ಪ್ರಕರಣದ ಎ3 ಆರೋಪಿ ರಾತ್ರೋರಾತ್ರಿ ಲೋಕಾಯುಕ್ತ ಕಚೇರಿಗೆ ಹೋಗುತ್ತಾರೆ. ಕದ್ದು ಮುಚ್ಚಿ ಯಾಕೆ ಹೋದರು. ರಾತ್ರಿ ದಾಖಲೆ ಕೊಡಿ ಎಂದು ಲೋಕಾಯುಕ್ತ ಅಧಿಕಾರಿಗಳು ಕೇಳಿದ್ದರಾ? ನಮಗೆ ಹಲವು ಅನುಮಾನ ಶುರುವಾಗಿದೆ. ಹಿರಿಯ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ
ಮೈಸೂರು(ನ.24): ರಾಜ್ಯದಲ್ಲಿರುವುದು ಎ1 ಆರೋಪಿ ಸರ್ಕಾರ. ಎ1 ಆಗಿರುವವರು ರಾಜ್ಯ ಸರ್ಕಾರ ನಡೆಸುತ್ತಿದ್ದಾರೆ. ಹೀಗಾಗಿ ಮುಡಾ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಆಗ್ರಹಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಎ3 ಆರೋಪಿ ರಾತ್ರೋರಾತ್ರಿ ಲೋಕಾಯುಕ್ತ ಕಚೇರಿಗೆ ಹೋಗುತ್ತಾರೆ. ಕದ್ದು ಮುಚ್ಚಿ ಯಾಕೆ ಹೋದರು. ರಾತ್ರಿ ದಾಖಲೆ ಕೊಡಿ ಎಂದು ಲೋಕಾಯುಕ್ತ ಅಧಿಕಾರಿಗಳು ಕೇಳಿದ್ದರಾ? ನಮಗೆ ಹಲವು ಅನುಮಾನ ಶುರುವಾಗಿದೆ. ಹಿರಿಯ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದರು.
ಬಿಜೆಪಿ, ಜೆಡಿಎಸ್‌ನವರು ಸುಳ್ಳನ್ನ ಸತ್ಯ ಮಾಡಲು ಹೊರಟಿದ್ರು, ರಾಜಕೀಯ ಕುತಂತ್ರಕ್ಕೆ ಜನರ ತಕ್ಕ ಉತ್ತರ: ಮಹದೇವಪ್ಪ
ಲೋಕಾಯುಕ್ತ ಉನ್ನತಾಧಿಕಾರಿಗೆ ತನಿಖಾಧಿಕಾರಿ ಗಮನಕ್ಕೆ ತಂದು ಎ3 ಆರೋಪಿಯನ್ನ ಭೇಟಿಮಾಡಿದರಾ? ತನಿಖಾಸಂಸ್ಥೆಸ್ವತಂತ್ರವಾಗಿ ತನಿಖೆ ಮಾಡುತ್ತಿದೆಯೇ ಎಂಬ ಅನುಮಾನಗಳು ನಮ್ಮನ್ನು ಕಾಡುತ್ತಿವೆ. ನೋಟಿಸ್ ಕೊಟ್ಟು ಬೆಳಗ್ಗೆಯಿಂದ ರಾತ್ರಿಯವರೆಗೆ ಮಲ್ಲಿಕಾರ್ಜುನಸ್ವಾಮಿ ಅವರನ್ನು ವಿಚಾರಣೆ ಮಾಡಬಹುದಿತ್ತು, ಅದನ್ನು ಬಿಟ್ಟು ರಾತ್ರಿ ವೇಳೆ ಭೇಟಿ ಮಾಡಿದ್ದು ಯಾಕೆ, ಲೋಕಾಯುಕ್ತ ಹಿರಿಯ ಅಧಿಕಾರಿಗಳ ಗಮನಕ್ಕೆ ಇದು ಬಂದಿದೆಯಾ, ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಸಿಎಂ ಅವರನ್ನು ತನಿಖೆ ಮಾಡಲು ಸಾಧ್ಯವೇ? ಇದು ಗಂಭೀರವಾದ ಪ್ರಕರಣವಾಗಿದ್ದು, ಇದನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ನನ್ನ ಅವಧಿಯಲ್ಲಿ ಸಿಎಂ ಪತ್ನಿಗೆ ಬದಲಿ ಭೂಮಿ ಕೊಡಲು ಸಿದ್ದರಾಮಯ್ಯ ಒಪ್ಪಲಿಲ್ಲ: ಮುಡಾ ಮಾಜಿ ಅಧ್ಯಕ್ಷ ಧ್ರುವಕುಮಾರ್
ಮೈಸೂರು: ನನ್ನ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬದಲಿ ಭೂಮಿಯನ್ನು ಕೊಡಲು ತೀರ್ಮಾನ ಮಾಡಲಾಗಿತ್ತು. ಆದರೆ, ಅದಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಲಿಲ್ಲ ಎಂದು ಮುಡಾ ಮಾಜಿ ಅಧ್ಯಕ್ಷ ಡಿ. ಧ್ರುವಕುಮಾರ್ ತಿಳಿಸಿದ್ದರು.
ಮುಡಾ ಹಗರಣ ಸಂಬಂಧ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ವಿಚಾರಣೆಗೆ ನೀಡಿದ್ದ ನೋಟಿಸ್ ಹಿನ್ನೆಲೆಯಲ್ಲಿ ಮಂಗಳವಾರ ಕಚೇರಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಪತ್ನಿಗೆ ಭೂಮಿ ಕೊಡುವ ಬಗ್ಗೆ ನನ್ನ ಅವಧಿಯಲ್ಲಿ ಈ ವಿಚಾರ ಸಭೆಯಲ್ಲಿ ಚರ್ಚೆಗೆ ಬಂತು. ಬದಲಿ ಜಾಗವನ್ನು ಕೊಡಲು ತೀರ್ಮಾನ ಮಾಡಿದ್ದೋ ಎಂದು ಹೇಳಿದ್ದರು.
ಈ ವಿಚಾರವನ್ನು ನಾನೇ ಖುದ್ದಾಗಿ ಸಿದ್ದರಾಮಯ್ಯ ಭೇಟಿ ಮಾಡಿ ವಿಷಯ ತಿಳಿಸಿದೆ. ಆದರೆ, ಸಿಎಂ ಯಾವುದೇ ಕಾರಣಕ್ಕೂ ಬೇಡ ಅಂದ್ರು. ನಾನು ಸಿಎಂ ಆಗಿರುವ ಸಮಯದಲ್ಲಿ ಈ ನಿರ್ಣಯಗಳು ಬೇಡ ಅಂದ್ರು. ಸಿಎಂ ಪತ್ನಿ ಪಾರ್ವತಿ ಕಳೆದ ಭೂಮಿಗೆ ಸಮಾನಂತರ ಬಡಾವಣೆಯಲ್ಲಿ ಭೂಮಿ ಕೊಡಲು ಸಭೆ ತಮ್ಮ ತೀರ್ಮಾನ ಮಾಡಿತ್ತು. ನನ್ನ ಅವಧಿ ಮುಗಿದ ಬಳಿಕ ಮುಂದೆ ಏನಾಗಿದೆ ಗೊತ್ತಿಲ್ಲ ಎಂದರು.
ಡಿ.9ರಿಂದ ಚಳಿಗಾಲದ ಅಧಿವೇಶನ; ಮುಡಾ ಆರೋಪಿ ಸಿದ್ದು ಸೈಲೆಂಟಾದ್ರೆ, ಯಾರಾಗಲಿದ್ದಾರೆ ವಿಧಾನಸಭೆ ವೀರ?
ನಾನು ಮುಡಾ ಆಯುಕ್ತರಿಗೆ ಯಾವುದೇ ಪತ್ರ ಬರೆದಿಲ್ಲ. ನಮ್ಮ ಕಾಲದಲ್ಲಿ ಅಲ್ಲ ಹಿಂದಿನ ಕಾಲದಿಂದಲೂ 50:50 ಅನುಪಾತ ಜಾರಿಯಲ್ಲಿದೆ. ಆದರೆ, ನನ್ನ ಅವಧಿಯಲ್ಲಿ 50:50 ಅನುಪಾತದಡಿಯಲ್ಲಿ 10 ಅಡಿ ಜಾಗವನ್ನು ಕೊಟ್ಟಿಲ್ಲ. ರೈತರನ್ನ ಕೇಳಿದಾಗ 50:50 ಅನುಪಾತಕ್ಕೆ ಯಾರೂ ಒಪ್ಪಲಿಲ್ಲ. ಯಾರು ಸಹ ಭೂಮಿಯನ್ನ ಕೊಡಲು ಒಪ್ಪಲಿಲ್ಲ. ಹೀಗಾಗಿ ಹೊಸ ಬಡವಾಣೆ ನಿರ್ಮಾಣ ಮಾಡಿಲ್ಲ ಎಂದು ಅವರು ತಿಳಿಸಿದ್ದರು.
ಸಿದ್ದರಾಮಯ್ಯ ಪತ್ನಿ ಯಾವ ಪತ್ರವನ್ನ ಬರೆದಿಲ್ಲ, ಫೋನ್ ಕೂಡ ನನಗೆ ಮಾಡಿಲ್ಲ. ಮಲ್ಲಿಕಾರ್ಜುನಸ್ವಾಮಿ ಸಹ ಬಂದು ನನ್ನ ಬಳಿ ಮನವಿ ಮಾಡಿಲ್ಲ. ಇಡಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ಬಂದ್ರೆ ಹೋಗಿ ತನಿಖೆ ಎದುರಿಸುತ್ತೇನೆ ಎಂದು ಅವರು ಹೇಳಿದ್ದರು.