ಬೇಬಿ ಪೌಡರ್ ಮಗುವಿನ ಆರೋಗ್ಯಕ್ಕೆ ಡೆಂಜರ್ ಆಗಬಹುದೇ?

Published : Jun 04, 2022, 05:12 PM IST

ಪುಣಾಣಿ ಮಕ್ಕಳನ್ನು ಸ್ನಾನ ಮಾಡಿಸಿದ ಬಳಿಕ, ಮಗುವಿನ ಮೈಮೇಲೆ ಪೂರ್ತಿಯಾಗಿ ಬೇಬಿ ಪೌಡರ್ ಬಳಕೆ ಮಾಡುತ್ತಾರೆ. ನೀವು ಕೂಡ ಅದನ್ನೇ ಮಾಡ್ತೀರಿ ಅಲ್ವಾ? ಬೇಬಿ ಪೌಡರ್ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಮಗುವಿನ ಚರ್ಮವನ್ನು ಡ್ರೈ ಆಗಿಸಿ ಆರಾಮದಾಯಕವಾಗಿರಿಸುತ್ತದೆ, ವಿಶೇಷವಾಗಿ ನ್ಯಾಪಿ ರಾಷೆಸ್ ಗಳನ್ನು ನಿವಾರಿಸಿ ಆರಾಮ ನೀಡಲು ಸಹ ಪೌಡರ್ ಸಹಕಾರಿ. ಅದಕ್ಕಾಗಿಯೇ ಎಲ್ಲಾ ಹೊಸ ಅಮ್ಮಂದಿರು ಬೇಬಿ ಪೌಡರ್ ಬಳಸುತ್ತಾರೆ. 

PREV
111
ಬೇಬಿ ಪೌಡರ್ ಮಗುವಿನ ಆರೋಗ್ಯಕ್ಕೆ ಡೆಂಜರ್ ಆಗಬಹುದೇ?

ಸಾಮಾನ್ಯವಾಗಿ, ಇದನ್ನು ಮಗುವಿನ ಚರ್ಮದ ಮೇಲೆ ನೇರವಾಗಿ ಹಚ್ಚಲಾಗುತ್ತದೆ, ಮಗುವಿನ ಚರ್ಮ ತುಂಬಾನೆ ಸೂಕ್ಷ್ಮವಾಗಿರುತ್ತೆ, ಆದ್ದರಿಂದ ಯಾವುದೇ ಬೇಬಿ ಪೌಡರ್ (Baby powder)ಅನ್ನು ಆಯ್ಕೆ ಮಾಡುವಾಗ ನೀವು ಜಾಗರೂಕರಾಗಿರಬೇಕು. ಸಂಬಂಧಪಟ್ಟ ಆಥೋರಿಟಿಯಿಂದ ಅನುಮೋದಿಸಲ್ಪಟ್ಟ ಮತ್ತು ಪ್ರಮಾಣೀಕರಿಸಿದ ಬೇಬಿ ಪೌಡರ್ ಗಳು ಮಾತ್ರ ಸುರಕ್ಷಿತವಾಗಿವೆ. ಅವುಗಳನ್ನು ಮಾತ್ರ ನೀವು ಆಯ್ಕೆ ಮಾಡಬೇಕು. 

211

ನೀವು ಯಾವುದೇ ಬೇಬಿ ಪೌಡರ್ ಬಳಸುವ ಮೊದಲು, ಅವುಗಳ ಕಂಟೇನರ್ ನಲ್ಲಿ(Container) ಬರೆಯಲಾದ ಸೂಚನೆಗಳನ್ನು ಓದಬೇಕು. ಮಕ್ಕಳಿಗೆ ಪೌಡರ್ ನ ಬಳಕೆಯು ಹಾನಿಕಾರಕವೇ ಅಥವಾ ಅದನ್ನು ಬಳಸುವುದು ಸರಿಯಾಗಿದ್ದೆಯೇ? ಅನ್ನೋದನ್ನು ತಿಳಿಯಬೇಕು. ಅದಕ್ಕಾಗಿ ಮಗುವಿಗೆ ಸರಿಯಾದ ಬೇಬಿ ಪೌಡರ್ ಅನ್ನು ಹೇಗೆ ಆಯ್ಕೆ ಮಾಡೋದು ಮುಂದೆ ಓದಿ 

311

ಬೇಬಿ ಪೌಡರ್ ತಯಾರಿಸೋದು ಹೇಗೆ?
ಹೆಚ್ಚಿನ ಬೇಬಿ ಪೌಡರ್ ಗಳನ್ನು ಟಾಲ್ಕಮ್ ನಿಂದ(Talcum) ತಯಾರಿಸಲಾಗುತ್ತದೆ. ಇದನ್ನು ಸಿಲಿಕಾನ್, ಮೆಗ್ನೀಸಿಯಮ್ ಮತ್ತು ಆಕ್ಸಿಜನ್ ನಿಂದ ಮಾಡಿದ ಖನಿಜ ಟಾಲ್ಕ್ ನಿಂದ ತಯಾರಿಸಲಾಗುತ್ತದೆ.  ಕೆಲವು ಬೇಬಿ ಪೌಡರ್ ಗಳನ್ನು ಕಾರ್ನ್ ಸ್ಟಾರ್ಚ್ ನಿಂದ ಸಹ ತಯಾರಿಸಲಾಗುತ್ತದೆ, ಇದನ್ನು ಟಾಲ್ಕಮ್ ಗೆ ಸುರಕ್ಷಿತ ಪರ್ಯಾಯವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಉಸಿರಾಟದ ಮೂಲಕ ಮಗುವಿನ ದೇಹದೊಳಗೆ ಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಅದಕ್ಕಾಗಿಯೇ ಪೋಷಕರು ಮತ್ತು ಮಕ್ಕಳ ತಜ್ಞರು ಕಾರ್ನ್ ಸ್ಟಾರ್ಚ್ ನಿಂದ ತಯಾರಿಸಿದ ಬೇಬಿ ಪೌಡರ್ ಸುರಕ್ಷಿತವೆಂದು ಪರಿಗಣಿಸುತ್ತಾರೆ.

411

ಬೇಬಿ ಪೌಡರ್ ಮಕ್ಕಳಿಗೆ ಅಪಾಯವನ್ನುಂಟು ಮಾಡುವುದೇ?
ವಾಸ್ತವವಾಗಿ, ಟಾಲ್ಕಮ್  ಪೌಡರ್ ಗಳು ತುಂಬಾ ಸೂಕ್ಷ್ಮ ಕಣಗಳಿಂದ ಮಾಡಲ್ಪಟ್ಟಿವೆ, ಇದು ಉಸಿರಾಟದ ಮೂಲಕ  ದೇಹದೊಳಾಗೆ ಹೋಗುವ ಚಾನ್ಸನ್ ಜಾಸ್ತಿ ಇದೆ. ಅಲ್ಲದೇ ಇದು ಮಗುವಿನ ಸೂಕ್ಷ್ಮ ಶ್ವಾಸಕೋಶದ ಮೇಲೆ ಪರಿಣಾಮ ಬೀರಬಹುದು. ಅಸ್ತಮಾ ಅಥವಾ ಅಲರ್ಜಿಗಳಂತಹ(Allergy) ಸಮಸ್ಯೆಯನ್ನು ಹೊಂದಿರುವ ಮಕ್ಕಳಿಗೆ ಇದು ಡೇಂಜರಸ್.

511

ಮತ್ತೊಂದೆಡೆ, ಕಾರ್ನ್ ಸ್ಟಾರ್ಚ್ ನಿಂದ(Corn strach) ತಯಾರಿಸಿದ ಪುಡಿಯ ಕಣಗಳು ಟಾಲ್ಕಮ್ ಗಿಂತ ಸ್ವಲ್ಪ ದೊಡ್ಡದಾಗಿರುತ್ತವೆ ಮತ್ತು ಈ ಕಾರಣದಿಂದಾಗಿ, ಉಸಿರಾಡುವಾಗ ಇದು ದೇಹದ ಒಳಗೆ ಹೋಗುವ ಅಪಾಯವು ಕಡಿಮೆಯಾಗುತ್ತದೆ ಮತ್ತು ಅದರ ಹೀರಿಕೊಳ್ಳುವ ಸಾಮರ್ಥ್ಯವೂ ಸಹ ತುಂಬಾ ಒಳ್ಳೆಯದಿದೆ. ಇದರಿಂದ ಮಕ್ಕಳಿಗೆ ಯಾವುದೇ ಸಮಸ್ಯೆ ಉಂಟಾಗೋದಿಲ್ಲ. 

611

ಸರಿಯಾದ ಬೇಬಿ ಟಾಲ್ಕಮ್ ಅನ್ನು ಆಯ್ಕೆ ಮಾಡೋದು ಹೇಗೆ? 
ಮಾರುಕಟ್ಟೆಯಲ್ಲಿ ಅಸಂಖ್ಯಾತ ಬ್ರಾಂಡ್ ಗಳ (Brand)ಬೇಬಿ ಪೌಡರ್ ಲಭ್ಯವಿದೆ. ನಿಮ್ಮ ಆಯ್ಕೆ ಮತ್ತು ಬಜೆಟ್ ಗೆ ಅನುಗುಣವಾಗಿ ನೀವು ಅದನ್ನು ಖರೀದಿಸಬಹುದು. ಯಾವುದೇ ಬ್ರಾಂಡ್ ಪೌಡರ್ ಅನ್ನು ಖರೀದಿಸುವ ಮೊದಲು, ನೀವು ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಂಡ್ರೆ, ಅದನ್ನು ಆಯ್ಕೆ ಮಾಡುವುದು ತುಂಬಾನೆ ಸುಲಭವಾಗುತ್ತೆ. 

711

ಆರಂಭದಲ್ಲಿ, ಬೇಬಿ ಪೌಡರ್ ನ ವಿಶ್ವಾಸಾರ್ಹ ಮತ್ತು ಪ್ರತಿಷ್ಠಿತ ಬ್ರಾಂಡ್ ಅನ್ನು ಆರಿಸಿಕೊಳ್ಳಿ, ಇದರ ಗುಣಮಟ್ಟದ ಬಗ್ಗೆ ಬೇಗನೆ ತಿಳಿದುಕೊಳ್ಳಬಹುದು. ಸಂಶೋಧನೆಯ ಪ್ರಕಾರ, ಟಾಲ್ಕಮ್ ನಿಂದ ತಯಾರಿಸಿದ ಬೇಬಿ ಪೌಡರ್ ಗಳನ್ನು ಕಡಿಮೆ ಬಳಸುವುದು ಒಳ್ಳೆಯದು. ಬದಲಾಗಿ, ವೈದ್ಯರು(Doctor) ಮತ್ತು ಮಕ್ಕಳ ತಜ್ಞರು ಕಾರ್ನ್ ಸ್ಟಾರ್ಚ್ ನಿಂದ ತಯಾರಿಸಿದ ಬೇಬಿ ಪೌಡರ್ ಅನ್ನು ಬಳಸಲು ಶಿಫಾರಸು ಮಾಡುತ್ತಾರೆ, ಏಕೆಂದರೆ ಅವು ನಿಮ್ಮ ಮಗುವಿನ ಚರ್ಮಕ್ಕೆ ಅಥವಾ ಅವರ ಶ್ವಾಸಕೋಶಗಳಿಗೆ ಹಾನಿ ಮಾಡುವುದಿಲ್ಲ.

811

ಕೆಲವು ಸಂದರ್ಭಗಳಲ್ಲಿ, ಕಾರ್ನ್ ಸ್ಟಾರ್ಚ್ ನಿಂದ ತಯಾರಿಸಿದ ಬೇಬಿ ಪೌಡರ್ ಸಹ ತೊಂದರೆಯನ್ನು ಉಂಟುಮಾಡಬಹುದು. ಏಕೆಂದರೆ ಇದು ಕ್ಯಾಂಡಿಡಾದಿಂದ ಉಂಟಾಗುವ ಡೈಪರ್ ದದ್ದುಗಳ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಆದ್ದರಿಂದ ಮಗುವಿಗೆ ಡೈಪರ್ ದದ್ದುಗಳು(Diaper rashes) ಇದ್ದಾಗ, ಕಾರ್ನ್ ಸ್ಟಾರ್ಚ್ ನಿಂದ ತಯಾರಿಸಿದ ಬೇಬಿ ಪೌಡರ್ ಬಳಸಬಾರದು ಅನ್ನೋದು ನೆನಪಿನಲ್ಲಿರಲಿ. 

911

ಬೇಬಿ ಪೌಡರ್ ಬಳಸುವಾಗ ಸಹಾಯಕ್ಕೆ ಬರುವ ಪ್ರಮುಖ ಟಿಪ್ಸ್ ಗಳು -
ಮೊದಲನೆಯದಾಗಿ, ನಿಮ್ಮ ಅಂಗೈಗೆ ಸ್ವಲ್ಪ ಪೌಡರ್ ಅನ್ನು ತೆಗೆದುಕೊಳ್ಳಿ ಮತ್ತು ಅದನ್ನು ಮಗುವಿನ ಚರ್ಮದ ಮೇಲೆ ನೇರವಾಗಿ ಹಚ್ಚುವ ಬದಲು, ನಿಧಾನವಾಗಿ ಹಗುರವಾದ ಕೈಗಳಿಂದ ಮಗುವಿನ ಮೇಲೆ ಪೌಡರ್ ಹಚ್ಚಿ.  ಕೈಯಲ್ಲಿ ಪೌಡರ್ ಅನ್ನು ತೆಗೆದುಕೊಳ್ಳುವಾಗ, ಪೌಡರ್ ಬಾಟಲಿ(Bottle) ಮಗುವಿನಿಂದ ದೂರವಿಡಿ ಮತ್ತು ಅದನ್ನು ಒಟ್ಟಿಗೆ ತೆಗೆದುಕೊಳ್ಳುವ ಬದಲು, ಅದನ್ನು ಸ್ವಲ್ಪ ಸ್ವಲ್ಪವಾಗಿ ನಿಮ್ಮ ಅಂಗೈಗೆ ಹಾಕಿ. ನಂತರ ನಿಧಾನವಾಗಿ ಅದನ್ನು ಮಗುವಿನ ಮೇಲೆ ಹಚ್ಚಿ.
 

1011

ನೀವು ಮಗುವಿಗೆ ಪೌಡರ್ ಹಚ್ಚುವಾಗ, ಆ ಸಮಯದಲ್ಲಿ ನೀವು ಫ್ಯಾನ್ ಅಥವಾ ಕೂಲರ್ ನಿಂದ(Cooler) ದೂರದಲ್ಲಿದಿರಬೇಕು ಎಂಬುದನ್ನು ನೆನಪಿನಲ್ಲಿಡಿ, ಏಕೆಂದರೆ ಪೌಡರ್ ಹಾರಿಹೋಗಬಹುದು ಮತ್ತು ಅದು ಮಗುವಿನ ಉಸಿರಾಟದ ಮೂಲಕ ದೇಹದೊಳಗೆ ಅಥವಾ ಮಗುವಿನ ಕಣ್ಣುಗಳಿಗೆ ಹೋಗಬಹುದು. 

1111

ಪೌಡರ್ ಅನ್ನು ಮುಖಕ್ಕೆ ಹಚ್ಚಿದ ನಂತರ, ನಿಮ್ಮ ಮಗು ಬ್ರೈಟ್ ಆಗಿ (Bright)ಕಾಣಲು ಪ್ರಾರಂಭಿಸುತ್ತದೆ ಎಂದು ನೀವು ಭಾವಿಸಿದರೆ, ನೀವು ತಪ್ಪಾಗಿ ಯೋಚಿಸುತ್ತಿದ್ದೀರಿ. ಬದಲಾಗಿ, ಮಗುವಿನ ಮುಖಕ್ಕೆ ಬೇಬಿ ಪೌಡರ್ ಹಚ್ಚುವುದರಿಂದ ಅನೇಕ ಅಡ್ಡಪರಿಣಾಮಗಳು ಉಂಟಾಗಬಹುದು. ಉದಾಹರಣೆಗೆ, ಚರ್ಮದ ಅಲರ್ಜಿಗಳು ಅಥವಾ ಉಸಿರಾಟದ ತೊಂದರೆ ಇತ್ಯಾದಿ. ಅದು ಉಸಿರಾಟದ ಮೂಲಕ ಒಳಕ್ಕೆ ಹೋದರೆ, ಶ್ವಾಸಕೋಶದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಬೇಬಿ ಪೌಡರ್ ಅನ್ನು ಸರಿಯಾಗಿ ಯೋಚಿಸಿ  ಬಳಸಿ.

click me!

Recommended Stories