ಪತ್ನಿ ಶೀಲ ಶಂಕಿಸಿದ ಕಿರಾತಕ ಪತಿ, ನಕಲಿ ಖಾತೆಯಿಂದ ಮೆಸೇಜ್ ಕಳುಹಿಸಿ ತಗ್ಲಾಕೊಂಡ!

By Chethan Kumar  |  First Published Nov 17, 2024, 10:45 PM IST

ಪತ್ನಿ ಚಾರಿತ್ಯ ಮೇಲೆ ಪತಿಗೆ ಅನುಮಾನ ಹೆಚ್ಚಾಗತೊಡಗಿದೆ. ಹೀಗಾಗಿ ನಕಲಿ ಇನ್‌ಸ್ಟಾಗ್ರಾಂ ಖಾತೆ ರಚಿಸಿ ಪತ್ನಿಗೆ ಸಂದೇಶ ಕಳುಹಿಸಿದ್ದಾನೆ. ಬ್ಲಾಕ್ ಮಾಡಿದರೂ ಬೇರೆ ಬೇರೆ ನಕಲಿ ಖಾತೆಗಳಿಂದ ಫ್ಲರ್ಟ್ ಮೆಸೇಜ್ ಕಳುಹಿಸಿದ್ದಾನೆ. ಆದರೆ ಪತ್ನಿಯನ್ನು ಪರೀಕ್ಷಿಸಲು ಹೋಗಿ ತಾನೇ ತಗ್ಲಾಕೊಂಡಿದ್ದಾನೆ.


ಹರ್ದೋಯಿ(ನ.17) ಸುಂದರ ಸಂಸಾರ, ಆದರೆ ಪತಿಗೆ ಅನುಮಾನದ ಖಾಯಿಲೆ. ಪತ್ನಿ ಮೇಲೆ ವಿಪರೀತ ಅನುಮಾನ.ಪತ್ನಿ ಫೋನ್ ನೋಡಿದರೂ ಅನುಮಾನ, ಮಾತನಾಡಿದರೂ ಅನುಮಾನ. ಹಾಗಂತ ಬಾಯಿಬಿಟ್ಟು ಹೇಳೂ ಇಲ್ಲ, ಕೇಳೂ ಇಲ್ಲ. ಪತ್ನಿಯ ಚಾರಿತ್ರ್ಯ ಮೇಲೆ ಅನುಮಾನ ಹೆಚ್ಚಾದ ಕಾರಣ ಪರೀಕ್ಷಿಸಲು ಮುಂದಾಗಿದ್ದಾನೆ. ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ಪತ್ನಿಯ ಚಾರಿತ್ಯ ಪರೀಕ್ಷಿಸಲು ಭರ್ಜರಿ ಐಡಿಯಾ ಮಾಡಿದ್ದಾನೆ. ಇದರಂತೆ ಪತ್ನಿಗೆ, ನೀವು ಹಾಟ್ ಆಂಟಿ, ಹೈಟ್ ವೈಟೂ ಸೂಪರ್ ಸೇರಿದಂತೆ ಹದ್ದು ಮೀರಿದ ಮೆಸೇಜ್ ಕಳುಹಿಸಲು ಆರಂಭಿಸಿದ್ದಾನೆ. ಆದರೆ ಪತ್ನಿಯನ್ನು ಪರೀಕ್ಷಿಸಲು ಹೋದ ಈತ ತಾನೇ ಲಾಕ್ ಆಗಿದ್ದಾನೆ. ವಿಶೇಷ ಅಂದರೆ ಈ ಕಿರಾತಕ ಪತಿ ಪೊಲೀಸ್ ಕಾನ್ಸ್‌ಸ್ಟೇಬಲ್.

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ರಾಯಬರೇಲಿಯಲ್ಲಿ. ರಾಯಬರೇಲಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿರುವ ರಾಕೇಶ್ ಕುಮಾರ್‌ಗೆ ಪತ್ನಿ ಚಾರಿತ್ಯ ಮೇಲೆ ವಿಪರೀತ ಅನುಮಾನ. ಪತ್ನಿಯ ಶೀಲ ಕುರಿತ ಅನುಮಾನ ಬಗೆಹರಿಸಲು ರಾಕೇಶ್ ಕುಮಾರ್ ಒಂದೆರೆಡು ಇನ್‌ಸ್ಟಾಗ್ರಾಂ ಸೇರಿದಂತೆ ಸೋಶಿಯಲ್ ಮೀಡಯಾ ಖಾತೆ ಕ್ರಿಯೇಟ್ ಮಾಡಿದ್ದಾರೆ. ಗೌರವ್ ಕುಮಾರ್ ಅನ್ನೋ ನಕಲಿ ಇನ್‌ಸ್ಟಾಗ್ರಾಂ ಖಾತೆ ಮೂಲಕ ಪತ್ನಿಗೆ ಮೆಸೇಜ್ ಮಾಡಲು ಆರಂಭಿಸಿದ್ದಾನೆ. 

Latest Videos

undefined

Relationship: ಪತಿಗೆ ದ್ರೋಹ ಮಾಡಿದ ಪತ್ನಿಯರು ಹೇಳೋದೇನು?

ನೀವು ಹಾಟ್, ನೀವು ಸೂಪರ್ ಆಂಟಿ, ನಿಮ್ಮ ನೋಟ, ನಡೆ ಚಂದ, ಕಾಯುತ್ತಿದ್ದೇನೆ ಎಂದೆಲ್ಲಾ ಮೆಸೇಜ್‌ಗಳನ್ನು ಕಳುಹಿಸಿದ್ದಾನೆ. ಈ ಮೆಸೇಜ್‌ಗಳು ಎಲ್ಲೆ ಮೀರಿದೆ. ಇತ್ತ ಅನಾಮಕಿ ವ್ಯಕ್ತಿಯ ಮೆಸೇಜ್‌ಗೆ ಪ್ರತಿಕ್ರಿಯೆ ನೀಡದೆ ಬ್ಲಾಕ್ ಮಾಡಿದ್ದಾರೆ. ಆದರೆ ಬೇರೆ ಬೇರೆ ಖಾತೆಗಳಿಂದ ಮೆಸೇಜ್ ಕಳುಹಿಸಲು ಆರಂಭಿಸಿದ್ದಾನೆ. ಒಂದು ಬಾರಿ ಪತಿಯ ಗಮನಕ್ಕೂ ತಂದ ಪತ್ನಿಗೆ ಈ ಕಿರಿಕಿರಿಯಿಂದ ಮುಕ್ತಿ ಇಲ್ಲದಾಗಿದೆ. ಹೀಗಾಗಿ ನೇರವಾಗಿ ರಾಯಬರೇಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 

ಪತ್ನಿ ಬಳಿ ಸೂಚಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆದರೆ ಪತಿಗೆ ಈ ವಿಚಾರವೇ ಗೊತ್ತಿಲ್ಲ. ಇತ್ತ ಸೈಬರ್ ಪೊಲೀಸರು ನಕಲಿ ಖಾತೆ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ. ನಕಲಿ ಖಾತೆ ಎಲ್ಲಿಂದ ಕಾರ್ಯನಿರ್ವಹಿಸುತ್ತಿದೆ. ಟವರ್ ಲೋಕೇಶನ್ ಸೇರಿದಂತೆ ಒಂದೊಂದೆ ಮಾಹಿತಿ ಕಲೆ ಹಾಕಿದ್ದಾರೆ. ಈ ಮಾಹಿತಿಗಳನ್ನು ಆಧರಿಸಿ ಪೊಲೀಸರು ನೇರವಾಗಿ ಆರೋಪಿಯನ್ನು ಅರೆಸ್ಟ್ ಮಾಡಲು ತೆರಳಿದ್ದಾರೆ. 

ಅರೆಸ್ಟ್ ಮಾಡಲು ಹೋದ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಈ ರೀತಿ ನಕಲಿ ಖಾತೆಯಿಂದ ಮೆಸೇಜ್ ಕಳುಹಿಸುತ್ತಿದ್ದ ಕಿರಾತಕ ಪೊಲೀಸ್ ಪೇದೇ ರಾಕೇಶ್ ಕುಮಾರ್. ಈತನ ವಶಕ್ಕೆ ಪಡೆದ ಪೊಲೀಸರು ಮೊಬೈಲ್ ವಶಪಡಿಸಿಕೊಂಡು ಪರಿಶೀಲಿಸಿದ್ದಾರೆ. ಈ ವೇಳೆ ಪತ್ನಿಯ ಚಾರಿತ್ಯ ಪರೀಕ್ಷಿಸಲು ಈ ರೀತಿ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಆದರೆ ಪೊಲೀಸರಿಗೆ ಹಲವು ಅನುಮಾನಗಳು ಕಾಡಿದೆ.   ಇದೀಗ ಪೊಲೀಸರು ಈ ರಾಕೇಶ್ ಕುಮಾರ್ ವಿರುದ್ಧ ತನಿಖೆ ಚುರುಕುಗೊಳಿಸಿದ್ದಾರೆ. ಈ ವೇಳೆ ರಾಕೇಶ್ ಕುಮಾರ್ ಪತ್ನಿಗೆ ವರದಕ್ಷಿಣೆ ಸೇರಿದಂತೆ ಹಲವು ರೀತಿಯ ಕಿರುಕುಳ ನೀಡಿರುವುದು ಪತ್ತೆಯಾಗಿದೆ. ಇದಕ್ಕಾಗಿ ಪತ್ನಿಗೆ ಬೇರೊಂದು ಸಂಬಂಧವಿದೆ ಎಂದು ಸೃಷ್ಟಿಸುವ ಹುನ್ನಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.  ಪತ್ನಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ದೂರವಾಗುವ ಅಥವ ಆಕೆಯಿಂದ ನಷ್ಟ ಪರಿಹಾರ ಪಡೆದುಕೊಳ್ಳಲು ಪ್ಲಾನ್ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಕಿರಾತಕ ಪೊಲೀಸ್ ಪೇದೆಯ ಐಡಿಯಾ ವರ್ಕೌಟ್ ಆಗಿಲ್ಲ. 
 

click me!