bigg boss kannada 11 ಮನೆಯಲ್ಲಿ ಗಾದೆಗಳ ಸಮರ: ಯಾರಿಗೆ ಯಾವ ಗಾದೆ ಸಿಕ್ತು?

By Gowthami K  |  First Published Nov 24, 2024, 11:56 PM IST

ಬಿಗ್ ಬಾಸ್ ಕನ್ನಡ 11ರಲ್ಲಿ ಮನೆಮಂದಿಗೆ ಗಾದೆಗಳನ್ನು ಹೊಂದಿಸುವ ಕಾರ್ಯಕ್ರಮ ನಡೆಯಿತು. ತ್ರಿವಿಕ್ರಮ್ ಮತ್ತು ಸುರೇಶ್ ಅವರಿಗೆ ಹೆಚ್ಚಿನ ಗಾದೆಗಳು ಬಂದವು, ಆದರೆ ಮಂಜು ಅವರಿಗೆ ಯಾವುದೇ ಗಾದೆ ಬರಲಿಲ್ಲ.


ಬಿಗ್ ಬಾಸ್ ಕನ್ನಡ  11ರಲ್ಲಿ ಈ ಸಲ ಗಾದೆಗಳ ಬಗ್ಗೆ ಮಾತನಾಡಲಾಗಿದೆ. ಯಾವ ಗಾದೆ ಯಾರಿಗೆ ಹೆಚ್ಚು ಸೂಕ್ತ ಎಂದು ಕೇಳಿದ ಪ್ರಶ್ನೆಗೆ ಅತೀ ಹೆಚ್ಚು ತ್ರಿವಿಕ್ರಮ್‌  ಅವರಿಗೆ ಗಾದೆಗಳ ಬೋರ್ಡ್ ಬಂದಿದೆ.

ಯಾರಿಗೆ ಯಾವ ಗಾದೆ ಎಂಬುದನ್ನು ನೋಡೋಣ
ರಜತ್‌: ಕುಣಿಯೋಕೆ ಬರದವರು ನೆಲ ಡೊಂಕು ಎಂದರಂತೆ, ಈ ಗಾದೆಯನ್ನು ಸುರೇಶ್‌ ಗೆ ನೀಡಿದರು.
ಶೋಭಾ ಶೆಟ್ಟಿ: ಅತೀ ವಿನಯಂ ದೂರ್ತ ಲಕ್ಞಣಂ ಎಂಬ ಬೋರ್ಡ್ ಅನ್ನು ತ್ರಿವಿಕ್ರಮ್‌  ಅವರಿಗೆ ನೀಡಿದರು.
ಭವ್ಯಾ ಗೌಡ: ಅಧಂಬರ್ಧ ಕಲಿತವರ ಅಬ್ಬರ ಜಾಸ್ತಿ, ಚೈತ್ರಾ ಪಾಲಾಯ್ತು
ತ್ರಿವಿಕ್ರಮ್: ಆರು ಕೊಟ್ಟರೆ ಅತ್ತೆ ಕಡೆ ಮೂರು ಕೊಟ್ಟರೆ ಸೊಸೆ ಕಡೆ , ಚೈತ್ರಾಗೆ ನೀಡಲಾಯ್ತು
ಮಂಜು: ಭೂಮಿಗೆ ಬಾರ ಕೂಲಿಗೆ ದಂಢ ಸುರೇಶ್ ಪಾಲಾಯ್ತು.
ಗೌತಮಿ: ಗೆದ್ದ ಎತ್ತಿನ ಬಾಲ ಹಿಡಿಯೋದು, ಸುರೇಶ್‌ ಗೆ ನೀಡಿದರು.
ಧರ್ಮ: ಗುಂಪಲ್ಲಿ ಗೋವಿಂದ, ಧನ್‌ರಾಜ್‌ ಗೆ ನೀಡಿದರು.
ಚೈತ್ರಾ: ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ, ವಿಕ್ರಮ್‌ ಗೆ ನೀಡಲಾಯ್ತು
ಹನುಮಂತ: ಕಾಮಾಲೆ ಕಣ್ಣಿಗೆಲ್ಲ ಕಾಣೋದೆಲ್ಲ ಹಳದಿ. ತ್ರಿವಿಕ್ರಮ್ ಅವರಿಗೆ ನೀಡಿದರು.
ಧನ್‌ರಾಜ್‌: ಬರು ಬರುತ್ತಾ ರಾಯರ ಕುದುರೆ ಕತ್ತೆ . ಸುರೇಶ್ ಅವರಿಗೆ ನೀಡಿದರು.
ಸುರೇಶ್: ಹತ್ತಿದ ಏಣಿಯನ್ನು ಒದೆಯೋರು. ಧನ್‌ರಾಜ್‌ ಗೆ ನೀಡಿದರು.
ಮೊಕ್ಷಿತಾ: ನರಿ ಬಣ್ಣ ಬದಲಾದರೂ ಬುದ್ದಿ ಮಾತ್ರ ಬದಲಾಗಲ್ಲ, ತ್ರಿವಿಕ್ರಮ್‌ ಗೆ ನೀಡಿದರು.
ಐಶ್ವರ್ಯಾ: ಬೆಂಕು ಕಣ್ಣು ಮುಚ್ಚಿ ಹಾಲು ಕುಡುದ್ರೆ ಇಡೀ ಜಗತ್ತಿಗೆ ಗೊತ್ತಾಗಲ್ವಾ?  ತ್ರಿವಿಕ್ರಮ್‌ ಗೆ ನೀಡಿದರು.
ಶಿಶಿರ್: ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ, ಸುರೇಶ್ ಅವರಿಗೆ ನೀಡಿದರು.

Tap to resize

Latest Videos

undefined

ಇದರಲ್ಲಿ ಆಶ್ಚರ್ಯವಾಗಿದ್ದು, ಮಂಜು ಅವರಿಗೆ ಯಾವುದೇ ಬೋರ್ಡ್ ಬರಲಿಲ್ಲ. ತ್ರಿವಿಕ್ರಮ್‌ ಮತ್ತು ಗೋಲ್ಡ್ ಸುರೇಶ್ ಅವರಿಗೆ ಅತೀ ಹೆ್ಚ್ಚು ಬೋರ್ಡ್ ಬಂತು.

ಇದರ ನಂತರ ಕಿಚ್ಚ ಈ ಮನೆಯಲ್ಲಿ ಯಾರನ್ನು ಮೆಚ್ಚಿಸಬೇಕು ಎಂದು ಕೇಳಿದರು. ಇದಕ್ಕೆ ಮನೆವರೆಲ್ಲ ಯಾರನ್ನೂ ಇಲ್ಲ ಎಂದರು. ಆದರೆ ಉಗ್ರಂ ಮಂಜು ಮಾತ್ರ ಗೌತಮಿ ಅಂದರು.

12 ವಾರಗಳಿಗೆ ತೆಲುಗು ಬಿಗ್‌ಬಾಸ್‌ನಿಂದ ಕನ್ನಡತಿ ಯಶ್ಮಿ ಗೌಡ ಪಡೆದ ಸಂಭಾವನೆ ಬರೋಬ್ಬರಿ 24 ಲಕ್ಷ ರೂ!

ಸುದೀಪ್‌: ನೀವು ಗೌತಮಿಯನ್ನು ಮೆಚ್ಚಿಸಿ ಮಂಜು, ಇಬ್ಬರು ಅಪ್ಪಿ ತಪ್ಪಿ ಫೈನಲ್‌ ಗೆ ಬಂದರೆ. ಇಲ್ಲೇ ನಿಂತುಕೊಂಡೇ ನೋಡ್ತೀನಿ ಯಾರು ಯಾರನ್ನು ಮೆಚ್ಚಿತ್ತೀರಿ ಅಂತ
ಮಂಜು: ಅಲ್ಲಣ್ಣಾ, ನಾನು ಏನು ಹೇಳೋಕೆ ಹೋದರೆ ಎಂದರೆ,
ಸುದೀಪ್‌ : ಅಲ್ಲಪಲ್ಲ ಬೇಡ, ಅವತ್ತು ನೀವೇನಾದ್ರೂ ಕಪ್ಪು ಅವರಿಗೆ ಬಿಟ್ಟು ಕೊಡದೇ ಇದ್ರೆ...!

ಹೀಗೆ ಕಿಚ್ಚ ಕ್ಲಾಸ್ ತೆಗೆದುಕೊಂಡು ಮತ್ತೆ ಈ ಮನೆಯಲ್ಲಿ ಯಾರನ್ಜು ಮೆಚ್ಚಿಸಬೇಕು ಎಂದಾಗ, ಯಾರನ್ನು ಇಲ್ಲಣ್ಣ, ನನ್ನನ್ನು ನಾನು ಮೆಚ್ಚಿಸಬೇಕು. ನಾನು ಯಾವುದೋ ಲೋಕದಲ್ಲಿ ಇದ್ದೆ ಅಣ್ಣ ಎಂದು ಮಂಜು ಹೇಳಿದರು. ಇದಕ್ಕೆ ಸುದೀಪ್‌ ಇಲ್ಲ, ಇಲ್ಲ ನೀವು ಎಲ್ಲರೂ ಯಾವುದೇ ಲೋಕದಲ್ಲಿರಿ. ವಾಪಸ್‌ ಲೋಕಕ್ಕೆ ಕರೆದುಕೊಂಡು ಬರುವುದು ನನ್ನ ಕರ್ತವ್ಯ. 
 

click me!