ವಾವ್! ರಾಯಲ್ ಲುಕ್ ನಲ್ಲಿ ಮಿಂಚಿದ ಅನಂತ್ – ರಾಧಿಕಾ

By Roopa Hegde  |  First Published Nov 9, 2024, 1:03 PM IST

ಮೊದಲ ದೀಪಾವಳಿಯಂದು ಅಂಬಾನಿ ಕುಟುಂಬದ ನವ ದಂಪತಿ ಮಿಂಚಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಸರಳತೆ ಮೆರೆದಿರುವ ರಾಧಿಕಾ ಲುಕ್, ಮೇಕಪ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 


ಅಂಬಾನಿ ಫ್ಯಾಮಿಲಿ (Ambani family )ಯ ನವ ಜೋಡಿ ಅನಂತ್ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚೆಂಟ್ (Radhika Merchant). ಮದುವೆಯಾಗಿ ಕೆಲವೇ ತಿಂಗಳು ಕಳೆದಿದ್ದು, ರಾಧಿಕಾ ತಮ್ಮ ಮೊದಲ ದೀಪಾವಳಿಯನ್ನು ಅತ್ತೆ ಮನೆಯಲ್ಲಿ ಆಚರಿಸಿಕೊಂಡಿದ್ದಾರೆ. ಸರಳತೆಗೆ ಹೆಸರಾಗಿರುವ ಅನಂತ್ ಹಾಗೂ ರಾಧಿಕಾ, ದೀಪಾವಳಿ (Diwali) ಸಮಯದಲ್ಲೂ ತಮ್ಮ ಸಿಂಪಲ್ ಲುಕ್ ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಹಾಗೂ ಅನಂತ್ ಅಂಬಾನಿ ಲುಕ್ ವೈರಲ್ ಆಗಿದೆ. 

ಮನಸೂರೆಗೊಂಡ ರಾಧಿಕಾ ಲುಕ್ : ಸರಳತೆಗೆ ಹೆಸರಾಗಿರುವ ರಾಧಿಕಾ ಮರ್ಚೆಂಟ್ ತುಂಬಾ ಸುಂದರ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ರಾಣಿ ಪಿಂಕ್ ಬಣ್ಣದ ಲೆಹೆಂಗಾವನ್ನು ಹಾಲ್ಟರ್ ನೆಕ್ ಬ್ಲೌಸ್ ನೊಂದಿಗೆ ಧರಿಸಿದ್ದಾರೆ. ಅದರ ಮೇಲೆ ಗೋಲ್ಡನ್ ಸೀಕ್ವೆನ್ಸ್‌ ಹಾಕಿದ್ದು, ಅದಕ್ಕೆ ಜರಿ ವರ್ಕ್ ಇದೆ. ಅದು ರಾಧಿಕಾ ನೋಟಕ್ಕೆ ರಾಯಲ್ ಲುಕ್ ನೀಡಿದೆ.

Tap to resize

Latest Videos

ಸ್ಲಿಮ್ ಮುಖಕ್ಕೆ ಸೂಟ್ ಆಗೋ ಕಿವಿಯೋಲೆಗಳಿವು: ಅಥಿಯಾ ಶೆಟ್ಟಿ ಸ್ಫೂರ್ತಿ

ಐಷಾರಾಮಿ (Luxury) ಆಭರಣದಲ್ಲಿ ಅನಂತ್ ಮಡದಿ : ರಾಧಿಕಾ ನೋಟ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅವರ ಲುಕ್, ಐಷಾರಾಮಿ ಆಭರಣವಿಲ್ಲದೆ ಪೂರ್ಣವಾಗೋದಿಲ್ಲ. ಮಂಗಳಸೂತ್ರದ ಜೊತೆ ಕುಂದನ್ ಚೋಕರನ್ನು ರಾಧಿಕಾ ಧರಿಸಿದ್ದಾರೆ. ಅವರು ಭಾರವಾದ, ಗಣಪತಿ ವಿನ್ಯಾಸವಿರುವ ಕಿವಿಯೋಲೆಯನ್ನು ಡ್ರೆಸ್ ಗೆ ಮ್ಯಾಚ್ ಮಾಡಿದ್ದಾರೆ.  ರಾಧಿಕಾ ಕೈನಲ್ಲಿ ಚಿನ್ನದ ಬಳೆಗಳು ಮತ್ತು ವಜ್ರದ ಉಂಗುರವನ್ನು ನೋಡ್ಬಹುದು. ಹಣೆಗೆ ಸಿಂಧೂರ ಇಟ್ಟಿರುವ ರಾಧಿಕಾ ಅವರ ಸೌಂದರ್ಯ ನಗುವಿನಿಂದ ಡಬಲ್ ಆಗಿದೆ. 

 ಸಿಂಪಲ್ ಆಗಿತ್ತು ರಾಧಿಕಾ ಮೇಕಪ್ : ರಾಧಿಕಾ ಅತ್ಯಂತ ಸರಳವಾಗಿ ಮೇಕಪ್‌ ಮಾಡ್ಕೊಂಡಿದ್ದಾರೆ. ನ್ಯೂಡ್ ಐಶ್ಯಾಡೋ, ಮಸ್ಕರಾ ಕೋಟೆಡ್ ಲ್ಯಾಶಸ್, ನ್ಯೂಡ್ ಲಿಪ್‌ಸ್ಟಿಕ್ ಮತ್ತು ಮೃದುವಾದ ಬ್ಲಶ್‌ನೊಂದಿಗೆ ಅವರು ತಮ್ಮ ಮೇಕ್ಅಪ್  ಪೂರ್ಣಗೊಳಿಸಿದ್ದಾರೆ. ಪೋನಿ ಕಟ್ಟಿರುವ ರಾಧಿಕಾ, ಪತಿ ಅನಂತ್ ಅಂಬಾನಿ ಮೈ ಮೇಲೆ ಕೈ ಇಟ್ಟು, ಫೋಟೋಕ್ಕೆ ಫೋಸ್ ನೀಡಿದ್ದಾರೆ.

ಕಡಿಮೆ ಏನಿಲ್ಲ ಅನಂತ್ ಅಂಬಾನಿ : ಇನ್ನು ಅನಂತ್ ಅಂಬಾನಿ ಕೂಡ ಸರಳ, ಸುಂದರ ಡ್ರೆಸ್ ನಲ್ಲಿ ಹಬ್ಬ ಆಚರಿಸಿದ್ದಾರೆ. ನೀಲಿ ಬಣ್ಣದ ಕುರ್ತಾ ಮತ್ತು ನೆಹರೂ ಜಾಕೆಟ್ ಧರಿಸಿದ್ದಾರೆ. ಜಾಕೆಟ್‌ ಮೇಲೆ ಶ್ರೀಕೃಷ್ಣನ ಬ್ರೂಚ್ ಇದೆ.  

ರಾಧಿಕಾ ಸೌಂದರ್ಯ ಹೊಗಳಿದ ನೆಟ್ಟಿಗರು : ಸೋಶಿಯಲ್ ಮೀಡಿಯಾ (Social Media) ದಲ್ಲಿ ರಾಧಿಕಾ ನೋಟಕ್ಕೆ ಫುಲ್ ಮಾರ್ಕ್ಸ್ ಬಿದ್ದಿದೆ. ಅಂಬಾನಿ ಕುಟುಂಬದ ಕಿರಿ ಸೊಸೆ ಸೌಂದರ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಹಾಗೆ ಅನಂತ್ ಹಾಗೂ ರಾಧಿಕಾ ಜೋಡಿಯನ್ನು ಜನರು ಹೊಗಳಿದ್ದಾರೆ. ಅವರ ಸರಳತೆ ನೆಟ್ಟಿಗರಿಗೆ ಇಷ್ಟವಾಗಿದೆ.

8 ಅತ್ಯಾಕರ್ಷಕ ಬ್ಲೌಸ್ ವಿನ್ಯಾಸ: ಮುಂದೆ ಸಾಂಪ್ರದಾಯಿಕ, ಹಿಂದೆ ಮಾದಕ

ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಮದುವೆ ಜುಲೈನಲ್ಲಿ ನಡೆದಿದೆ. ಜುಲೈ ಮೊದಲ ವಾರದಿಂದ ಇವರಿಬ್ಬರ ಮದುವೆ ಕಾರ್ಯಕ್ರಮ ಶುರುವಾಗಿತ್ತು. ಜುಲೈ 13 ರಂದು, ಅನಂತ್ ಮತ್ತು ರಾಧಿಕಾ ವಿವಾಹವಾಗಿದ್ದು, ಅಂಬಾನಿ ಕುಟುಂಬದಿಂದ ನವವಿವಾಹಿತರಿಗೆ ಆಶೀರ್ವಾದ ಸಮಾರಂಭವನ್ನು ಆಯೋಜಿಸಲಾಗಿತ್ತು. ಇದರ ನಂತರ ಆರತಕ್ಷತೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆದಿತ್ತು. ಮದುವೆ ನಂತ್ರ ನವಜೋಡಿ ಪ್ಯಾರಿಸ್ ಓಲಂಪಿಕ್ಸ್ ನಲ್ಲಿ ಕಾಣಿಸಿಕೊಂಡಿದ್ದರು. ಅತ್ತೆ ಮನೆಯಲ್ಲಿ ಮೊದಲ ಬಾರಿ ಗಣೇಶೋತ್ಸವ ಆಚರಿಸಿದ್ದ ರಾಧಿಕಾ, ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಎಲ್ಲರ ಗಮನ ಸೆಳೆದಿದ್ದರು. ಸದಾ ಲವಲವಿಕೆಯಿಂದಿರುವ, ಸರಳತೆಯಿಂದಲೇ ಹೆಸರಾಗಿರುವ ರಾಧಿಕಾ, ಅಂಬಾನಿ ಕುಟುಂಬ ಮಾತ್ರವಲ್ಲ ಇಡೀ ದೇಶದ ಜನತೆಯ ಮನಸ್ಸು ಗೆದ್ದಿದ್ದಾರೆ. 

click me!