ಹಳ್ಳಿಯಿಂದ ದಿಲ್ಲಿವರೆಗೆ ಮಂಡ್ಯ ಹೈದನ ರೋಚಕ ಚರಿತ್ರೆ! ಸಂಧ್ಯಾಕಾಲದಲ್ಲಿ ಬಿಜೆಪಿ ಸೇರಿದ್ದೇಕೆ?

Dec 11, 2024, 10:05 PM IST

ಸೋಮನಹಳ್ಳಿ ಮದ್ದೂರು ಕೃಷ್ಣ ಹಳ್ಳಿಯಿಂದ ದಿಲ್ಲಿಯವರೆಗೆ ರಾಜಕಾರಣ ಮಾಡಿದ ಅಪರೂಪದ ರಾಜಕಾರಣಿ. ಎಸ್.ಎಂ ಕೃಷ್ಣ ರಾಜಕಾರಣದಲ್ಲಿ ಉತ್ತುಂಗ ತಲುಪಲು ಕಾರಣವಾಗಿತ್ತು ಅದೊಂದು ಯಾತ್ರೆ. ಕೃಷ್ಣ ಅವರ ರಾಜಕೀಯ ಜೀವನಕ್ಕೆ ದೊಡ್ಡ ತಿರುವು ಕೊಟ್ಟದ್ದೇ ಆ ಯಾತ್ರೆ.

ಶಾಸಕ, ಸಂಸದ, ಸ್ಪೀಕರ್, ಮಂತ್ರಿ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲ, ರಾಜ್ಯಸಭಾ ಸದಸ್ಯ, ಕೇಂದ್ರಮಂತ್ರಿ.. ಹೀಗೆ ಕಾಂಗ್ರೆಸ್'ನಿಂದ ಎಲ್ಲವನ್ನೂ ಪಡೆದಿದ್ದ ಎಸ್ಎಂ ಕೃಷ್ಣ, ರಾಜಕೀಯ ಸಂಧ್ಯಾಕಾಲದಲ್ಲಿ ಬಿಜೆಪಿ ಸೇರಿದ್ದೇಕೆ..? ಅಂಥದ್ದೊಂದು ದೊಡ್ಡ ನಿರ್ಧಾರವನ್ನು ಕೃಷ್ಣ ಅವ್ರು ತೆಗೆದುಕೊಂಡದ್ದೇಕೆ.?

ಎಸ್ಎಂ ಕೃಷ್ಣ ಅವರಂತಹ ರಾಜಕಾರಣಿ ಸರ್ವಕಾಲದಲ್ಲೂ ಸರ್ವರಿಗೂ ಮಾದರಿ. ಒಬ್ಬ ಒಳ್ಳೆಯ ರಾಜಕಾರಣಿ ಹೇಗಿರ್ತಾರೆ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಎಸ್ಎಂ ಕಷ್ಣ. ಅವರು ಮರೆಯಾದ್ರೂ ಅವರು ತುಳಿದ ಕೃಷ್ಣಪಥ ಕರ್ನಾಟಕದ ರಾಜಕಾರಣದಲ್ಲಿ ಸದಾ ಚಿರಸ್ಥಾಯಿ.