ಅವಧಿ ಪೂರ್ವ ಸರ್ಕಾರ ಬಿದ್ದರೆ ಬಾಕಿ ಅವಧಿಗಷ್ಟೇ ಎಲೆಕ್ಷನ್‌: ಏಕ ಚುನಾವಣೆ ವಿಧೇಯಕ

Published : Dec 15, 2024, 06:58 AM IST
ಅವಧಿ ಪೂರ್ವ ಸರ್ಕಾರ ಬಿದ್ದರೆ ಬಾಕಿ ಅವಧಿಗಷ್ಟೇ ಎಲೆಕ್ಷನ್‌: ಏಕ ಚುನಾವಣೆ ವಿಧೇಯಕ

ಸಾರಾಂಶ

ಆಡಳಿತಾರೂಢ ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ದೇಶ ಒಂದು ಚುನಾವಣೆ’ ಕುರಿತ ಸಂವಿಧಾನ ತಿದ್ದುಪಡಿ ಮಸೂದೆ ಸೋಮವಾರ ಸಂಸತ್ತಿನಲ್ಲಿ ಮಂಡನೆಗೆ ಸಿದ್ಧವಾಗಿದೆ.

ನವದೆಹಲಿ (ಡಿ.15): ಆಡಳಿತಾರೂಢ ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ದೇಶ ಒಂದು ಚುನಾವಣೆ’ ಕುರಿತ ಸಂವಿಧಾನ ತಿದ್ದುಪಡಿ ಮಸೂದೆ ಸೋಮವಾರ ಸಂಸತ್ತಿನಲ್ಲಿ ಮಂಡನೆಗೆ ಸಿದ್ಧವಾಗಿದೆ. 5 ವರ್ಷಕ್ಕೂ ಮುನ್ನವೇ ಚುನಾಯಿತ ಸರ್ಕಾರ ಬಿದ್ದರೆ ಉಳಿದ ಅವಧಿಗಷ್ಟೇ ಚುನಾವಣೆ ನಡೆಯಲಿದೆ ಎಂಬ ಮಹತ್ವದ ಅಂಶಗಳು ಇದರಲ್ಲಿದೆ. 5 ವರ್ಷಕ್ಕೂ ಮೊದಲೇ ಸರ್ಕಾರ ಬಿದ್ದರೆ ಸರ್ಕಾರ ಅಪೂರ್ಣವಾಗುತ್ತದೆ. ಉಳಿದ ಅವಧಿಗೆ ಏನು ಮಾಡುತ್ತೀರಿ? ಸರ್ಕಾರ ಇಲ್ಲದೇ ರಾಷ್ಟ್ರಪತಿ ಆಳ್ವಿಕೆ ಹೇರಿ ಆಡಳಿತ ನಡೆಸುತ್ತೀರಾ ಎಂಬ ಪ್ರಶ್ನೆಗಳನ್ನು ವಿಪಕ್ಷಗಳು ಕೇಳಿದ್ದವು. ಅದಕ್ಕೆ ಉತ್ತರ ನೀಡುವ ಯತ್ನವನ್ನು ಗುರುವಾರ ಸಚಿವ ಸಂಪುಟದಲ್ಲಿ ಅಂಗೀಕಾರವಾದ ಮಸೂದೆಯಲ್ಲಿ ಮಾಡಲಾಗಿದೆ.

ಮಸೂದೆಯಲ್ಲೇನಿದೆ?: ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅವಕಾಶ ನೀಡುವುದು ಅಗತ್ಯ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಪದೇ ಪದೇ ಚುನಾವಣೆ ನಡೆಯುವುದರಿಂದ ಆಗುವ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಮಸೂದೆ ಹೇಳಿದೆ. ಈ ವಿಧೇಯಕವು ಸಂವಿಧಾನಕ್ಕೆ ಹೊಸ ಅನುಚ್ಛೇದ ಸೇರ್ಪಡೆಗೊಳಿಸುವುದಲ್ಲದೆ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ರೀತಿಯಲ್ಲಿ ಮೂರು ಅನುಚ್ಛೇದಗಳ ತಿದ್ದುಪಡಿಗೆ ಅವಕಾಶ ಮಾಡಿಕೊಡುತ್ತದೆ.

ಒಂದು ವೇಳೆ ಅವಧಿಗೆ ಮುನ್ನವೇ ಸರ್ಕಾರ ಪತನಗೊಂಡರೆ ಮುಂದೇನು ಎಂಬುದಕ್ಕೂ ಈ ವಿಧೇಯಕದಲ್ಲಿ ಉತ್ತರವಿದೆ. ಅಂಥ ಪರಿಸ್ಥಿತಿಯಲ್ಲಿ 5 ವರ್ಷಗಳ ಅಧಿಕಾರಾವಧಿಯಲ್ಲಿ ಬಾಕಿ ಉಳಿದ ಅವಧಿಗಷ್ಟೇ ಚುನಾವಣೆ ನಡೆಯಲಿದೆ. ಅಂದರೆ (ಉದಾಹರಣೆಗೆ) ಸರ್ಕಾರ ಮೂರೇ ವರ್ಷಕ್ಕೆ ಪತನಗೊಂಡರೆ ಮುಂದಿನ ಎರಡು ವರ್ಷಕ್ಕಷ್ಟೇ ಮರು ಚುನಾವಣೆ ನಡೆಯಲಿದೆ. ಹೊಸ ಸರ್ಕಾರ 3 ವರ್ಷ ಪೂರೈಸಿದ ನಂತರ ಮತ್ತೆ ವಿಧಾನಸಭೆ/ಲೋಕಸಭೆ ಚುನಾವಣೆ ಒಟ್ಟಿಗೇ ನಡೆಯಲಿವೆ.

150 ಕೋಟಿ ಆಮಿಷವೊಡ್ಡಿದ ವಿಜಯೇಂದ್ರ ಮೇಲೆ ಪ್ರಧಾನಿ ಸಿಬಿಐ ತನಿಖೆ ಮಾಡಿಸ್ಲಿ: ಸಿದ್ದರಾಮಯ್ಯ

ನಾಡಿದ್ದು ಮಂಡನೆ ಸಾಧ್ಯತೆ: ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆಗೆ ನಡೆಸಲು ನಾಂದಿ ಹಾಡುವ ‘ಏಕ ದೇಶ-ಏಕ ಚುನಾವಣೆ’ ಮಸೂದೆ ಸೋಮವಾರ ಮಂಡನೆ ಆಗುವ ನಿರೀಕ್ಷೆ ಇದೆ. ಗುರುವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಎಲ್ಲ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಸೂದೆ ಅಂಗೀಕರಿಸುವ ಉದ್ದೇಶವಿರುವ ಕಾರಣ ತಕ್ಷಣ ಇದನ್ನು ಅಂಗೀಕರಿಸುವುದಿಲ್ಲ. ಬದಲಾಗಿ, ವಕ್ಫ್‌ ತಿದ್ದುಪಡಿ ಮಸೂದೆಯಂತೆಯೇ ಇದನ್ನು ಜಂಟಿ ಸದನ ಸಮಿತಿಗೆ (ಜೆಪಿಸಿ) ಕಳಿಸಿ ಅಲ್ಲಿ ಸರ್ವಸಮ್ಮತಿ ಪಡೆಯಲು ಯತ್ನಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!