ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಡ್ರೆಸ್‌ ಮಾಡಿಕೊಳ್ಳುತ್ತಿರುವ ಫೋಟೋ ಲೀಕ್; ಬ್ಯೂಟಿಗೆ ಪಡ್ಡೆ ಹುಡುಗರು ಫಿದಾ!

First Published | Nov 25, 2024, 12:48 PM IST

ವೈರಲ್ ಆಯ್ತು ಮೋಕ್ಷಿತಾ ಪೈ ಮೇಕಪ್ ಮಾಡಿಕೊಳ್ಳುತ್ತಿರುವ ಫೋಟೋ...ಸೀರೆಯಲ್ಲಿ ಸುಂದರಿ ನಮ್ಮ ಪಾರು ಎಂದ ನೆಟ್ಟಿಗರು....

ಪಾರು ಧಾರಾವಾಹಿಯಲ್ಲಿ ಮೂಲಕ ಕನ್ನಡ ಕಿರುತೆರೆಗೆ ಪರಿಚಯವಾದ ಮೋಕ್ಷಿತಾ ಪೈ ಇದೀಗ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಟಫ್‌ ಕಾಂಪಿಟೇಟರ್‌ ಆಗಿ ಗುರುತಿಸಿಕೊಂಡಿದ್ದಾರೆ.

ಬಿಗ್ ಬಾಸ್‌ ಮನೆಗೆ ಕಾಲಿಡುತ್ತಿದ್ದಂತೆ ನರಕವಾಸಿ ಆದ ಮೋಕ್ಷಿತಾ ತಮ್ಮ ನೇರ ಮಾತುಗಳ ಮೂಲಕ ಗಮನ ಸೆಳೆಯುತ್ತಿದ್ದರು. ಆದರೆ ಯಾವತ್ತೂ ತ್ರಿವಿಕ್ರಮ್ 10 ವಾರ ಉಳಿಯುವುದಿಲ್ಲ ಎಂದು ಹೇಳಿಕೆ ಕೊಟ್ಟರು ಅಲ್ಲಿಂಗ್ ಸಿಕ್ಕಾಪಟ್ಟೆ ಗರಂ ಆಗಿಬಿಟ್ಟರು.

Tap to resize

ನರಕ ಮತ್ತು ಸ್ವರ್ಗ ತೆಗೆದು ಹಾಕಿ ಇಡೀ ಮನೆ ಒಂದಾದ ಮೇಲೆ ಮೋಕ್ಷಿತಾ ಪೈ, ಗೌತಮಿ ಜಾದವ್ ಮತ್ತು ಉಗ್ರಂ ಮಂಜು ಒಂದು ತಂಡವಾಗಿ ಸ್ಪರ್ಧಿಸಲು ಶುರು ಮಾಡುತ್ತಾರೆ. 

ಉಗ್ರಂ ಮಂಜು ಮತ್ತು ಗೌತಮಿ ನನಗೆ ಸರಿಯಾಗಿ ಗೌರವಿಸುತ್ತಿಲ್ಲ ಎಂದು ಗೊತ್ತಾದ ಮೇಲೆ ಮೋಕ್ಷಿತಾ ಟಾಂಗ್‌ ಕೊಟ್ಟು ಅಲ್ಲಿಂದ ಹೊರ ಬರುತ್ತಾರೆ. ಅಲ್ಲಿಂದ ಮೋಕ್ಷಿತಾ ಗೇಮ್ ಶುರು.....

ಮೋಕ್ಷಿತಾ ಈಗ ಪ್ರತಿಯೊಬ್ಬರ ಜೊತೆ ಬೆರೆತು ಆಟವಾಡಲು ಶುರು ಮಾಡಿದ್ದಾರೆ. ಅಲ್ಲದೆ ಪ್ರತಿ ದಿನವೂ ಮೋಕ್ಷಿತಾ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಕಾಣಿಸಿಕೊಳ್ಳುತ್ತಿದ್ದರು.

ದಿನವೂ ಟ್ರೆಡಿಷನಲ್‌ ಆಗಿ ರೆಡಿಯಾಗಿ ಆಗುವ ಮೋಕ್ಷಿತಾ 10 ರಿಂದ 15 ನಿಮಿಷಗಳ ಕಾಲ ಮೇಕಪ್ ಮಾಡಿಕೊಳ್ಳುತ್ತಾರೆ. ಫ್ಯಾನ್‌ ಪೇಜ್‌ಗಳಲ್ಲಿ ಮೋಕ್ಷಿತಾ ಫೋಟೋ ಅಪ್ಲೋಡ್ ಆಗಿದೆ. 

ಅಯ್ಯೋ ಸೀರೆಯಲ್ಲಿ ಹುಡುಗಿಯ ನೋಡಲೇ ಬಾರದು ಎಂದು ಮೋಕ್ಷಿತಾ ಟ್ರೆಡಿಷನಲ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪಡ್ಡೆ ಹುಡುಗರು ಬ್ಯೂಟಿಯನ್ನು ಹೊಗಳಿದ್ದಾರೆ. 

Latest Videos

click me!