ಮಲಯಾಳಂ ನಟಿ ಅನುಪಮಾ ಪರಮೇಶ್ವರನ್‌ ಹಾಟ್ ಫೋಟೋಸ್ ವೈರಲ್

First Published Aug 28, 2023, 5:55 PM IST

ಮಲಯಾಳಂ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಆಗಾಗ ಡಿಫರೆಂಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಪಡ್ಡೆ ಹುಡುಗರ ಮನಸ್ಸಿಗೆ ಲಗ್ಗೆ ಹಾಕುತ್ತಾರೆ. ಲೇಟೆಸ್ಟ್ ಆಗಿ ಸೀರೆಯುಟ್ಟು ತೆಗೆಸಿಕೊಂಡಿರೋ ಬೋಲ್ಡ್ ಫೋಟೋಸ್ ಎಲ್ಲೆಡೆ ವೈರಲ್ ಆಗ್ತಿದೆ.

ಮಲಯಾಳಂ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಸದ್ಯ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳನ್ನು ಮಾಡಿರುವ ನಟಿ ಅನುಪಮಾ ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಾ ಅಭಿಮಾನಿಗಳ ಮನಗೆಲ್ಲುತ್ತಿರುತ್ತಾರೆ.  ಈಗ ಲೇಟೆಸ್ಟ್ ಆಗಿ ಸೀರೆಯುಟ್ಟು ತೆಗೆಸಿಕೊಂಡಿರೋ ಫೋಟೋಸ್ ಎಲ್ಲೆಡೆ ವೈರಲ್ ಆಗ್ತಿದೆ.

ಆರೆಂಜ್ ಬ್ಲೌಸ್ ಹಾಗೂ ಮಿಕ್ಸೆಡ್ ಕಲರ್ ಸೀರೆಯುಟ್ಟುಕೊಂಡು ಅನುಪಮಾ ಹಾಟ್ ಹಾಟ್ ಫೋಟೋ ಕೊಟ್ಟಿದ್ದಾರೆ. ಹೇರ್ ಓಪನ್ ಬಿಟ್ಟು ಸಿಂಪಲ್ ನೆಕ್ಲೇಸ್ ಧರಿಸಿ ಫೋಟೋಗಳಿಗೆ ಫೋಸ್ ನೀಡಿದ್ದು, ಡಿಫರೆಂಟ್ ಪೋಟೋಸ್ ಎಲ್ಲೆಡೆ ವೈರಲ್ ಆಗಿದೆ.

Latest Videos


ಮಲಯಾಳಂ (Mollywood) ಚಿತ್ರರಂಗದ ಮುದ್ದು ಮುಖದ ಚೆಲುವೆ ಅನುಪಮಾ ಪರಮೇಶ್ವರಿ ( Anupama Parameswaran) ಸ್ಟಾರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಬಿಡುವು ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ (Netizen) ಜೊತೆ ಮಾತನಾಡುತ್ತಾರೆ. ಅಭಿಮಾನಿಗಳು ಮುಂದಿಡುವ ಡಿಮ್ಯಾಂಡ್‌ಗಳಿಗೆ ಉತ್ತರ ನೀಡುತ್ತಾರೆ. ಎಲ್ಲರಿಗೂ ತಪ್ಪದೆ ಪ್ರತಿಕ್ರಿಯೆ ನೀಡುತ್ತಾರೆ.

ಬರೀ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತೀರಾ, ಬಿಕಿನಿ ಫೋಟೋ ಎಲ್ಲಿ ಎಂದು ಹೇಳಿದವನಿಗೆ ಈ ಹಿಂದೆ ಅನುಮಪಾ ಖಡಕ್ ಆಗಿ ಉತ್ತರ ಕೊಟ್ಟಿದ್ದರು.  'ಬಿಕಿನಿ ಫೋಟೋ ಬೇಕಾ? ನಿಮ್ಮ ವಿಳಾಸ ಕಳುಹಿಸಿ ನಾನು ಫೋಟೋ ಕಳುಹಿಸುತ್ತೇನೆ. ಅದಕ್ಕೆ ಫ್ರೇಮ್ ಹಾಕಿಸಿ ನಿಮ್ಮ ಮನೆಯ  ಗೋಡೆಯಲ್ಲಿ ಹಾಕಿಕೊಳ್ಳಿ,' ಎಂದು ಹೇಳಿದ್ದು ವೈರಲ್ ಆಗಿತ್ತು.

'ಹೀರೋಯಿನ್ ಆಗೋಕೆ ಲಾಯಕ್ಕಿಲ್ಲ' ಎಂದ ನೆಟ್ಟಿಗನಿಗೆ ನಟಿ ಅನುಪಮಾ ಕೂಲ್ ರಿಯಾಕ್ಷನ್ ಅಭಿಮಾನಿಗಳ ಮೆಚ್ಚುಗೆ ಕಾರಣವಾಗಿತ್ತು. ಸರಿಯಾಗಿ ಉತ್ತಮ ನೀಡುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದರು. 

ನಟಿ ಅನುಪಮಾ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡದಿದ್ದರೂ ಅನೇಕ ಸಿನಿಮಾಗಳು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿವೆ. ಮಲಯಾಳಂನ ಸೂಪರ್ ಹಿಟ್ ಪ್ರೇಮ್ ಸಿನಿಮಾ ಮೂಲಕ ಅನುಪಮಾ ಬಣ್ಣದ ಲೋಕಕ್ಕೆ ಕಾಲಿಟ್ಟರು. 

ಮೊದಲ ಸಿನಿಮಾವೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. ಮೇರಿ ಜಾರ್ಜ್ ಪಾತ್ರದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು. ಬಳಿಕ ಅನುಪಮಾ ಬೇರೆ ಬೇರೆ ಭಾಷೆಗಳಲ್ಲಿ ಮಿಂಚಿದರು. ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಟಸಾವರ್ಭೌಮ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಅಭಿಮಾನಿಗಳ ಮನಗೆದ್ದಿದ್ದರು. ಆ ಸಿನಿಮಾ ಬಳಿಕ ಮತ್ತೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅನುಪಮಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

click me!