ನಟಿ ಅಮೃತಾ ಆತ್ಮಹತ್ಯೆಗೆ ಭಾರಿ ಟ್ವಿಸ್ಟ್​! ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಸಾವಿನ ರಹಸ್ಯ ಬಯಲು?

By Suvarna News  |  First Published Apr 30, 2024, 2:44 PM IST

ಭೋಜ್​ಪುರಿ ನಟಿ ಅಮೃತಾ ಪಾಂಡೆ ಸಾಯುವ ಮುನ್ನ ಹಾಕಿದ್ದ ವಾಟ್ಸ್​ಆ್ಯಪ್​ ಸ್ಟೇಟಸ್​ನಿಂದ ಸಾವಿನ ಕಾರಣಕ್ಕೆ ಭಾರಿ ಟ್ವಿಸ್ಟ್​ ಸಿಕ್ಕಿದೆ.  ಏನದು? 
 


ಭೋಜ್​ಪುರಿ ನಟಿ, ಅನ್ನಪೂರ್ಣ ಎಂದೇ ಖ್ಯಾತರಾಗಿದ್ದ 27 ವರ್ಷದ  ಅಮೃತಾ ಪಾಂಡೆ ತಮ್ಮ ನಿವಾಸದಲ್ಲಿ ಕೆಲ ದಿನಗಳ ಹಿಂದೆ ಶವವಾಗಿ ಪತ್ತೆಯಾಗಿದ್ದರು. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಭಾರಿ ಶಂಕೆ ವ್ಯಕ್ತವಾಗಿತ್ತು. ಆದರೆ ಮೇಲ್ನೋಟಕ್ಕೆ ಇದು  ಆತ್ಮಹತ್ಯೆ ಎಂದೇ ಪೊಲೀಸರು ಹೇಳಿದ್ದರು.  ಬಿಹಾರದ ಅದಾಮ್​ಪುರದ ದಿವ್ಯಾಧರ್ಮ ಅಪಾರ್ಟ್​ಮೆಂಟ್​ನಲ್ಲಿ ಅವರ ಶವ ಇದೇ 27ರಂದು ದೊರಕಿತ್ತು. ಈ ಘಟನೆ ನಡೆದಿದೆ. ಇದೀಗ ಸಾವಿಗೆ ಕೆಲವು ಗಂಟೆಗಳ ಮುನ್ನ ನಟಿ ತಮ್ಮ ವಾಟ್ಸ್​ಆ್ಯಪ್​  ಸ್ಟೇಟಸ್‌ನಲ್ಲಿ ಬರೆದಿರುವ  ಸ್ಟೇಟಸ್ ನೋಡಿ ಈ ಸಾವಿಗೆ ಟ್ವಿಸ್ಟ್​ ಸಿಕ್ಕಿದೆ.  ಮೊದಲಿಗೆ ಆತ್ಮಹತ್ಯೆ ನಡೆದಿದೆ ಎಂದು ಪೊಲೀಸರಿಗೆ ಕರೆ ಬಂದಿತ್ತು. ಅವರು ಬಂದು ನೋಡಿದಾಗ ಬಾಡಿ ಹಾಸಿಗೆ ಮೇಲಿತ್ತು. ಅಮೃತಾ ಸಹೋದರಿ ಮೊದಲು ಕೊಠಡಿ ಒಳಗೆ ಬಂದಿದ್ದರು. ಈ ವೇಳೆ ಅಕ್ಕನನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೋಡಿ ಶಾಕ್ ಆದರು. ಜೊತೆಗೆ ಅವರನ್ನು ಕೆಳಕ್ಕೆ ಇಳಿಸೋ ಪ್ರಯತ್ನ ಮಾಡಿದರು. ಆದರೆ, ಆಗಲೇ ಅವರು ಮೃತಪಟ್ಟಿದ್ದರು.

 ಅಮೃತಾ ಪಾಂಡೆ ಖಿನ್ನತೆಯಿಂದ ಬಳಲುತ್ತಿದ್ದರು.   ಸಿನಿ ಬದುಕಿನ ಬಗ್ಗೆ ತುಂಬಾ ಚಿಂತೆಗೊಳಲಾಗಿದ್ದರು ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿತ್ತು.  ಅಮೃತಾಗೆ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶ ಸಿಗುತ್ತಿರಲಿಲ್ಲ, ಅದಕ್ಕಾಗಿ ಖಿನ್ನತೆಗೆ ಒಳಗಾಗಿದ್ದರು ಎಂದೇ ಹೇಳಲಾಗಿತ್ತು. ಆದರೆ ಅಮೃತಾ ಪಾಂಡೆ ಅವರು ಸಾಯುವುದಕ್ಕೂ ಮೊದಲು ಸ್ಟೇಟಸ್ ಒಂದನ್ನು ಹಾಕಿದ್ದರು. ಅದರಿಂದ ಅವರ ಸಾವಿನ ಹಿಂದೆ ಪತಿಗೆ ಇನ್ನೊಂದು ಸಂಬಂಧ ಇದ್ದಿರಬಹುದೆ? ಅದು ಗೊತ್ತಾಗಿ ನಟಿ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎನ್ನುವ ಶಂಖೆ ಉಂಟಾಗಿದೆ.

Tap to resize

Latest Videos

ಅವ್ರು ಸುರಸುಂದರ... ಮದ್ವೆಯಾಗಲು ನನಗೇ ತೊಂದ್ರೆ ಇಲ್ಲ, ನಿಮ್ಮದೇನ್ರಿ? ಟ್ರೋಲಿಗರ ಕೆನ್ನೆಗೆ ಬಾರಿಸಿದ ನಟಿ ವರಲಕ್ಷ್ಮಿ

ಅಷ್ಟಕ್ಕೂ ನಟಿಯ ಸ್ಟೇಟಸ್​ನಲ್ಲಿ, ‘ಅವರ ಜೀವನ ಎರಡು ದೋಣಿಗಳ ಮೇಲಿದೆ. ನಾನು ನನ್ನ ದೋಣಿಯನ್ನು ಮುಳುಗಿಸುವ ಮೂಲಕ ಅವರ ಮಾರ್ಗವನ್ನು ಸುಲಭಗೊಳಿಸಿಬೇಕಿದೆ’ ಎಂದು ಬರೆದಿದ್ದರು. ಇದರಿಂದ  ಅವರ ಪತಿ ಮತ್ತೊಬ್ಬರನ್ನು ಪ್ರೀತಿಸುತ್ತಿದ್ದರೇ ಎನ್ನುವ ಅನುಮಾನ ಮೂಡಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅಷ್ಟಕ್ಕೂ, ನಟಿ 2022ರಲ್ಲಿ   ಚಂದ್ರಮಣಿ ಎಂಬುವವರನ್ನು ವಿವಾಹವಾಗಿದ್ದಾರೆ. ಇವರು ಎಂಜಿನಿಯರ್. ದಂಪತಿ ನಡುವೆ ಬಿರುಕು ಮೂಡಿದ್ದ ಬಗ್ಗೆ ಸದ್ಯ ಯಾವುದೇ ಮಾಹಿತಿ ಇಲ್ಲ.  ಆದರೆ ನಟಿಯ ಸ್ಟೇಟಸ್​ ಒಳಾರ್ಥದಲ್ಲಿ ಪತಿಯ ಅಕ್ರಮ ಸಂಬಂಧದ ವಾಸನೆ ಬಡಿಯುತ್ತಿದೆ. ಒಂದೆಡೆ ಪತಿಯ ಸಂಬಂಧ ಹಾಗೂ ಇನ್ನೊಂದೆಡೆ ಸಿನಿಮಾದಲ್ಲಿ ಸಿಗದ ಅವಕಾಶ ಇವುಗಳಿಂದ ಬಹುಶಃ ಅವರು  ಖಿನ್ನತೆಗೆ ಒಳಗಾಗಿದ್ದಿರಬಹುದು ಎಂದು ಊಹಿಸಲಾಗಿದೆ. ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಟಿಯ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, ಇವರು,  ‘ದೀವಾನಪನ್’ ಸಿನಿಮಾದಲ್ಲಿ ನಟಿಸಿದ್ದರು.  ಅಮೃತಾ ಪತಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದರು. ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಭಾಗಲ್ಪುರಕ್ಕೆ ಆಗಮಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಿಗೂಢವಾದ ಸ್ಟೇಟಸ್ ಹಾಕಿದ ನಂತರ ತಮ್ಮ ಬಿಹಾರದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅವರು ಮನೆಗೆ ಬಂದಾಗ ಮೂರೇ ಮೂರು ನಿಮಿಷ ಅಷ್ಟೇ... ಕಾಸ್ಟಿಂಗ್​ ಕೌಚ್​ ಕುರಿತು ನಟಿ ಅನಸೂಯಾ ಹೇಳಿದ್ದೇನು?
 

click me!