ಈ ಲೇಖನದಲ್ಲಿ ನಾವು ಹೇಳುತ್ತಿರುವ ಯೋಗಾಸನವನ್ನು ಗರ್ಭಾಸನ ಯೋಗ(Yoga) ಎಂದು ಕರೆಯಲಾಗುತ್ತದೆ. ಗರ್ಭಾಸನ ಯೋಗ ಮಾಡುವುದು ತುಂಬಾ ಕಷ್ಟದ ಕೆಲಸ, ಆದರೆ ಪ್ರಯೋಜನಗಳು ಎಷ್ಟು ದೊಡ್ಡದಾಗಿವೆ ಎಂದರೆ ನೀವು ಖಂಡಿತವಾಗಿಯೂ ಈ ಯೋಗಾಸನವನ್ನು ಮಾಡಲು ಬಯಸುತ್ತೀರಿ.
ಗರ್ಭಾಸನವನ್ನು(Garbhasana) ಇಂಗ್ಲಿಷ್ ನಲ್ಲಿ ಭ್ರೂಣಭಂಗಿ (Fetus Pose) ಅಥವಾ ಹಿಂದಿಯಲ್ಲಿ ಗರ್ಭಪಿಂಡಸನಾ ಎಂದೂ ಕರೆಯಲಾಗುತ್ತದೆ, ಇದು ಹಠ ಯೋಗದ ಭಾಗವಾಗಿದೆ. ಈ ಕಷ್ಟವಾದ ಯೋಗ ಆಸನ ಮಾಡೋದು ಹೇಗೆ? ಇದರಿಂದ ಉಂಟಾಗುವ ಪ್ರಯೋಜನಗಳು ಯಾವುವು? ಮೊದಲಾದ ಮಾಹಿತಿ ತಿಳಿಯಲು ಬಯಸಿದರೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಗರ್ಭಾಸನ ಹಂತಗಳು
ಮೊದಲು ಪದ್ಮಾಸನ(Padmasana) ಯೋಗದ ಭಂಗಿಯಲ್ಲಿ ಯೋಗ ಚಾಪೆಯ ಮೇಲೆ ಕುಳಿತುಕೊಳ್ಳಿ.
ಈಗ ಎರಡೂ ಕೈಗಳನ್ನು ತೊಡೆ ಮತ್ತು ಕಾಲಿನ ನಡುವಿನ ಖಾಲಿ ಜಾಗದಲ್ಲಿ ಇರಿಸಿ.
ನಂತರ ಕಾಲಿನ ಕೆಳಗಿನಿಂದ ಕೈಗಳನ್ನು ತೆಗೆದು ಹೊರಗೆ ತನ್ನಿ.
ನಂತರ ಉಸಿರನ್ನು ಹೊರಬಿಟ್ಟು ಎರಡೂ ಕೈಗಳನ್ನು ಕಿವಿಯ ಕಡೆಗೆ ತರಲು ಪ್ರಯತ್ನಿಸಿ ಮತ್ತು ಪಾದಗಳನ್ನು ಪದ್ಮಾಸನದ ಸ್ಥಾನದಲ್ಲಿ ಎದೆಯ ಕಡೆಗೆ ತನ್ನಿ.
ನಿಮ್ಮ ದೇಹದ ಸಂಪೂರ್ಣ ತೂಕ(Weight)ವನ್ನು ಸೊಂಟದ ಮೇಲೆ ಸಮತೋಲನದಲ್ಲಿಡಿ ಮತ್ತು ನಿಮ್ಮ ಕೈಗಳಿಂದ ಎರಡೂ ಕಿವಿಗಳನ್ನು ಹಿಡಿದುಕೊಳ್ಳಿ.
ಇದೇ ಪರಿಸ್ಥಿತಿಯಲ್ಲಿ ಸ್ವಲ್ಪ ಕಾಲ ಸಮತೋಲನವನ್ನು ಕಾಯ್ದುಕೊಳ್ಳಿ ಮತ್ತು ನಿಧಾನವಾಗಿ ಉಸಿರಾಡಿ.
ಈಗ ಕಿವಿಯಿಂದ ಕೈಗಳನ್ನು ತೆಗೆದು ನಿಧಾನವಾಗಿ ಕೆಳಗಿಳಿಸಿ ನಂತರ ಸ್ವಲ್ಪ ಕಾಲ ಪದ್ಮಾಸನದ ಸ್ಥಾನದಲ್ಲಿ ಕುಳಿತುಕೊಳ್ಳಿ.
ಗರ್ಭಾಸನ ಅತ್ಯಂತ ಕಷ್ಟಕರವಾದ ಯೋಗಾಸನಗಳಲ್ಲಿ(Yogasana) ಒಂದಾಗಿದೆ. ಆದಾಗ್ಯೂ, ಈ ಯೋಗಾಸನವನ್ನು ಹೆಚ್ಚು ಸವಾಲಿನದನ್ನಾಗಿ ಮಾಡಲು ನಿಮ್ಮ ಕೈಗಳಿಂದ ವಿರುದ್ಧ ಬದಿಯ ಕಿವಿಯನ್ನು ಹಿಡಿಯಲು ಪ್ರಯತ್ನಿಸಿ. ಕಿವಿಗಳನ್ನು ಕೈಗಳು ಹಿಡಿಯದಿದ್ದರೆ, ಕೈಗಳನ್ನು ನಮಸ್ಕಾರದ ಭಂಗಿಯಲ್ಲಿಯೂ ಇರಿಸಬಹುದು.
ಗರ್ಭಾಸನ ಭಂಗಿಯ ಮುನ್ನೆಚ್ಚರಿಕೆ
ಗರ್ಭಾಸನ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಲು(Consult Doctor) ಮರೆಯದಿರಬೇಕು.
ಖಾಲಿ ಹೊಟ್ಟೆಯಲ್ಲಿ ಮತ್ತು ಸಡಿಲವಾದ ಬಟ್ಟೆಗಳಲ್ಲಿ ಮಾತ್ರ ಗರ್ಭಾಸನ ಮಾಡಿ . ಭಿಗಿಯಾದ ಉಡುಪುಗಳನ್ನು ಧರಿಸಿದರೆ ಈ ಯೋಗಾಸನ ಮಾಡಲು ಸಾಧ್ಯವಿಲ್ಲ.
ಸೊಂಟ ಅಥವಾ ದೇಹದ ಕೆಳಭಾಗದ ನೋವು ಅಥವಾ ಗಾಯವಾದ ಸಂದರ್ಭದಲ್ಲಿ ಈ ಯೋಗಾಸನ ಮಾಡಬೇಡಿ.
ಅಧಿಕ ರಕ್ತದೊತ್ತಡ(High BP) ರೋಗಿಗಳು ಗರ್ಭಾಸನ ಮಾಡಬಾರದು.
ಗರ್ಭಿಣಿಯರು ವೈದ್ಯರ ಸಲಹೆಯ ಮೇರೆಗೆ ಮಾತ್ರ ಈ ಯೋಗಾಸನ ಮಾಡಬೇಕು.
ಗರ್ಭಾಸನ ಪ್ರಯೋಜನಗಳು
ಮಹಿಳೆಯರಿಗೆ ಮುಟ್ಟಿನ ನೋವು ಮತ್ತು ಅಸ್ವಸ್ಥತೆಯಿಂದ ಪರಿಹಾರ ಸಿಗುತ್ತದೆ.
ಕಿಬ್ಬೊಟ್ಟೆಯ ಸ್ನಾಯುಗಳು ಪ್ರಬಲವಾಗಿರುತ್ತವೆ ಮತ್ತು ಗ್ಯಾಸ್ ಮತ್ತು ಮಲಬದ್ಧತೆ(Constipation)ಯನ್ನು ನಿವಾರಿಸುತ್ತವೆ.
ಮಾನಸಿಕ ಆರೋಗ್ಯ ಉತ್ತಮವಾಗಿದ್ದು ಕೋಪ ಮತ್ತು ಒತ್ತಡ ಕಡಿಮೆಯಾಗುತ್ತದೆ
ಏಕಾಗ್ರತೆ(Concentration) ಶಕ್ತಿ ಮತ್ತು ಶಾಂತಿ ಬೆಳೆಯುತ್ತದೆ.
ದೈಹಿಕ ಸಮತೋಲನ ಹೆಚ್ಚಾಗುತ್ತದೆ.
ದೇಹದಲ್ಲಿ ರಕ್ತ ಮತ್ತು ಆಮ್ಲಜನಕ ಉತ್ತಮವಾಗಿರುವ ಕಾರಣ ಚರ್ಮ ಹೊಳೆಯುವಂತೆ ಮಾಡುತ್ತದೆ.
ಕೈಗಳು ಮತ್ತು ಬೆನ್ನುಮೂಳೆ ಬಲಗೊಳ್ಳುತ್ತವೆ.