ಬಿಪಿಎಲ್‌ ಕಾರ್ಡ್‌ ಹೊಂದಿರುವ ಸರ್ಕಾರಿ ನೌಕರರ ಮೇಲೆ ಕ್ರಮಕ್ಕೆ ಸಿಎಂ ಸೂಚನೆ

By Santosh Naik  |  First Published Nov 25, 2024, 12:31 PM IST

ರಾಜ್ಯದಲ್ಲಿ 5000ಕ್ಕೂ ಹೆಚ್ಚು ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.


ಬೆಂಗಳೂರು (ನ.25): ರಾಜ್ಯ ಸರ್ಕಾರ ಬಿಪಿಎಲ್‌ ಕಾರ್ಡ್‌ಗಳ ಪರಿಷ್ಕರಣೆ ಮಾಡುತ್ತಿರುವ ಸುದ್ದಿಯ ನಡುವೆ ಸಿಎಂ ಸಿದ್ದರಾಮಯ್ಯ ಮತ್ತೊಂದು ಖಡಕ್‌ ಸೂಚನೆ ರವಾನಿಸಿದ್ದಾರೆ. ರಾಜ್ಯದಲ್ಲಿ ಐದು ಸಾವಿರಕ್ಕು ಹೆಚ್ಚು ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಎಂದು ಸಿಎಂ ಹೇಳಿದ್ದರು. ಬಿಪಿಎಲ್‌ ಕಾರ್ಡ್‌ ಹೊಂದಿರುವ ಈ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದು  ಕರ್ನಾಟಕ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಷಡಕ್ಷರಿ ಹೇಳಿದ್ದಾರೆ. 'ಸರ್ಕಾರದ ಉಚಿತ ಯೋಜನೆಗಳು ಬಡವರಿಗೆ ತಲುಪಬೇಕು. ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಸೌಲಭ್ಯ ವನ್ನು ಪಡೆಯುಯತ್ತಿದ್ದಾರೆ ಅನ್ನೋ ಆರೋಪ ಈ ಹಿಂದೆಯೋ ಕೇಳಿ ಬಂದಿತ್ತು. ಕೆಲವು ನೌಕರರು ಸರ್ಕಾರಿ ‌ಕೆಲಸ ಸಿಗುವ ಮುನ್ನ ಬಿಪಿಎಲ್ ಕಾರ್ಡ್ ಹೊಂದಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಸರ್ವಿಸ್ ಗೆ ಸೇರಿರುವವರು ಬಿಪಿಎಲ್ ಕಾರ್ಡ್ ಹಿಂದಿರುಗಿಸೋದನ್ನು ಮರೆತಿರುತ್ತಾರೆ. ಸಾಮಾನ್ಯವಾಗಿ ಐದಾರು ವರ್ಷಗಳಿಂದ ಸರ್ಕಾರಿ ಸೇವೆಯಲ್ಲಿ ಇರುವವರು ಕಾರ್ಡ್ ಹೊಂದಿರುವುದಿಲ್ಲ' ಎಂದು ಹೇಳಿದ್ದಾರೆ.

ಹಲವು ಕೇಸಿದ್ದರೆ ವಿಚಾರಣಾಧೀನ ಕೈದಿಗೆ ಜಾಮೀನಿಲ್ಲ!

Latest Videos

undefined

ಇತ್ತೀಚಿನ ದಿನಗಳಲ್ಲಿ ಪೊಲೀಸ್, ಪಿಡಿಓ, ಟೀಚರ್ಸ್ ಗಳ ನೇಮಕಾತಿ ಆಗಿದೆ. ಅವರು ಇನ್ನು ಬಿಪಿಎಲ್ ಕಾರ್ಡ್ ವಾಪಾಸ್‌ ಮಾಡಿರುವುದಿಲ್ಲ. ಸರ್ಕಾರಿ ನೌಕರರಾಗಿರುವ ಯಾರೊಬ್ಬರೂ ಕೂಡ ಬಿಪಿಎಲ್‌ ಕಾರ್ಡ್‌ ಹೊಂದಿರಬಾರದು ಎಂದು ನಾನು ಮನವಿ ಮಾಡುತ್ತೇನೆ. ಇದರಿಂದ ಬಡವರಿಗೆ ಸಿಗುವ ಸೌಲಭ್ಯ ತಪ್ಪಿ ಹೋಗುತ್ತದೆ. ಸರ್ಕಾರಕ್ಕೆ ಬಿಪಿಎಲ್ ಕಾರ್ಡ್ ಸರಂಡರ್‌ ಮಾಡದಿದ್ರೆ ಅಂತವರಿಗೆ ದಂಡ ಹಾಕಲಿ. ಯಾರು ಕನಿಷ್ಠ ಹಂತದಲ್ಲಿ ಇರ್ತಾರೆ ಅಂತವರಿಗೆ ಬೇರೆ ಬೇರೆ ಸರ್ಕಾರಿ ಸೌಲಭ್ಯಕ್ಕಾಗಿ ಬಿಪಿಎಲ್ ಕಾರ್ಡ್ ಬಳಸಿಕೊಳ್ಳುತ್ತಾರೆ. ಹಾಗಾಗಿ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಗಳನ್ನು ಹಿಂದಿರುಗಿಸುವಂತೆ ವಿನಂತಿ ಮಾಡಿದ್ದಾರೆ.

ಜಿಪಿಎಸ್‌ ತೋರಿದ ದಾರೀಲಿ ಮದುವೆ ಮನೆಗೆ ಹೋಗ್ತಿದ್ದ ಕಾರು ಸೀದಾ ನದಿಗೆ ಬಿದ್ದು ಮೂವರ ಸಾವು!

click me!