ನಾನು ಚಂದ್ರ, ನೀನೆ ಸೂರ್ಯ ಎಂದ ಶ್ರೀಲೀಲಾ; ಯಾರು ಆ ಲಕ್ಕಿ ಹುಡುಗ ಅಂತ ಕೇಳ್ತಿದ್ದಾರೆ ಫ್ಯಾನ್ಸ್!

First Published Feb 23, 2024, 3:53 PM IST

ಸ್ಯಾಂಡಲ್‌ವುಡ್‌ನ ನಟಿ ಶ್ರೀಲೀಲಾ ಸದ್ಯ ಸೌತ್‌ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಲೇಟೆಸ್ಟ್ ಆಗಿ ಗ್ರ್ಯಾಂಡ್ ಲೆಹಂಗಾ ತೊಟ್ಟು ಮಾದಕ ನೋಟ ಮೀರಿ ಪಡ್ಡೆ ಹುಡುಗರ ಹಾರ್ಟ್‌ಬೀಚ್‌ ಹೆಚ್ಚುವಂತೆ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ನ ನಟಿ ಶ್ರೀಲೀಲಾ ಸದ್ಯ ಸೌತ್‌ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಲೇಟೆಸ್ಟ್ ಆಗಿ ಗ್ರ್ಯಾಂಡ್ ಲೆಹಂಗಾ ತೊಟ್ಟು ಮಾದಕ ನೋಟ ಮೀರಿ ಪಡ್ಡೆ ಹುಡುಗರ ಹಾರ್ಟ್‌ಬೀಚ್‌ ಹೆಚ್ಚುವಂತೆ ಮಾಡಿದ್ದಾರೆ.

ದಕ್ಷಿಣದ ಜನಪ್ರಿಯ ನಟಿ ಶ್ರೀಲೀಲಾ ಅಂದಕ್ಕೆ ಮರುಳಾಗದವರಿಲ್ಲ. ಕನ್ನಡದ 'ಕಿಸ್' ಸಿನಿಮಾ ಖ್ಯಾತಿಯ ಶ್ರೀಲೀಲಾ ಟಾಲಿವುಡ್‌ನ ಹಾಟ್ ಬೆಡಗಿಯರಲ್ಲಿ ಒಬ್ಬರು. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಶ್ರೀಲೀಲಾ ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.

ಕ್ರೀಮ್‌ ಕಲರ್‌ನ ಗ್ರ್ಯಾಂಡ್ ಲೆಹಂಗಾ ಹಾಕಿದ ಶ್ರೀಲೀಲಾ ಮಾದಕ ನೋಟ ಬೀರಿದ್ದಾರೆ. ವೈಟ್‌ನಲ್ಲಿ ಗೋಲ್ಡನ್‌ ಪ್ರಿಂಟ್ ಇರೋ ಸ್ಕರ್ಟ್‌ ಹಾಗೂ ಶೋಲ್ಡರ್‌ ಲೆಸ್‌ ಟಾಪ್‌ನಲ್ಲಿ ಶ್ರೀಲೀಲಾ ಮುದ್ದಾಗಿ ಕಾಣುತ್ತಿದ್ದಾರೆ. 

ಸೂರ್ಯನ ಬೆಳಕಿಗೆ ಒಡ್ಡಿಕೊಂಡು, 'ಮೂನ್ ಗ್ಲೋಸ್ ವೆನ್‌ ಕಿಸ್‌ಡ್‌ ಬೈ ಸನ್‌' ಎಂದು ಶೀರ್ಷಿಕೆ ಹಾಕಿಕೊಂಡಿದ್ದಾರೆ.  ಅಭಿಮಾನಿಗಳು ಈ ಫೋಟೋಸ್‌ಗೆ ಲೈಕ್ಸ್‌ ಹಾಗೂ ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

'ಯು ಆರ್‌ ಗ್ಯಾಲಕ್ಸಿ ಲೀಲಾ' ಎಂದು ಒಬ್ಬರು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಇನ್ನೊಬ್ಬರು, 'ಕ್ವೀನ್ ಆಫ್‌ ಪ್ಯಾರಡೈಸ್' ಎಂದಿದ್ದಾರೆ. 'ಯು ಆರ್ ದಿ ಫುಲ್ ಮೂನ್‌' ಎಂದು ಇನ್ನೊಬ್ಬ ಅಭಿಮಾನಿ ಹೊಗಳಿದ್ದಾರೆ. ಗಾರ್ಜಿಯಸ್‌, ಬ್ಯೂಟಿಕ್ವೀನ್‌, ಕ್ರಶ್ ಆಫ್‌ ಟಾಲಿವುಡ್ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

ನಟಿ ಶ್ರೀಲೀಲಾ ಅವರು ಕನ್ನಡತಿಯಾಗಿದ್ದರೂ ಕೂಡಾ ಈಗ ಟಾಲಿವುಡ್ ನಟಿ ಎಂದೇ ಗುರುತಿಸಿಕೊಂಡಿದ್ದಾರೆ. ನಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ನಟಿ ಇತ್ತೀಚೆಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಶ್ರೀಲೀಲಾ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಶ್ರೀಲೀಲಾ ಅಭಿನಯದ ಸಾಲು ಸಾಲು ಸಿನಿಮಾಗಳು ರಿಲೀಸ್​ ಆಗ್ತಿದೆ. ಭಗವಂತ ಕೇಸರಿ ಹಿಟ್ ಬಳಿಕ ಶ್ರೀಲೀಲಾಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್​ ಆಗಿದೆ.

ಧಮಾಕಾ ಸಿನಿಮಾ ಮೂಲಕ ಟಾಲಿವುಡ್ ಇಂಡಸ್ಟ್ರಿಯಲ್ಲಿ ಫೇಮಸ್​ ಆದ ಶ್ರೀಲೀಲಾ ಈ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಸೈಮಾ ಪ್ರಶಸ್ತಿಯನ್ನು ಪಡೆದರು. ಇತ್ತೀಚೆಗಷ್ಟೇ ಆಕೆ ನಟಿಸಿದ ಸ್ಕಂದ ಬಾಕ್ಸ್ ಆಫೀಸ್​ನಲ್ಲಿ ಆವರೇಜ್ ಹಿಟ್​ ಆಗಿತ್ತು.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ ಶ್ರೀಲೀಲಾ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. ಅಲ್ಲದೇ ಡೇಟ್ಸ್ ಕಾರಣದಿಂದಾಗಿ ಹಲವು ಸಿನಿಮಾ ಆಫರ್‌ಗಳನ್ನು ಬಿಟ್ಟಿದ್ದಾರೆ. ಅದರಲ್ಲಿ ವಿಜಯ್ ದೇವರಕೊಂಡ ಅವರ ಸಿನಿಮಾ ಕೂಡ ಒಂದು.

ಡ್ಯಾನ್ಸ್ ವಿಚಾರದಲ್ಲಿಯೂ ಸಖತ್ ಫೇಮಸ್ ಆಗಿರುವ ಶ್ರೀಲೀಲಾ ಅವರ ನೃತ್ಯ ಎಲ್ಲರಿಗೂ ಇಷ್ಟ. ಸಿನಿಮಾಗಳಲ್ಲಿ ಶ್ರೀಲೀಲಾ ಅವರ ಡ್ಯಾನ್ಸ್ ನೋಡಿ ಜನರು ಫಿದಾ ಆಗುತ್ತಾರೆ. ಇದು ಕೂಡಾ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. 

ಸ್ಯಾಂಡಲ್​ವುಡ್​ನಿಂದ ವೃತ್ತಿ ಜೀವನ ಆರಂಭಿಸಿ, ಬಳಿಕ ಬೇರೆ ಭಾಷೆಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಸ್ಟಾರ್​ ನಟಿಯಾಗಿ ಮಿಂಚುತ್ತಿರುವವರಲ್ಲಿ ಶ್ರೀಲೀಲಾ ಕೂಡ ಒಬ್ಬರು.

click me!