ಬಿಗ್‌ಬಾಸ್‌ ಕನ್ನಡ 11: ಧನರಾಜ್‌ನನ್ನು ಜೈಲಿಗೆ ಕಳಿಸಿದ ಮೋಕ್ಷಿತಾ ವಿರುದ್ಧ ತಿರುಗಿಬಿದ್ದ ವೀಕ್ಷಕರು

Published : Nov 16, 2024, 02:13 AM ISTUpdated : Nov 16, 2024, 09:35 AM IST
ಬಿಗ್‌ಬಾಸ್‌ ಕನ್ನಡ 11:  ಧನರಾಜ್‌ನನ್ನು ಜೈಲಿಗೆ ಕಳಿಸಿದ ಮೋಕ್ಷಿತಾ ವಿರುದ್ಧ ತಿರುಗಿಬಿದ್ದ ವೀಕ್ಷಕರು

ಸಾರಾಂಶ

ಬಿಗ್‌ಬಾಸ್‌ ಕನ್ನಡ 11ರಲ್ಲಿ ಧನ್‌ರಾಜ್‌ಗೆ ಕಳಪೆ ಸಿಕ್ಕಿದ್ದು ಚರ್ಚೆಗೆ ಗ್ರಾಸವಾಗಿದೆ. ಮೋಕ್ಷಿತಾ ಅವರನ್ನು ಊಸರವಳ್ಳಿ ಎಂದು ಕರೆಯಲಾಗುತ್ತಿದ್ದು, ಧನ್‌ರಾಜ್‌ ಅವರ ಉತ್ತರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಬಿಗ್‌ಬಾಸ್‌ ಕನ್ನಡ 11ರ ಈ ವಾರದ ಮನೆಯ ಕಳಪೆ ಧನ್‌ರಾಜ್‌ ಪಾಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಗೇಮ್‌ ನಲ್ಲಿ ಹೀನಾಯವಾಗಿ ಸೋತ ತಂಡಗಳಿಗೆ ಸಿಗದ ಕಳಪೆ ಧನ್‌ರಾಜ್ ಗೆ ಹೇಗೆ ಸಿಕ್ಕಿತ್ತು, ಜೊತೆಗೆ ಮೋಕ್ಷಿತಾ ಅವರು ಊಸರವಳ್ಳಿ ಎಂದೆಲ್ಲ ಕಮೆಂಟ್‌ ಬರುತ್ತಿದೆ. ಧನ್‌ರಾಜ್‌ ಮೋಕ್ಷಿತಾ ಅವರಿಗೆ ನೀಡಿದ ಉತ್ತರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
 
ಹಾಗೆ ನೋಡಿದರೆ ಈ ವಾರದ ಟಾಸ್ಕ್‌ ನಲ್ಲಿ ಮೋಕ್ಷಿತಾ ಮತ್ತು ಧನ್‌ರಾಜ್‌ ಜೋಡಿಯ ಆಟ ಚೆನ್ನಾಗಿತ್ತು. 6 ಜನ ಜೋಡಿಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 4 ನೇ ಜೋಡಿಯಾಗಿತ್ತು. ಮೊದಲ ಸ್ಥಾನ 600 ಅಂಕ ಪಡೆದ ಹನುಮಂತು-ಗೌತಮಿ, ಎರಡನೇ ಸ್ಥಾನ ಭವ್ಯಾ-ತ್ರಿವಿಕ್ರಮ್‌ 500 ಅಂಕ, ಮೂರನೇ ಸ್ಥಾನ ಚೈತ್ರಾ-ಶಿಶಿರ್‌ 350 ಅಂಕ, 4ನೇ ಸ್ಥಾನ ಧನು-ಮೋಕ್ಷಿತಾ 325 ಅಂಕ, ಐದನೇ ಸ್ಥಾನ ಅನುಷಾ-ಸುರೇಶ್ 275 ಅಂಕ,  ಮತ್ತು ಕೊನೆ ಸ್ಥಾನ ಧರ್ಮ-ಐಶ್ವರ್ಯಾ 250 ಅಂಕ. ಕೊನೆಯ ಸ್ಥಾನ ಪಡೆದ 2 ಜೋಡಿಗಳಲ್ಲಿ ಯಾರು ಕಳಪೆಗೆ ಹೋಗದೆ ಇದುವುದೇ ಆಶ್ಚರ್ಯ ತರಿಸಿದೆ. ಆದರೆ ಮೋಕ್ಷಿತಾ ಅವರು ತನ್ನದೇ ಜೋಡಿ ಧನುವನ್ನು ಕಳಪೆಗೆ ಹಾಕಿದರು. 

ಬಿಗ್‌ಬಾಸ್‌ ಮನೆಯ ಬಾತ್‌ರೂಂ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಚೈತ್ರಾ ಕುಂದಾಪುರ, ಆಸ್ಪತ್ರೆಗೆ ದಾಖಲು

ಇನ್ನು ಇತ್ತ ಕಡೆ ವಾದ ಪ್ರತಿವಾದ ನಡೆದು ಅಹಂಕಾರ ಎಂದು ಧನ್‌ರಾಜ್‌ ಪದ ಬಳಕೆ ಮಾಡಿದರು. ಇದು ಇಷ್ಟವಾಗದೆ ನನಗೆ ಅಹಂಕಾರ ಇದೆಯಾ ಶಿಶಿರ್‌ ಎಂದು ಮೋಕ್ಷಿತಾ ಕೇಳಿದರು. ಅಹಂಕಾರ ಅಂದ್ರೆ ನೀವೇ ಹೇಳಿ ಡಾಮಿನೇಟ್‌ ಮಾಡ್ತೀನಾ ನಾನು ಎಂದು ಹೇಳಿಕೊಂಡು ಅತ್ತರು. ಆದ್ರೆ ವೀಕ್ಷಕರ ಅಭಿಪ್ರಾಯ ಅಹಂಕಾರ ಇರುವಾಗ ಮೋಕ್ಷಿತಾಗೆ ಈ ಪದ ಬಳಕೆ ಮಾಡಿದ್ದು ಸರಿ ಇದೆ. ಅದೇ ನೀವು ಗೋಮುಖ ವ್ಯಾಘ್ರ ಎಂಬ ಪದವನ್ನು ತ್ರಿವಿಕ್ರಮ್‌ ವಿರುದ್ಧ ಬಳಸಿದ್ದು ಎಷ್ಟು ಸರಿ ಎಂದು ಕೇಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಕಮೆಂಟ್‌ ಗಳು ಈ ಬಗ್ಗೆ ಬರುತ್ತಿದೆ. ಮೀಮ್ಸ್ ಗಳು ಕ್ರಿಯೇಟ್ ಆಗಿದೆ. ಇಲ್ಲಿ ಈ ಸನ್ನಿವೇಶದ ಬಗ್ಗೆ ವೀಕ್ಷಕರ ಕಮೆಂಟ್‌ ಗಳನ್ನು ಈ ಕೆಳಗೆ  ನೀಡಲಾಗಿದೆ.

ಅಹಂಕಾರ ಮಿತಿ ಮೀರಿದೆ ಈ ಮೋಕ್ಷಿತಗೆ. ಅವಳು ಯಾರ ಬಗ್ಗೆ ಏನ್ ಬೇಕಾದ್ರೂ ಬೊಗಳಬಹುದು, ಬೇರೆಯವರು ಅವಳ ಬಗ್ಗೆ ನಿಜ ಹೇಳಿದ್ರೆ ಇದಕ್ಕೆ ಉರಿಯುತ್ತೆ. ನಿಜವಾದ ನಾಲಾಯಕ್ ಇವಳೇ. 

ಥೂ ದರಿದ್ರದವಳೆ ಪಾಪ ಅವನು ಏನು ಮಾತಡಲ್ಲ ಅಂತ ಬಾಯಿಗೆ ಬಂದಾಗೆ ಮಾತಾಡ್ತಾತಿಯ ಮೊದಲು ನೀನು ಯಾವ task ಆಡಿ ಗೆದ್ದಿದಿಯ ಅಂತ ಅವನ ಮೇಲೆ ಕೂಗಡುತಿಯ ಸುದೀಪ್ ಸರ್ ಮೊದಲು ಈ gyangu ಬಗ್ಗೆ class ತಗೋಳಿ ಇವರು ಅಡಿದ್ದೆ ಆಟ ಆಗೋಗಿದೆ ಬಿಗ್ ಬಾಸ್ ಮನೇಲಿ

ಗುಂಪುಗಾರಿಕೆ ಮಾಡ್ಕೊಂಡು ಗೇಮ್ ಆಡ್ತಾ ಇರೋದು ಮೋಕ್ಷಿತ ಅಹಂಕಾರದ ಹೆಣ್ಣು ಏನ್ ಗೇಮ್ ಆಡ್ತಾ ಇದ್ದೀರಾ? ಬರಿ ಇನ್ನೊಬ್ಬರ ಬಗ್ಗೆ ಡಾಮಿನೆಟ್ ಮಾಡೋದು ಅದು ಬಿಟ್ರೆ ಇನ್ನೇನು ಆಡ್ತಾ ಇಲ್ಲ ಫಸ್ಟು ಎಲಿಮಿನೇಟ್ ಆಗ್ಬೇಕು ಮೋಕ್ಷಿತ

ಮೋಕ್ಷತಾ ಗೌತಮಿ ಉಳಿದವರಿಗೆ ಹೇಗೆ ಬೇಕಾದರೂ ಕಾಮೆಂಟ್ ಕೊಡ್ತಾರೆ. ತಮಗೆ ಬಂದಾಗ ಅಳಲಿಕ್ಕೆ ಶುರು.. ಧನು ಜೆಂಟಲ್ ಮನ್ ಆಟಗಾರ. ನಿಯತ್ತು ಇದೆ‌. ಈ ಕಿತ್ತೊದವರಿಗೆ ಏನಾಗಿದೆ ಪದೆ,ಪದೆ ಧನರಾಜನಿಗೆ ಕಳಪೆ ಕೊಡಲು ಈ ಮನೆಯಲ್ಲಿ ಇವನನ್ನ ಬಿಟ್ರೆ ಈ ಗುಳ್ಳೆ ನರಿ ಮೋಕ್ಷಿತನೆ ಕಳಪೆ.

ಮೋಕ್ಷಿತ ಅಹಂಕಾರಿನೇ ಸರಿಯಾಗಿ ಹೇಳಿದ್ದೀರಾ ಧನರಾಜ್. ಟಾಸ್ಕ್ ತುಂಬಾ ಚೆನ್ನಾಗಿ ಆಡಿದ್ದೀರಾ. ಅಲ್ಲಿ ಬೇರೆಯವರ ಹೆಸರು ತಗೊಳ್ಳ ಧೈರ್ಯ ಯಾರಿಗೂ ಇಲ್ಲ ಅದಕ್ಕೆ ನಿಮ್ಮ ಹೆಸರು ತಗೊಂಡ್ರು ಅಷ್ಟೇ

ಧನರಾಜ್ ಪಾಪ, ತಿರುಗಿ ಮಾತಾಡಲ್ಲ ಅಂತಾ ಕೊಬ್ಬು ಇವಮ್ಮಂಗೆ. ಸುಮ್ನೆ ಕಳಪೆ ಕೊಡೋದು ಪ್ರತಿ ವಾರ. ದೊಡ್ಡದಾಗಿ ಕೋಗೋದು, ಗುಂಪು ಕಟ್ಟಿಕೊಂಡು ಆಡೋದು , ಅತ್ತು ಸಿಂಪಥಿ ಗಿಟ್ಟಿಸ್ಕೊಳ್ಳೋದು ಅಷ್ಟೇ ಜೀವನ. ಲಾಸ್ಟ್ week ಸುಮ್ನೆ ತ್ರಿವಿಕ್ರಮ್ ನಾ ಟಾರ್ಗೆಟ್ ಮಾಡಿದ್ಲು, ಈಗ ಧನರಾಜ್. ಕಂತ್ರೀ ಮಂಜ ಆ್ಯಂಡ್ ಗ್ಯಾಂಗ್ ಯಾವಾಗ ಹೊರಗೆ ಹೋಗ್ತಾರೋ ನೋಡ್ತಾ ಇದ್ದೀನಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ