ಮಧುಮೇಹ, ಬಿಪಿ ಮತ್ತು ಕೊಲೆಸ್ಟ್ರಾಲ್ ನಂತಹ ರೋಗಗಳು ವೇಗವಾಗಿ ಹೆಚ್ಚುತ್ತಿವೆ. ಈ ರೋಗಗಳ ಬಗ್ಗೆ ಯೋಚನೆ ಮಾಡಬೇಕಾದ ವಿಷಯ ಏನೆಂದರೆ ಅವುಗಳ ರೋಗಲಕ್ಷಣಗಳು ಬಹಳ ತಡವಾಗಿ ಪತ್ತೆಯಾಗುತ್ತವೆ ಮತ್ತು ಆ ವೇಳೆಗೆ ಅದು ತುಂಬಾ ತಡವಾಗಿರುತ್ತೆ. ಸರಿಯಾದ ರೋಗನಿರ್ಣಯವು ಸರಿಯಾದ ಚಿಕಿತ್ಸೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತೆ.
ಜಗತ್ತಿನಲ್ಲಿ ವಿವಿಧ ರೋಗಗಳು ಅಸ್ತಿತ್ವದಲ್ಲಿವೆ ಮತ್ತು ಹೊಸ ವೈರಸ್‌ಗಳು (Virus) ಮತ್ತು ಸೋಂಕುಗಳಿಂದ ಹೊಸ ರೋಗಗಳು ಸಹ ಹರಡುತ್ತಿವೆ. ಕೆಲವು ರೋಗಗಳು ಇನ್ನೂ ಗುಣಮುಖವಾಗಿಲ್ಲ. ಕೆಲವು ರೋಗಗಳು ಬೇಗನೆ ಗುಣವಾಗುತ್ತವೆ ಮತ್ತು ಕೆಲವು ಸಮಯ ತೆಗೆದುಕೊಳ್ಳುತ್ತವೆ. ಆತಂಕಕಾರಿ ವಿಷಯವೆಂದ್ರೆ ಕೆಲವು ರೋಗಗಳು ದೇಹವನ್ನು ಪ್ರವೇಶಿಸುವ ಮೂಲಕ ನಿಮ್ಮನ್ನು ಸಾವಿನತ್ತ ತಳ್ಳುತ್ತಿವೆ.
211
ರೋಗ (Disease) ಏನೇ ಇರಲಿ, ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯು ಚೇತರಿಕೆಯನ್ನು ಉತ್ತಮ ಮತ್ತು ಸುಲಭಗೊಳಿಸುತ್ತೆ ಎಂದು ತಜ್ಞರು ನಂಬುತ್ತಾರೆ. ಹೆಚ್ಚಿನ ರೋಗಗಳ ರೋಗಲಕ್ಷಣಗಳು ತಿಳಿದಿವೆ, ಆದ್ದರಿಂದ ಅವುಗಳನ್ನು ಸರಿಯಾಗಿ ಚಿಕಿತ್ಸೆ ಮಾಡಬಹುದು, ಆದರೆ ನಿಮಗೆ ತಿಳಿದಿಲ್ಲದ ಕೆಲವು ರೋಗಗಳಿವೆ ಮತ್ತು ಅವುಗಳನ್ನು ಪತ್ತೆಹಚ್ಚುವ ಹೊತ್ತಿಗೆ ಅದು ತುಂಬಾ ತಡವಾಗಿರುತ್ತೆ.
311
ರೋಗಲಕ್ಷಣಗಳನ್ನು ನೀಡದ ಈ ರೋಗಗಳನ್ನು ಸೈಲೆಂಟ್ ಕಿಲ್ಲರ್ಸ್ (Silent killers) ಎಂದು ಕರೆಯಲಾಗುತ್ತೆ. ದುರದೃಷ್ಟವಶಾತ್, ಅವು ತುಂಬಾ ತಡವಾಗಿ ಪತ್ತೆಯಾಗುತ್ತವೆ. ಅಂತಹ ಕೆಲವು ಸೈಲೆಂಟ್ ಕಿಲ್ಲರ್ ಕಾಯಿಲೆಗಳ ಬಗ್ಗೆ ಇಲ್ಲಿ ತಿಳಿಯೋಣ. ಈ ಸಣ್ಣ ರೋಗಲಕ್ಷಣಗಳನ್ನು ನೀವು ನಿರ್ಲಕ್ಷಿಸಬಾರದು.
411
ಅಧಿಕ ರಕ್ತದೊತ್ತಡ (High blood pressure)
ಅಧಿಕ ರಕ್ತದೊತ್ತಡ ಅಥವಾ ಬಿಪಿ ಅತಿದೊಡ್ಡ ಸೈಲೆಂಟ್ ಕಿಲ್ಲರ್ ಕಾಯಿಲೆಯಾಗಿದೆ. ರಕ್ತನಾಳಗಳ ವಾಲ್‌ಗಳ ವಿರುದ್ಧ ರಕ್ತದ ಬಲವು ನಿರಂತರವಾಗಿ ತುಂಬಾ ಹೆಚ್ಚಾದಾಗ ಇದು ಸಂಭವಿಸುತ್ತೆ, ಇದು ಸಾಕಷ್ಟು ಹಾನಿಯನ್ನು ಉಂಟುಮಾಡುತ್ತೆ.
511
ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ, ಇದು ಹೃದಯಾಘಾತ(Heart attack) ಮತ್ತು ಪಾರ್ಶ್ವವಾಯು ಸೇರಿ ಹಲವು ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡ ಹೊಂದಿರುವ ಹೆಚ್ಚಿನ ಜನರು ಒತ್ತಡವು ತುಂಬಾ ಹೆಚ್ಚಾಗುವವರೆಗೂ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ.
611
ಕ್ಯಾನ್ಸರ್ (Cancer)
ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬಹಳ ತಡವಾಗಿ ಪತ್ತೆಯಾಗುತ್ತೆ. ಇದನ್ನು ಸ್ಕ್ರೀನಿಂಗ್ ಮೂಲಕ ಮಾತ್ರ ಪತ್ತೆಹಚ್ಚಬಹುದು ಅಥವಾ ದೃಢೀಕರಿಸಬಹುದು.
711
ಮಧುಮೇಹ (Diabetes)
ರೋಗಿಯ ರಕ್ತ ಹೆಚ್ಚು ಗ್ಲೂಕೋಸ್ ಅಥವಾ ಸಕ್ಕರೆ ಮಟ್ಟವನ್ನು ಹೊಂದಿರುವಾಗ ಮಧುಮೇಹ ಉಂಟಾಗುತ್ತೆ. ಮೇದೋಜ್ಜೀರಕ ಗ್ರಂಥಿ ಸಾಕಷ್ಟು ಇನ್ಸುಲಿನ್ ಉತ್ಪಾದಿಸದಿದ್ದಾಗ ಅಥವಾ ದೇಹವು ಇನ್ಸುಲಿನ್ನನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದಿದ್ದಾಗ ಇದು ಸಂಭವಿಸುತ್ತೆ.
811
ಮಧುಮೇಹ ಒಂದು ಸೈಲೆಂಟ್ ರೋಗ. ಇದನ್ನು 'ಸೈಲೆಂಟ್ ಕಿಲ್ಲರ್' ಎಂದು ಕರೆಯಲಾಗುತ್ತೆ ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗಳಿಗೆ ಈ ಸ್ಥಿತಿ ಇದೆ ಎಂದು ತಿಳಿದಿರೋದಿಲ್ಲ ಮತ್ತು ರೋಗವು ಆಯಾ ಹಂತವನ್ನು ತಲುಪಿದಾಗ ಮಾತ್ರ ರೋಗಲಕ್ಷಣಗಳು(Symptoms) ಕಾಣಿಸಿಕೊಳ್ಳುತ್ತವೆ.
911
ಅಧಿಕ ಕೊಲೆಸ್ಟ್ರಾಲ್(High Cholestrol)
ಹೆಚ್ಚಿನ ಕೊಲೆಸ್ಟ್ರಾಲನ್ನು ಸೈಲೆಂಟ್ ಕಿಲ್ಲರ್ ಎಂದೂ ಕರೆಯಲಾಗುತ್ತೆ, ಯಾಕಂದ್ರೆ ಅದರ ಮಟ್ಟವು ತುಂಬಾ ಹೆಚ್ಚಾಗುವವರೆಗೆ ಇದು ರೋಗಿಗಳಲ್ಲಿ ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡೋದಿಲ್ಲ. ರಕ್ತದಲ್ಲಿ ಎಲ್ಡಿಎಲ್ 'ಕೆಟ್ಟ' ಕೊಲೆಸ್ಟ್ರಾಲ್ ಎಂಬ ಕೊಬ್ಬಿನ ಪದಾರ್ಥವು ಅತಿಯಾಗಿ ಸಂಗ್ರಹವಾದಾಗ ಹೆಚ್ಚಿನ ಕೊಲೆಸ್ಟ್ರಾಲ್ ಉಂಟಾಗುತ್ತೆ . ಇದು ಕೊಬ್ಬು, ಸಂಸ್ಕರಿಸಿದ ಆಹಾರ, ಆಲ್ಕೋಹಾಲ್ ಸೇವನೆಯಂತಹ ವಿಷಕಾರಿ ಅಭ್ಯಾಸ ಮತ್ತು ಧೂಮಪಾನ ಮತ್ತು ವ್ಯಾಯಾಮದ ಕೊರತೆಯಿಂದ ಉಂಟಾಗುತ್ತೆ.
1011
ಫ್ಯಾಟಿ ಲಿವರ್(Fatty liver) ಕಾಯಿಲೆ
ಫ್ಯಾಟಿ ಲಿವರ್ ಕಾಯಿಲೆಯನ್ನು ಎರಡು ವಿಧಗಳಾಗಿ ವಿಂಗಡಿಸಬಹುದು: ಆಲ್ಕೊಹಾಲಿಕ್ ಅಲ್ಲದ ಫ್ಯಾಟಿ ಲಿವರ್ ಕಾಯಿಲೆ (ಎನ್ಎಎಫ್ಎಲ್ಡಿ) ಮತ್ತು ಆಲ್ಕೋಹಾಲ್ ಫ್ಯಾಟಿ ಲಿವರ್ ಕಾಯಿಲೆ, ಇದನ್ನು ಆಲ್ಕೋಹಾಲ್ ಸ್ಟೀಟೊಹೆಪಟೈಟಿಸ್ ಎಂದೂ ಕರೆಯಲಾಗುತ್ತೆ.
1111
ಎನ್ಎಎಫ್ಎಲ್ಡಿ ಒಂದು ರೀತಿಯ ಫ್ಯಾಟಿ ಲಿವರ್ ಕಾಯಿಲೆ, ಅದು ಆಲ್ಕೋಹಾಲ್(Alcohol) ಸೇವನೆಗೆ ಸಂಬಂಧಿಸಿಲ್ಲ, ಆದರೆ ಎಎಫ್ಎಲ್ಡಿ ಅತಿಯಾದ ಆಲ್ಕೋಹಾಲ್ ಸೇವನೆಯಿಂದ ಉಂಟಾಗುತ್ತೆ.ಫ್ಯಾಟಿ ಲಿವರ್ ರೋಗವು ನಿಧಾನವಾಗಿ ಸ್ಪ್ರೆಡ್ ಆಗುತ್ತೆ, ಆದ್ದರಿಂದ ಇದರ ರೋಗಲಕ್ಷಣಗಳು ಕಾಣಿಸಿಕೊಳ್ಳೋದಿಲ್ಲ. ಇದು ಸೈಲೆಂಟ್ ಕಿಲ್ಲರ್ ಆಗಿದ್ದು, ಇದರಲ್ಲಿ ಜನರು ಯಾವುದೇ ರೋಗಲಕ್ಷಣಗಳನ್ನು ಅನುಭವಿಸೋದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.