ಇತಿಹಾಸ ಪ್ರಸಿದ್ದ ಮಲೆ ಮಹದೇಶ್ವರ ಬೆಟ್ಟದಲ್ಲಿ ತ್ಯಾಜ್ಯ ನಿರ್ವಹಣೆಗೆ ಪ್ಲ್ಯಾನ್: ಏನಿದು ಗ್ರೀನ್ ಟುಮಾರೊ ಎಂಎಂ ಹಿಲ್?

By Govindaraj S  |  First Published Nov 15, 2024, 10:46 PM IST

ಮಾದಪ್ಪನ ಸನ್ನಿಧಾನಕ್ಕೆ ಆಗಮಿಸುವ  ಭಕ್ತವೃಂದಿಂದ ಎದುರಾಗುತ್ತಿರುವ ತ್ಯಾಜ್ಯವನ್ನ ಸಮರ್ಪಕವಾಗಿ ನಿರ್ವಹಿಸಲು ಪ್ರಾಧಿಕಾರ ಮುಂದಾಗಿದ್ದು ಗ್ರೀನ್ ಟುಮಾರೋ ಎಂಎಂ ಹಿಲ್ಸ್ ಅನ್ನೋ ಕಾನ್ಸೆಪ್ಟ್ ತಂದಿದ್ದು ಈ ಕುರಿತಾದ ರಿಪೋರ್ಟ್ ನಿಮ್ಮ ಮುಂದೆ.


ವರದಿ: ಪುಟ್ಟರಾಜು.ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ನ.15): ರಾಜ್ಯ ಪ್ರವಾಸಿತಾಣಗಳ ಪೈಕಿ ಮಲೆ ಮಹದೇಶ್ವರ ಬೆಟ್ಟ ಕೂಡ ಒಂದು. ಮಾದಪ್ಪನ ಸನ್ನಿಧಾನಕ್ಕೆ ಆಗಮಿಸುವ  ಭಕ್ತವೃಂದಿಂದ ಎದುರಾಗುತ್ತಿರುವ ತ್ಯಾಜ್ಯವನ್ನ ಸಮರ್ಪಕವಾಗಿ ನಿರ್ವಹಿಸಲು ಪ್ರಾಧಿಕಾರ ಮುಂದಾಗಿದ್ದು ಗ್ರೀನ್ ಟುಮಾರೋ ಎಂಎಂ ಹಿಲ್ಸ್ ಅನ್ನೋ ಕಾನ್ಸೆಪ್ಟ್ ತಂದಿದ್ದು ಈ ಕುರಿತಾದ ರಿಪೋರ್ಟ್ ನಿಮ್ಮ ಮುಂದೆ. ಮಲೆ ಮಹದೇಶ್ವರ ಬೆಟ್ಟ ರಾಜ್ಯದ ಪ್ರಮುಖ ಪೂಜ್ಯ ಪ್ರೇಕ್ಷಣೀಯ ಸ್ಥಳಗಳ ಪೈಕಿಯೊಂದು.. ವಿಶೇಷ ಜಾತ್ರಾ ಮಹೋತ್ಸವ ಸೇರಿದಂತೆ ಅಮವಾಸ್ಯೆ ದಿನಗಳಂದು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಾರೆ. 

Tap to resize

Latest Videos

undefined

ಬರುವಂತ ಭಕ್ತರು ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ಅನೇಕ ತ್ಯಾಜ್ಯಗಳನ್ನ ಅಲ್ಲಲ್ಲಿ ಎಸೆಯುತ್ತಾರೆ. ಈ ಕಸವನ್ನ ಸಮರ್ಪಕವಾಗಿ ನಿರ್ವಹಣೆ ಮಾಡಲು ಈಗ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ಮುಂದಾಗಿದ್ದು ಗ್ರೀನ್ ಟುಮಾರೋ ಎಂಎಂ ಹಿಲ್ಸ್ ಎಂಬ ಶೀರ್ಷಿಕೆಯಲ್ಲಿ ಹೊಸ ಪ್ರಾಜೆಕ್ಟ್ ಗೆ ಮುಂದಾಗಿದ್ದು ಈಗ ಪ್ರಾಧಿಕಾರದ ಜತೆ ಈಗ ಮೈಸೂರಿನ ಮೈ ಕಾಪ್ಸ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ಕಾರ್ಯ ನಿರ್ವಹಿಸಲಿದೆ. ಇನ್ನು  ಈ  ಗ್ರೀನ್  ಟುಮಾರೊ  ಎಂಎಂ ಹಿಲ್ಸ್ ನ ಕಾರ್ಯ ವೈಖರಿ ಏನಂದ್ರೆ ತ್ಯಾಜ್ಯ ಮುಕ್ತ ಮಹದೇಶ್ವರ ಬೆಟ್ಟ ಎಂಬ ಶೀರ್ಷಿಕೆಯಡಿ ಮಲೆ ಮಹದೇಶ್ವರ ಬೆಟ್ಟವನ್ನ ಕಸಮುಕ್ತ ಬೆಟ್ಟವನ್ನಾಗಿಸೋದು. 

ಯಾರಾದ್ರೂ ಸಿಎಂ ಸಿದ್ದರಾಮಯ್ಯರನ್ನು ಮುಟ್ಟಲು ಆಗ್ತದಾ?: ಕೇಂದ್ರ ಸಚಿವ ಸೋಮಣ್ಣ

ಕಸ ಹಾಗೂ ತ್ಯಾಜ್ಯ ವಿಲೇವಾರಿಯನ್ನ ಸಮರ್ಪಕವಾಗಿ ಮಾಡೋದು. ಮಲೆ ಮಹದೇಶ್ವರ ಬೆಟ್ಟ ಸುತ್ತಾ ಕಾಡಿದ್ದು ಈ ತ್ಯಾಜ್ಯದಿಂದ ಪ್ರಕೃತಿಯ ಸೌಂದರ್ಯ ಹಾಳು ಮಾಡದೆ ಹಸಿರನ್ನಾಗಿ ಇರಿಸುವುದರ ಜತೆಗೆ ಕಾಡು ಪ್ರಾಣಿಗಳಿಗೆ ತ್ಯಾಜ್ಯದಿಂದ ಹಾನಿಯಾಗದಂತೆ ನೋಡಿಕೊಳ್ಳುವುದಾಗಿದೆ. ಶೇಖರಣೆಯಾದ ತಾಯಾಜ್ಯವನ್ನ ಹೊಸ ತಂತ್ರಜ್ಞಾನದ ಮೂಲಕ ತಾಯಾಜ್ಯವನ್ನ ಬೇರೆಡೆ ಸಮರ್ಪಕವಾಗಿ ನಿರ್ವಹಣೆ ಮಾಡುವುದರ ಜೊತೆಗೆ ಪ್ಲಾಸ್ಟಿಕ್ ಬಾಟಲ್ ಹಾಗೂ ವೇಸ್ಟ್ ಪೇಪರ್ ಗಳನ್ನ ಸಂಗ್ರಹಿಸಿ ರಿ ಸೈಕಲ್ ಮಾಡುವುದು ಸಹ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ವಿವಿಧ ಭಾಗಗಳು ಅಲ್ಲದೇ ತಮಿಳುನಾಡಿನಿಂದಲೂ ಸಾಕಷ್ಟು ಭಕ್ತಾಧಿಗಳು ಬರುತ್ತಿದ್ದಾರೆ. ಜಾತ್ರಾ ಸಂದರ್ಭದಲ್ಲಂತು ತ್ಯಾಜ್ಯ ನಿರ್ವಹಣೆ ಬಹು ಸವಾಲಿನ ಕಾರ್ಯವಾಗಿದೆ. ಇದೀಗ ಮೈ ಕಾಪ್ಸ್ ಸಂಸ್ಥೆಯು ತ್ಯಾಜ್ಯ ನಿರ್ವಹಣೆ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಅತ್ಯಂತ ಅಭಿನಂದನೀಯ ಹಾಗೂ ಉಪಯೋಗಿ ಕಾರ್ಯವಾಗಿದೆ. ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರದಲ್ಲಿ ಅತ್ಯಂತ ಯೋಜಿತ ಹಾಗೂ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡುವುದು ಅಗತ್ಯವಾಗಿತ್ತು. 

ಸ್ಲಮ್‌ನಲ್ಲಿ ಧನುಷ್, ಸಕ್ಸಸ್‌ಫುಲ್ ಮ್ಯಾನ್ ನಾಗ್, ಅಸಮಾಧಾನಳಾದ ರಶ್ಮಿಕಾ.. ಇದು 'ಕುಬೇರ' ಗ್ಲಿಂಪ್ಸ್‌!

ಈ ನಿಟ್ಟಿನಲ್ಲಿ ಯೋಜನೆ ಕಾರ್ಯಗತಗೊಳಿಸಲು ತ್ರಿಪಕ್ಷೀಯ ಒಪ್ಪಂದವು ಸರಿಯಾದ ಸಮಯಕ್ಕೆ ಆಗಿದೆ. ಜಿಲ್ಲಾಡಳಿತವು ಪ್ರಾಧಿಕಾರ, ಅರಣ್ಯ ಇಲಾಖೆ ಸಹಯೋಗದೊಂದಿಗೆ ಪ್ಲಾಸ್ಟಿಕ್ ಮುಕ್ತ ಮಹದೇಶ್ವರ ಬೆಟ್ಟ ಎಂಬ ಕಾರ್ಯವನ್ನು ರೂಪಿಸಿದ್ದು, ಈ ದಿಸೆಯಲ್ಲಿ ಮುಂದಾಗಿದ್ದೆವು. ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯ ಮೂರು ವರ್ಷಗಳ ನೂತನ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. ಒಟ್ಟಾರೆ ಪ್ರಕೃತಿಗೆ ಧಕ್ಕೆ ತರದೆ ಕಸ ಹಾಗೂ ತ್ಯಾಜ್ಯದಿಂದ ಮುಕ್ತಿ ನೀಡಲು ಪ್ರಾಧಿಕಾರ ಮುಂದಾಗಿದ್ದು ಈ ಯೋಜನೆ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೊ ಕಾದು ನೋಡ್ಬೇಕಿದೆ.

click me!