ಡಿ-ಗ್ಯಾಂಗ್‌ನ ನಂದೀಶ್‌ಗಿಲ್ಲ ಜಾಮೀನು!  ಕುಟುಂಬಸ್ಥರು ಈ ಬಗ್ಗೆ ಹೇಳೋದೇನು?

ಡಿ-ಗ್ಯಾಂಗ್‌ನ ನಂದೀಶ್‌ಗಿಲ್ಲ ಜಾಮೀನು! ಕುಟುಂಬಸ್ಥರು ಈ ಬಗ್ಗೆ ಹೇಳೋದೇನು?

Published : Dec 14, 2024, 11:26 PM ISTUpdated : Dec 14, 2024, 11:32 PM IST

ಚಿತ್ರುದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 7 ಜನರಿಗೆ ಹೈಕೋರ್ಟ್ ಜಾಮೀನು ನೀಡಿದೆ. ದರ್ಶನ್‌ಗೆ ಶಸ್ತ್ರಚಿಕಿತ್ಸೆಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಆದರೆ ನಂದೀಶ್‌ ಗೆ ಜಾಮೀನು ಸಿಕ್ಕಿಲ್ಲ.

ಚಿತ್ರುದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಮತ್ತು ನಟಿ ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳಿಗೆ  ಹೈಕೋರ್ಟ್‌ ಜಾಮೀನು ನೀಡಿದೆ. ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್‌, ಆತನ ಗೆಳತಿ ಪವಿತ್ರಾ ಗೌಡ, ಮ್ಯಾನೇಜರ್‌ ಆರ್‌.ನಾಗರಾಜು, ದರ್ಶನ್‌ ಕಾರು ಚಾಲಕ ಎಂ.ಲಕ್ಷ್ಮಣ್‌, ಆಪ್ತರಾದ ಅನುಕುಮಾರ್‌, ಜಗದೀಶ್‌ ಮತ್ತು ಪ್ರದೋಷ್‌ ರಾವ್‌ ಅವರ ಜಾಮೀನು ಸಿಕ್ಕಿದೆ. 

 ಬೆನ್ನುಹುರಿ ಸಮಸ್ಯೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ದರ್ಶನ್‌ಗೆ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿ ಹೈಕೊರ್ಟ್‌ ಅ.30ರಂದು ಆದೇಶಿಸಿತ್ತು. ದರ್ಶನ್‌ ಆಸ್ಪತ್ರೆಗೆ ದಾಖಲಾಗಿದ್ದು, ಡಿ.11ರಂದು (ಬುಧವಾರ) ದರ್ಶನ್‌ಗೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ ಎಂಬುದಾಗಿ ಅವರ ಪರ ವಕೀಲರು ಡಿ.9ರಂದು ಕೋರ್ಟ್‌ಗೆ ತಿಳಿಸಿದ್ದರು. ಅಂದೇ ಜಾಮೀನುಗಳ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸುವವರೆಗೆ ಮಧ್ಯಂತರ ಜಾಮೀನನ್ನು ನ್ಯಾಯಾಲಯವು ವಿಸ್ತರಿಸಿತ್ತು.  

ನಟ ದರ್ಶನ್ ನಂಬಿ ಇದೀಗ ಎ5 ಆರೋಪಿಯಾಗಿ ಜೈಲು ಸೇರಿರುವ ನಂದೀಶ್ ಆತನ ಕುಟುಂಬಕ್ಕೆ ಆಸರೆಯಾಗಿದ್ದವನು. ಈಗ ಜೈಲು ಸೇರಿರುವ ಆತನನ್ನು ನೋಡಿಕೊಂಡು ಬರಲೂ ಕುಟುಂಬದ ಬಳಿ ಹಣ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ದಾಸನನ್ನು ನಂಬಿ ಜೈಲು ಪಾಲಾಗಿರುವ ಪ್ರಕರಣದ ಎ5 ಆರೋಪಿ ನಂದೀಶ್ ಕುಟುಂಬಸ್ಥರ ಆತಂಕ ಹೆಚ್ಚಾಗಿದೆ. ನಂದೀಶ್ ಜಾಮೀನು ಕೋರಿ ಹೈಕೋರ್ಟ್​​ಗೆ ಅರ್ಜಿಯೇ ಸಲ್ಲಿಸಿಲ್ಲ. ಆತನ ಕುಟುಂಬದವರೀಗ ದರ್ಶನ್ ನೆರವಿಗಾಗಿ ಹಾತೊರೆಯುತ್ತಿದ್ದಾರೆ.

22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
Read more