ಬ್ಯಾಕ್‌ಲೆಸ್‌ ಡ್ರೆಸ್‌ನಲ್ಲಿ ಆಲಿಯಾ ಭಟ್ ಬೋಲ್ಡ್ ಲುಕ್‌, ರಾಹಾ ಅಮ್ಮ ಸಖತ್ ಹಾಟ್ ಅಂತಿದ್ದಾರೆ ನೆಟ್ಟಿಗರು!

First Published Nov 24, 2023, 10:18 AM IST

ಆಲಿಯಾ ಭಟ್‌, ಬಾಲಿವುಡ್‌ನ ಖ್ಯಾತ ಹಾಗೂ ಪ್ರತಿಭಾನ್ವಿತ ನಟಿಯಲ್ಲೊಬ್ಬರು. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸ್ಟೈಲಿಶ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಆಲಿಯಾ ಮೆರೂನ್ ಕಲರ್‌ನ ಶಾರ್ಟ್‌, ಬ್ಯಾಕ್‌ಲೆಸ್‌ ಫೋಟೋ ಶೇರ್‌ ಮಾಡಿಕೊಂಡಿದ್ದು ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.

ಬಾಲಿವುಡ್​ ಬಹುಬೇಡಿಕೆಯ ನಟಿ ಆಲಿಯಾ ಭಟ್. ಸಿನಿಮಾ ಕುಟುಂಬದಿಂದ ಬಂದವರಾದರೂ ಸ್ವ ಪ್ರತಿಭೆಯಿಂದ ಬಾಲಿವುಡ್‌ನಲ್ಲಿ ಬೆಳೆದ ಸ್ಟಾರ್‌. ದೇಸಿ ಲುಕ್‌ನಿಂದ ತೊಡಗಿ ರಫ್ ಅಂಡ್ ಟಫ್‌ ಪಾತ್ರಕ್ಕೂ ಸೈ ಎಂದು ತೋರಿಸಿಕೊಟ್ಟ ನಟಿ. ಆಲಿಯಾ ಭಟ್‌,  ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸ್ಟೈಲಿಶ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

ಸದ್ಯ ಆಲಿಯಾ ಮೆರೂನ್ ಕಲರ್‌ನ ಶಾರ್ಟ್‌, ಬ್ಯಾಕ್‌ಲೆಸ್‌ ಫೋಟೋ ಶೇರ್‌ ಮಾಡಿಕೊಂಡಿದ್ದು ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಆಲಿಯಾ, ಮರೂನ್​ ಮಿನಿ ಡ್ರೆಸ್​​ನಲ್ಲಿ ಬೋಲ್ಡ್ ಲುಕ್​​ ಕೊಟ್ಟಿದ್ದಾರೆ. ನವೆಂಬರ್ 22ರಂದು ನಡೆದ ಸ್ಟಾರ್-ಸ್ಟಡ್ ಬ್ಯಾಷ್‌ನಲ್ಲಿ ನಟಿ ಗುಸ್ಸಿಯ ಫ್ಯಾಷನೆಬಲ್ ಡ್ರೆಸ್ ಧರಿಸಿದ್ದರು.

Latest Videos


ಓಪನ್ ಹೇರ್ ಮತ್ತು ಕಡಿಮೆ ಮೇಕಪ್‌ನಲ್ಲಿ ಆಲಿಯಾ ಲುಕ್‌ ಸಂಪೂರ್ಣವಾಗಿ ಅಟ್ರ್ಯಾಕ್ಟಿವ್ ಆಗಿತ್ತು. ರಾಹಾ ಕಪೂರ್ ತಾಯಿಯ ಕ್ಯೂಟ್ ಫೋಟೋ ನೋಡಿದ ನೆಟ್ಟಿಗರು ಹಾರ್ಟ್‌, ಸ್ಮೈಲಿ ಎಮೋಜಿಗಳನ್ನು ಸೆಂಡ್ ಮಾಡಿದ್ದಾರೆ. ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಗಾರ್ಜಿಯಸ್, ಫೈರ್‌, ಹಾಟಿ, ಅಮೇಜಿಂಗ್‌, ಬೆಸ್ಟ್ ಪಿಕ್ ಎವರ್ ಹೀಗೆ ಅಭಿಮಾನಿಗಳು ಹಲವಾರು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರರು, ಮಗುವಾದರೂ ಆಲಿಯಾ ಬ್ಯೂಟಿ ಕುಂದಿಲ್ಲ. ರಾಹಾ ಅಮ್ಮ ಸಖತ್ ಹಾಟ್ ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.

ಆಲಿಯಾ ಭಟ್ ಸೋಷಿಯಲ್ ಮೀಡಿಯಾದಲ್ಲೂ ಕೋಟ್ಯಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಆಲಿಯಾ ಭಟ್‌ಗೆ ಬರೋಬ್ಬರಿ 80.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ನಟಿ ಈವರೆಗೆ 2,011 ಪೋಸ್ಟ್ ಮಾಡಿದ್ದಾರೆ. ಅತಿ ಹೆಚ್ಚು ಫಾಲೋವರ್ಸ್ ಇರೋ ಭಾರತದ ಸೆಲೆಬ್ರಿಟಿಗಳ ಪೈಕಿ ಆಲಿಯಾ ಭಟ್ ಕೂಡಾ ಒಬ್ಬರು.

ಆಲಿಯಾ ಭಟ್ ಕೊನೆಯದಾಗಿ ರಣವೀರ್ ಸಿಂಗ್ ಜೊತೆಗೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಕಾಣಿಸಿಕೊಂಡರು. ಈ ವರ್ಷ, ಅವರು ಗಾಲ್ ಗಡೋಟ್ ಅಭಿನಯದ 'ಹಾರ್ಟ್ ಆಫ್ ಸ್ಟೋನ್' ಬಿಡುಗಡೆಯೊಂದಿಗೆ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ಇತ್ತೀಚೆಗೆ 'ಗಂಗೂಬಾಯಿ ಕಥಿಯಾವಾಡಿ' ಅತ್ಯುತ್ತಮ ನಟಿಗಾಗಿ ರಾಷ್ಟ್ರ  ಪ್ರಶಸ್ತಿ ಗೆದ್ದ ನಂತರ ಆಲಿಯಾ ಭಟ್ ಸುಮಾರು 3.2 ಕೋಟಿ ಮೌಲ್ಯದ ರೇಂಜ್ ರೋವರ್ ಆಟೋಬಯೋಗ್ರಫಿ SUV ಕಾರನ್ನು ಖರೀದಿಸಿದರು.

click me!