ಅಭಿಷೇಕ್ ಬಚ್ಚನ್ ಈಗ ಎರಡು ವಿಷಯಗಳಿಂದ ಸುದ್ದಿಯಲ್ಲಿದ್ದಾರೆ. ಒಂದು, ಅವರ `ಐ ವಾಂಟ್ ಟು ಟಾಕ್` ಸಿನಿಮಾ ರಿಲೀಸ್ ಆಗಿ ಚೆನ್ನಾಗಿದೆ ಅಂತ ಜನ ಹೇಳ್ತಿದ್ದಾರೆ. ಇನ್ನೊಂದು, ಐಶ್ವರ್ಯಾ ರೈ ಜೊತೆ ಅವರದ್ದು ಡಿವೋರ್ಸ್ ಆಗುತ್ತೆ ಅಂತೆಲ್ಲಾ ಗಾಳಿಸುದ್ದಿ ಹಬ್ಬುತ್ತಿದೆ. ಮದುವೆಗೂ ಮುಂಚೆ ಅಭಿಷೇಕ್, ಐಶ್ವರ್ಯಾ `ಕುಚ್ ನಾ ಕಹೋ`, `ಧೂಮ್ 2`, `ಬಂಟಿ ಔರ್ ಬಬ್ಲಿ`, `ಗುರು`, `ಸರ್ಕಾರ್ ರಾಜ್` ಹೀಗೆ ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದರು. ಆದ್ರೆ ಮದುವೆಯಾದ ನಂತರ ಒಟ್ಟಿಗೆ ನಟಿಸಿದ್ದು ಮಣಿರತ್ನಂ ಅವರ `ರಾವಣ್` ಸಿನಿಮಾದಲ್ಲಿ ಮಾತ್ರ. ಈ ಸಿನಿಮಾ ಪ್ರೇಕ್ಷಕರಿಗೆ ಅಷ್ಟಾಗಿ ಇಷ್ಟ ಆಗಲಿಲ್ಲ. ಗಲ್ಲಾ ಪೆಟ್ಟಿಗೆಯಲ್ಲಿ ಈ ಚಿತ್ರ ಅಷ್ಟೇನು ಕಮಾಲ್ ಮಾಡಲಿಲ್ಲ.