ಕನ್ನಡ ಕಿರುತೆರೆಯಲ್ಲಿ ಎಂಥಾ ಮಾಡರ್ನ್ ಲುಕ್‌ಗೂ ಸೈ ಅನ್ನೋವಂಥ ಕೆಲವು ನಟ-ನಟಿಯರಿದ್ದಾರೆ. ಅಂಥವರಲ್ಲಿ ಒಬ್ಬರು ಸಾರಾ ಅಣ್ಣಯ್ಯ. ಯಾವಾಗ್ಲೂ ತಮ್ಮ ಸ್ಟೈಲಿಶ್ ಲುಕ್‌ನಿಂದ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.
ಟ್ರೆಂಡಿಂಗ್ ಡ್ರೆಸ್ ಹಾಕೋದ್ರಲ್ಲಿ ಸಾರಾ ಅಣ್ಣಯ್ಯ ಎತ್ತಿದ ಕೈ. ಪಾರ್ಟಿ-ಪಬ್‌ಗಳಲ್ಲಿ ಮಾಡರ್ನ್ ಡ್ರೆಸ್ ಹಾಕಿದ ಫೋಟೋಸ್ ಪೋಸ್ಟ್ ಮಾಡಿ ಪಡ್ಡೆ ಹುಡುಗರ ಹಾರ್ಟ್‌ಬೀಟ್ ಹೆಚ್ಚು ಮಾಡ್ತಿರ್ತಾರೆ. ಇತ್ತೀಚಿಗೆ ತೊಡೆ ಕಾಣೋ ಸೀರೆಯುಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ದಿವಾಸ್ ತೊಡೆ ಕಾಣಿಸುವಂತೆ ಹಾಫ್ ಸ್ಟೈಲ್‌ನಲ್ಲಿ ಸ್ಯಾರಿ ಉಡೋದನ್ನು ನೀವು ನೋಡಿರ್ತೀರಾ..ಹಾಗೆಯೇ ಸಾರಾ ಅಣ್ಣಯ್ಯ ಫ್ರಂಟ್ ಸ್ಲಿಟ್ ಇರುವಂತೆ ಪಿಸ್ತಾ ಕಲರ್ ಸೀರೆಯುಟ್ಟಿದ್ದಾರೆ. ಇದಕ್ಕೆ ಒಪ್ಪುವಂತೆ ಕಲರ್‌ಫುಲ್ ಬ್ಲೌಸ್ ತೊಟ್ಟಿದ್ದಾರೆ.
ದೊಡ್ಡದಾದ ಇಯರಿಂಗ್ಸ್ ಹಾಕ್ಕೊಂಡು, ಪಿಂಕ್ ಬ್ಯಾಗ್ ಹಿಡ್ಕೊಂಡು ಸಾರಾ ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ. ಸಾರಾ ಹಾಟ್ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಲೈಕ್ಸ್, ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ. ಪ್ರೆಟ್ಟೀ, ಸೂಪರ್, ಅಮೇಜಿಂಗ್ ಔಟ್‌ಫಿಟ್, ಬ್ಯೂಟಿಫುಲ್, ಗಾರ್ಜಿಯಸ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಸ್ಟೈಲಿಶ್ ಡ್ರೆಸ್‌ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಸೀರಿಯಲ್‌ನಲ್ಲಿ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳೋ ಸಾರಾ ರಿಯಲ್ ಲೈಫ್‌ನಲ್ಲಿ ಸೀರೆಯುಟ್ಟು ಮಿಂಚುತ್ತಾರೆ.
ಕನ್ನಡತಿ ಸೀರಿಯಲ್ ನಲ್ಲಿ ವರೂಧಿನಿ ಪಾತ್ರದ ಮೂಲಕ ಜನಕ್ಕೆ ಹತ್ತಿರವಾದ ನಟಿ ಸಾರಾ. ಈ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದರೂ, ಆಕೆಯ ಸೈಕೋ ಕ್ಯಾರೆಕ್ಟರ್ ಜನರಿಗೆ ತುಂಬಾನೆ ಇಷ್ಟವಾಗಿತ್ತು.
ಕನ್ನಡತಿ, ನಮ್ಮ ಲಚ್ಚಿ, ಅಮೃತಧಾರೆ ಈ ಮೂರು ಸೀರಿಯಲ್ ನಲ್ಲೂ ಸಾರಾ ತುಂಬಾನೆ ಮಾಡರ್ನ್ ಹುಡುಗಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಹಾಗೇ ನೋಡಿದ್ರೆ ಸಾರಾ ಮಾಡರ್ನ್ ಡ್ರೆಸ್ಸಲ್ಲೂ, ಸೀರೆಯಲ್ಲು ಅದ್ಭುತ ಬ್ಯೂಟಿ ಅನ್ನೋದ್ರಲ್ಲಿ ತಪ್ಪಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಪ್ರತಿದಿನ ತಮ್ಮ ಮಾಡರ್ನ್ ಮತ್ತು ಟ್ರೆಡಿಶನಲ್ ಫೋಟೋ ಶೂಟ್ ಮಾಡಿಸುತ್ತಾ, ಶೇರ್ ಮಾಡುತ್ತಿರುತ್ತಾನೆ, ಆ ಮೂಲಕ ಜನರನ್ನು ಮತ್ತಷ್ಟು ಕನೆಕ್ಟ್ ಆಗುತ್ತಾರೆ ನಟಿ.
ಬೆಂಗಳೂರಲ್ಲಿ ಹುಟ್ಟಿ ಬೆಳೆದಿರುವ ಈ ಬೋಲ್ಡ್ ಬ್ಯೂಟಿ ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ತುಂಬಾನೆ ಫೇಮಸ್. ಕನ್ನಡ ಸಿನಿಮಾ, ತಮಿಳು ವೆಬ್ ಸೀರೀಸ್ ಗಳಲ್ಲೂ ನಟಿಸಿರುವ ಸಾರಾ, ಸದ್ಯ ಅಮೃತಧಾರೆಯಲ್ಲಿ ಗೌತಮ್ ದಿವಾನ್ ತಂಗಿ ಮಹಿಮಾ ಪಾತ್ರ ಮಾಡುತ್ತಿದ್ದಾರೆ.