ರೆಡ್‌ ಸ್ಯಾರಿಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ, ಬ್ಯಾಕ್ ಫೋಸ್ ನೋಡಿ ಸಾಕಾಗಿದೆ, ಬೇಬಿ ಬಂಪ್‌ ತೋರಿಸಿ ಎಂದ ಫ್ಯಾನ್ಸ್‌!

First Published | Mar 4, 2024, 3:38 PM IST

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಇತ್ತೀಚಿಗೆ ತಾಯಿಯಾಗುತ್ತಿರುವ ಬಗ್ಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಇತ್ತೀಚಿಗೆ ಡಿಪ್ಪಿ ಇನ್‌ಸ್ಟಾದಲ್ಲಿ ರೆಡ್ ಕಲರ್ ಸ್ಯಾರಿಯುಟ್ಟು ಸಖತ್ ಲುಕ್‌ನಲ್ಲಿ ಮಿಂಚಿದ್ದಾರೆ. ಇದಕ್ಕೆ ಅಭಿಮಾನಿಗಳು, ಸೈಡ್ ಫೋಸ್ ಕೊಟ್ಟು ಬೇಬಿ ಬಂಪ್ ಮುಚ್ಚಿಡ್ಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.

ಬಾಲಿವುಡ್‌ನ ಖ್ಯಾತ ನಟಿಯರಲ್ಲೊಬ್ಬರು ದೀಪಿಕಾ ಪಡುಕೋಣೆ. ಇತ್ತೀಚಿಗೆ ತಾಯಿಯಾಗುತ್ತಿರುವ ಬಗ್ಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಸದ್ಯ ಡಿಪ್ಪಿ ಇನ್‌ಸ್ಟಾದಲ್ಲಿ ರೆಡ್ ಕಲರ್ ಸ್ಯಾರಿಯುಟ್ಟು ಸಖತ್ ಲುಕ್‌ನಲ್ಲಿ ಮಿಂಚಿದ್ದಾರೆ. ಟ್ರೆಡಿಶನಲ್ ಲುಕ್‌ಗ ಫ್ಯಾನ್ಸ್ ಫಿದಾ ಆಗಿದ್ದಾರೆ.

ದೀಪಿಕಾ ರೆಡ್‌ ಕಲರ್‌ನಲ್ಲಿ ಹೆವಿ ವರ್ಕ್‌ ಇರೋ ಬಾಂದನಿ ಸ್ಯಾರಿಯುಟ್ಟು ಸೈಡ್ ಪೋಸ್ ಕೊಟ್ಟಿದ್ದಾರೆ. ಹರಳಿನ ಕಿವಿಯೋಲೆ ಹಾಕಿಕೊಂಡು, ಕೂದಲು ಬನ್ ಮಾಡಿ ಗಾಜ್ರಾ ಹಾಕ್ಕೊಂಡಿರುವ ಲುಕ್‌ ಅಭಿಮಾನಿಗಳು ವಾವ್ ಅಂದಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

Latest Videos


ಖೂಬ್‌ಸೂರತ್‌, ಬ್ಯೂಟಿಫುಲ್, ಗಾರ್ಜಿಯಿಸ್,‌ ಬ್ಯೂಟಿಫುಲ್ ಲುಕ್ ಎಂದೆಲ್ಲಾ ಹೊಗಳಿದ್ದಾರೆ. ಮತ್ತೆ ಕೆಲವರು 'ಯಾವಾಗ್ಲೂ ಯಾಕೆ ಸೈಡ್ ಫೋಸ್‌ ಕೊಡ್ತೀರಿ' ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು, 'ನೀವು ಗರ್ಭಿಣಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಜನರನ್ನು ಎದುರಿಸಿ. ನಿಮ್ಮ ಬ್ಯಾಕ್ ಫೋಸ್ ನೋಡಿ ಸಾಕಾಗಿದೆ' ಎಂದು ಕಾಮೆಂಟಿಸಿದ್ದಾರೆ.

ನಿನ್ನೆಯಷ್ಟೇ ಅಂಬಾನಿ-ರಾಧಿಕಾ ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ಜಬರ್ದಸ್ತ್‌ ಡ್ಯಾನ್ಸ್ ಮಾಡಿ ಮಿಂಚಿದ್ದರು ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ, ತಮ್ಮ ಪತಿಯ ರಣವೀರ್​ ಸಿಂಗ್​ ಜೊತೆ ಭರ್ಜರಿ ಸ್ಟೆಪ್​ ಹಾಕಿದ್ದರು.

ಡಿಪ್ಪಿ ತಮ್ಮ ಸ್ಟೈಲಿಶ್‌ ಲುಕ್‌ ಹಾಗೂ ಅಟ್ರ್ಯಾಕ್ಟಿವ್‌ ಫ್ಯಾಶನ್‌ ಸೆನ್ಸ್‌ಗೆ ಹೆಸರುವಾಸಿ. ವೆಡ್ಡಿಂಗ್‌, ಪಾರ್ಟಿ, ಅವಾರ್ಡ್ ಫಂಕ್ಷನ್‌, ಇಂಟರ್‌ನ್ಯಾಶನಲ್‌ ಇವೆಂಟ್‌ಗಳಲ್ಲಿ ದೀಪಿಕಾ ಪಡುಕೋಣೆ ಲುಕ್ ಎಲ್ಲರ ಗಮನ ಸೆಳೆಯುತ್ತದೆ. 

ಸ್ಯಾರಿ, ಮಾಡರ್ನ್ ಡ್ರೆಸ್, ಬಿಕಿನಿಯಲ್ಲೂ ದೀಪಿಕಾ ಪಡುಕೋಣೆ ಸಖತ್ ಕ್ಯೂಟ್ ಆಂಡ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿಗೆ ಲಂಡನ್‌ನಲ್ಲಿ ನಡೆದ 77ನೇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್‌ನಲ್ಲಿ ದೇಸಿ ಹುಡುಗಿ ದೀಪಿಕಾ ಪಡುಕೋಣೆ ಭಾರತವನ್ನು ಪ್ರತಿನಿಧಿಸಿದ್ದರು. ಗ್ಲಿಟರಿಂಗ್ ಸ್ಯಾರಿಯಲ್ಲಿ ದೀಪಿಕಾ ಪಡುಕೋಣೆ ಲುಕ್ ಸ್ಟನಿಂಗ್ ಆಗಿತ್ತು.

ಪ್ರಸ್ತುತ ದೀಪಿಕಾ ಪಡುಕೋಣೆ ಬಾಲಿವುಡ್ ಸೂಪರ್‌ಸ್ಟಾರ್ ಆಗಿದ್ದು, ಅವರು 2007 ರಲ್ಲಿ 'ಓಂ ಶಾಂತಿ ಓಂ' ಶಾರೂಕ್ ಖಾನ್‌ ಜೊತೆ ಬಾಲಿವುಡ್‌ನಲ್ಲಿ ಅಭಿನಯ ಆರಂಭಿಸಿದಾಗಿನಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. 

ಚೆನ್ನೈ ಎಕ್ಸ್‌ಪ್ರೆಸ್, ಹ್ಯಾಪಿ ನ್ಯೂ ಇಯರ್, ಪಠಾನ್ ಮತ್ತು ಜವಾನ್ ಸೇರಿದಂತೆ ದೀಪಿಕಾ ಅಭಿನಯಿಸಿದ ಹಲವು ಚಿತ್ರಗಳು ಸೂಪರ್‌ ಹಿಟ್ ಆಗಿವೆ.

ನಟ ರಣವೀರ್ ಸಿಂಗ್‌ರನ್ನು ಮದುವೆಯಾಗಿರುವ ದೀಪಿಕಾ, ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಹಾಲಿವುಡ್‌ನಲ್ಲೂ ಸಹ ತನ್ನ ಛಾಪು ಮೂಡಿಸಿದ್ದಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಫೇಮಸ್ ಆಗಿದ್ದಾರೆ. ಸಿನಿಮಾಗಳ ಜೊತೆ ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ರಾಯಭಾರಿ ಆಗಿದ್ದಾರೆ.

ಕಳೆದೆರಡು ವರ್ಷಗಳಲ್ಲಿ, ದೀಪಿಕಾ ವರ್ಲ್ಡ್‌ ಫೇಮಸ್ ಆಗಿದ್ದಾರೆ. 2022ರಲ್ಲಿ, ಕೇನ್ಸ್ ಚಲನಚಿತ್ರೋತ್ಸವದ ತೀರ್ಪುಗಾರರಾಗಿದ್ದು ಎಲ್ಲರ ಗಮನ ಸೆಳೆದಿದ್ದರು.
ಕಳೆದ ವರ್ಷ ಆಸ್ಕರ್‌ನಲ್ಲಿ ನಿರೂಪಕರಾಗಿದ್ದರು. ಅಲ್ಲಿ ದೀಪಿಕಾ ಸ್ಟೈಲಿಶ್ ಲುಕ್ ಎಲ್ಲರ ಗಮನ ಸೆಳೆದಿತ್ತು.

click me!