ನೀತಾ ಅಂಬಾನಿಯ ಪಾಪ್ ಕಾರ್ನ್ ಶೈಲಿಯ ಬ್ಯಾಗ್ ಬೆಲೆಗೆ 2 ಕಾರು ಖರೀದಿಸಬಹುದು!

By Chethan Kumar  |  First Published Nov 17, 2024, 11:27 PM IST

ನೀತಾ ಅಂಬಾನಿ ಬಳಿ ಎಲ್ಲಾ ವಸ್ತುಗಳು ಅತ್ಯಂತ ದುಬಾರಿ. ನೀತಾ ಅಂಬಾನಿ ಡ್ರೆಸ್, ಸೀರೆಗೆ ಒಪ್ಪುವ ವ್ಯಾನಿಟಿ ಬ್ಯಾಗ್, ಪರ್ಸ್ ಬಳಸುತ್ತಾರೆ. ಇದರ ಬೆಲೆ ಕೇಳಿದರೆ ದಂಗಾಗುವುದು ಖಚಿತ. ಇದೀಗ ನೀತಾ ಅಂಬಾನಿ ಪಾಪ್‌ಕಾರ್ನ್ ಶೈಲಿಯ ಸಣ್ಣ ಬ್ಯಾಗ್ ಬಳಸಿದ್ದಾರೆ.  ಇದರ ಬೆಲೆಗೆ 2 ಕಾರು ಖರೀದಿಸಬಹುದು.


ಮುಂಬೈ(ನ.17) ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ, ರಿಲಯನ್ಸ್ ಫೌಂಡೇಶನ್ ಸೇರಿದಂತೆ ಹಲವು ಉದ್ಯಮಗಳ ಅಧ್ಯಕ್ಷೆ ನೀತಾ ಅಂಬಾನಿ ಪ್ರತಿಯೊಂದು ವಸ್ತುಗಳು ಅತ್ಯಂತ ದುಬಾರಿ. ಸೀರೆ, ಚಪ್ಪಲಿ, ಆಭರಣ, ಮೇಕ್ಅಪ್ ಸೇರಿದಂತೆ ಯಾವುದೇ ವಸ್ತುವಾಗಿರಬಹುದು ಎಲ್ಲೂ ಲಕ್ಷ ಲಕ್ಷ ಅಥವಾ ಕೋಟಿ ರೂಪಾಯಿ. ನೀತಾ ಅಂಬಾನಿ ಫ್ಯಾಶನ್ ಬಗ್ಗೆ ಅತೀವ ಆಸಕ್ತಿ ಹೊಂದಿದ್ದಾರೆ. ಹೀಗಾಗಿ ಸೀರೆ, ಆಭರಣ, ಪರ್ಸ್, ಚಪ್ಪಲಿ ಎಲ್ಲವೂ ಮ್ಯಾಚಿಂಗ್ ಧರಿಸುತ್ತಾರೆ. ಇದೀಗ ನೀತಾ ಅಂಬಾನಿ ಸಣ್ಣ ಪಾಪ್‌ಕಾರ್ನ್ ಶೈಲಿಯ ಪರ್ಸ್ ಹಿಡಿದು ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಮುಂಬೈನಲ್ಲಿ ನಡೆದ ಬ್ಯೂಟಿ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಪಾಪ್ ಕಾರ್ನ್ ಬಾಕ್ಸ್ ಶೈಲಿಯ ಬ್ಯಾಗ್ ಹಿಡಿದು ಮಿಂಚಿದ್ದಾರೆ. ಸಿನಿಮಾ ಥೇಯರ್‌ಗಳಲ್ಲಿ ಸಿಗುವ ಪಾಪ್ ಕಾರ್ನ್ ಆಕಾರದಲ್ಲಿ ಈ ಬ್ಯಾಗ್ ಇದೆ. ಇದರ ಗಾತ್ರ ಕೂಡ ಸಣ್ಣದು. ಆದರೆ ಬೆಲೆ ಮಾತ್ರ ಸಣ್ಣದಲ್ಲ. ಕಾರಣ ಇದು ಅತ್ಯಂತ ಬ್ರಾಡೆಂಡ್ ಪಾಪ್‌ಕಾರ್ನ್ ಮಿನೌಡಿಯೆರ್ ಬ್ಯಾಗ್. ಇದರ ಬೆಲೆ 24 ಲಕ್ಷ ರೂಪಾಯಿ. ಕಪ್ಪು ಹಾಗೂ ಕ್ರೀಮ್ ಬಣ್ಣದ ಪಾಪ್ ಕಾರ್ನ್ ಬಾಕ್ಸ್ ರೀತಿ ಹಾಗೂ ಅದರ ಮೇಲೆ ಜೋಳದ ರೀತಿಯಲ್ಲಿ ಮಣಿಮುತ್ತಗಳ ವಿನ್ಯಾಸ ಈ ಬ್ಯಾಗ್ ವಿಶೇಷತೆ.

Tap to resize

Latest Videos

undefined

ನೀತಾ ಅಂಬಾನಿ ಬಳಿ ಇರುವ ಲಕ್ಸುರಿ ವಾಚ್‌ಗಳು ಹಾಗೂ ಅವುಗಳ ದುಬಾರಿ ದರ

ಪ್ರತಿಷ್ಠಿತ ಬ್ರಾಂಡೆಡ್ ಫ್ಯಾಶನ್ ಬ್ಯಾಗ್ ಇದಾಗಿದೆ. ಶ್ರೀಮಂತರು, ಸೆಲೆಬ್ರೆಟಿಗಳು ಹೆಚ್ಚಾಗಿ ಈ ಬ್ರಾಂಡೆಡ್ ಉತ್ಪನ್ನಗಳನ್ನು ಖರೀದಿಸುತ್ತಾರೆ. ಈ ಪೈಕಿ ನೀತಾ ಅಂಬಾನಿ ಮುಂಚೂಣಿಯಲ್ಲಿದ್ದಾರೆ. ವಿಶ್ವದ ಬಹುತೇಕ ಪ್ರತಿಷ್ಠಿತ ಬ್ರ್ಯಾಂಡ್ ಉತ್ಪನ್ನಗಳು ನೀತಾ ಅಂಬಾನಿ ಬಳಿ ಇದೆ. ಈ ಬ್ರ್ಯಾಂಡ್‌ನಲ್ಲಿ ಹಲವು ಮಿನಿ ಪ್ರತಿರೂಪಗಳು ಲಭ್ಯವಿದೆ. ಮಿನಿ ವ್ಯಾನ್ ರೀತಿಯ ಬ್ಯಾಗ್ ಸೇರಿದಂತೆ ಹಲವು ವಿಶೇಷ ವಿನ್ಯಾಸಗಳು ಲಭ್ಯವಿದೆ.

ಇದೇ ಬ್ಯೂಟಿ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಜೊತೆ ಪುತ್ರಿ ಇಶಾ ಅಂಬಾನಿ ಕೂಡ ಪಾಲ್ಗೊಂಡಿದ್ದರು. ಇಶಾ ಅಂಬಾನಿ ಸಣ್ಣ ಪರ್ಸ್ ಬಳಸಿದ್ದಾರೆ. ಇದು ಜುಡಿತ್ ಲೈಬರ್ ಬ್ಯಾಗ್ ಬ್ರ್ಯಾಂಡ್. ಈ ಪರ್ಸ್ ಒಳಗೆ ಸ್ಮಾರ್ಟ್‌ಫೋನ್ ಇಡುವುದು ಕಷ್ಟ. ಆದರೆ ಅತ್ಯಂತ ಸೂಕ್ಷ್ಮವಾಗಿ ನಾಜೂಕಾಗಿ ಕ್ರಾಫ್ಟ್ ಮಾಡಿದ ಪರ್ಸ್. ಇದರ ಬೆಲೆ ಸರಿಸುಮಾರು 5 ಲಕ್ಷ ರೂಪಾಯಿ.

 

 
 
 
 
 
 
 
 
 
 
 
 
 
 
 

A post shared by Tira (@tirabeauty)

 

ನೀತಾ ಅಂಬಾನಿ, ಇಶಾ ಅಂಬಾನಿ ಸೇರಿದಂತೆ ಅಂಬಾನಿ ಕುಟುಂಬಸ್ಥರು ಬಳಿ ಈ ರೀತಿಯ ದುಬಾರಿ ವಸ್ತುಗಳಿರುವುದು ಅಚ್ಚರಿ ವಿಚಾರವಲ್ಲ. ಕಾರಣ ಪ್ರತಿ ದಿನ ಸಾವಿರಾರೂ ಕೋಟಿ ರೂಪಾಯಿ ವ್ಯವಹಾರ ನಡೆಸುವ ಮುಕೇಶ್ ಅಂಬಾನಿ ಐಷಾರಾಮಿ ಜೀವನದ ಮುಂದೆ ಇದು ದೊಡ್ಡ ಮೊತ್ತವಲ್ಲ. ನೀತಾ ಅಂಬಾನಿಯ ಅತೀ ದುಬಾರಿ ವಸ್ತುಗಳು ಧರಿಸಿದರೆ, ಮುಕೇಶ್ ಅಂಬಾನಿ ಕೊಂಚ ಭಿನ್ನ. ಮುಕೇಶ್ ಅಂಬಾನಿ ಅತ್ಯಂತ ಸರಳ ವ್ಯಕ್ತಿ. ಆಭರಣ ಸೇರಿದಂತೆ ಇತರ ಷೋಆಫ್ ವಸ್ತುಗಳನ್ನು ಬಳಸುವುದಿಲ್ಲ. ಮುಕೇಶ್ ಅಂಬಾನಿ ಧರಿಸುವುದು ಅತ್ಯಂತ ಬ್ರಾಂಡೆಡ್ ಸ್ಯೂಟ್. ಇದರ ಬೆಲೆ ಕೂಡ ಲಕ್ಷ ಲಕ್ಷ ರೂಪಾಯಿ. ಆದರೆ ಬ್ರಾಂಡೆಡ್ ಬಟ್ಟೆ, ಶೂ, ವಾಚ್ ಹೊರತುಪಡಿಸಿದರೆ ಮುಕೇಶ್ ಅಂಬಾನಿ ಇತರ ಉತ್ಪನ್ನಗಳ ಬಳಕೆ ಕಡಿಮೆ. 
 

click me!