ತುಂಡುಡುಗೆ ಖ್ಯಾತಿಯ ಉರ್ಫಿ ಜಾವೇದ್​ ಮದುವೆ ದಿನ ಹಾಕೋ ಬಟ್ಟೆ ಹೇಗಿರುತ್ತೆ? ಅವರ ಆಸೆ ಹೀಗಿದೆ ಕೇಳಿ...

By Suchethana D  |  First Published Nov 9, 2024, 4:54 PM IST

 ತುಂಡುಡುಗೆ ಖ್ಯಾತಿಯ ಉರ್ಫಿ ಜಾವೇದ್​ ಮದುವೆ ದಿನ ಹಾಕೋ ಬಟ್ಟೆ ಹೇಗಿರುತ್ತೆ? ಇವರು ನಟಿಯೊಬ್ಬರ ಹೆಸರು ಉಲ್ಲೇಖಿಸಿದ್ದಾರೆ. ಅವರು ಯಾರು? 
 


ನಟಿ ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಚಿತ್ರ-ವಿಚಿತ್ರ ಬಟ್ಟೆಗಳೇ ಕಣ್ಮುಂದೆ ಬರುವುದು ಸಹಜ.  ಬಟ್ಟೆಗಳಿಂದಲೇ ಅಷ್ಟು ಫೇಮಸ್​ ಆಗಿರುವವರು ಉರ್ಫಿ. ಬಟ್ಟೆ ಮಾತ್ರವಲ್ಲದೇ, ನಟಿ ಮೈಮೇಲೆ ಬಟ್ಟೆಯ ರೂಪದಲ್ಲಿ ಹಾಕಿಕೊಳ್ಳದ ವಸ್ತುಗಳೇ ಇಲ್ಲ ಎನ್ನಬಹುದೇನೋ. ಇದೇ ಕಾರಣಕ್ಕೆ ಉರ್ಫಿ ಎಂದಾಕ್ಷಣ ಎಲ್ಲರ ಕಣ್ಣೆದುರಿಗೆ ಬರುವುದು ಚಿತ್ರ ವಿಚಿತ್ರ ಬಟ್ಟೆಗಳನ್ನು ತೊಟ್ಟ ಇಲ್ಲವೇ ದೇಹ ಪೂರ್ತಿ ಕಾಣುವ ಅರ್ಧಬಂರ್ಧ ಬಟ್ಟೆ ತೊಟ್ಟ ನಟಿ. ನಟಿಯಾಗಿದ್ದರೂ ಈಕೆ ನಟನೆಯಿಂದ ಗುರುತಿಸಿಕೊಳ್ಳಲಿಲ್ಲ, ಬದಲಿಗೆ ಆಕೆಯ ಬಟ್ಟೆಯಿಂದಲೇ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರತಿ ದಿನವೂ ಚಿತ್ರ ವಿಚಿತ್ರ ವೇಷಭೂಷಣ ಮಾಡಿಕೊಳ್ಳುತ್ತಾ ಫೋಟೋಗೆ ಪೋಸ್​ ಕೊಟ್ಟು ಟ್ರೋಲ್​ ಆಗುವುದು ಎಂದರೆ ಇವರಿಗೆ ತುಂಬಾ ಇಷ್ಟ. ಹೂವುಗಳಿಂದ, ಹಣ್ಣುಗಳಿಂದ ಇಲ್ಲವೇ ಸಿಕ್ಕಸಿಕ್ಕ ಸಾಮಗ್ರಿಗಳಿಂದ ಖಾಸಗಿ ಅಂಗಗಳನ್ನಷ್ಟೇ ಮುಚ್ಚಿಕೊಂಡು ಫೋಟೋ ತೆಗೆಸಿಕೊಳ್ಳುವುದರಲ್ಲಿ ಈಕೆ ನಿಸ್ಸೀಮರು.  

ಇಂತಿಪ್ಪ ಉರ್ಫಿಗೆ ಈಗ ಮದ್ವೆಯಾಗುವ ಆಸೆಯಂತೆ. ಸಂದರ್ಶನವೊಂದರಲ್ಲಿ ತಮ್ಮ ಮದುವೆಯ ಆಸೆಯನ್ನು ತೆರೆದಿಟ್ಟಿದ್ದಾರೆ ನಟಿ. ಅಷ್ಟಕ್ಕೂ ಇವರಿಗೆ ನಟಿಯೊಬ್ಬರಂತೆ ಮದುವೆಯಾಗುವ ಆಸೆಯಂತೆ. ಆ ನಟಿಯೇ ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿ, ನಟಿ ಸೋನಾಕ್ಷಿ ಸಿನ್ಹಾ. ಕೆಲ ತಿಂಗಳ ಹಿಂದೆ ಜಹೀರ್ ಇಕ್ಬಾಲ್ ಜೊತೆ ಮದುವೆಯಾಗಿದ್ದು, ಈಗ  ಮದುವೆಯ ಲೈಫ್​ ಎಂಜಾಯ್ ಮಾಡುತ್ತಿದ್ದಾರೆ. ಆಗಾಗ್ಗೆ ತಮ್ಮ ಕ್ಯೂಟೆಸ್ಟ್​ ದಾಂಪತ್ಯದ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆದರೂ, ಇದು ಹಿಂದೂ-ಮುಸ್ಲಿಂ ಮದುವೆಯಾದ್ದರಿಂದ ಜೊತೆಗೆ ಅಪ್ಪನಿಗೆ ತಿಳಿಸದೇ ನಟಿ ಮದುವೆಯಾಗಿದ್ದರಿಂದಲೂ ಇವರ ಬಗ್ಗೆ ಇನ್ನೂ ಸುದ್ದಿಯಾಗುತ್ತಲೇ ಇದೆ. ಹೋದಲ್ಲಿ, ಬಂದಲ್ಲಿ ಇವರ ಮೇಲೆ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ. ಆದರೆ ಇವರಿಬ್ಬರೂ ಹಿಂದೂ-ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದರು. ಇದೀಗ ಅವರಂತೆಯೇ ಮದುವೆಯಾಗುವ ಆಸೆಯನ್ನು ಉರ್ಫಿ ಜಾವೇದ್​ ಕೂಡ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

ನನ್ನ ತಂದೆ ಕ್ರೂರಿ... ಹೆಣ್ಣಾಗಿ ಹುಟ್ಟಿದ್ದಕ್ಕೆ ಮಕ್ಕಳಿಗೆ, ತಾಯಿಗೆ ಕೊಟ್ಟ ಹಿಂಸೆ ಅಷ್ಟಿಷ್ಟಲ್ಲ: ಕರಾಳ ದಿನಗಳ ನೆನೆದ ಉರ್ಫಿ

ಅಷ್ಟಕ್ಕೂ ಬಟ್ಟೆಗಳಿಂದಲೇ ಇಷ್ಟೊಂದು ಫೇಮಸ್​ ಆಗಿದ್ದೀರಿ. ಮದುವೆಯ ಸಂದರ್ಭದಲ್ಲಿ ಯಾವ ರೀತಿಯ ಉಡುಗೆ ತೊಟ್ಟಿಕೊಳ್ಳಲು ಬಯಸುತ್ತೀರಿ ಎಂದು ಪ್ರಶ್ನೆ ಕೇಳಲಾಗಿದೆ. ಆಗ ಉರ್ಫಿ,   ಮದುವೆ ಬಟ್ಟೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಹಾಗಂತ ನಾನು ನಗ್ನ ಆಗಿರ್ತೇನೆ ಅಂತ ಅರ್ಥ ಅಲ್ಲ. ನನಗೆ ಮದುವೆಯಲ್ಲಿ ಸಿಕ್ಕಾಪಟ್ಟೆ ಗ್ರ್ಯಾಂಡ್​ ಎಲ್ಲಾ ಇಷ್ಟ ಆಗಲ್ಲ. ಸಿಂಪಲ್​ ಆಗಿ ಚೆನ್ನಾಗಿರೋ ಅಂದರೆ ಸೋನಾಕ್ಷಿ ಸಿನ್ಹಾ ಅವರು ಮದುವೆಯ ಸಂದರ್ಭದಲ್ಲಿ ಹಾಕಿಕೊಂಡಿರೋ ಡ್ರೆಸ್​ ತುಂಬಾ ಇಷ್ಟವಾಯಿತು. ಅಂಥದ್ದನ್ನೇ ನಾನು ಬಯಸುತ್ತೇನೆ ಎಂದಿದ್ದಾರೆ. ತಮ್ಮ ಗಂಡನಿಗೆ ಜಹೀರ್​ ಹಾಕಿರೋವಂಥ ಬಟ್ಟೆ ಹಾಕಬೇಕು ಎಂದೂ ಹೇಳಿದ್ದಾರೆ. . ಇದಕ್ಕೆ ಥಹರೇವಾರಿ ಕಮೆಂಟ್ಸ್​ ಬಂದಿವೆ. ಮದ್ವೆ ಆಗ್ತಿರೋ ಕಾರ್ಟೂನ್​ ಯಾರು ಎಂದು ಕೆಲವರು ಪ್ರಶ್ನಿಸಿದರೆ, ಪಕ್ಕದಲ್ಲಿರೋ ವ್ಯಕ್ತಿ ಯಾರು ಎನ್ನೋದು ಹಲವರ ಪ್ರಶ್ನೆ. 

ಇತ್ತೀಚಿಗಷ್ಟೇ ಉರ್ಫಿ ಅವರು ತಮ್ಮ ಕಹಿ ಬಾಲ್ಯವನ್ನು ನೆನಪಿಸಿಕೊಂಡಿದ್ದರು.  ಅವರದ್ದೇ ಮಾತಿನಲ್ಲಿ ಹೇಳುವುದಾದರೆ, ಅವರ ತಂದೆ ಜಾವೇದ್​ ಒಬ್ಬ ಕ್ರೂರಿ, ಹಿಂಸಾತ್ಮಕ ವ್ಯಕ್ತಿಯಾಗಿದ್ದರು. ಅವರು ಮಕ್ಕಳಿಗೆ ಮತ್ತು ತಮ್ಮ ತಾಯಿಗೆ ಕೊಡುತ್ತಿದ್ದ ನರಕಯಾತನೆ ಯಾರಿಗೂ ಬೇಡ ಎಂದಿದ್ದರು ಉರ್ಫಿ. ಅವರ ಹಳೆಯ ಸಂದರ್ಶನವೊಂದು ವೈರಲ್​ ಆಗಿದೆ. ಇದು ಅವರ  ಕಣ್ಣೀರಿನ ಕಥೆ. ನನ್ನ ತಂದೆ ಮಕ್ಕಳಿಗೆ ಮತ್ತು ತಾಯಿಗೆ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ನಾವೆಲ್ಲಾ ಹೆಣ್ಣು ಮಕ್ಕಳು ಎನ್ನುವುದು. ನಾನು ಮೂರನೆಯವಳು. ನಾನು ಕೂಡ ಹೆಣ್ಣಾಗಿ ಹುಟ್ಟಿದ ಮೇಲೆ ಅವರ ಕೋಪ ಇನ್ನಷ್ಟು ಹೆಚ್ಚಾಯಿತು. ನಾಲ್ಕನೆಯ ಬಾರಿಗೆ ಅಮ್ಮ ಗರ್ಭಿಣಿಯಾದರು. ಈಗಲೂ ಹೆಣ್ಣು ಹುಟ್ಟಿದರೆ ಡಿವೋರ್ಸ್​ ಕೊಡುವುದಾಗಿ ಬೆದರಿಕೆ ಹಾಕಿದ್ದರು. ಸಿಕ್ಕಾಪಟ್ಟೆ ದೌರ್ಜನ್ಯ ಮಾಡುತ್ತಿದ್ದರು. ಅದೇ ಕಾರಣಕ್ಕೆ ಮನೆ ಬಿಟ್ಟೆ ಎಂದಿದ್ದರು. 

ಫಸ್ಟ್​ ನೈಟ್​ ವಿಡಿಯೋ ಶೇರ್​ ಮಾಡಿದ ದಂಪತಿ! ಈ ಕಣ್ಣಿಂದ ಇನ್ನು ಏನೇನು ನೋಡ್ಬೋಕೋ ಅಂತಿರೋ ನೆಟ್ಟಿಗರು...

click me!