ಜಗತ್ತು ನೋಡೋ ಕಣ್ಣು ಮುಚ್ಚಿಕೊಂಡು, ಮುಚ್ಚಿಡೋದನ್ನೆಲ್ಲಾ ಹೊರಗೆ ತೋರಿಸಿದ ಮಲೈಕಾ!

By Sathish Kumar KH  |  First Published Nov 10, 2024, 8:04 PM IST

ಮಲೈಕಾ ಅರೋರಾ ಬ್ರ್ಯಾಂಡ್​ ಈವೆಂಟ್​ವೊಂದರಲ್ಲಿ ಧರಿಸಿದ್ದ ಬೋಲ್ಡ್​ ಉಡುಗೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ಅದರಲ್ಲೂ ಮಗನ ಜೊತೆಯಲ್ಲಿದ್ದಾಗ ಈ ರೀತಿಯ ಉಡುಗೆ ಏಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.


ಮುಂಬೈ (ನ.10): ಇತ್ತೀಚೆಗೆ ತಂದೆ ಅನಿಲ್​ ಮೆಹ್ತಾ ಅವರ ಸಾವಿನ ನಂತರ ಮಲೈಕಾ ಅರೋರಾ (Malaika Arora) ಅವರ ಜೀವನ ಈಗ ಸಹಜ ಸ್ಥಿತಿಗೆ ಮರಳಿದೆ. ಈಗ ಅವರು ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾನುವಾರ ಮಲೈಕಾ ಬಾಂದ್ರಾದಲ್ಲಿ ನಡೆದ ಬ್ರ್ಯಾಂಡ್​ ಈವೆಂಟ್​ವೊಂದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಲೈಕಾ ತುಂಬಾ ಬೋಲ್ಡ್​ ಉಡುಪಿನಲ್ಲಿ ಕಾಣಿಸಿಕೊಂಡರು. ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದ್ದು, ಟ್ರೋಲ್​ಗಳಿಗೂ ಗುರಿಯಾಗಿದ್ದಾರೆ.

ಬಾಂದ್ರಾದಲ್ಲಿ ನಡೆದ ಈವೆಂಟ್‌ಗೆ ಹಾಜರಾಗುವ ವೇಳೆ ಮಲೈಕಾ ಧರಿಸಿ ಬಂದ ತುಂಡುಡುಗೆಯ ಡ್ರೆಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಇದಕ್ಕೆ ತರಹೇವಾರಿ ಕಾಮೆಂಟ್‌ಗಳು ಬಂದಿವೆ. ಒಬ್ಬರು 'ತಾನು ಜಗತ್ತು ನೋಡಬೇಕಾದ ಕಣ್ಣಿಗೆ ಕನ್ನಡಕವನ್ನು ಮುಚ್ಚಿಕೊಂಡು, ಬೇರೆಲ್ಲವ್ನೂ ಜಗತ್ತಿಗೆ ತೋರಿಸ್ತಿದ್ದಾರೆ' ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬರು 'ಎಲ್ಲವನ್ನೂ ತೋರಿಸಿಬಿಟ್ಟಿದ್ದಾರೆ' ಎಂದು ಬರೆದಿದ್ದಾರೆ. ನಿಮ್ಮ ಅಭಿಮಾನಿಗಳೇ ನಿಮ್ಮ ಬಟ್ಟೆಯ ಬಗ್ಗೆ ಮಾತನಾಡುವಂತೆ ತುಂಡುಡುಗೆ ಧರಿಸಿಕೊಂಡು ಬರುವುದರ ಅಗತ್ಯವೇನಿತ್ತು ಎಂದು ಫ್ಯಾನ್ಸ್ ಗರಂ ಆಗಿದ್ದಾರೆ. ಆದರೆ, ಇದನ್ನು ಯಾರೂ ಬಹಿರಂಗವಾಗಿ ಪ್ರಶ್ನೆ ಮಾಡುವಂತಿಲ್ಲ. ಒಂದು ವೇಳೆ ಪ್ರಶ್ನೆ ಮಾಡಿದರೂ ಅವರ ಪ್ರಶ್ನೆಯನ್ನೂ ಕಿವಿಗೆ ಹಾಕಿಕೊಳ್ಳದೇ ಈ ನಟಿಯರು ಮುಂದೆ ಹೋಗುತ್ತಾರೆ.

Tap to resize

Latest Videos

undefined

ಇದನ್ನೂ ಓದಿ: ಮುಂಬೈ ಗಲ್ಲಿಯಲ್ಲಿ ರಾಕಿ ಭಾಯ್ ಯಶ್; ಮರಾಠಿಗರ ಬಾಯಲ್ಲಿ ಬಂತು ಅಣ್ಣ ಹೇಗಿದ್ದೀರಾ..!

ಮಲೈಕಾ ಅರೋರಾ ಮಾಡೆಲಿಂಗ್​ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದರು. ನಂತರ ಅವರಿಗೆ ಐಟಂ ಸಾಂಗ್​ಗಳಲ್ಲಿ ನಟಿಸುವ ಅವಕಾಶಗಳು ಬರಲಾರಂಭಿಸಿದವು. ಮೊದಲ ಬಾರಿಗೆ ಮಣಿರತ್ನಂ ಅವರ ದಿಲ್​ ಸೆ ಚಿತ್ರದ ಛೈಯ್ಯಾ ಛೈಯ್ಯಾ.. ಹಾಡಿನಲ್ಲಿ ಕಾಣಿಸಿಕೊಂಡರು. ಈ ಹಾಡು ತುಂಬಾ ಜನಪ್ರಿಯವಾಯಿತು. ಮಲೈಕಾ ರಾತ್ರೋರಾತ್ರಿ ಇಡೀ ಸಿನಿಮಾ ಇಂಡಸ್ಟ್ರಿಯಲ್ಲಿ ಫೇಮಸ್​ ಆದರು. ಮಲೈಕಾ ಕೆಲವು ಮ್ಯೂಸಿಕ್​ ಆಲ್ಬಂಗಳಲ್ಲಿಯೂ ಕಾಣಿಸಿಕೊಂಡರು. ಸಲ್ಮಾನ್​ ಖಾನ್​ ಅವರ ದಬಾಂಗ್​ ಚಿತ್ರದ ಮುನ್ನಿ ಬದ್ನಾಮ್​ ಹುಯಿ.. ಐಟಂ ಸಾಂಗ್​ನಲ್ಲಿ ನಟಿಸಿದರು. ಈ ಹಾಡು ಕೂಡ ತುಂಬಾ ಫೇಮಸ್​ ಆಯಿತು. ಇಂದಿಗೂ ಈ ಹಾಡಿಗೆ ಜನರು ನೃತ್ಯ ಮಾಡಲು ಇಷ್ಟಪಡುತ್ತಾರೆ. ಮಲೈಕಾ ಈಗಲೂ ಐಟಂ ಸಾಂಗ್​ಗಳಲ್ಲಿ ನಟಿಸುತ್ತಾರೆ. ಕೆಲವು ಡ್ಯಾನ್ಸ್​ ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ.

ಬೋಲ್ಡ್​ ಉಡುಪಿನಲ್ಲಿ ಮಲೈಕಾ ಅರೋರಾ: ಮಲೈಕಾ ಅರೋರಾ ಈವೆಂಟ್​ಗೆ ಮಗ ಮತ್ತು ಸೋದರಳಿಯನ ಜೊತೆ ಬಂದಿದ್ದರು. ಈ ವೇಳೆ ಅವರು ತೆಳುವಾದ ಬ್ರಾ ಮಾದರಿಯ ಟಾಪ್​ ಮತ್ತು ಓವರ್​ ಸೈಜ್​ ಜಾಕೆಟ್​ ಧರಿಸಿದ್ದರು. ವಿಚಿತ್ರ ರೀತಿಯಲ್ಲಿ ಕೂದಲನ್ನು ಕಟ್ಟಿಕೊಂಡು ಗಾಗಲ್ಸ್​ ಹಾಕಿದ್ದರು. ಮಲೈಕಾ ಅವರ ಲುಕ್​ ನೋಡಿ ಜನರು ಕಾಮೆಂಟ್​ ಮಾಡುತ್ತಿದ್ದಾರೆ. ನೀವು ತೆಳುವಾದ ಬ್ರಾ ಹಾಕಿದ್ದರೂ ಪರವಾಗಿಲ್ಲ, ಮೇಲೆ ಧರಿಸಿದ ಜಾಕೆಟ್​ ಗುಂಡಿ ಹಾಕಬಹುದಿತ್ತು ಅಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು ನಡೆದಾಡುವ ಕೊಕೇನ್​ ಎಂದಿದ್ದಾರೆ. ಇವರನ್ನು ನೋಡಿ ಮಕ್ಕಳಿಗೆ ನಾಚಿಕೆಯಾಗಬೇಕು, ಇಷ್ಟೊಂದು ಓಪನ್​ ಆಗುವ ಅಗತ್ಯವಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಮಕ್ಕಳ ಮುಂದೆ ಜಾಕೆಟ್​ ಮತ್ತು ಬಟ್ಟೆ ಸರಿಯಾಗಿ ಹಾಕಬೇಕಿತ್ತು ಎಂದಿದ್ದಾರೆ. ಮಗ ಜೊತೆಯಲ್ಲಿದ್ದಾಗ ತಾಯಿ ಇಷ್ಟೊಂದು ಓಪನ್​ ಆಗುವುದು ನಾಚಿಕೆಗ್ರಸ್ತ ಎಂದು ಒಬ್ಬರು ಹೇಳಿದ್ದಾರೆ. ಫ್ಯಾಷನ್​ ಹೆಸರಿನಲ್ಲಿ ಏನೇನೋ ಧರಿಸುತ್ತಾರೆ ಎಂದು ಒಬ್ಬರು ಹೇಳಿದ್ದಾರೆ. ಹೀಗೆ ಹಲವರು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಹುಲಿವೇಷ ಕುಣಿತ ವಿಡಿಯೋ ಶೇರ್ ಮಾಡಿದ ರಿಷಬ್ ಶೆಟ್ಟಿ, ವೈರಲ್ ಆಯ್ತು ತುಳುನಾಡು ಸಂಸ್ಕೃತಿ!

click me!