ಪ್ರಿಯಾಂಕಾ ಚೋಪ್ರಾ ಇಂಡಿಯನ್ ಸಿನಿಮಾಗಳಲ್ಲಿ ನಟಿಸದಿರಲು ಗಂಡ ನಿಕ್ ಜೊನಾಸ್ ಕಾರಣವಂತೆ!

By Shriram Bhat  |  First Published Nov 25, 2024, 12:51 PM IST

ನಟಿ ಪ್ರಿಯಾಂಕಾ ಚೋಪ್ರಾ ಅವರು ಆಗಾಗ ಅಮೆರಿಕಾದ ಸಂದರ್ಶನಗಳಲ್ಲಿ ಪಾಲ್ಗೊಳ್ಳುವುದು ಬಹುತೇಕರಿಗೆ ಗೊತ್ತೇ ಇದೆ. ಅಲ್ಲಿ ಕೇಳಲಾಗುವ ಹಲವು ಪ್ರಶ್ನೆಗಳಿಗೆ ಅನಿರೀಕ್ಷಿತ ಉತ್ತರ ಕೊಡುವ ಪ್ರಿಯಾಂಕಾ, ಅಲ್ಲಿನ ಸಂದರ್ಶಕರನ್ನೇ ಹಲವು ಬಾರಿ ಬೆಚ್ಚಿ ಬೀಳಿಸುತ್ತಾರೆ. ಇತ್ತೀಚೆಗೆ..


ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿ ಹೋಗಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಬಗ್ಗೆ ಹಲವರು ಏನೋನೋ ಮಾತುಗಳನ್ನು ಹೇಳಬಹುದು. ಆದರೆ, ಅವರು ಈ ಮೊದಲು ಗಳಿಸಿರುವ ಸ್ಟಾರ್‌ಗಿರಿ, ಬಾಲಿವುಡ್ ಪಪ್ಯೂಲಾರಿಟಿ ಹಾಗೂ ಮಾತುಗಳಲ್ಲಿನ ಮೆಚ್ಯೂರಟಿ ಬಗ್ಗೆ ಮೆಚ್ಚುಗೆ ಸೂಚಿಸಲೇಬೇಕು, ಏನಂತೀರಾ? ಸದ್ಯಕ್ಕೆ ಹಾಲಿವುಡ್ ಸಿನಿಮಾ ಹಾಗೂ ವೆಬ್ ಸಿರೀಸ್‌ನಲ್ಲಿ ನಟನೆ ಮಾಡುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾಗೆ ಹಾಲಿವುಡ್ ಸಂದರ್ಶಕರು ಥಟ್ಟನೆ ಒಂದು ಪ್ರಶ್ನೆ ಕೇಳಿಬಿಟ್ಟಿದ್ದಾರೆ. ಅದಕ್ಕೆ ಪ್ರಿಯಾಂಕಾ ಕೊಟ್ಟ ಉತ್ತರ ಕೇಳಿದ್ರೆ ನಿಮ್ಗೆ ಶಾಕ್ ಆಗೋದು ಪಕ್ಕಾ!

ಹೌದು, ನಟಿ ಪ್ರಿಯಾಂಕಾ ಚೋಪ್ರಾ ಅವರು ಈಗ ಅಮೆರಿಕಾ ಸೊಸೆ. ಬಾಲಿವುಡ್‌ನಲ್ಲಿ ಬಹುಬೇಡಿಕೆಯಲ್ಲಿ ಇದ್ದಾಗಲೇ ಪಿಗ್ಗಿ ಅಮೆರಿಕದ ಪಾಪ್ ಸಿಂಗರ್ ನಿಕ್ ಜೊನಾಸ್ ಪ್ರೇಮಪಾಶದಲ್ಲಿ ಬಿದ್ದರು. ಡೇಟಿಂಗ್ ಮಾಡಿಯೂ ಪ್ರಾಬ್ಲಂ ಏನೂ ಆಗದೇ ಮದುವೆಯೂ ಆಗಿಬಿಟ್ಟರು. ಈಗ ಸುಖ ಸಂಸಾರ ಸಾಗರದಲ್ಲಿ ತೇಲಾಡುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ, ಹಲವು ವರ್ಷಗಳ ಗ್ಯಾಪ್ ಬಳಿಕ ಮತ್ತೆ ಮುಖಕ್ಕೆ ಬಣ್ಣ ಹಚ್ಚಿದ್ದಾರೆ, ಹಾಲಿವುಡ್ ಸಿನಿಮಾಗಳಲ್ಲಿ ಸದ್ಯ ನಟಿಸುತ್ತಿದ್ದಾರೆ. 

Tap to resize

Latest Videos

ಕ್ಯಾನ್ಸರ್‌ ಭಾದೆ ಬಗ್ಗೆ ಶಿವಣ್ಣ ಅಂತರಂಗದ ಮಾತು, ಎಂಥವರಿಗೂ ಕಣ್ಣೀರು ಬರದೇ ಇರದು!

ಪ್ರಿಯಾಂಕಾ ಚೋಪ್ರಾ ಅವರು ಆಗಾಗ ಅಮೆರಿಕಾದ ಸಂದರ್ಶನಗಳಲ್ಲಿ ಪಾಲ್ಗೊಳ್ಳುವುದು ಬಹುತೇಕರಿಗೆ ಗೊತ್ತೇ ಇದೆ. ಅಲ್ಲಿ ಕೇಳಲಾಗುವ ಹಲವು ಪ್ರಶ್ನೆಗಳಿಗೆ ಅನಿರೀಕ್ಷಿತ ಉತ್ತರ ಕೊಡುವ ಪ್ರಿಯಾಂಕಾ, ಅಲ್ಲಿನ ಸಂದರ್ಶಕರನ್ನೇ ಹಲವು ಬಾರಿ ಬೆಚ್ಚಿ ಬೀಳಿಸುತ್ತಾರೆ. ಇತ್ತೀಚೆಗೆ ಕೂಡ ಒಮ್ಮೆ ಹಾಗೇ ಆಗಿದ್ದು, ಭಾರತದ ನಟಿ ಪ್ರಿಯಾಂಕಾ ಉತ್ತರ ಕೇಳಿ ಅಲ್ಲಿನ ಸಂದರ್ಶಕರು ಅಚ್ಚರಿಯಿಂದ ಶಾಕ್ ಆಗಿದ್ದಾರೆ. ಹಾಗಿದ್ದರೆ ನಟಿ ಪ್ರಿಯಾಂಕಾ ತಮಗೆ ಬಂದ ಪ್ರಶ್ನೆಗೆ ಏನಂತ ಉತ್ತರಿಸಿದ್ದಾರೆ?

ಇಲ್ಲಿದೆ ನೋಡಿ ಪ್ರಿಯಾಂಕಾ ಕೊಟ್ಟಿರುವ ಹಾಟ್ ಆನ್ಸರ್‌.. 'ನೀವ್ಯಾಕೆ ಈಗ ಭಾರತದ ಸಿನಿಮಾಗಳಲ್ಲಿ ಮತ್ತೆ ನಟಿಸುತ್ತಿಲ್ಲ' ಎಂಬ ಪ್ರಶ್ನೆಗೆ ಪ್ರಿಯಾಂಕಾ ಚೋಪ್ರಾ ಅವರು ಸ್ವಲ್ಪವೂ ಯೋಚಿಸದೇ 'ನನಗೆ ನನ್ನ ಹಸ್ಬಂಡ್ ನಿಕ್ ಬಿಟ್ಟು ಇರಲಾಗುವುದಿಲ್ಲ. ನನ್ನ ಗಂಡನೇ ನನಗೆ ಸರ್ವಸ್ವ. ನಿಕ್ ಜೊನಾಸ್ ಎಲ್ಲಿರುತ್ತಾರೋ ಅಲ್ಲಿಯೇ ಜೊತೆಗಿರಲು ನಾನು ಇಷ್ಟಪಡುತ್ತೇನೆ. ಆತನನ್ನು ಬಿಟ್ಟು ನಾನು ಇಂಡಿಯಾಗೆ ಹೋಗಲು ಬಯಸುವುದಿಲ್ಲ. ಒಮ್ಮೆ ನಾನು ಭಾರತದ ಸಿನಿಮಾ ಒಪ್ಪಿಕೊಂಡರೆ ನಾನು ಅಲ್ಲಿಯೇ ಇದ್ದು ಶೂಟಿಂಗ್ ಮುಗಿಸಬೇಕಾಗುತ್ತದೆ. 

ಈಗಲೂ ನನಗೆ ಇಂಡಿಯಾದಿಂದ ಸಿನಿಮಾ ಆಫರ್‌ಗಳು ಬರುತ್ತಲೇ ಇವೆ. ಮುಖ್ಯವಾಗಿ ಬಾಲಿವುಡ್ ಹಾಗೂ ತೆಲುಗು ಚಿತ್ರರಂಗಗಳು ಈಗಲೂ ನನಗೆ ಆಫರ್ ನೀಡುತ್ತಿವೆ. ಆದರೆ, ನಾನೇ ಅವರ ಕ್ಷಮೆ ಕೇಳಿ ಆ ಆಫರ್‌ಗಳನ್ನು ರಿಜೆಕ್ಟ್ ಮಾಡುತ್ತಿದ್ದೇನೆ. ಕಾರಣ, ನಿಕ್ ಜೊನಾಸ್. ಅವನ ಜೊತೆ ಇಲ್ಲದೇ ನಾನು ಒಂದು ವಾರ ಕಳೆಯಲು ಅಸಾಧ್ಯವೇ ಸರಿ. ಅವನಿಲ್ಲದ ನನ್ನ ಜೀವನವನ್ನು ನಾನು ಕಲ್ಪಿಸಿಕೊಳ್ಳಲೂ ಆಗದು. 'ಅವನೆಲ್ಲೋ ನಾನಲ್ಲೇ ಇರುವೆ..' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ!

ಕಿರಿಯರ ಜೊತೆ ಕೆಲ್ಸ ಮಾಡೋಕೆ ನಿಮ್ಗೆ ಸಂಕೋಚ ಆಗೋದಿಲ್ವೇ ಅಂದಿದ್ದಕ್ಕೆ ಅಣ್ಣಾವ್ರು ಏನಂದಿದ್ರು?

ಅಮೆರಿಕದ ಜನರಿಗೆ, ಅದರಲ್ಲೂ ಸಿನಿಮಾ ಸೆಲೆಬ್ರಿಟಗಳಿಗೆ ಗಂಡನ ಬಿಟ್ಟು ಇರಲಾರೆ ಎಂಬುದು ಅಚ್ಚರಿಯ ಸಂಗತಿಯೇ ಸರಿ. ಅದಕ್ಕಾಗಿ ಆಶ್ಚರ್ಯದಿಂದ ನೀವು ನಕ್ ಜೊನಾಸ್‌ರನ್ನು ಅಷ್ಟೊಂದು ಇಷ್ಟಪಡುತ್ತೀರಾ? ದೆನ್ ಹೀ ಈಸ್ ಸೋ ಮಚ್ ಲಕ್ಕೀ...' ಎಂದಿದ್ದಾರೆ ಸಂದರ್ಶಕಿ. ಕಾರಣ, ಅವರಿಗೆ ಹಸ್ಬಂಡ್ ಅಂದ್ರೆ ಪ್ಲೇ ಬಾಯ್ ತರಹ! 'ಆಟ ಮುಗಿದ ಮೇಲೆ ನನ್ನ ಲೈಪ್‌ ನನ್ನದು ನಿನ್ನ ಪ್ರಾಬ್ಲಂ ನಿನ್ನದು' ಎಂಬ ಮೆಂಟಾಲಿಟಿ ಅವರದು! ಹಾಗಿದ್ದಾಗ ನಟಿ ಪ್ರಿಯಾಂಕಾ ಮಾತು ಕೇಳಿ ಶಾಕ್ ಆಗದೇ ಇರುತ್ತಾ? ಆಗಲೇ ಬೇಕು, ಅದು ಸಹಜ ಅಲ್ಲವೇ? 

click me!