟ್ಟು ರಾಯ್‌ಬರೇಲಿಗೆ(Raebareli) ಶಿಫ್ಟ್ ಆಗಿದ್ದಾರೆ. ದೇಶದಲ್ಲಿ ಲೋಕಸಮರ ಅದೆಷ್ಟರ ಮಟ್ಟಿಗೆ ರಂಗೇರಿದೆ ಅನ್ನೋಕೆ, ಮೋದಿ ಅವರ ಈ ಮಾತುಗಳೇ ಸಾಕ್ಷಿ. ಕಾಂಗ್ರೆಸ್(Congress) ವಿರುದ್ಧ ಗುಡುಗುಡು ಗುಡುಗ್ತಾ ಇರೋ ಮೋದಿ ಅವರಿಗೆ, ಕಾಂಗ್ರೆಸ್ ಪಾಳಯ ಕೈಗೆತ್ತಿಕೊಂಡ ನಿರ್ಣಯ ಬ್ರಹ್ಮಾಸ್ತ್ರವಾಗಿ ಬದಲಾಗಿದೆ. ರಾಹುಲ್ ಗಾಂಧಿ ಸಧ್ಯಕ್ಕೆ ವಯನಾಡಿನ ಸಂಸದ. 2019ರಲ್ಲಿ ವಯನಾಡಲ್ಲಿ ಸ್ಪರ್ಧಿಸಿ ಗೆದ್ದಿದ್ದ ರಾಹುಲ್ ಗಾಂಧಿ, ಈ ಬಾರಿಯೂ ಕೂಡ ಅದೇ ಕ್ಷೇತ್ರದಿಂದ ರಣಾಂಗಣ ಪ್ರವೇಶಿಸಿದ್ರು. ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ, ಎರಡನೇ ಸ್ಪರ್ಧೆಗೆ ಧುಮುಕಿದ್ದಾರೆ. ಇದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ರಾಹುಲ್ ಗಾಂಧಿ ಬಿಜೆಪಿಗೆ(BJP) ಹೆದರಿದ್ದಾರೆ. ಬಿಜೆಪಿಯ ಆ ಒಬ್ಬ ನಾಯಕಿಗೆ(Smriti Irani) ಹೆದಿದ್ದಾರೆ. ಆ ನಾಯಕಿಯ ವಿರುದ್ಧ ಅಮೇಥಿಲಿ ಸ್ಪರ್ಧಿಸೋಕ್ಕಾಗದೆ, ಹೆದರಿ ಓಡಿದ್ದಾರೆ ಅಂತ ಬಿಜೆಪಿ ಮಾತಾಡ್ತಾ ಇದೆ.

ಇದನ್ನೂ ವೀಕ್ಷಿಸಿ:  ಸಂತ್ರಸ್ತೆ ಕಿಡ್ಯ್ನಾಪ್ ಕೇಸ್‌ನಲ್ಲಿ ಅರೆಸ್ಟ್ ಆಗ್ತಾರಾ ರೇವಣ್ಣ? ಹಾಸನದಿಂದ ಮೈಸೂರಿಗೂ ವ್ಯಾಪಿಸಿದ ಪ್ರಜ್ವಲ್ ಪ್ರಹಸನ!