ಹಿಂದೂಗಳ ಜನಸಂಖ್ಯೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಆಗುತ್ತಿದೆ. ಇದೇ ಮುಂದುವರೆದರೆ ಆಗುವ ಪರಿಣಾಮದ ಕುರಿತು ಟಿಐಎಸ್ಎಸ್ ವರದಿಯಲ್ಲಿ ಇರುವುದೇನು?
ಕೆಲವು ರಾಜ್ಯಗಳಲ್ಲಿ ವಿಧಾನಸಭೆಯ ಚುನಾವಣೆ ರಂಗೇರಿದೆ. ಅದರಲ್ಲಿಯೂ ಮಹಾರಾಷ್ಟ್ರದ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ವಾಕ್ಸಮರದಲ್ಲಿ ತೊಡಗಿವೆ. ಇದೇ 20 ರಂದು ಒಂದೇ ಹಂತದಲ್ಲಿ 288 ಸ್ಥಾನಗಳಿಗೆ ಮತದಾನ ನಡೆಯಲಿದೆ. ಎಲ್ಲೆಡೆಯ ಚುನಾವಣೆಯಲ್ಲಿ ಹಿಂದೂ-ಮುಸ್ಲಿಂ ಧ್ರುವೀಕರಣದ ಲಾಭ ಪಡೆಯಲು ಪಕ್ಷಗಳು ಹೆಣಗಾಡುತ್ತಿವೆ. ಇದರ ನಡುವೆಯೇ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ (TISS) ನೀಡಿರುವ ವರದಿ ಕೋಲಾಹಲ ಸೃಷ್ಟಿಸಿದೆ. ಹಿಂದೂ ಮತ್ತು ಮುಸ್ಲಿಂ ಜನಸಂಖ್ಯೆಗಳ ಬಗ್ಗೆ ಈ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಸಂಖ್ಯೆ ಅಪಾರ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದು ಇದರಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯಲ್ಲಿ ಮುಂಬೈ ಹಿಂದೂಗಳ ಸಂಖ್ಯೆಯ ಬಗ್ಗೆ ಉಲ್ಲೇಖಿಸಲಾಗಿದೆ. ಇದರ ಪ್ರಕಾರ ಮುಂಬೈನಲ್ಲಿ ಹಿಂದೂಗಳ ಸಂಖ್ಯೆ ಶೇಕಡಾ 88 ರಿಂದ 66 ಕ್ಕೆ ಇಳಿದಿದೆ. 1961 ರಲ್ಲಿ ಅಂದಿನ ಬಾಂಬೆಯಲ್ಲಿ ಹಿಂದೂ ಜನಸಂಖ್ಯೆಯು 88 ಪ್ರತಿಶತದಷ್ಟಿತ್ತು, ಅದು 2011 ರಲ್ಲಿ ಕೇವಲ 66 ಪ್ರತಿಶತಕ್ಕೆ ಇಳಿದಿದೆ ಎನ್ನಲಾಗಿದೆ.
ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ನೀಡಿರುವ ವರದಿಯ ಪ್ರಕಾರ, ಈ 50 ವರ್ಷಗಳಲ್ಲಿ ಹಿಂದೂಗಳ ಸಂಖ್ಯೆಯಲ್ಲಿ ಕೇವಲ 8 ಪ್ರತಿಶತದಷ್ಟು ಹೆಚ್ಚಳವಾಗಿದೆ. ಆದರೆ 1961ರಲ್ಲಿ ಮುಸ್ಲಿಂ ಜನಸಂಖ್ಯೆಯು ಕೇವಲ 8 ಪ್ರತಿಶತದಷ್ಟಿತ್ತು. 2011 ರ ಹೊತ್ತಿಗೆ ಈ ಜನಸಂಖ್ಯೆಯು ಶೇಕಡಾ 21 ಕ್ಕೆ ಏರಿತು. TISS ನ ಜನಸಂಖ್ಯಾ ಅಧ್ಯಯನದ ಪ್ರಕಾರ, ಜನಸಂಖ್ಯೆಯು ಇದೇ ಪ್ರಮಾಣದಲ್ಲಿ ಹೆಚ್ಚುತ್ತಲೇ ಹೋದರೆ, ಮುಂದಿನ 40 ವರ್ಷಗಳಲ್ಲಿ ಅಂದರೆ 2051 ರ ವೇಳೆಗೆ ಹಿಂದೂ ಜನಸಂಖ್ಯೆಯಲ್ಲಿ ಶೇಕಡಾ 54 ಕ್ಕಿಂತ ಹೆಚ್ಚು ಇಳಿಕೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಮುಸ್ಲಿಂ ಜನಸಂಖ್ಯೆಯು ಶೇಕಡಾ 30 ಕ್ಕಿಂತ ಹೆಚ್ಚು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
undefined
ತಂದೆ ಕ್ರೈಸ್ತ, ತಾಯಿ ಸಿಖ್, ಅಣ್ಣ ಮುಸ್ಲಿಂ, ಪತ್ನಿ ಹಿಂದೂ... ನಟ ವಿಕ್ರಾಂತ್ ಮೆಸ್ಸಿ ಫ್ಯಾಮಿಲಿ ಕಥೆ ಕೇಳಿ...
ಮುಂಬೈನಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಆಗಲು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಕೊಟ್ಟಿರುವ ಕಾರಣ ಏನೆಂದರೆ, ಮುಂಬೈನಲ್ಲಿ ಅಕ್ರಮ ಪ್ರಯಾಣಿಕರ ಒಳನುಸುಳುವಿಕೆ ಹೆಚ್ಚುತ್ತಿರುವುದು. ಮುಂಬೈನಲ್ಲಿ ಶೇಕಡಾ 50ರಷ್ಟು ಅಕ್ರಮ ವಲಸೆ ಮಹಿಳೆಯರ ವೇಶ್ಯಾವಾಟಿಕೆ ಮೂಲಕವೇ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಅಕ್ರಮ ಪ್ರಯಾಣಿಕರಿಂದಾಗಿ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಾತಾವರಣದಲ್ಲಿ ದೊಡ್ಡ ಬದಲಾವಣೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಜತೆಗೆ ಜನಸಂಖ್ಯೆಯೂ ಹೆಚ್ಚುತ್ತಿದೆ. ಅಕ್ರಮ ವಲಸಿಗರಿಗೂ ಕೆಲವೊಂದು ಸರ್ಕಾರಿ ಸೌಲಭ್ಯಗಳನ್ನು ನೀಡುವುದಾಗಿ ರಾಜಕಾರಣಿಗಳು ಭರವಸೆ ನೀಡಿರುವುದು ಕೂಡ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರು ಕೂಡ ಈ ಬಗ್ಗೆ ಆತಂಕ ವ್ಯಕ್ತಪಡಿಸಿ, ಈ ಭರವಸೆ ವಿರುದ್ಧ ಹರಿಹಾಯ್ದು, ತಮ್ಮ ಚುನಾವಣೆಯ ಅಸ್ತ್ರವನ್ನಾಗಿಸಿಕೊಂಡಿದ್ದಾರೆ.
ಕೆಲವು ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಅಕ್ರಮ ವಲಸಿಗರನ್ನು ಬಳಸಿಕೊಳ್ಳುತ್ತಿವೆ ಎಂದು ಟಿಐಎಸ್ಎಸ್ ವರದಿ ಹೇಳಿದೆ. ಇದೇ ಕಾರಣಕ್ಕೆ ಅಕ್ರಮ ವಲಸಿಗರು ನಕಲಿ ವೋಟರ್ ಐಡಿ ಪಡೆಯುತ್ತಿದ್ದಾರೆ. ಮಹಾರಾಷ್ಟ್ರ ಚುನಾವಣೆಯ ನಡುವೆಯೇ TISS ವರದಿ ಬಂದಿರುವುದರಿಂದ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಇದರೊಂದಿಗೆ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಿಂದ ಅಕ್ರಮ ವಲಸಿಗರಿಂದ ಮುಂಬೈನಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದಿದೆ ವರದಿ. ಇದರ ಪ್ರಕಾರ, ಮುಂಬೈನಂಥ ಮಹಾನಗರಗಳಲ್ಲಿರುವ ಕೊಳೆಗೇರಿಗಳಲ್ಲಿ ಅಕ್ರಮ ವಲಸಿಗರ ಗುಂಪು ಹೆಚ್ಚಿದೆ, ಇದರಿಂದಾಗಿ ನಗರದ ಮೂಲಸೌಕರ್ಯಗಳ ಮೇಲೆ ಅಸಹನೀಯ ಒತ್ತಡವೂ ಹೆಚ್ಚುತ್ತಿದೆ. ಅವರ ಮಾಹಿತಿಯೂ ಸರ್ಕಾರದ ಬಳಿ ಇಲ್ಲ. ಸ್ಥಳೀಯ ಜನರು ಮತ್ತು ವಲಸಿಗ ಸಮುದಾಯಗಳ ನಡುವಿನ ಆರ್ಥಿಕ ಅಸಮಾನತೆಗಳಿಂದಾಗಿ ಸಾಮಾಜಿಕ ಉದ್ವಿಗ್ನತೆಗಳು ಮತ್ತು ಹಿಂಸಾಚಾರದ ಘಟನೆಗಳು ಹೆಚ್ಚಿವೆ. 50 ರಷ್ಟು ಮಹಿಳೆಯರನ್ನು ಕಳ್ಳಸಾಗಣೆ ಮಾಡಲಾಗಿದೆ, ಆ ಮಹಿಳೆಯರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು, 40 ಪ್ರತಿಶತ ವಲಸಿಗರು ಪ್ರತಿ ತಿಂಗಳು ಬಾಂಗ್ಲಾದೇಶದ ತಮ್ಮ ಮನೆಗಳಿಗೆ 10 ಸಾವಿರದಿಂದ 1 ಲಕ್ಷ ರೂಪಾಯಿಗಳನ್ನು ಕಳುಹಿಸುತ್ತಾರೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಹೆಚ್ಚುತ್ತಿರುವ ವಲಸಿಗರ ಸಂಖ್ಯೆಯಿಂದಾಗಿ ಶಿಕ್ಷಣ ಮತ್ತು ನೈರ್ಮಲ್ಯ, ವಿದ್ಯುತ್, ನೀರು ಸರಬರಾಜು, ಆರೋಗ್ಯ ಸೇವೆಗಳ ಮೇಲೂ ಪರಿಣಾಮ ಬೀರುತ್ತಿದೆ.
ಭಾರತೀಯಳಲ್ಲದಿದ್ದರೂ ಹಿಂದೂ! ಅಮೆರಿಕದ ಗುಪ್ತಚರ ವಿಭಾಗಕ್ಕೆ ನೇಮಕಗೊಂಡ ತುಳಸಿ ಹಿನ್ನೆಲೆಯೇ ಕುತೂಹಲ