ಬಿಗ್‌ಬಾಸ್‌ ಕನ್ನಡ 11 ಜೈಲಿಗೆ ಕಳುಹಿಸಿದ ಮೋಕ್ಷಿತಾ ವಿರುದ್ಧ ನೀನು ಅಹಂಕಾರಿ ಎಂದು ಸಿಡಿದೆದ್ದ ಧನು!

First Published | Nov 16, 2024, 1:29 AM IST

 ಬಿಗ್‌ಬಾಸ್‌ ಕನ್ನಡ 11 ರಲ್ಲಿ ಈ ವಾರದ ಟಾಸ್ಕ್‌ ಎಲ್ಲಾ ಮುಗಿದಿದೆ. ಭವ್ಯಾ ಅವರು ದೊಡ್ಮನೆಯ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ ಬಳಿಕ ಕಳಪೆ ಮತ್ತು ಉತ್ತಮ ಯಾರು ಎಂಬುದನ್ನು ಆಯ್ಕೆ ಮಾಡಲಾಯ್ತು. ಈ ವಾರ ಸುರೇಶ್ ಅವರು ಉತ್ತಮ ತೆಗೆದುಕೊಂಡರು. ಆದರೆ ಮನೆಯವರೆಲ್ಲ ಸೇರಿ ಧನ್‌ರಾಜ್ ಅವರನ್ನು ಎರಡನೇ ಬಾರಿ ಕಳಪೆ ನೋಡಿ ಜೈಲಿಗೆ ಕಳುಹಿಸಿದ್ದಾರೆ. ಆದರೆ ತನ್ನದೇ ಪಾರ್ಟ್ನರ್‌ ಮೋಕ್ಷಿತಾ ಅವರು ಕಳಪೆ ನೀಡಿದ್ದು, ಧನ್‌ರಾಜ್ ಅವರರಿಗೆ ಬೇಸರ ತರಿಸಿತು. ಇದರಿಂದ ಧನು ಸಿಡಿದೆದ್ದರು. ಮೋಕ್ಷಿತಾರನ್ನು ಅಹಂಕಾರಿ ಎಂದು ಹೇಳಿದರು. ಆದ್ರೆ ಮೋಕ್ಷಿತಾ ಅವರು ತ್ರಿವಿಕ್ರಮ್‌ ಅವರಿಗೆ ಈ ಹಿಂದೆ ಇದೇ ಮೋಕ್ಷಿತಾ ಗೋಮುಖ ವ್ಯಾಘ್ರ ಎಂದು ಕರೆದಿದ್ದನ್ನು ಜನ ನೆನಪಿಸಿಕೊಂಡರು.

ಹಾಗೆ ನೋಡಿದರೆ ಈ ವಾರದ ಟಾಸ್ಕ್‌ ನಲ್ಲಿ ಮೋಕ್ಷಿತಾ ಮತ್ತು ಧನ್‌ರಾಜ್‌ ಜೋಡಿಯ ಆಟ ಚೆನ್ನಾಗಿತ್ತು. 6 ಜನ ಜೋಡಿಗಳಲ್ಲಿ ಮೊದಲ ಸ್ಥಾನ 600 ಅಂಕ ಹನುಮಂತು-ಗೌತಮಿ,  ಭವ್ಯಾ-ತ್ರಿವಿಕ್ರಮ್‌ 500 ಅಂಕ, ಮೂರನೇ ಸ್ಥಾನ ಚೈತ್ರಾ-ಶಿಶಿರ್‌ 350 ಅಂಕ, 4ನೇ ಸ್ಥಾನ ಧನು-ಮೋಕ್ಷಿತಾ 325 ಅಂಕ, ಐದನೇ ಸ್ಥಾನ ಅನುಷಾ-ಸುರೇಶ್ 275 ಅಂಕ,  ಮತ್ತು ಕೊನೆ ಸ್ಥಾನ ಧರ್ಮ-ಐಶ್ವರ್ಯಾ 250 ಅಂಕ. ಕೊನೆಯ ಸ್ಥಾನ ಪಡೆದ 2 ಜೋಡಿಗಳಲ್ಲಿ ಯಾರು ಕಳಪೆಗೆ ಹೋಗದೆ ಇದುವುದೇ ಆಶ್ಚರ್ಯ.  ಮೋಕ್ಷಿತಾ  ತನ್ನದೇ ಜೋಡಿ ಧನುವನ್ನು ಕಳಪೆಗೆ ಹಾಕಿದರು. ಅದಕ್ಕೆ ಮೋಕ್ಷಿತಾ ನೀಡಿದ ಕಾರಣ ಜೋಡಿಯಾಗಿ ಯಾವುದೇ ಸಲಹೆ ಕೊಟ್ಟರು ತೆಗೆದುಕೊಳ್ಳಬೇಕು. ನಾವೇನಾದ್ರೂ ಹೇಳಲು ಹೋದರೆ ಅವರಿಗೆ ಬೇಜಾರು ಆಗುತ್ತದೆ. ನನಗೆ ಅವರು ನಿನ್ನೆ ಹೇಳಿದ್ರು ಹುಡುಗಿ ಗೆಟಪ್‌ ನಲ್ಲಿ ನಾನು ಆಡಿಯನ್ಸ್ ಜೊತೆಗೆ ಹೋಗಿ ಡಾನ್ಸ್ ಮಾಡ್ತೇನೆ. ನಾನು ಅದಕ್ಕೆ ಬೇಡ ಅಂದೆ. ನೋಡಿ ನನಗೆ ಅನ್ನಿಸಿದನ್ನು ನಾನು ಹೇಳ್ತೇನೆ. ಆಗುತ್ತೆ ಅಂದ್ರೆ ಹುಂ ಅನ್ನಿ ಇಲ್ಲಾಂದ್ರೆ ಇಲ್ಲಾ ಅನ್ನಿ ಅಂತ ಗದರಿಸಿದ್ದರು. ನಿಮ್ಮ ಎಫರ್ಟ್ ಇತ್ತು ಆದ್ರೆ ಸ್ಮಾರ್ಟ್‌ನೆಸ್‌ ಇರಲಿಲ್ಲ.
 

ಇನ್ನು ಧನ್‌ರಾಜ್‌ ಅವರು ಸ್ಮಾರ್ಟ್‌ನೆಸ್‌ ಆಗಿ ಆಟ ಆಡಿದ ಹನುಮಂತ ಅವರಿಗೆ ನನ್ನ ಉತ್ತಮ ಎಂದು ಕೊಟ್ಟರು. ಇನ್ನು ಕಳಪೆಗೆ ಕಾರಣ ನೀಡುವಾಗ, ಜೋಡಿ ಅಂತ ಬಂದಾಗ ಸುರೇಶ್ ಅವರು ಅನುಷಾ ಅವರಿಗೆ ಉತ್ತಮ ನೀಡುತ್ತಾರೆ. ಆದ್ರೆ ನನ್ನ ದೌರ್ಭಾಗ್ಯವೇನೋ ನನ್ನ ಜೋಡಿಯೇ ನನಗೆ ಕಳಪೆ ಕೊಡ್ತಾರೆ. ಅವರು ಗದರಿದ್ದಾರೆ ಎಂದು ಹೇಳಿದ್ದಾರೆ. ಆದರೆ ಮೋಕ್ಷಿತಾ ಅವರು ನನ್ನನ್ನು ಎಷ್ಟು ಗದರಿದ್ದಾರೆಂದು ನನಗೆ ಗೊತ್ತು. ಫಸ್ಟ್ ಟಾಸ್ಕ್‌ ನಲ್ಲಿ ಅವರ ಮಾತು ಏನು ಗೊತ್ತಾ? ಬಿಗ್‌ಬಾಸ್‌ ಸುಮ್ನೆ ಜೋಡಿ ಮಾಡಿಲ್ಲ. ಹನುಮಂತು ಅವರನ್ನು ನಿಮಗೆ ಕೊಟ್ಟಿದ್ದಾರೆ. ಧನ್‌ರಾಜ್‌ ಅವರನ್ನು ನನಗೆ ಕೊಟ್ಟಿದ್ದಾರೆ. ಇವರಿಬ್ಬರಲ್ಲಿ ಇನ್ನೋಸೆನ್ಸ್ ಇದೆ. ನಾವು ಅವರನ್ನು ತಿದ್ದಬೇಕು ಅಂತಾರೆ. ಆಗ ಗೌತಮಿ ಅವರು ಹೇಳ್ತಾರೆ. ಇಬ್ಬರು ಕೂಡ ತಿದ್ದಿಕೊಳ್ಳಬೇಕು ಅಂತ. ಅದಕ್ಕೆ ನಾನಂದೆ ಗೌತಮಿ ಅವರು ಹೇಳಿದ್ದು ಚೆನ್ನಾಗಿತ್ತು. ನೀವು ಹೇಳುವ ಮಾತು ನನಗೆ ಅಷ್ಟು ತೆಗೆದುಕೊಳ್ಳಲು ಆಗುತ್ತಿಲ್ಲ ಎಂದೆ.
 

Tap to resize

ಇದು ಮಾತವ್ರಲ್ಲ ತೊಳೆಯಲು ಗ್ಲಾಸ್ ಇಟ್ಟಿದ್ದಾರೆ. ತೊಳೆಯೋಣ ಎಂದಾಗ ಅವರವರ ಕೆಲಸ ಅವರವರು ಮಾಡ್ತಾರೆ ನೀವೇನು ಮಾಡೋದಕ್ಕೆ ಹೋಗಬೇಡಿ ಅನ್ನೋತರ ಮೋಕ್ಷಿತಾ ಹೇಳ್ತಾರೆ. ಟೀಂ ಎಂದಾಗ ಚೆನ್ನಾಗಿರಬೇಕು ಅನ್ನೋ ಕಾರಣಕ್ಕೆ ಅವರು ಹೇಳಿದ್ದೆಲ್ಲವನ್ನು ಸಹಿಸಿಕೊಂಡು ಇದ್ದೆ. ಅದಕ್ಕೆ ಕಳಪೆ ಮೋಕ್ಷಿತಾ ಅವರು ಎಂದು ಧನ್‌ರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು. 

ಮೋಕ್ಷಿತಾ: ಇದಕ್ಕೆ ನಿಮ್ಮತ್ರ ವಾದ ಮಾಡಿದ್ರೆ ನನ್ನನ್ನು ದಡ್ಡರು ಅಂತಾರೆ. ನಾನೇನು ವಾದ ಮಾಡಲ್ಲ.
ಧನ್‌ರಾಜ್‌: ವಾದ ಮಾಡಿದ್ರೆ ದಡ್ಡರು ಅಂತೀರಾ. ಮತ್ತೆ ಅಲ್ಲಿ ಬಂದು ಧನ್‌ರಾಜ್ ನಿಮ್ಮ ಥಾಟ್‌ ಡಿಫರೆಂಟ್ ಅಂತಿರ.
ಮೋಕ್ಷಿತಾ: ಇನ್ನೊಂದು ಹೇಳ್ತೀನಿ ಕಾಮಿಡಿ ಜಾನರ್‌ನಲ್ಲಿ ನಾವು ಆ ಡಾನ್ಸ್ ಮಾಡ್ತಿರ್ಲಿಲ್ಲ ,  ಆ ಹಾಡು ಸೆಲೆಕ್ಟ್ ಮಾಡಿದ್ದು ನೀವೇ. ಆ ಹಾಡಿನ ಕಾನ್ಸೆಪ್ಟ್ ಅರ್ಥ ಆಗಿದ್ದಿದ್ರೆ, ನೀವು ಹೇಳಬೇಕಾಗಿತ್ತು. ಯಾರಾದ್ರೂ ನನಗೂ ಒಬ್ಬ ಗೆಳೆಯ ಬೇಕು ಅಂತ ಫೋಟೋ ಫ್ರೇಮ್‌ ಹಿಡ್ಕೊಂಡು ನೋಡ್ತಾರಾ ಯಾರಾದ್ರೂ. ಕಸ ಗುಡಿಸಿಕೊಳ್ಳುವವರು ಗುಡಿಸಿಕೊಳ್ತಾರೆ ಎಂದೆ. ಅದರಲ್ಲಿ ತಪ್ಪೇನು. ಸಿಲ್ಲಿ ರೀಸನ್‌.

ಧನು: ಸಿಲ್ಲಿ ಅನ್ಬೇಡಿ
ಮೋಕ್ಷಿತಾ: ನನಗದು ಸಿಲ್ಲಿನೇ
ಧನು: ಆಯ್ತಾ? ಒಂದು ಟೀಂ ಅಂತ ಬಂದಾಗ ಒಂದು ಕಾಡಿನೇಷನ್‌ ಇರುತ್ತೆ.
ಮೋಕ್ಷಿತಾ:ನಿಮ್ಮ ಜೊತೆ ಕಾಡಿನೇಷನ್‌ ಇಲ್ಲ ಅಂತ ಎಲ್ಲರಿಗೂ ಗೊತ್ತಾಗಿದೆ.
ಧನು: ನಾನು ಮಾತನಾಡುವಾಗ ಯಾಕೆ ಮಾತಾಡ್ತೀರಾ? ಅರ್ಥ ಆಯ್ತಾ?
ಮೋಕ್ಷಿತಾ: ಹಾ, ಅರ್ಥ ಆಯ್ತು.
ಧನ್‌ರಾಜ್: ಟೀಂ ಅಂತ ಬಂದಾಗ ಕಾಡಿನೇಷನ್‌ ಇರುತ್ತೆ. ಆ ಕಾಡಿನೇಷನ್‌ ನಾನು ಅವರತ್ರ ನೋಡಿಲ್ಲ. ಟೀಂ ಅಂತ ಬಂದಾಗ ಮೋಕ್ಷಿತಾ ಅನ್ನೋ ಹೆಸರು ಬದಲು ನಾವು ಅನ್ನೋ ಹೆಸರು ಬರ್ತಿದ್ರೆ. ನನಗೆಷ್ಟು ಖುಷಿಯಾಗ್ತಿತ್ತು. ಆ ರೀತಿ ಇರಲೇ ಇಲ್ಲ. ಪ್ರತಿಯೊಂದು ವಿಷ್ಯದಲ್ಲಿ ಟೀಚರ್‌ ಆಗಲು ಹೋಗಬೇಡಿ.
ಮೋಕ್ಷಿತಾ: ಹೌದು ನೀವು ಸ್ಟೋಡೆಂಟ್ ಆಗಿದ್ರಿ, ನಾನು ಟೀಚರ್ ಆಗಿದ್ದೆ.
ಧನ್‌ರಾಜ್: ನೀವು ಕಿಚನ್‌ ಡಿಪಾರ್ಟ್‌ಮೆಂಟ್‌ ಲಿ ಇದ್ದಾಗಲೇ ಗೊತ್ತಾಯ್ತು. ನಿಮ್ಮ ಜೊತೆಗೆ ಹೇಗಿರಬೇಕು ಅಂತ. ಅರ್ಥ ಆಯ್ತಾ,  ಅಂತ ಊರು ತುಂಬಾ ಹೇಳ್ತೀರಿ. ನಾನು ಸುಪೀರಿಯರ್‌, ನಾನು ಅಹಂ ,ಅಹಂಕಾರ ಇದೆ ನಿಮಗೆ. 
ಮೋಕ್ಷಿತಾ: ಹೌದು, ಏನೀಗ?
ಧನ್‌ರಾಜ್: ಏನೀವಾಗ ಅದನ್ನು ಕಟ್ಟಿಕೊಂಡು ಏನಾದ್ರೂ ಮಾಡ್ರಿ.ಮೊದಲು ಟೀಂ ಹೇಗೆ ಬಿಲ್ಡ್ ಮಾಡೋದನ್ನು ಕಲಿ.

ಆದ್ರೆ ಇಷ್ಟು ವಾದ ಪ್ರತಿವಾದದ ನಂತರ ಬಂದ ನೂತನ ಕ್ಯಾಪ್ಟನ್‌ ಭವ್ಯಾ ಕೂಡ, ನಾನು ಕಳಪೆ ಧನ್‌ರಾಜ್‌ ಅವರಿಗೆ ಕೊಡ್ತೇನೆ ಅಂದ್ರು. ನೀವು ಹೇಳಿದ್ರಿ ಮೋಕ್ಷಿತಾ ಅವರು ಗದರಿ ಕೂರಿಸುತ್ತಿದ್ದರೆಂದು, ನೀವ್ಯಾಕೆ ಗದರಿ ಕೂತ್ರಿ. ನೀವು ಧ್ವನಿ ಎತ್ತಬಹುದಿತ್ತಲ್ಲ. 

ಇದಕ್ಕೆ ಭವ್ಯಾಗೆ ಉತ್ತರ ಕೊಟ್ಟ ಧನ್‌ರಾಜ್‌, ನೋಡಿ ನಾನು ಈಗ ಹೇಳಿದ ವಿಷ್ಯದ ಬಗ್ಗೆ ಇಟ್ಟುಕೊಂಡು ಕಳಪೆ ಕೊಡೋದಾದ್ರೆ, ಇದಕ್ಕೆ ಕ್ಲಾರಿಟಿ ಕೊಡಿ ಎಂದರು. ಇದು ಉಗ್ರಂ ಮಂಜು ಅವರಿಗೆ ಕೂಡ ಇಷ್ಟವಾಗಿ ನೀನು ಈಗ ಮಾತನಾಡಿದ್ದು ಇಷ್ಟವಾಯ್ತು ಧನು ಅಂದು ಚಪ್ಪಾಳೆ ತಟ್ಟಿ ಅಭಿನಂದಿಸಿದರು. 

ತದ ನಂತರ ಭವ್ಯ ಅವರು ಧನ್‌ರಾಜ್‌ ಅಣ್ಣ ಈ ಮನೆಯಲ್ಲಿ ಎಲ್ಲೂ ಕಾಣಿಸಲಿಲ್ಲ, ಬೆಳಗ್ಗೆ ಜಿಮ್‌ ಗೆ ಯಾಕೆ ಬಂದಿಲ್ಲ ಎಂದಾಗ ಬೆಲ್ಟ್ ಕಟ್ಟಿದ್ದಾರೆಂದು ರೀಸನ್ ಕೊಟ್ರಿ. ಆಗ ಮೋಕ್ಷಿತಾ ಅವರನ್ನು ಕರೆದುಕೊಂಡು ಬನ್ನಿ ಅಂತ ಹೇಳಿದೆ ನೀವು ಬರಬಹುದಲ್ಲ ಎಂದು ಭವ್ಯಾ ಹೇಳಿದ್ದಕ್ಕೆ ಮೋಕ್ಷಿತಾ ಅವರು ವರ್ಕ್ಔಟ್ ಮಾಡಲು ಬರಲ್ಲ ಎಂದಿದ್ದರು, ನೆಕ್ಸ್ಟ್ ರೀಸನ್‌ ಹೇಳಿ ಎಂದು ಧನು ಹೇಳಿದ್ರು. ಅದಕ್ಕೆ ಭವ್ಯಾ ನೀವು ಹನುಮಂತು ಜೊತೆಗೆ ಬಿಟ್ಟರೆ ಹೆಚ್ಚು ಎಲ್ಲಿ ಕೂಡ ಮಾತನಾಡದೆ ಇದ್ದರಿ ಎಂದರು. ಇದಕ್ಕೆ ನಿಮ್ಮ ಜೊತೆಗೆ ನಾನು ಮಾತನಾಡಿದ್ದೇನೆ. ಸುಳ್ಳು ಹೇಳಬೇಡಿ ಎಂದು ಧನ್‌ರಾಜ್‌ ಉತ್ತರ ಕೊಟ್ಟರು.
 

ಇನ್ನು ಜೈಲಿಗೆ ಹೋದ ಧನ್‌ರಾಜ್‌ ಅಸಲಿ ಆಟ ಈಗ ತೋರಿಸ್ತೇನೆ. ಕ್ಯಾಪ್ಟನ್‌ ರಾಗಿ ಗಂಜಿ ನಾನು ತಿನ್ನುವುದಿಲ್ಲ. ನನಗೆ ಬೇಡ. ಇಲ್ಲಿ ತುಂಬಾ ಜನ ಕೊಟ್ಟಿದ್ದಾರಲ್ಲ. ಅದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಜೈಲಿಂದ ರಿಲೀಸ್‌ ಆಗ್ಲಿ ನಾನು ಏನು ಅಂತ ತೋರಿಸುತ್ತೇನೆ ಎಂದು ಧರ್ಮ ಮತ್ತು ಸುರೇಶ್ ಬಳಿ ಹೇಳಿದ್ರು. ನೀನು ಈ ಸಲ ಎಲ್ಲೂ ಕಾಣಿಸಿಲ್ಲ ಎಂದು ಸುರೇಶ್ ಹೇಳಿದಾಗ, ಹೋಗಲು ಅವರು (ಮೋಕ್ಷಿತಾ) ಬಿಟ್ರೆ ಅಲ್ವಾ? ಕೇಳಿ ಅವರಿಗೆ. ಎಲ್ಲದಕ್ಕೂ ಗದರಿತ್ತಾರೆ. ಅವರು ಇನೋಸೆನ್ಸ್ ಅವರಿಗೆ ಏನೂ ಬರಲ್ಲ ಅಂದ್ರೆ ಏನ್ರಿ ಅರ್ಥ. ನಾವೇನು ಕತ್ತೆ ಕಾಯೋಕೆ ಬಂದಿದ್ದೀವಾ ಇಲ್ಲಿ. 

ಜೈಲಿನ ಬಳಿ ಇದ್ದ ತ್ರಿವಿಕ್ರಮ್‌, ಸುರೇಶ್, ಧರ್ಮ, ಭವ್ಯಾ ಅವರು ಬೇಡ ಧನು ಕೋಪ ಕಂಟ್ರೋಲ್‌ ಮಾಡು ಎಂದು ಸಮಾಧಾನ ಮಾಡಿದರು. ಆದ್ರೆ ಧನು ಕೋಪ ಬರುತ್ತೆ ನಂಗೆ, ನಾನು ಇಲ್ಲಿವರೆಗೂ ಬಿಗ್‌ಬಾಸ್‌ ಮನೇಲಿ ಹೊರಗಡೆ ಹೋದ ಮೇಲೆ ಒಂದು ಒಳ್ಳೆ ರೀತಿಯಲ್ಲಿ ಇರೋಣ ಅಂದುಕೊಂಡೆ ಆದ್ರೆ ಆಕೆ.... ಎಂದು ತುಂಬಾ ಕೋಪದಿಂದ ಹೇಳಿದರು. ಸರಿ ಅವರಿಗೆ ಟೈಂ ಕೋಡೋಣ ಹನುಮಂತು ಬಾ ಎಂದು ಎಲ್ಲರೂ ಕರೆದಾಗ ಹನುಮಂತು ನಂಗೆ ಬೇಕು. ಹನುಮಂತು ಬೇಕು. ನೀವ್ಯಾರು ಇರಬೇಡಿ ಎಂದರು. ಬಳಿಕ ಹನುಮಂತು ಸಮಾಧಾನ ಮಾಡಿ, ನೀನ್ಯಾಕೆ ಬೇಜಾರು ಮಾಡಿಕೊಂತಿ ಹುಲಿ, ಅವರು ಅವರದ್ದು ಹೇಳಿದ್ದಾರೆ. ನೀನು ನಿನ್ನದು ಹೇಳಿದೆ. ನೀನು ಈಗ ಮಾತನಾಡಿದ್ದನ್ನು ಮೂರುವಾರ ಹಿಂದೆ ಮಾತನಾಡಿದ್ದರೆ, ಅವರ್ಯಾರು ನಿಂಗೆ ಹೀಗೆ ಮಾಡುತ್ತಿರಲಿಲ್ಲ. ಏನೂ ಮಾತನಾಡಲ್ಲ ಅಂತ ನಿನಗೇ ಮಾಡ್ತಾರಾ ಅಷ್ಟೇ. 

ಎಲ್ಲರೂ ಬಂದು ನೀನು ಸ್ಟ್ರಾಂಗ್ ಇದ್ದೀ, ಹೆಲ್ತ್ ಇದ್ದೀ, ಚೆನ್ನಾಗಿ ಆಡಿದ್ದಿ ಅಂತಾರೆ. ಇನ್ನೋಬ್ರು ಅನು ಇನ್ವಾಲ್ ಆಗೋದಿಲ್ಲ. ಇನ್ವಾಲ್‌ ಆಗೋದಿಲ್ಲ. ಅದೇ ಶಿಶಿರ್ ಮೊನ್ನೆ ಎಂಟಟೈನ್‌ಮೆಂಟ್‌ ಬಂದಾಗ ಧನು ನಿಮ್ಮಷ್ಟು ಎಂಟಟೈನ್‌ಮೆಂಟ್‌ ಯಾರೂ ಇಲ್ಲ ಹೇಳ್ತಾರೆ. ಎಲ್ಲರ ಜೊತೆಗೂ ಮಾತಾಡ್ತಿನಿ. ಅವರೂ ಮಾತಾಡ್ತಾರೆ ಆದ್ರೆ ಇರೋದು ಹನುಮಂತ ಜೊತೆಗೆ.  ನಾನು ನಂಬೋದು ನಿಮ್ಮನ್ನು, ಸುರೇಶ್ ಅನ್ನು ಮಾತ್ರ ಹನುಮಂತಣ್ಣ. 
 

ಇನ್ನು ಇತ್ತ ಕಡೆ ಅಹಂಕಾರ ಎಂದು ಧನ್‌ರಾಜ್‌ ಪದ ಬಳಕೆ ಮಾಡಿದ್ದು ಇಷ್ಟವಾಗದೆ ನನಗೆ ಅಹಂಕಾರ ಇದೆಯಾ ಶಿಶಿರ್‌ ಎಂದು ಮೋಕ್ಷಿತಾ ಕೇಳಿದರು. ಅಹಂಕಾರ ಅಂದ್ರೆ ನೀವೇ ಹೇಳಿ ಡಾಮಿನೇಟ್‌ ಮಾಡ್ತೀನಾ ನಾನು ಎಂದು ಹೇಳಿಕೊಂಡು ಅತ್ತರು. ಆದ್ರೆ ವೀಕ್ಷಕರ ಅಭಿಪ್ರಾಯ ಅಹಂಕಾರ ಇರುವಾ ಆ ಪದ ಬಳಕೆ ಮಾಡಿದ್ದು ಸರಿ ಇದೆ. ಅದೇ ನೀವು ಗೋಮುಖ ವ್ಯಾಘ್ರ ಎಂಬ ಪದವನ್ನು ತ್ರಿವಿಕ್ರಮ್‌ ವಿರುದ್ಧ ಬಳಸಿದ್ದು ಎಷ್ಟು ಸರಿ ಎಂದು ಕೇಳುತ್ತಿದ್ದಾರೆ.

Latest Videos

click me!