ಮಾಜಿ ಹೆಂಡತಿ ನಿವೇದಿತಾ ಗೌಡ ಸ್ನಾನದ ವಿಡಿಯೋ ಚಿತ್ರೀಕರಿಸಿದ ಚಂದನ್‌ ಶೆಟ್ಟಿ!

By Sathish Kumar KH  |  First Published Nov 11, 2024, 12:41 PM IST

ಬಿಗ್ ಬಾಸ್ ಮಾಜಿ ಸ್ಪರ್ಧಿ ನಟಿ ನಿವೇದಿತಾ ಗೌಡ ಅವರು ಹುಟ್ಟುಹಬ್ಬದಂದು ಬಾತಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಈ ವಿಡಿಯೋವನ್ನು ಮಾಡಿದ್ದು ಅವರ ಮಾಜಿ ಗಂಡ ಚಂದನ್ ಶೆಟ್ಟಿ. ಡಿವೋರ್ಸ್ ನಂತರವೂ ಇಬ್ಬರ ನಡುವಿನ ಏನು ನಡೆಯುತ್ತಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.


ಬೆಂಗಳೂರು (ನ.11): ಬಿಗ್ ಬಾಸ್ ಮಾಜಿ ಸ್ಪರ್ಧಿ ನಟಿ ನಿವೇದಿತಾ ಗೌಡ, ಚಂದನ್ ಶೆಟ್ಟಿಗೆ ಡಿವೋರ್ಸ್ ಕೊಟ್ಟು ಕಳಿಸಿಯಾಗಿದೆ. ಇದೀಗ ಹಾಟ್ ಅಂಡ್ ಬೋಲ್ಡ್‌ ಆಗಿ ರೀಲ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ನಿವೇದಿತಾ ಗೌಡ ಅವರು ನ್ಮದಿನಾಚರಣೆ ಹಿನ್ನೆಲೆಯಲ್ಲಿ ಬಾತಿಂಗ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆದರೆ, ಈ ವಿಡಿಯೋದಲ್ಲಿ ಮಾಜಿ ಗಂಡ ಚಂದನ್ ಶೆಟ್ಟಿ ಏಕೆ ಬಂದಿದ್ದಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಬಾರ್ಬಿಡಾಲ್ ಖ್ಯಾತಿಯ ನಟಿ ನಿವೇದಿತಾ ಗೌಡ ಅವರು ತಮ್ಮ ಹುಟ್ಟು ಹಬ್ಬದ ದಿನ ಲಕ್ಷಾಂತರ ಜನರಿಂದ ಶುಭಾಶಯಗಳನ್ನು ಸ್ವೀಕರಿಸಿದ್ದಾರೆ. ಇನ್ನು ಎಲ್ಲ ಶುಭ ಕೋರಿದ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಲು ತಮ್ಮ ಸ್ನಾನದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸ್ಟಾರ್ ಹೋಟೆಲೊಂದರ ಕೋಣೆಯಲ್ಲಿ ಹಾವಿನಂತೆ ನುಲಿಯುತ್ತಾ, ಹೊರಳಾಡುತ್ತಾ ತಾವೇ ಸ್ವಯಂ ವಿಡಿಯೋ ಮಾಡಿಕೊಂಡಿದ್ದಾರೆ. ಇದಾದ ನಂತರ ಹೊರಗೆ ಸ್ವಿಮ್ಮಿಂಗ್ ಪೂಲ್‌ಗೆ ಹರಿಯುವ ಬಿಸಿನೀರಿನಲ್ಲಿ ರಾತ್ರಿ ವೇಳೆ ಸ್ನಾನ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ, ಈ ವಿಡಿಯೋ ಮಾಡಿದ್ದು ಮಾತ್ರ ತನ್ನ ಮಾಜಿ ಗಂಡ ಚಂದನ್ ಶೆಟ್ಟಿ ಎಂದು ಹೇಳಿಕೊಂಡಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ಮಳೆಯಲ್ಲಿ ಮೈಚಳಿ ಬಿಟ್ಟು ನಟನ ಜೊತೆ ರೊಮಾನ್ಸ್​: ವಿಡಿಯೋ ಶೇರ್​ ಮಾಡಿ ಕಚಗುಳಿ ಇಟ್ಟ ನಿವೇದಿತಾ ಗೌಡ!

ಈ ವಿಡಿಯೋವನ್ನು ನಟಿ ನಿಒವೇದಿತಾ ಗೌಡ ತಮ್ಮ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ರೀಲ್ಸ್ ಆಗಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಎಲ್ಲಾ ಜನ್ಮದಿನದ ಶುಭಾಶಯಗಳಿಗೆ ತುಂಬಾ ಧನ್ಯವಾದಗಳು ಇದು ಅತ್ಯುತ್ತಮ ಜನ್ಮದಿನವಾಗಿತ್ತು ಎಲ್ಲಾ ಸಿಹಿ ಸಂದೇಶಗಳಿಗಾಗಿ ಒಂದು ಟನ್ ಧನ್ಯವಾದಗಳು... ತುಂಬಾ ಪ್ರೀತಿಯನ್ನು ಸ್ವೀಕರಿಸಲು ನಾನು ತುಂಬಾ ಸಂತಸಗೊಂಡಿದ್ದೇನೆ' ಎಂದು ಟ್ಯಾಗ್‌ಲೈನ್ ಬರೆದುಕೊಂಡಿದ್ದಾರೆ. ಆದರೆ, ಈ ವಿಡಿಯೋ ಕ್ರೆಡಿಟ್ ಅನ್ನು ಸ್ವತಃ ತಮ್ಮ ಮಾಜಿ ಗಂಡ ಚಂದನ್ ಶೆಟ್ಟಿ ಅವರಿಗೆ ಕೊಟ್ಟಿದ್ದಾರೆ. ಅಂದರೆ, ನಿವೇದಿತಾ ಗೌಡ ಬಾತಿಂಗ್ ವಿಡಿಯೋ ಮಾಡಿದ್ದು, ಸ್ವತಃ ಚಂದನ್ ಶೆಟ್ಟಿ ಇಲ್ಲಿ ಹೇಳಿಕೊಂಡಿದ್ದಾರೆ. ಮದುವೆ ಮಾಡಿಕೊಂಡು ಜೊತೆಗಿರಲಾಗದೇ ಡಿವೋರ್ಸ್ ಕೊಟ್ಟ ಜೋಡಿ ಅದೇಗೆ ತೀರಾ ಖಾಸಗಿ ಎನ್ನುವ ವಿಡಿಯೋ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಅಭಿಮಾನಿಗಳು ಆಶ್ಚರ್ಯಗೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ ಲಿಂಕ್ : https://www.facebook.com/reel/480669915000430

ಚಂದನವನದ ಸ್ಟಾರ್ ಹಾಗೂ ಕ್ಯೂಟ್ ಜೋಡಿಗಳಲ್ಲಿ ಒಂದಾಗಿದ್ದ ನಟ ಹಾಗೂ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ಬಾರ್ಬಿಡಾಲ್ ಖ್ಯಾತಿಯ ನಟಿ ನಿವೇದಿತಾ ಗೌಡ ಅವರ ಜೋಡಿಯೂ ಒಂದಾಗಿತ್ತು. ಆದರೆ, ಅವರಿಬ್ಬರಿಗೂ ಚಿಕ್ಕ ವಯಸ್ಸಾಗಿದ್ದರಿಂದ ಸಮಾಜ ಮೆಚ್ಚಿಕೊಳ್ಳುವಂತೆ ಜೀವನ ಮಾಡಲಾಗದೇ ವೈಯಕ್ತಿಕ ಹಿತಾಸಕ್ತಿಗಳಿಂದಾಗಿ ಪರಸ್ಪರ ಒಪ್ಪಿಕೊಂಡು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಡಿವೋರ್ಸ್ ಕೊಟ್ಟು ದೂರವಾಗಿದ್ದಾರೆ. ಆದರೆ, ತಾವು ಡಿವೋರ್ಸ್ ನೀಡಿ ದೂರವಾಗಿದ್ದರೂ, ಒಟ್ಟಿಗೆ ಸಿನಿಮಾ ಮಾಡುವುದು, ಒಟ್ಟಿಗೆ ಓಡಾಡುವುದನ್ನು ಕಂಡು ನೀವೇಕೆ ಜೊತೆ, ಜೊತೆಗೆ ಕಾಣಿಸಿಕೊಂಡಿದ್ದೀರಿ ಎಂದು ಕೇಳಿದ್ದಕ್ಕೆ ನಾವಿಬ್ಬರೂ ಈಗ ಗಂಡ-ಹೆಂಡತಿ ಅಲ್ಲ, ಆದ್ರೆ ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಮಾಜಿ ಗಂಡ ಚಂದನ್ ಶೆಟ್ಟಿ ಮಾಜಿ ಹೆಂಡತಿಯ ಸ್ನಾನದ ವಿಡಿಯೋ ಮಾಡಿದ್ದಾನೆ.

ಇದನ್ನೂ ಓದಿ: ಚಂದನ್​ ಶೆಟ್ಟಿ ಕಾರಿನ ಮೇಲೂ ಮಾಜಿ ಪತ್ನಿ ನಿವೇದಿತಾ ಗೌಡ! ನಂಬರ್​ ಪ್ಲೇಟ್​ ಮೇಲೆ ಫ್ಯಾನ್ಸ್​ ಕಣ್ಣು

ಲಿವಿಂಗ್ ಟುಗೆದರ್ ಇದ್ದಾರಾ ಮಾಜಿ ದಂಪತಿ: ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಮಕ್ಕಳು ಮಾಡಿಕೊಳ್ಳುವ ವಿಚಾರದಲ್ಲಿ ವೈಮನಸ್ಸು ಬಂದು ಡಿವೋರ್ಸ್ ಪಡೆದುಕೊಂಡಿದ್ದಾರೆ ಎಂದೂ ಊಹಿಸಲಾಗಿತ್ತು. ಆದರೆ, ಇವರನ್ನು ನೋಡುತ್ತಿದ್ದರೆ ಇಬ್ಬರೂ ತಮ್ಮ ವೃತ್ತಿ ಜೀವನ ಹಾಗೂ ಇತರೆ ಕಾರ್ಯಗಳಿಗೆ ಸ್ವತಂತ್ರವಾಗಿ ಇರುವುದಕ್ಕೆಂದೇ ಸಮಾಜದ ಮುಂದೆ ಡಿವೋರ್ಸ್ ಪಡೆದುಕೊಂಡಂತೆ ಕಾಣಿಸುತ್ತಿದೆ. ಉಳಿದಂತೆ ಇವರಿಬ್ಬರೂ ಬಹುತೇಕವಾಗಿ ಒಂದೆಡೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಅಭಿಮಾನಿಗಳಿಗೆ ಕಾಣಿಸಿಕೊಳ್ಳುವಂತೆ ವಿಡಿಯೋ ಅಥವಾ ಫೋಟೋ ಫ್ರೇಮ್‌ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ, ಮದುವೆಗೆ ಡಿವೋರ್ಸ್ ಕೊಟ್ಟು ಲಿವಿಂಗ್ ಟುಗೆದರ್ ಇದ್ದಾರಾ ಎಂಬ ಅನುಮಾನ ಕಂಡುಬರುತ್ತಿದೆ.

click me!