ಸಂವಿಧಾನವು ಆಧುನಿಕ ಭಾರತದ ದಾಖಲೆಯಾದರೂ, ಪ್ರಾಚೀನ ಭಾರತ ಹಾಗೂ ವಿಚಾರಗಳಿಲ್ಲದೆ ಅದನ್ನು ಬರೆಯಲಾಗದು. ಆದರೆ ವೀರ ಸಾವರ್ಕರ್ ಅವರು ಸಂವಿಧಾನದಲ್ಲಿ ಭಾರತೀಯತೆ ಇಲ್ಲ ಎನ್ನುತ್ತಿದ್ದರು.
ನವದೆಹಲಿ (ಡಿ.15): ‘ಸಂವಿಧಾನವು ಆಧುನಿಕ ಭಾರತದ ದಾಖಲೆಯಾದರೂ, ಪ್ರಾಚೀನ ಭಾರತ ಹಾಗೂ ವಿಚಾರಗಳಿಲ್ಲದೆ ಅದನ್ನು ಬರೆಯಲಾಗದು. ಆದರೆ ವೀರ ಸಾವರ್ಕರ್ ಅವರು ಸಂವಿಧಾನದಲ್ಲಿ ಭಾರತೀಯತೆ ಇಲ್ಲ ಎನ್ನುತ್ತಿದ್ದರು. ಈಗ ಬಿಜೆಪಿ ಸಂವಿಧಾನದ ರಕ್ಷಣೆಯ ಬಗ್ಗೆ ಮಾತನಾಡಿ ಅವರನ್ನು ಗೇಲಿ ಮಾಡುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಆಡಳಿತ ಪಕ್ಷದ ಕಾಲೆಳೆದಿದ್ದಾರೆ. ಸಂವಿಧಾನವನ್ನು ದೇಶವು ಸ್ವೀಕರಿಸಿ 75 ವರ್ಷವಾದ ಹಿನ್ನೆಲೆಯಲ್ಲಿ ಅದರ ಕುರಿತು ಲೋಕಸಭೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ತಮ್ಮ ಬಲಗಡೆ ಸಂವಿಧಾನ ಹಾಗೂ ಎಡಗಡೆ ಮನುಸ್ಮೃತಿಯನ್ನು ಇಟ್ಟುಕೊಂಡು ರಾಹುಲ್ ಮಾತನಾಡಿದರು.
‘ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಿದ್ಧಾಂತವಾದಿ ಎಂದು ಪರಿಗಣಿಸುವ ಸಾವರ್ಕರ್ ಅವರು, ‘ನಮ್ಮ ಸಂವಿಧಾನದಲ್ಲಿ ಭಾರತೀಯತೆಯೇ ಇಲ್ಲ. ವೇದಗಳ ಬಳಿಕ ಪೂಜ್ಯನೀಯ ಎಂದು ಪರಿಗಣಿಸಲಾಗುವ ಹಿಂದೂ ಧರ್ಮಗ್ರಂಥವಾದ ಮನುಸ್ಮೃತಿಯು ಶತಮಾನಗಳ ಕಾಲ ನಮ್ಮ ದೇಶವನ್ನು ಮುನ್ನಡೆಸಿದೆ’ ಎನ್ನುತ್ತಿದ್ದರು. ಸಂವಿಧಾನದ ಬದಲು ಮನುಸ್ಮೃತಿಯನ್ನು ಅನುಸರಿಸುವತ್ತ ಸಾವರ್ಕರ್ ಒಲವು ಹೊಂದಿದ್ದರು’ ಎಂದು ಆರೋಪಿಸಿದರು.
150 ಕೋಟಿ ಆಮಿಷವೊಡ್ಡಿದ ವಿಜಯೇಂದ್ರ ಮೇಲೆ ಪ್ರಧಾನಿ ಸಿಬಿಐ ತನಿಖೆ ಮಾಡಿಸ್ಲಿ: ಸಿದ್ದರಾಮಯ್ಯ
ಅಂತೆಯೇ, ‘ನೀವು ಸಂವಿಧಾನದ ಪರವಾಗಿರುವುದು ಒಳ್ಳೆಯದು. ಆದರೆ ಈ ವಿಷಯದಲ್ಲಿ ನಿಮ್ಮ ನಾಯಕನನ್ನು (ಸಾವರ್ಕರ್) ಬೆಂಬಲಿಸುತ್ತೀರಾ? ಇಲ್ಲವೆಂದಾದಲ್ಲಿ ನೀವು ಅವರನ್ನು ನಿಂದಿಸಿ ಗೇಲಿ ಮಾಡಿದಂತೆ ಆಗುತ್ತದೆ’ ಎಂದು ಬಿಜೆಪಿಯತ್ತ ಪ್ರಹಾರ ನಡೆಸಿದರು. ಒಂದು ಕೈಲಿ ಸಂವಿಧಾನ ಹಾಗೂ ಇನ್ನೊಂದು ಕೈಯಲ್ಲಿ ಹಿಡಿದಿದ್ದ ರಾಹುಲ್ ಗಾಂಧಿ, ‘ಸಂವಿಧಾನದ ಬದಲು ಮನುಸ್ಮೃತಿ ಮೂಲಕ ಆಡಳಿತ ನಡೆಸಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಛೇಡಿಸಿದರು.
undefined
ಏಕಲವ್ಯನ ಕತೆ ಹೇಳಿವ ವಾಗ್ದಾಳಿ: ಈ ವೇಳೆ ಅದಾನಿ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದ ರಾಹುಲ್ ಅವರು ಗುರು ದ್ರೋಣಾಚಾರ್ಯರಿಗೆ ತನ್ನ ಹೆಬ್ಬೆರಳನ್ನು ದಕ್ಷಿಣೆಯಾಗಿ ನೀಡಿದ ಏಕಲವ್ಯನ ಕಥೆಯನ್ನು ನೆನಪಿಸುತ್ತಾ, ‘ದ್ರೋಣಾಚಾರ್ಯರು ಏಕಲವ್ಯನ ಬೆರಳುಗಳನ್ನು ಕತ್ತರಿಸಿದಂತೆಯೇ, ನೀವು (ಸರ್ಕಾರ) ದೇಶದ ಯುವಕರ ಹೆಬ್ಬೆರಳನ್ನು ಕತ್ತರಿಸಿದ್ದೀರಿ’ ಎಂದು ವಾಗ್ದಾಳಿ ನಡೆಸಿದರು. ‘ಧಾರಾವಿಯನ್ನು ಅದಾನಿಗೆ ನೀಡುವ ಮೂಲಕ ನೀವು ಅಲ್ಲಿನ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳೆಂಬ ಹೆಬ್ಬೆರಳನ್ನು ಕತ್ತರಿಸಿದಿರಿ. ಅತ್ತ ನ್ಯಾಯಯುತ ಬೆಲೆಗಳಿಗೆ ಬೇಡಿಕೆ ಇಡುತ್ತಿರುವ ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿ ಅವರ ಹೆಬ್ಬೆರಳನ್ನೂ ಬಲಿ ಕೊಡುತ್ತಿದ್ದೀರಿ’ ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿದರು.
ಕಾನೂನು ನನಗೂ ಒಂದೇ, ಸ್ವಾಮೀಜಿಗೂ ಒಂದೇ: ಸಿಎಂ ಸಿದ್ದರಾಮಯ್ಯ
ತಪಸ್ಸೆಂದರೆ ಮೈಬಿಸಿ: ಇದೇ ವೇಳೆ, ‘ತಪಸ್ಸನ್ನು ಮಾಡಿದ ಒಬ್ಬ ಹುಡುಗ (ಏಕಲವ್ಯ) ಬೆಳಿಗ್ಗೆ ಬೇಗನೆ ಬಿಲ್ಲು ಮತ್ತು ಬಾಣದಿಂದ ಹಿಡಿದು ಸಿದ್ಧವಾಗುತ್ತಿದ್ದ. ತಪಸ್ಯಾ ಮತ್ಲಬ್ ಶರೀರ್ ಮೇ ಗರ್ಮಿ ಪೈದಾ ಕರನಾ (ತಪಸ್ಸು ಎಂದರೆ ದೇಹದಲ್ಲಿ ಉಷ್ಣತೆಯನ್ನು ಸೃಷ್ಟಿಸುವುದು)’ ಎಂದು ಹೇಳಿದರು. ಇದು ಸದನದಾದ್ಯಂತ ನಗುವನ್ನು ಉಂಟುಮಾಡಿತು.