ಕನ್ನಡ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಸ್ಟೈಲಿಶ್ ಡ್ರೆಸ್‌ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಸದ್ಯ ಬಿಕಿನಿ ಹಾಕ್ಕೊಂಡು ಪಡ್ಡೆ ಹುಡುಗರ ನಿದ್ದೆಕೆಡಿಸಿದ್ದಾರೆ.
ಅಮೃತಧಾರೆ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಇನ್‌ಸ್ಟಾಗ್ರಾಂನಲ್ಲಿ ಯಾವಾಗಲೂ ಆಕ್ಟಿವ್ ಆಗಿರ್ತಾರೆ. ಮಾಡರ್ನ್ ಹಾಗೂ ಟ್ರೆಡಿಶನಲ್ ಲುಕ್‌ನಲ್ಲಿ ತಮ್ಮ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ನಟಿ ಯೆಲ್ಲೋ ಮತ್ತು ಕಾಫಿ ಕಲರ್‌ನ ಬಿಕಿನಿಯಲ್ಲಿ ಮಿಂಚಿದ್ದಾರೆ.
ಸೀರಿಯಲ್‌ನಲ್ಲಿ ಇರುವಂತೆಯೇ ರಿಯಲ್ ಲೈಫ್‌ನಲ್ಲಿಯೂ ಸಖತ್ ಮಾಡರ್ನ್. ಯೆಲ್ಲೋ ಮತ್ತು ಬ್ಲ್ಯಾಕ್ ಕಲರ್‌ನ ಸ್ವಿಮ್ ವೇರ್‌ನಲ್ಲಿ ಸಾರಾ ತಮ್ಮ ಮೈಮಾಟವನ್ನು ತೋರಿಸಿದ್ದಾರೆ. ನೆಟ್ಟಿಗರು ಬ್ಯೂಟಿ, ಗಾರ್ಜಿಯಸ್, ಸೆಕ್ಸೀ, ವಾವ್, ಹಾಟ್, ಸ್ವೀಟ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಮತ್ತೆ ಕೆಲ ಅಭಿಮಾನಿಗಳು, ಇಷ್ಟು ಚಿಕ್ಕ ಬಟ್ಟೆ ಹಾಕ್ಬೇಡಿ, ತುಂಬಾ ಚಿಕ್ಕ ಬಟ್ಟೆ ಇದು ಯಾಕೆ ಹಾಕಿದ್ದೀರಾ ಎಂದೆಲ್ಲಾ ಕಮೆಂಟ್‌ನಲ್ಲಿ ತಿಳಿಸಿದ್ದಾರೆ. ಮತ್ತೆ ಕೆಲವರು ಏನಿಲ್ಲ ಏನಿಲ್ಲ ಎಂದು ಕಾಲೆಳೆದಿದ್ದಾರೆ.
ಕನ್ನಡತಿ, ನಮ್ಮ ಲಚ್ಚಿ, ಅಮೃತಧಾರೆ ಸೀರಿಯಲ್ ನಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ನಟಿ ಸಾರಾ ಅಣ್ಣಯ್ಯ ತಮ್ಮ ಸ್ಟೈಲಿಶ್ ಲುಕ್‌ನಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.
ಟ್ರೆಂಡ್ ಹಾಕ್ತಿರೋ ಹಾಡಿಗೆ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಾರೆ. ಸೀರಿಯಲ್ ತಂಡದ ಜೊತೆಯೂ ರೀಲ್ಸ್ ಮಾಡುವ ಮೂಲಕ ವೀವ್ಸ್, ಲೈಕ್ಸ್ ಗಳಿಸುತ್ತಾರೆ.
ಕನ್ನಡತಿ ಸೀರಿಯಲ್ ನಲ್ಲಿ ವರೂಧಿನಿ ಪಾತ್ರದ ಮೂಲಕ ಜನರ ಮನಸ್ಸಿಗೆ ಹತ್ತಿರವಾದ ನಟಿ ಸಾರಾ. ಈ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದರೂ, ಆಕೆಯ ಸೈಕೋ ಕ್ಯಾರೆಕ್ಟರ್ ಜನರಿಗೆ ತುಂಬಾನೆ ಇಷ್ಟವಾಗಿತ್ತು.
ಕನ್ನಡತಿ, ನಮ್ಮ ಲಚ್ಚಿ, ಅಮೃತಧಾರೆ ಈ ಮೂರು ಸೀರಿಯಲ್ ನಲ್ಲೂ ಸಾರಾ ತುಂಬಾನೆ ಮಾಡರ್ನ್ ಹುಡುಗಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಹಾಗೇ ನೋಡಿದ್ರೆ ಸಾರಾ ಮಾಡರ್ನ್ ಡ್ರೆಸ್ಸಲ್ಲೂ, ಸೀರೆಯಲ್ಲು ಅದ್ಭುತ ಬ್ಯೂಟಿ ಅನ್ನೋದ್ರಲ್ಲಿ ತಪ್ಪಿಲ್ಲ.