ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ತನಿಖೆ ದಾರಿ ತಪ್ಪಿದೆಯಾ? ಎಸ್‌ಐಟಿ ಅಧಿಕಾರಿಗಳು ಯಾಕೆ ಹೀಗೆ ಮಾಡ್ತಿದ್ದಾರೆ?

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ತನಿಖೆ ದಾರಿ ತಪ್ಪಿದೆಯಾ? ಎಸ್‌ಐಟಿ ಅಧಿಕಾರಿಗಳು ಯಾಕೆ ಹೀಗೆ ಮಾಡ್ತಿದ್ದಾರೆ?

Published : May 04, 2024, 05:00 PM IST

ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್‌ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಆರ್ ನಗರದಲ್ಲಿ ದಾಖಲಾದ ಕೇಸ್‌ನಲ್ಲಿ ರೇವಣ್ಣ ಆರೋಪಿ ನಂ.1 ಆಗಿದ್ದಾರೆ. ಬೆಂಗಳೂರಿನಲ್ಲೇ ಇದ್ದರೂ ಎಸ್ಐಟಿ ಮುಂದೆ ರೇವಣ್ಣ ಹಾಜರಾಗುತ್ತಿಲ್ಲ ಎನ್ನಲಾಗಿದೆ. 

ಪ್ರಜ್ವಲ್ ರೇವಣ್ಣ (Prajwal Revanna) ಅವರು ಭಾಗಿಯಾಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯಕ್ಕೆ (Sexual assault) ಸಂಬಂಧ ಪಟ್ಟ ಪೆನ್‌ಡ್ರೈವ್‌ (Pen drive) ಕೇಸ್‌ನ ತನಿಖೆ ದಾರಿ ತಪ್ಪಿದೆಯಾ ಎನ್ನುವ ಪ್ರಶ್ನೆ ಕಾಡತೊಡಗಿದೆ. ಎಸ್ಐಟಿ ಅಧಿಕಾರಿಗಳ ತನಿಖೆ ಮೇಲೆ ಹಲವು ಅನುಮಾನ ಉಂಟಾಗಿದ್ದು, ಎಸ್ಐಟಿ ಮೇಲೆ ಒತ್ತಡ ಹಾಕಲಾಗುತ್ತಿದೆಯಾ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಕೆಲವು ಘಟನೆಗಳು ಇದಕ್ಕೆ ನಿದರ್ಶನ ಎಂಬಂತೆ ಇವೆ. ಅತ್ಯಾಚಾರ ಸಂತ್ರಸ್ತೆ ಕಿಡ್ನಾಪ್ ಆಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಕಿಡ್ನಾಪ್ ಕೇಸ್‌ನಲ್ಲಿ(Kidnapping case) 2ನೇ ಆರೋಪಿಯನ್ನು ಬಂಧನ ಮಾಡಲಾಗಿದೆಯಾದರೂ ಆರೋಪಿ ನಂ.1 ಹೆಚ್‌ ಡಿ ರೇವಣ್ಣರನ್ನು (HD Revanna) ಮಾತ್ರ ಈವರೆಗೂ ಬಂಧಿಸಿಲ್ಲ ಯಾಕೆ ಎನ್ನುವ ಅನುಮಾನ ಕಾಡತೊಡಗಿದೆ. 
 
ಕೆ.ಆರ್ ನಗರದಲ್ಲಿ ದಾಖಲಾದ ಕೇಸ್‌ನಲ್ಲಿ ರೇವಣ್ಣ ಆರೋಪಿ ನಂ.1 ಆಗಿದ್ದಾರೆ. ಬೆಂಗಳೂರಿನಲ್ಲೇ ಇದ್ದರೂ ಎಸ್ಐಟಿ ಮುಂದೆ ರೇವಣ್ಣ ಹಾಜರಾಗುತ್ತಿಲ್ಲ ಎನ್ನಲಾಗಿದೆ. ಇದರ ಜೊತೆಗೆ ಕಿಡ್ನಾಪ್ ಮಾಡಿದವ ಅರೆಸ್ಟ್ ಆಗಿದ್ದು, ಮಾಡಿಸಿದ ಆರೋಪಿ ಅರೆಸ್ಟ್ ಆಗಿಲ್ಲ ಅನ್ನೋದು ಗೊಂದಲಕ್ಕೆ ಕಾರಣವಾಗಿದೆ. ಬಂಧನವಾಗಿರುವ ಆರೋಪಿ ಭವಾನಿ ರೇವಣ್ಣ (Bhavani Revanna) ಸಂಬಂಧಿ ಸತೀಶ್ ಬಾಬು. ಈ ನಡುವೆ ರೇವಣ್ಣ ಅವರು ವಿಚಾರಣೆಗೂ ಬರದೇ ಜಾಮೀನಿಗೆ ಅರ್ಜಿ ಸಲ್ಲಿಕೆ ಸಹ ಮಾಡಿದ್ದಾರೆ. 

ಇದರ ಜೊತೆಗೆ ಎಲ್ಲಾ ಕಡೆ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್‌ನ(Prajwal Revanna Sex scandal) 3ನೇ ಸಂತ್ರಸ್ತೆ ಎಲ್ಲಿ ಎನ್ನುವ ಪ್ರಶ್ನೆ ಹರಿದಾಡುತ್ತಿದ್ದು, ಸಂತ್ರಸ್ತೆ ಮಗ ಕೆ.ಆರ್ ನಗರ ಪೊಲೀಸರಿಗೆ ಅಪಹರಣದ  ಸಂಬಂಧ ದೂರು ದಾಖಲು ಮಾಡಿದ್ದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ. ಅಪಹರಣ ಆಗಿ 5 ದಿನ ಕಳೆದರೂ ಮಹಿಳೆ ಪತ್ತೆಯಾಗಿಲ್ಲ. ಅದಾಗ್ಯೂ ಆರೋಪಿ ಸತೀಶ್ ಬಾಬು  ಸಹ ಆಕೆ ಎಲ್ಲಿದ್ದಾರೆ ಅನ್ನೋದನ್ನು ಅಧಿಕಾರಿಗಳಿಗೆ ತಿಳಿಸಿಲ್ಲವಂತೆ.

ಇದನ್ನೂ ವೀಕ್ಷಿಸಿ:  ಸಂತ್ರಸ್ತೆ ಕಿಡ್ಯ್ನಾಪ್ ಕೇಸ್‌ನಲ್ಲಿ ಅರೆಸ್ಟ್ ಆಗ್ತಾರಾ ರೇವಣ್ಣ? ಹಾಸನದಿಂದ ಮೈಸೂರಿಗೂ ವ್ಯಾಪಿಸಿದ ಪ್ರಜ್ವಲ್ ಪ್ರಹಸನ!

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more