
ಬಿಗ್‌ಬಾಸ್ ಕನ್ನಡ 11 ರಲ್ಲಿ ಈ ವಾರದ ಟಾಸ್ಕ್ ಎಲ್ಲಾ ಮುಗಿದಿದೆ. ಭವ್ಯಾ ಅವರು ದೊಡ್ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಬಳಿಕ ಮನೆಯ ಬಾತ್‌ರೂಂ ನಲ್ಲಿ ಚೈತ್ರಾ ಕುಂದಾಪುರ ಅವರು ಕುಸಿದು ಬಿದ್ದಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಪ್ರಜ್ಞೆ ಬರಲಿಲ್ಲ. ನಂತರ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಢು ಹೋಗಲಾಗಿದೆ. ನಿಜಕ್ಕೂ ಏನಾಗಿದೆ ಎಂಬುದು ಬಿಗ್‌ಬಾಸ್ ಹೇಳಿದ ಮೇಲಷ್ಟೇ ತಿಳಿಯಲಿದೆ.
ಬಿಗ್‌ಬಾಸ್ ಕನ್ನಡ 11 ಜೈಲಿಗೆ ಕಳುಹಿಸಿದ ಮೋಕ್ಷಿತಾ ವಿರುದ್ಧ ನೀನು ಅಹಂಕಾರಿ ಎಂದು ಸಿಡಿದೆದ್ದ ಧನು!
ವಾರದ ಟಾಸ್ಕ್‌ಗಳೆಲ್ಲ ಮುಗಿದ ಬಳಿಕ ಯಾರೂ ಇಲ್ಲಾದಾಗ ಮನೆಯ ಬಾತ್ ರೂಂ ನಲ್ಲಿ ಚೈತ್ರಾ ಕುಂದಾಪುರ ಅವರು ಕುಸಿದು ಬಿದ್ದಿದ್ದು, ಕೂಡಲೇ ಮೋಕ್ಷಿತಾ ಪೈ ಮತ್ತು ಗೌತಮಿ ಜಾದವ್ ಅವರನ್ನು ಚೈತ್ರಾ ಅವರ ನೆರವಿಗೆ ಧಾವಿಸಿ ಎಂದು ಬಿಗ್‌ಬಾಸ್ ಕಳುಹಿಸಿದ್ದಾರೆ. ನೆಲದ ಮೇಲೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಬಿದ್ದಿದ್ದದ ಅವರನ್ನು ಎತ್ತಲು ಪ್ರಯತ್ನಿಸಿದರು. ತಕ್ಷಣ ಎಲ್ಲಾ ಸದಸ್ಯರು ಒಂದಾಗಿ ಮುಖದ ಮೇಲೆ ನೀರು ಚಿಮುಕಿಸಿದರೂ ಅವರು ಕಣ್ಣು ತೆರೆಯಲಿಲ್ಲ.
ತ್ರಿವಿಕ್ರಮ್ ಅವರು ಚೈತ್ರಾ ಅವರನ್ನು ಎತ್ತಿಕೊಂಡು ಹೋಗಿ ಕನ್ಫೆಷನ್ ರೂಮ್ ನಲ್ಲಿ ಮಲಗಿಸಿದ್ದಾರೆ. ಚೈತ್ರಾ ಪರಿಸ್ಥಿತಿ ಗಂಭೀರವಾಗಿದ್ದಂತೆ ಕಾಣಿಸಿದೆ. ಆದರೆ ಬೆಳಗ್ಗೆಯಿಂದ ಚೈತ್ರಾ ಅವರು ತಿನ್ನದೆ ಉಪವಾಸ ಮಾಡುತ್ತಿದ್ದರು ಎಂದು ಮನೆ ಮಂದಿ ಮಾತನಾಡಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು.
ಕಳಪೆ ಮತ್ತು ಉತ್ತಮ ಯಾರು ಎಂಬುದನ್ನು ಆಯ್ಕೆ ಮಾಡಲಾಯ್ತು. ಈ ವಾರ ಸುರೇಶ್ ಅವರು ಉತ್ತಮ ತೆಗೆದುಕೊಂಡರು. ಆದರೆ ಮನೆಯವರೆಲ್ಲ ಸೇರಿ ಧನ್‌ರಾಜ್ ಅವರನ್ನು ಎರಡನೇ ಬಾರಿ ಕಳಪೆ ನೋಡಿ ಜೈಲಿಗೆ ಕಳುಹಿಸಿದ್ದಾರೆ. ಆದರೆ ತನ್ನದೇ ಪಾರ್ಟ್ನರ್ ಮೋಕ್ಷಿತಾ ಅವರು ಕಳಪೆ ನೀಡಿದ್ದು, ಧನ್‌ರಾಜ್ ಅವರರಿಗೆ ಬೇಸರ ತರಿಸಿತು. ಇದರಿಂದ ಧನು ಸಿಡಿದೆದ್ದರು. ಮೋಕ್ಷಿತಾರನ್ನು ಅಹಂಕಾರಿ ಎಂದು ಹೇಳಿದರು. ಆದ್ರೆ ಮೋಕ್ಷಿತಾ ಅವರು ತ್ರಿವಿಕ್ರಮ್ ಅವರಿಗೆ ಈ ಹಿಂದೆ ಇದೇ ಮೋಕ್ಷಿತಾ ಗೋಮುಖ ವ್ಯಾಘ್ರ ಎಂದು ಕರೆದಿದ್ದನ್ನು ಜನ ನೆನಪಿಸಿಕೊಂಡರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.