Dec 11, 2024, 11:00 PM IST
ಕರೆಂಟ್, ಬೈಕ್, ಮೊಬೈಲ್, ಟಿವಿ, ಇವು ಯಾವುದು ಇಲ್ಲದ ಬದುಕು ಹೇಗಿರುತ್ತೆ ಗೊತ್ತಾ? ಐಷಾರಾಮಿ ಜೀವನವಿಲ್ಲ. ಆಧುನಿಕತೆ ಇಲ್ಲಿಲ್ಲ. 200 ವರ್ಷಗಳ ಹಿಂದಿನ ಬದುಕು ಅವರದ್ದು! ಕಾಡಿನ ಮಧ್ಯೆ ಒಂದು ರಹಸ್ಯ ಗ್ರಾಮ. ಅಲ್ಲಿ ಸನಾತನ ಜೀವನ! ಈ ಆಧುನಿಕ ಯುಗದಲ್ಲೂ ಅದು 200 ವರ್ಷಗಳ ಹಳೇ ಪದ್ಧತಿಯಲ್ಲಿ ಜೀವನ ನಡೆಸುತ್ತಿರುವ ಗ್ರಾಮ. ಆ ಗ್ರಾಮದಲ್ಲಿ ಒಂದೇ ಒಂದು ವಾಹನವಿಲ್ಲ. ಆ ಊರಿನ ಜನ ನಮ್ಮ ನಿಮ್ಮಂತೆ ಜೀನ್ಸ್ ಬಟ್ಟೆ ಧರಿಸೋದಿಲ್ಲ. ಆ ಗ್ರಾಮವನ್ನು ವೇದಿಕ್ ಗ್ರಾಮ ಎಂದೇ ಕರೆಯುತ್ತಾರೆ.
ಯಾವುದೇ ಆಧುನಿಕತೆಗೆ ಅಂಟಿಕೊಳ್ಳದೆ ಪುರಾತನ ಮತ್ತು ಸನಾತನ ಪದ್ಧತಿಯಲ್ಲಿ ಕೂರ್ಮಗ್ರಾಮದ ಜನ ಬದುಕುತ್ತಿದ್ದಾರೆ ನಿಜ. ಆದ್ರೆ ಅಲ್ಲಿನ ಮಕ್ಕಳ ವಿದ್ಯಾಭ್ಯಾಸ ಹೇಗೆ? ಬದುಕಿನ ಶಿಕ್ಷಣವನ್ನು ಅವರು ಕಲಿಯೋದು ಹೇಗೆ ? ಈ ಆಧುನಿಕತೆಯಲ್ಲೂ ಎಲ್ಲವನ್ನು ತೊರೆದು ಬದುಕುವುದು ಸುಲಭದ ಮಾತಲ್ಲ. ಆ ಸಾಧನೆಯನ್ನು ಕೂರ್ಮಗ್ರಾಮಸ್ಥರು ಮಾಡಿದ್ದಾರೆ. ಆ ಕಾರಣಕ್ಕಾಗಿಯೇ ಅವರು ನೆಮ್ಮದಿಯ ಬದುಕಿನಲ್ಲಿ ಜೀವಿಸುತ್ತಿದ್ದಾರೆ. ಈ ಗ್ರಾಮದಲ್ಲಿ ಇಲ್ಲಿಯವರೆಗೂ ಒಂದೇ ಒಂದು ಚಿಕ್ಕ ಕ್ರೈಂ ನಡೆದಿಲ್ಲವಂತೆ.
ಎ.ಆರ್. ರೆಹಮಾನ್‌ರನ್ನ ಅವಮಾನಿಸಿದ್ರಾ ನಟ ಸೂರ್ಯ? ಇದೇ ಕಾರಣಕ್ಕೆ ಸಿನೆಮಾ ತೊರೆದ್ರಾ ಎಆರ್‌ಆರ್
ಈ ಕೂರ್ಮಗ್ರಾಮ ನಿವಾಸಿಗಳು ಅದೆಷ್ಟು ಸುಖದಿಂದ ಬದುಕುತ್ತಿದ್ದಾರೆ ಗೊತ್ತಾ? ಇಲ್ಲಿ ಮೇಲು-ಕೀಳು ಅನ್ನೋದಿಲ್ಲ. ಎಲ್ಲರಿಗೂ ಒಂದೇ ಸ್ಥಾನಮಾನ. ಕೂತು ತಿನ್ನುವವರು ಯಾರೂ ಇಲ್ಲ. ಖುಷಿಯಿಂದ ದುಡಿಯುತ್ತಾರೆ ಗುಣಮಟ್ಟದ ಆಹಾರ ಸೇವಿಸುತ್ತಾರೆ.
ಈ ಕೂರ್ಮಗ್ರಾಮಸ್ಥರ ಬದುಕು, ಅವರ ಜೀವನ ಶೈಲಿ ನೋಡುತ್ತಿದ್ದರೆ ಪುರಾತನ ಭಾರತದ ನೆನಪು ಮಾಡಲಾರಂಭಿಸುತ್ತೆ. ಈ ಗ್ರಾಮದ ಮೇಲೆ ಯಾವ ಕೆಟ್ಟ ಕಣ್ಣು ಬೀಳದಿರಲಿ. ಗ್ರಾಮಸ್ಥರು ಎಂದೆಂದೂ ಸುಖಿಗಳಾಗಿಯೇ ಬದುಕುಲಿ.