ಪ್ರಯಾಣಿಕರ ಸುರಕ್ಷತೆಯ ಪ್ಯಾನಿಕ್ ಬಟನ್‌ನಿಂದ ವಾಹನ ಮಾಲೀಕರು, ಚಾಲಕರು ಪ್ಯಾನಿಕ್!

Published : Nov 24, 2024, 11:18 PM ISTUpdated : Nov 24, 2024, 11:19 PM IST

ಪ್ರಯಾಣಿಕರ ರಕ್ಷಣೆ, ಸುರಕ್ಷತೆ ಹಾಗೂ ತುರ್ತು ಅಗತ್ಯದ ಸಂದರ್ಭಕ್ಕೆ ನೆರವಾಗಲು ಕ್ಯಾಬ್, ಸಾರ್ವಜನಿಕ ಸೇವಾ ವಾಹನಗಳಲ್ಲಿ ಪ್ಯಾನಿಕ್ ಬಟನ್ ಕಡ್ಡಾಯ ಮಾಡುವಂತೆ ನಿರ್ದೇಶಿಸಲಾಗಿದೆ. ಇದರಿಂದ ವಾಹನ ಮಾಲೀಕರು, ಚಾಲಕರೇ ಪ್ಯಾನಿಕ್ ಆಗಿದ್ದಾರೆ.  

PREV
16
ಪ್ರಯಾಣಿಕರ ಸುರಕ್ಷತೆಯ ಪ್ಯಾನಿಕ್ ಬಟನ್‌ನಿಂದ ವಾಹನ ಮಾಲೀಕರು, ಚಾಲಕರು ಪ್ಯಾನಿಕ್!

ಕ್ಯಾಬ್ ಸೇರಿ ಎಲ್ಲಾ ಸಾರ್ವಜನಿಕ ಸೇವಾ ವಾಹನದಲ್ಲಿ ಪ್ಯಾನಿಕ್ ಬಟನ್ ಕಡ್ಡಾಯ ಮಾಡಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ನವೆಂಬರ್ ತಿಂಗಳ ವರೆಗೆ ಪ್ಯಾನಿಕ್ ಹಾೂ ವಿಎಲ್‌ಟಿ ಬಟನ್ ಅಳವಡಿಸಲು ಗುಡುವು ನೀಡಲಾಗಿದೆ. ವೆಹಿಕಲ್ ಲೋಕೇಶನ್ ಟ್ರ್ಯಾಕಿಂಗ್(VLT) ಹಾಗೂ ತುರ್ತು ಸಂದರ್ಭಗಳಲ್ಲಿ ಬಳಸಲು ಪ್ಯಾನಿಕ್ ಬಟನ್ ಅಳವಡಿಸುವ ಅಂತಿಮ ಗಡುವು ಹತ್ತಿರ ಬರುತ್ತಿದೆ. ಆದರೆ ಈ ಎರಡು ಸಾಧನ ಅಳವಡಿಕೆ ವಾಹನ ಮಾಲೀಕರನ್ನೇ ಪ್ಯಾನಿಕ್ ಮಾಡಿದೆ.

26

ಕಲಬುರಗಿಯಲ್ಲಿ ಇದೀಗ ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ವಾಹನ ಮಾಲೀಕರ ನಿದ್ದೆಗೆಡಿಸಿದೆ. ಕ್ಯಾಬ್, ಖಾಸಗಿ ಸಾರ್ವಜನಿಕ ಸೇವಾ ವಾಹನ, ಶಾಲಾ ವಾಹನ ಸೇರಿದಂತೆ ಸಾರ್ವಜನಿಕರಿಗೆ ಸಾರಿಗೆ ಸೇವೆ ನೀಡುತ್ತಿರುವ ಎಲ್ಲಾ ವಾಹನಗಳು ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಸಬೇಕು. ನವೆಂಬರ್ ತಿಂಗಳ ಅಂತ್ಯದೊಳಗೆ ಈ ಸಾಧನ ಅಳವಡಿಸಿರಬೇಕು. 

36

ಆದರೆ ಈ ಎರಡು ಡಿವೈಸ್ ವಾಹನ ಮಾಲೀಕರನ್ನು ಹೈರಾಣಿಗಿಸಿದೆ. ಕಾರಣ ಸರ್ಕಾರ ನೀಡಿರುವ ಆದೇಶದಿಂದ ಪ್ಯಾನಿಕ್ ಬಟನ್ ವಿಎಲ್‌ಚಿಗೆ ಬೇಡಿಕೆ ಹೆಚ್ಚಾಗಿದೆ. ಮಧ್ಯವರ್ತಿಗಳು ಕೆಲವರಿಗೆ 10,000 ರೂಪಾಯಿ ದರದಲ್ಲಿ ಮಾರಾಟ ಮಾಡಿದ್ದರೆ, ಮತ್ತೆ ಕೆಲವರಿಗೆ 15,000 ರೂಪಾಯಿ ದರ ವಸೂಲಿ ಮಾಡಿದ್ದಾರೆ. ಸರ್ಕಾರದ ಪ್ಯಾನಿಕ್ ಬಟನ್ ಹಾಗೂ ವಿಎಲ್‌ಟಿಯಿಂದ ಮಧ್ಯವರ್ತಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಹಣ ಮಾಡುತ್ತಿದ್ದಾರೆ ಎಂದು ಕಲಬುರಗಿ ವಾಹನ ಚಾಲಕರ ಸಂಘ ಆರೋಪಿಸಿದೆ.

46

ಖಾಸಗಿ ಸಾರಿಗೆ ವಾಹನಗಳಲ್ಲಿ ಜನರು ಬರುತ್ತಿಲ್ಲ. ಮಹಿಳೆಯರಿಗೆ ಉಚಿತ ಬಸ್‌ನಿಂದಾಗಿ ಜನರೇ ಇಲ್ಲದಾಗಿದೆ. ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಹೀಗಾಗಿ ಪ್ಯಾನಿಕ್ ಬಟನ್, ವಿಎಲ್‌ಟಿ ಬದಲು ಜಿಪಿಎಸ್‌ಗೆ ಅಳವಡಿಕೆ ಸಾಕು ಎಂದು ಕಲಬುರಗಿವಾಹನ ಚಾಲಕರ ಸಂಘ ಒತ್ತಾಯಿಸಿದೆ.

56
Taxi Fear

ವಿಎಲ್‌ಟಿಯಿಂದ ವಾಹನ ಲೋಕೇಶನ್ ಟ್ರ್ಯಾಕ್ ಮಾಡಲು ಸಹಾಯವಾಗುತ್ತದೆ. ಇದರಿಂದ ಅಪಘಾತ, ಅವಘಡ, ದಾಳಿ ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ವಾಹನ ಎಲ್ಲಿದೆ? ಅನ್ನೋದು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. ಇನ್ನು ಪ್ಯಾನಿಕ್ ಬಟನ್ ಕೂಡ, ಪ್ರಯಾಣಿಕರು ಪ್ರಯಾಣದ ಯಾವುದೇ ಸಂದರ್ಭದಲ್ಲಿ ಅಪಾಯ ಎದುರಿಸಿದರೆ, ತುರ್ತು ಸೇವೆಯ ಅಗತ್ಯವಿದ್ದರೆ, ರಕ್ಷಣೆ, ಸುರಕ್ಷತೆ ಬೇಕಿದ್ದರೆ ಪ್ಯಾನಿಕ್ ಬಟನ್ ಪ್ರೆಸ್ ಮಾಡಿದರೆ ಸಾಕು, ಎಲ್ಲಾ ಮಾಹಿತಿ ಪೊಲೀಸರಿಗೆ ಹೋಗಲಿದೆ. ಇದರಿಂದ  ವಾಹನ ಟ್ರ್ಯಾಕ್ ಮಾಡಿ ನೆರವು ನೀಡಲು ಸಾಧ್ಯವಾಗುತ್ತದೆ.

66
vltd

ವಿಎಲ್‌ಟಿ ಹಾಗೂ ಪ್ಯಾನಿಕ್ ಬಟನ್ ಪ್ರಯಾಣಿಕರು, ವಾಹನ ಚಾಲಕರು ಸುರಕ್ಷತೆ, ರಕ್ಷಣೆ ಹಾಗೂ ತುರ್ತು ಅಗತ್ಯತೆಗಳಿಗೆ ಉಪಯುಕ್ತವಾಗಿದೆ. ಆದರೆ ಎರಡು ಡಿವೈಸ್ ಮಾರುಕಟ್ಟೆಯಲ್ಲಿ ಸರಿಯಾಗಿ ಲಭ್ಯವಾಗುವಂತೆ ಮಾಡಿಲ್ಲ. ಇನ್ನು ಮಧ್ಯವರ್ತಿಗಳ ಹಾವಳಿಯಿಂದ ದುಪ್ಪಟ್ಟು ದುಡ್ಡು ವಸೂಲಿ ಮಾಡಲಾಗುತ್ತಿದೆ. ಉಚಿತ ಬಸ್‌ನಿಂದ ಕೈಸುಟ್ಟುಕೊಂಡಿರುವ ಖಾಸಗಿ ಸಾರಿಗೆ ವಾಹನ ಮಾಲೀಕರಿಗೆ ಇದು ಮತ್ತಷ್ಟು ಹೊರೆ ಅನ್ನೋ ಕೂಗು ಕೇಳಿಬರುತ್ತಿದೆ.

Read more Photos on
click me!

Recommended Stories