ಬೇಸಿಗೆಯಲ್ಲಿ ನಾನ್‌ವೆಜ್ ತಿನ್ಬೇಡಿ, ತೂಕ ಹೆಚ್ಚಾಗುವುದರ ಜೊತೆಗೆ ಈ ಎಲ್ಲಾ ಆರೋಗ್ಯ ಸಮಸ್ಯೆ ಕಾಡುತ್ತೆ!

By Vinutha Perla  |  First Published May 4, 2024, 9:24 AM IST

ರಾಜ್ಯದಾದ್ಯಂತ ಬಿಸಿಲಿನ ತಾಪ ಹೆಚ್ಚಾಗಿದೆ. ಆಗೊಮ್ಮೆ ಈಗೊಮ್ಮೆ ಮಳೆ ಬಂದರೂ ಬಿಸಿಲ ಧಗೆ ಮಾತ್ರ ಕಡಿಮೆಯಾಗ್ತಿಲ್ಲ. ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಆರೋಗ್ಯ ಸಮಸ್ಯೆಗಳೂ ಹೆಚ್ತಿವೆ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚು ನಾನ್‌ವೆಜ್‌ ತಿನ್ಬೇಡಿ ಅಂತಾರಲ್ಲ..ಅದ್ಯಾಕೆ..ಆ ಬಗ್ಗೆ ಇಲ್ಲಿದೆ ಮಾಹಿತಿ.


ರಾಜ್ಯದಾದ್ಯಂತ ಬಿಸಿಲಿನ ತಾಪ ಹೆಚ್ಚಾಗಿದೆ. ಆಗೊಮ್ಮೆ ಈಗೊಮ್ಮೆ ಮಳೆ ಬಂದರೂ ಬಿಸಿಲ ಧಗೆ ಮಾತ್ರ ಕಡಿಮೆಯಾಗ್ತಿಲ್ಲ. ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಆರೋಗ್ಯ ಸಮಸ್ಯೆಗಳೂ ಹೆಚ್ತಿವೆ. ಹೀಗಾಗಿ ನಾವು ತಿನ್ನೋ ಆಹಾರದ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕಾಗಿದೆ. ಆರೋಗ್ಯಕರವಾದ ಆಹಾರಗಳು ಮಾತ್ರ ಬೇಸಿಗೆಯಲ್ಲಿ ಹೆಲ್ದೀಯಾಗಿರುವಂತೆ ನೋಡಿಕೊಳ್ಳುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚು ನಾನ್‌ವೆಜ್‌ ತಿನ್ಬೇಡಿ ಅಂತಾರಲ್ಲ..ಅದ್ಯಾಕೆ..ಆ ಬಗ್ಗೆ ಇಲ್ಲಿದೆ ಮಾಹಿತಿ.

ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ
ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿಕನ್ ಸೇವಿಸಿದರೆ, ಇದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಅದರಲ್ಲೂ ಡೀಪ್ ಫ್ರೈ ಮಾಡಿದ ನಂತರ ತಿಂದರೆ, ಇದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚು. ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವು ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಬೊಜ್ಜು ಸೇರಿದಂತೆ ಅನೇಕ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. 

Tap to resize

Latest Videos

undefined

ವಿಜ್ಞಾನಿಗಳು ತಯಾರಿಸಿದ್ದಾರೆ ಮಾಂಸಾಹಾರಿ ಅಕ್ಕಿ; ಬಿರಿಯಾನಿ ಕೂಡ ಮಾಡಬಹುದು
 
ಬಿಸಿ ಆಹಾರ 
ಚಿಕನ್‌ನ್ನು ಶಾಖದ ಆಹಾರವೆಂದು ಪರಿಗಣಿಸಲಾಗುತ್ತದೆ. ಇದನ್ನು ಸೇವಿಸುವ ಅಭ್ಯಾಸ ದೇಹದ ಉಷ್ಣತೆಯನ್ನು ಹೆಚ್ಚಿಸಬಹುದು. ಹೊರಗಿನ ತಾಪಮಾನದಿಂದಾಗಿ ದೇಹ ಹೆಚ್ಚು ಬಿಸಿಯಾಗಬಹುದು. ಬೆವರು ಮತ್ತು ವಾಸನೆಯ ಪ್ರಮಾಣ ಸಹ ಅಧಿಕವಾಗುತ್ತದೆ. ಅನೇಕ ಜನರು ತಿನ್ನುವಾಗಲೂ ಬೆವರುತ್ತಾರೆ. ಇದು ದೇಹದ ಉಷ್ಣತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹೀಗಾಗಿ ಯಾವಾಗಲೂ ಬೇಸಿಗೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಚಿಕನ್ ಸೇವಿಸುವುದು ಉತ್ತಮ.

ತೂಕ ಹೆಚ್ಚಾಗಬಹುದು
ಬಟರ್ ಚಿಕನ್, ಚಿಕನ್ ಫ್ರೈ, ಚಿಕನ್ ಬಿರಿಯಾನಿ ಇತ್ಯಾದಿಗಳನ್ನು ಪ್ರತಿನಿತ್ಯ ತಿನ್ನುವುದರಿಂದ ಬೇಗ ತೂಕ ಹೆಚ್ಚಾಗಬಹುದು. ತೂಕವನ್ನು ಕಡಿಮೆ ಮಾಡಲು ಅಥವಾ ಸರಿಯಾದ ತೂಕವನ್ನು ಕಾಪಾಡಿಕೊಳ್ಳಲು ಬಯಸಿದರೆ, ಬೇಸಿಗೆಯಲ್ಲಿ ಹೆಚ್ಚು ಕೋಳಿಮಾಂಸವನ್ನು ಸೇವಿಸಬಾರದು. 

ಮೂಳೆ ಸಂಬಂಧಿತ ಸಮಸ್ಯೆ
ಬೇಸಿಗೆಯಲ್ಲಿ ಪ್ರತಿದಿನ ಚಿಕನ್ ಸೇವಿಸಿದರೆ ಮೂಳೆ ಸಂಬಂಧಿ ಕಾಯಿಲೆಗಳು ಬರಬಹುದು. ಇದು ಸಂಧಿವಾತದ ಅಪಾಯವನ್ನು ಹೆಚ್ಚಿಸುತ್ತದೆ ಏಕೆಂದರೆ ಕೋಳಿಯಲ್ಲಿ ಯೂರಿಕ್ ಆಮ್ಲವಿದೆ, ಇದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಇದಲ್ಲದೆ, ಇದು ಯುಟಿಐ ಸಮಸ್ಯೆಗೆ ಕಾರಣವಾಗಬಹುದು. 

ಅಯೋಧ್ಯೆಯಲ್ಲಿ ಶುರುವಾಗ್ಬಹುದು KFC; ಆದ್ರೆ ಇದೆ ಒಂದು ಷರತ್ತು !

ನರವೈಜ್ಞಾನಿಕ ಸಮಸ್ಯೆ
ಕೋಳಿಯ ಅತಿಯಾದ ಸೇವನೆಯು ನರಮಂಡಲದ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ವಾಸ್ತವವಾಗಿ, ಕೋಳಿ ಸಾಕಣೆ ಕೇಂದ್ರಗಳಲ್ಲಿ ಆರ್ಸೆನಿಕ್ ಅನ್ನು ನೀಡಲಾಗುತ್ತದೆ. ಆರ್ಸೆನಿಕ್ ಸೇವನೆಯು ಮಾನವರಲ್ಲಿ ಗಂಭೀರ ಕಾಯಿಲೆಗೆ ಕಾರಣವಾಗಬಹುದು. ಆದ್ದರಿಂದ ಅದರ ಅತಿಯಾದ ಸೇವನೆಯನ್ನು ತಪ್ಪಿಸಿ. 

ಬೇಸಿಗೆಯಲ್ಲಿ ಯಾವ ರೀತಿಯ ಆಹಾರಕ್ರಮ ಉತ್ತಮ?
ಬೇಸಿಗೆಯಲ್ಲಿ ಹಗುರವಾದ ಮತ್ತು ಸರಳವಾದ ಆಹಾರವನ್ನು ಅಳವಡಿಸಿಕೊಳ್ಳಿ. ಇದರಿಂದ ದೇಹವು ಆರೋಗ್ಯಕರವಾಗಿರುತ್ತದೆ.  ಸಾಧ್ಯವಾದಷ್ಟು ನೀರು ಅಥವಾ ಜ್ಯೂಸ್ ಕುಡಿಯಿರಿ. ಎಣ್ಣೆ ಮತ್ತು ಮಸಾಲೆಗಳಿಂದ ತಯಾರಿಸಿದ ವಸ್ತುಗಳನ್ನು ಸೇವಿಸಬೇಡಿ. ಇಲ್ಲದಿದ್ದರೆ ದೇಹ ಹೆಚ್ಚು ಬಿಸಿಯಾಗುತ್ತದೆ. ಹೆಚ್ಚು ಶಾಖದ ಅನುಭವವಾಗುತ್ತದೆ.

click me!