ಬಿಪಿಎಲ್ ಮರುಸ್ಥಾಪಿಸಲು ಸೋಮವಾರ ಕಡೆ ದಿನವಾಗಿತ್ತು. ನವೆಂಬರ್ 25ರೊಳಗೆ ಸರಿಪಡಿಸಲು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಗಡುವು ನೀಡಿದ್ದು ನಿಜ. ಆದರೆ ನಿಗದಿತ ಅವಧಿಯೊಳಗೆ ಎಲ್ಲವನ್ನು ಮರು ಸ್ಥಾಪಿಸಲು ಕಷ್ಟ. ಜೊತೆಗೆ ಗುರುತಿಸಿರುವ ತೆರಿಗೆ ಪಾವತಿದಾರರು 1,06,152 ಮತ್ತು ಸರ್ಕಾರಿ ನೌಕರರು 4,272 ಮಂದಿ ಪಡೆದಿರುವ ಬಿಪಿಎಲ್ ರದ್ದು ಪಡಿಸಲಾಗುವುದು ಎಂದು ತಿಳಿಸಿದ ಅಧಿಕಾರಿಗಳು
ಬೆಂಗಳೂರು(ನ.26): ರದ್ದಾದ ಎಲ್ಲ ಬಿಪಿಎಲ್ ಪಡಿತರ ಚೀಟಿಗಳನ್ನು ವಾರದೊಳಗೆ ಮರು ಸ್ಥಾಪಿಸುವುದಾಗಿ ಸರ್ಕಾರ ಹೇಳಿದ್ದರೂ ಸಹ ಅದು ಕೈಗೂಡಿಲ್ಲ. ಈ ಕುರಿತು ಅದು ಹಾಕಿಕೊಂಡಿದ್ದ ಸೋಮವಾರದ ಗಡುವು ಮುಗಿದಿದೆ. ಈ ಪ್ರಕ್ರಿಯೆ ಮಾಡಲು ಕನಿಷ್ಠ 15 ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಅಮಾನತು ಮಾಡಿರುವ ಪಡಿತರ ಚೀಟಿ ಗಳನ್ನು ಮರುಸ್ಥಾಪನೆ ಕಾರ್ಯ ನಡೆಯುತ್ತಿದ್ದರೂ, ರದ್ದಾಗಿ ರುವ ಹಾಗೂ ಅಮಾನತ್ತಿನಲ್ಲಿ ಇಡಲಾಗಿರುವ ಕಾರ್ಡ್‌ಗಳನ್ನು ಬಿಪಿಎಲ್ ಕಾರ್ಡ್‌ಗಳಾಗಿ ಮಾಡಲು ಕೇವಲ ಮೂರ್ನಾಲ್ಕು ದಿನಗಳಲ್ಲಿ ಸಾಧ್ಯವಿಲ್ಲ. ಎನ್‌ಐಸಿ ತಂತ್ರಾಂಶದ ಮೂಲಕ ಮರು ಸ್ಥಾಪನೆ ಮಾಡಲು ಮತ್ತು ಅಮಾನತ್ತಿನಲ್ಲಿಡಲಾಗಿದ್ದ ಕಾರ್ಡ್‌ಗಳನ್ನು ಆ್ಯಕ್ಟಿವ್ ಮಾಡಲಾಗುತ್ತಿದೆ. ಹಂತ ಹಂತವಾಗಿ ಮಾಡಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ.
ಕೇಂದ್ರದಿಂದ 5.80 ಕೋಟಿ ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಬಿಜೆಪಿ ನಾಯಕರ ಮಾತೇಕಿಲ್ಲ?: ಸಚಿವ ದಿನೇಶ್ ಗುಂಡೂರಾವ್
ಬಿಪಿಎಲ್ ಮರುಸ್ಥಾಪಿಸಲು ಸೋಮವಾರ ಕಡೆ ದಿನವಾಗಿತ್ತು. ನವೆಂಬರ್ 25ರೊಳಗೆ ಸರಿಪಡಿಸಲು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಗಡುವು ನೀಡಿದ್ದು ನಿಜ. ಆದರೆ ನಿಗದಿತ ಅವಧಿಯೊಳಗೆ ಎಲ್ಲವನ್ನು ಮರು ಸ್ಥಾಪಿಸಲು ಕಷ್ಟ. ಜೊತೆಗೆ ಗುರುತಿಸಿರುವ ತೆರಿಗೆ ಪಾವತಿದಾರರು 1,06,152 ಮತ್ತು ಸರ್ಕಾರಿ ನೌಕರರು 4,272 ಮಂದಿ ಪಡೆದಿರುವ ಬಿಪಿಎಲ್ ರದ್ದು ಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರುಸ್ಥಾಪನೆ ಕಾರ್ಯವನ್ನು ತಂತ್ರಾಂಶದಲ್ಲಿ ಜಂಟಿ ನಿರ್ದೇಶಕರು, ಉಪ ನಿರ್ದೇಶಕರ ಲಾಗಿನ್‌ನಲ್ಲಿ ಅವಕಾಶ ನೀಡಲಾಗಿದೆ. ನೋಡಲ್ ಅಧಿಕಾರಿಗಳು ಉಸ್ತುವಾರಿ ವಹಿಸಿದ ಜಿಲ್ಲೆಗಳಲ್ಲಿ ಮೇಲ್ವಿಚಾರಣೆ ಗೊಳಿಸುತ್ತಿದ್ದಾರೆ. ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾಯಿಸಲಾದ ಕಾಡ್೯ಗಳನ್ನು ಪುನಃ ಬಿಪಿಎಲ್ ಆಗಿ ಪರಿವರ್ತಿಸಲಾಗುತ್ತಿದೆ ಬೆಂಗಳೂರಿನಲ್ಲಿ ರಾಜಾಜಿನಗರ ಐಆರ್‌ಐ, ಪಶ್ಚಿಮ ವಲಯಲದಲ್ಲಿ ಬಸವನಗುಡಿ, ಉತ್ತರ ವಲಯ ದಲ್ಲಿ ಮೆಜೆಸ್ಟಿಕ್ ಸಮೀಪದ ಆಹಾರ ಇಲಾಖೆ ಕೇಂದ್ರ, ಕೆಂಗೇರಿ, ಬನಶಂಕರಿ, ಆರ್‌ಟಿ ನಗರ - ವಯ್ಯಾಲಿ ಕವಾಲ್ ಆಹಾರ ಇಲಾಖೆಯ ಕಚೇರಿ, ಯಲಹಂಕ ಆಹಾ ರ ನಾಗರಿಕ ಸರಬರಾಜು ಇಲಾಖೆಗಳಲ್ಲಿ ತಿದ್ದುಪಡಿ ಕಾರ್ ನಡೆಯುತ್ತಿದೆ. ರಾಜ್ಯದ ವಿವಿದೆಡೆ ಇದು ಆಯಾ ಪ್ರದೇಶವಾರು ಕಚೇರಿಗಳಲ್ಲಿ ನಡೆಯುತ್ತಿದೆ.
ಬಿಪಿಎಲ್ ಕಾರ್ಡ್ ರದ್ದು ಪಡಿಸಿರೋದ್ರಲ್ಲಿ ಬಡವರು ಇದ್ರೆ ರಾಜೀನಾಮೆ ಕೊಡ್ತೀರಾ?: ಸಿದ್ದರಾಮಯ್ಯಗೆ ಸಿ.ಟಿ. ರವಿ ಪ್ರಶ್ನೆ
ಬಿಪಿಎಲ್ ಕಾರ್ಡ್ ಗೊಂದಲ ನಿವಾರಣೆಯಾಗಿದೆ: ಸಚಿವ
ನವದೆಹಲಿ: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ಗೊಂದಲ ನಿವಾರಣೆಯಾ ಗಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿ ಯಪ್ಪ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ಒಂದು ವಾರದಲ್ಲಿ ಗೊಂದಲ ಪರಿಹರಿಸುವುದಾಗಿ ಹೇಳಿದ್ದೆ. ಅದರಂತೆ ಗೊಂದಲ ನಿವಾರಣೆಯಾಗಿದೆ. ನವೆಂಬರ್ 28ರ ನಂತರ ಹಿಂದಿನಂತೆ ಬಿಪಿಎಲ್ ಕಾರ್ಡ್ ನವರು ಪಡಿತರ ಪಡೆಯಬಹುದು. ಬಿಪಿಎಲ್ ಕಾರ್ಡ್ ಪರಿಷ್ಕರಣೆಯಲ್ಲಿ ನಾವು ಕೇಂದದ ಮಾನದಂಡಗಳನ್ನು ಅನುಸರಿಸಿದ್ದೇವೆ. ಅವೈಜ್ಞಾ ನಿಕ ಕ್ರಮ ಅನುಸರಿಸಿಲ್ಲ ಎಂದು ಸ್ಪಷ್ಟಪಡಿಸಿದರು.