Low cholesterol ಅಪಾಯಕಾರಿ… ಇದರಿಂದ ಸಾವು ಕೂಡ ಸಂಭವಿಸಬಹುದು ಎಚ್ಚರ

First Published | Aug 18, 2022, 4:57 PM IST

ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದಂತೆ ತೂಕ ಹೆಚ್ಚಳ, ಬೊಜ್ಜು, ಹೃದಯಕ್ಕೆ ಸಂಬಂಧಿತ ಸಮಸ್ಯೆ ಮೊದಲಾದ ಅಪಾಯಗಳನ್ನು ಎದುರಿಸಬೇಕಾಗಿ ಬರುತ್ತೆ. ಈ ಬಗ್ಗೆ ನೀವು ಈಗಾಗಲೇ ಕೇಳಿರುತ್ತೀರಿ. ಆದರೆ ನಿಮಗೆ ಗೊತ್ತಾ? ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾದರೆ ಅದರಿಂದ ಸಾವು ಸಂಭವಿಸುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ ಅನ್ನೋದು. ಹೌದು. ಕಡಿಮೆ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕ್ಕೆ ಮಾರಕವಾಗಬಹುದು.

ಹೆಚ್ಚುತ್ತಿರುವ ಕೊಲೆಸ್ಟ್ರಾಲ್ (Cholestrol) ಮಟ್ಟ ಮತ್ತು ಅದನ್ನು ನಿಯಂತ್ರಿಸುವ ಮಾರ್ಗಗಳ ಬಗ್ಗೆ ನೀವು ಆಗಾಗ್ಗೆ ಹಲವಾರು ಸಲಹೆಗಳನ್ನು ಕೇಳಿರಬಹುದು. ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಮಾತ್ರ ಸಮಸ್ಯೆ ಇರುತ್ತೆ ಅನ್ನೋದು ನಿಮಗೆ ಗೊತ್ತಿದೆ. ಆದರೆ ಕೊಲೆಸ್ಟ್ರಾಲ್ ಕಡಿಮೆಯಾದ್ರೂ ಕೂಡ ಸಮಸ್ಯೆ ಇರುತ್ತೆ ಅನ್ನೋದು ನಿಮಗೆ ಗೊತ್ತೆ? ಹೌದು ಕೊಲೆಸ್ಟ್ರಾಲ್ ಮಟ್ಟವು ಸಾಮಾನ್ಯಕ್ಕಿಂತ ಕಡಿಮೆ ಇದ್ರೆ ಆರೋಗ್ಯ ಸಮಸ್ಯೆ ಉಂಟಾಗುತ್ತೆ. ಕೆಲವು ಕಾರಣಗಳಿಂದಾಗಿ ಕೊಲೆಸ್ಟ್ರಾಲ್ ಮಟ್ಟ ಗಮನಾರ್ಹವಾಗಿ ಕಡಿಮೆ ಆಗಬಹುದು. ಇದು 50 ಕ್ಕಿಂತ ಕಡಿಮೆ ಇದ್ದರೆ, ಆಗ ಕ್ಯಾನ್ಸರ್ ಮತ್ತು ಮೆದುಳಿನ ರಕ್ತಸ್ರಾವದಂತಹ ಗಂಭೀರ ಸ್ಥಿತಿ ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ, ಜನರು ಸಾಯುತ್ತಾರೆ. ಕಡಿಮೆ ಕೊಲೆಸ್ಟ್ರಾಲ್ ಗೆ ಕಾರಣವೇನು ಮತ್ತು ಅದರಿಂದ ಜನರು ಯಾವ ಸಮಸ್ಯೆ ಹೊಂದಬಹುದು ಎಂಬುದು ಇಲ್ಲಿದೆ.

ಕಡಿಮೆ ಕೊಲೆಸ್ಟ್ರಾಲ್ ಎಂದರೇನು?
ನಮ್ಮ ರಕ್ತದಲ್ಲಿನ(Blood) ಒಟ್ಟು ಕೊಲೆಸ್ಟ್ರಾಲ್ ಮಟ್ಟ 150 ಆಗಿರಬೇಕು. ಹಾಗೆಯೇ, ಕೆಟ್ಟ ಕೊಲೆಸ್ಟ್ರಾಲ್ (ಎಲ್ಡಿಎಲ್) ಮಟ್ಟವು ಸುಮಾರು 100 ಮಿಗ್ರಾಂ / ಡಿಎಲ್ ಆಗಿರಬೇಕು. ಇದನ್ನು ಸಾಮಾನ್ಯ ಮಟ್ಟವೆಂದು ಪರಿಗಣಿಸಲಾಗುತ್ತೆ. ಕೊಲೆಸ್ಟ್ರಾಲ್ ಲೆವೆಲ್ ಇದಕ್ಕಿಂತ ಕಡಿಮೆ ಇದ್ದಾಗ ಅದನ್ನು ಲೋ ಕೊಲೆಸ್ಟ್ರಾಲ್ ಎನ್ನಲಾಗುತ್ತೆ. 

Tap to resize

ಬ್ಲಡ್ ಟೆಸ್ಟ್ ಮಾಡಿಸೋ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ಕಂಡುಹಿಡಿಯಲಾಗುತ್ತೆ. ರಕ್ತದಲ್ಲಿನ ಒಟ್ಟು ಕೊಲೆಸ್ಟ್ರಾಲ್ ಅಂಶವು 120 mg/dL ಗಿಂತ ಕಡಿಮೆ ಇದ್ದಾಗ ಮತ್ತು ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವು 50 mg / dL ಗಿಂತ ಕಡಿಮೆಯಾದಾಗ, ಅದು ಕಡಿಮೆ ಕೊಲೆಸ್ಟ್ರಾಲ್ ಸ್ಥಿತಿಯನ್ನು ಸೃಷ್ಟಿಸುತ್ತೆ. 

ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿರೋ ಸ್ಥಿತಿಯನ್ನು ಹೈಪೋಲಿಪಿಡೆಮಿಯಾ ಅಥವಾ ಹೈಪೋಕೊಲೆಸ್ಟೆರೊಲೆಮಿಯಾ ಎಂದು ಕರೆಯಲಾಗುತ್ತೆ. ಆರೋಗ್ಯಕರವಾಗಿರಲು(Health), ಕೊಲೆಸ್ಟ್ರಾಲ್ ಮಟ್ಟ ಸಾಮಾನ್ಯವಾಗಿರಬೇಕು. ಯಾಕಾಗಿ ಈ ಸಮಸ್ಯೆ ಉಂಟಾಗುತ್ತೆ? ಇದರಿಂದ ಏನೆಲ್ಲಾ ಸಮಸ್ಯೆ ಇದೆ ಅನ್ನೋದನ್ನು ನಾವಿಲ್ಲಿ ತಿಳಿಯೋಣ. 

ಲೋ ಕೊಲೆಸ್ಟ್ರಾಲ್ ಸಮಸ್ಯೆ ಹೇಗೆ ಉಂಟಾಗುತ್ತೆ? ಇಲ್ಲಿದೆ ನೋಡಿ ಕಾರಣ 
ಒಂದು ಕುಟುಂಬದ ರೇರ್ ಡಿಸ್ಆರ್ಡರ್(Disorder)  : ಒಂದು ಕುಟುಂಬದಲ್ಲಿ ಈ ಸಮಸ್ಯೆ ಯಾರಿಗಾದರೂ ಇದ್ದರೆ, ಈ ಸಮಸ್ಯೆ ಅದೇ ಕುಟುಂಬದ ಇನ್ನೊಬ್ಬರಿಗೂ ಕಾಡಬಹುದು. ಆದರೆ ಇದು ಅಪರೂಪದ ಸಂದರ್ಭದಲ್ಲಿ ಮಾತ್ರ ಸಂಭವಿಸುತ್ತೆ. 

ಅಪೌಷ್ಟಿಕತೆ : ನಾವು ಆರೋಗ್ಯದಿಂದ ಇರಲು ಸೇವಿಸುವ ಆಹಾರ ಕೂಡ ತುಂಬಾನೆ ಮುಖ್ಯವಾಗಿರುತ್ತೆ. ಒಂದು ವೇಳೆ ನಮ್ಮ ಆಹಾರ(Food) ಕ್ರಮ ಸರಿಯಾಗಿರದೇ ಇದ್ದರೆ, ಅದರಿಂದ ಅನೇಕ ಸಮಸ್ಯೆಗಳು ಸಂಭವಿಸುತ್ತವೆ. ಆದುದರಿಂದ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಇಲ್ಲವಾದರೆ ಅಪೌಷ್ಟಿಕತೆಯಿಂದಾಗಿ ಲೋ ಕೊಲೆಸ್ಟ್ರಾಲ್ ಸಮಸ್ಯೆ ಕಾಡುತ್ತದೆ. 

ರಕ್ತಹೀನತೆ(Anaemeia) : ಹೌದು ನಿಮಗೆ ರಕ್ತ ಹೀನತೆ ಸಮಸ್ಯೆ ಇದ್ದರೆ ಸಹ ಲೋ ಕೊಲೆಸ್ಟ್ರಾಲ್ ಕಾಡಬಹುದು. ಆದುದರಿಂದ ರಕ್ತ ಹೀನತೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನಿಮಗೆ ಅನೀಮಿಯಾ ಸಮಸ್ಯೆ ಇದ್ದರೆ ಕೂಡಲೇ ವೈದ್ಯರಲ್ಲಿ ಪರೀಕ್ಷೆ ನಡೆಸಿ ಔಷಧಗಳ ಸೇವನೆ ಮಾಡೋದು ಉಚಿತ. 

ಥೈರಾಯ್ಡ್ (Thyroid) : ಥೈರಾಯ್ಡ್ ಸಮಸ್ಯೆ ಹೊಂದಿದ್ದರೂ ಸಹ ಕಡಿಮೆ ಕೊಲೆಸ್ಟ್ರಾಲ್ ಸಮಸ್ಯೆ ಕಾಡುತ್ತದೆ. ಇದಲ್ಲದೇ ಪಿತ್ತಜನಕಾಂಗದ ಕಾಯಿಲೆಗೆ ಒಳಗಾದಾಗ, ಹೆಪಟೈಟಿಸ್ ಸಿ ಸೋಂಕಿನಿಂದಾಗಿ ಮತ್ತು 
ಗಂಭೀರ ಅನಾರೋಗ್ಯ ಅಥವಾ ಗಾಯದ ಸಂದರ್ಭದಲ್ಲಿ ಸಹ ಲೋ ಕೊಲೆಸ್ಟ್ರಾಲ್ ಸಮಸ್ಯೆ ಎದುರಿಸಬೇಕಾಗುತ್ತದೆ. 

ಯಾವಾಗ ಅಪಾಯವು ಹೆಚ್ಚಾಗುತ್ತೆ 
ಕೊಲೆಸ್ಟ್ರಾಲ್ ಮಟ್ಟವು ಸಾಮಾನ್ಯಕ್ಕಿಂತ ಕಡಿಮೆ ಅಪರೂಪದ ಪ್ರಕರಣಗಳಲ್ಲಿ ಕಂಡುಬರುತ್ತೆ. ಅನೇಕ ಬಾರಿ ಇದರಿಂದ ಯಾವುದೇ ಸಮಸ್ಯೆಗಳು ಇರೋದಿಲ್ಲ. ಈ ಮಟ್ಟವು ತುಂಬಾ ಕಡಿಮೆಯಾದಾಗ, ಆತಂಕ, ಖಿನ್ನತೆ(Depression), ಮೆದುಳಿನ ರಕ್ತಸ್ರಾವ ಮತ್ತು ಕ್ಯಾನ್ಸರ್ ನಂತಹ ಅಪಾಯಕಾರಿ ರೋಗಗಳ ಅಪಾಯವು ಹೆಚ್ಚಾಗುತ್ತೆ.

ಗರ್ಭಿಣಿಯರಲ್ಲಿ(Pregnant) ಈ ಸಮಸ್ಯೆಯಿಂದಾಗಿ, ಅಕಾಲಿಕ ಹೆರಿಗೆ ಮತ್ತು ಮಗುವಿನ ತೂಕ ಇಳಿಕೆಯಂತಹ ಸಮಸ್ಯೆ ಉಂಟಾಗಬಹುದು. ಆದಾಗ್ಯೂ, ಈ ಸಮಸ್ಯೆ ಅಪರೂಪದ ಸಂದರ್ಭಗಳಲ್ಲಿಯೂ ಸಂಭವಿಸುತ್ತೆ. ಇದನ್ನು ತಪ್ಪಿಸಲು, ಜನರು ಕಾಲಕಾಲಕ್ಕೆ ತಮ್ಮ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ವೈದ್ಯರ ಸಲಹೆ ಅನುಸರಿಸಬೇಕು.

Latest Videos

click me!