
ಬಿಗ್‌ಬಾಸ್ ಕನ್ನಡ 11 ಶೋ ಈಗ 50 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಸದಸ್ಯರು ದೊಡ್ಮನೆಯನ್ನು ಪ್ರವೇಶಿಸಿ ಆಗಿದೆ. ಮನೆಯೊಳಗೆ ಬರುತ್ತಿದ್ದಂತಯೇ ಹೊಸ ಇಬ್ಬರು ಸದಸ್ಯರಿಗೆ ಬಿಗ್‌ಬಾಸ್ ಅಡುಗೆ ಮನೆಯನ್ನು ಬಿಟ್ಟು ಕೊಟ್ಟಿದ್ದಾರೆ. ಇನ್ನು ಮನೆಗೆ ಬಂದ ದಿನವೇ ರಜತ್ ಅವರು ಶಿಕ್ಷೆಗೆ ಗುರಿಯಾದರು. ಮೈಕ್ ಮರೆತು ಧರಿಸದೇ ಇದ್ದ ಕಾರಣಕ್ಕೆ ಭವ್ಯ ಅವರು ದೇವರ ಮುಂದೆ 10 ಬಸ್ಕಿ ಹೊಡೆಯುವ ಶಿಕ್ಷೆ ನೀಡಿದರು.
ಇನ್ನು ಶೋಭಾ ಮತ್ತು ರಜತ್ ಅವರಿಗೆ ಮನೆಯ ಸದಸ್ಯರ ಬಗ್ಗೆ ಬಿಗ್‌ಬಾಸ್ ಕೇಳುವ ಪ್ರಶ್ನೆಗೆ ಉತ್ತರಿಸಿ ತೆಂಗಿನಕಾಯಿ ಒಡೆಯುವ ಟಾಸ್ಕ್ ನೀಡಿದರು. ಮೊದಲ ಸ್ನೇಹ ಯಾರ ಜೊತೆಗೆ ಮಾಡುತ್ತೀರಿ ಎಂಬ ಪ್ರಶ್ಮೆಗೆ ರಜತ್ - ಮಂಜು, ಶೋಭಾ -ಧರ್ಮ ಎಂದರು. ನೇರಾ ಟಕ್ಕರ್ ಯಾರಿಗೆ ಕೊಡುತ್ತೀರಿ ಎಂದದ್ದಕ್ಕೆ ರಜತ್ - ತ್ರಿವಿಕ್ರಮ್, ಹಾಗೆ ಶೋಭಾ - ಮಂಜು ಎಂದು ಕಾರಣ ನೀಡಿದರು.
ಯಾರ ಆಟದ ತಂತ್ರವನ್ನು ಮುರಿಯುವ ಗುರಿ ಹೊಂದಿದ್ದೀರಿ ಎಂದಿದ್ದಕ್ಕೆ ರಜತ್ ಅವರು
ಶೋಭಾ - ತ್ರಿವಿಕ್ರಮ್ . ಇನ್ನು ಫೇಕ್ ಸದಸ್ಯ ಯಾರು ಎಂಬುದಕ್ಕೆ ಯಾರಿಗೆ ಕಡಿವಾಣ ಹಾಕುತ್ತೀರಿ ಎಂದಿದ್ದಕ್ಕೆ ಇಬ್ಬರೂ ಕೂಡ ಚೈತ್ರಾ ಹೆಸರುನ್ನು ತೆಗೆದುಕೊಂಡರು.
ಮುಖವಾಡ ಕಳಚಿ ಅಸಲಿ ಯಾರ ಮುಖ ಬಯಲಿಗೆಳೆಯುತ್ತೀರಿ ಎಂದಿದ್ದಕ್ಕೆ ರಜತ್ - ಚೈತ್ರಾ ಶೋಭಾ - ಗೌತಮಿ ಎಂದರು. ಯಾರಿಂದ ಅಂತರ ಕಾಯ್ದುಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಚೈತ್ರಾ ಶೋಭಾ - ಮಂಜು
ಯಾವ ಇಬ್ಬರು ಸದಸ್ಯರ ಪ್ರೆಂಡ್ ಶಿಪ್ ಮುರಿಯಲು ಇಚ್ಚಿಸುವ ಅಭ್ಯರ್ಥಿಗಖೂ ರಜತ್ ಅವರು ತ್ರಿವಿಕ್ರಮ್- ಭವ್ಯಾ ಎಂದರು. ಅದಕ್ಕೆ ತೆಂಗಿನಕಾತಿ ಒಡೆಯಲಿಲ್ಲ. ಎಲ್ಲರೂ ಖುಷಿಪಟ್ಟರು. ಶೋಭಾ ಯಾರೂ ಇಲ್ಲ ಎಂದರು.
ಯಾರ ಆಟದ ತಂತ್ರವನ್ನು ಮುರಿಯುವ ಗುರಿ ಹೊಂದಿದ್ದೀರಿ ಎಂದಿದ್ದಕ್ಕೆ ರಜತ್ ಅವರು ಶೋಭಾ - ತ್ರಿವಿಕ್ರಮ್ , ಇನ್ನು ಫೇಕ್ ಸದಸ್ಯ ಯಾರು ಎಂಬುದಕ್ಕೆ ಯಾರಿಗೆ ಕಡಿವಾಣ ಹಾಕುತ್ತೀರಿ ಎಂದಿದ್ದಕ್ಕೆ ಇಬ್ಬರೂ ಕೂಡ ಚೈತ್ರಾ ಹೆಸರುನ್ನು ತೆಗೆದುಕೊಂಡರು.
ಮೊದಲ ದಿನ ಆದ್ದರಿಂದ ಹೊಸ ಸದಸ್ಯರು ಬಹಳ ಆಕ್ಟೀವ್ ಆಗಿದ್ದರು. ರಜತ್ ಅವರು ಬರುಬರುತ್ತಿದ್ದಂತೆಯೇ ಚೈತ್ರಾ ಕುಂದಾಪುರ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಅನುಷಾ ರೈ ಅವರು ಹೊರಗಡೆ ಆದಮೇಲೆ, ಚೈತ್ರಾ ಅವರು ಬಹಳ ಕುಗ್ಗಿ ಹೋಗಿದ್ದಾರೆ.
‘ಇವತ್ ಒಂದಿನ ಮಾತಾಡ್ತಿ ಅಷ್ಟೇ’ ಎಂದು ರಜತ್ಗೆ ಹನುಮಂತ ಹೇಳಿದ್ದಾರೆ. ಅದಾದ ನಂತರ ಮನೆ ನೆನಪಾಗುತ್ತದೆ ಎಂದು ಅತ್ತಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬರುವ ಸ್ಪರ್ಧಿಗಳು ಇನ್ನುಳಿದ ಸ್ಪರ್ಧಿಗಳಿಗಿಂತ ಜಾಸ್ತಿ ಜೋಶ್ನಲ್ಲಿ ಇರುತ್ತಾರೆ. ಯಾಕೆಂದರೆ ಅವರಿಗೆ ದೊಡ್ಮನೆಯ ಅನುಭವ ಇನ್ನೂ ಆಗಿರುವುದಿಲ್ಲ. ರಜತ್ ಮುಂದಿನ ದಿನಗಳಲ್ಲಿ ಹೇಗೆ ಇರುತ್ತಾರೆ ಎಂಬುದನ್ನು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.