ಉಪೇಂದ್ರ ಅವರು ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಮಾತೊಂದನ್ನು ವಿಶ್ಲೇಷಿಸಿ, ಕೆಲಸದಲ್ಲಿ ಫಲಾಪೇಕ್ಷೆ ಬೇಡ ಎಂಬುದನ್ನು ಅರ್ಥೈಸಿಕೊಂಡಿದ್ದಾರೆ. ಫಲದ ಬಗ್ಗೆ ಚಿಂತಿಸದೆ ಕೆಲಸ ಮಾಡಿದರೆ ಖುಷಿ ಸಿಗುತ್ತದೆ, ಫಲ ಬಂದರೆ ಅದು ಬೋನಸ್ ಎಂದು ಉಪ್ಪಿ ಹೇಳಿದ್ದಾರೆ. ಇದನ್ನು ಕೇಳಿ ಸುದೀಪ್ ಕೂಡ ಫಿದಾ ಆಗಿದ್ದಾರೆ.
ಉಪೇಂದ್ರ ಅಂದ್ರೆ ಬುದ್ಧಿವಂತ ನಿರ್ದೇಶಕ ಅಂತಾನೇ ಫೇಮಸ್ಸು. ಇವರ ಮಾತು ಸಖತ್ ಬ್ರೈನಿ ಆಗಿರುತ್ತೆ. ಆಗಾಗ ಸ್ನೇಹಿತರ, ಹೆಂಡತಿಯ ಕಾಲೆಳೆಯೋದ್ರಲ್ಲೂ ಇವರು ಎಕ್ಸ್‌ಪರ್ಟ್. ಇನ್ನು ತತ್ವಜ್ಞಾನದ ಬಗ್ಗೆ ಮಾತಾಡೋಕೆ ಶುರು ಮಾಡಿದ್ರೆ ಎದುರಿದ್ದವರು ಬಾಯಿ ಇದ್ದೂ ಮೌನವಾಗಿರಬೇಕು. ಏಕೆಂದರೆ ಉಪ್ಪಿ ಕೇಳೋ ಪ್ರಶ್ನೆಗೆ ಆನ್ಸರ್ ಮಾಡೋದು ಅಷ್ಟು ಸುಲಭ ಅಲ್ಲ. ಉಪ್ಪಿ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಎಲ್ಲರೂ 'ಗ್ರೇಟ್' ಅನ್ನೋರೆ. ರಿಷಬ್ ಶೆಟ್ಟಿ ಇರಬಹುದು, ರಕ್ಷಿತ್ ಇರಬಹುದು, ಇತರೆ ಒಂದಿಷ್ಟು ಖ್ಯಾತ ನಟರಿರಬಹುದು, ಅವರು ತಾವು ಇಂದು ಈ ರೀತಿ ಬೆಳೆಯಲು ಕಾರಣ ಉಪೇಂದ್ರ ಅವರ ಸಿನಿಮಾಗಳು. ಅವರ ಸಿನಿಮಾದಿಂದ ಸ್ಫೂರ್ತಿ ಪಡೆದು ತಾವೂ ಸಿನಿಮಾ ಮಾಡಲು ಸಾಧ್ಯವಾಯ್ತು ಅಂತಾರೆ.
ಕರ್ನಾಟಕದಲ್ಲಿ ಉಪ್ಪಿ ಗ್ರೇಟ್‌ನೆಸ್ ಹಲವರಿಗೆ ತಿಳಿದಂತಿಲ್ಲ. ಪಕ್ಕದ ರಾಜ್ಯದವರು ಸಿನಿಮಾ ಪ್ರೊಮೋಶನ್‌ಗೆ ಬೆಂಗಳೂರಿಗೆ ಬಂದರೂ ಫಸ್ಟು ಹೇಳೋದು ಉಪ್ಪಿ ಬಗ್ಗೆ. ಏಕೆಂದರೆ ಅವರೂ ಉಪ್ಪಿ ಸಿನಿಮಾ ನೋಡಿ ಬೆಳೆದೋರೆ. ಇತ್ತೀಚೆಗೆ ಬೆಂಗಳೂರಿಗೆ ಬಂದ 'ಮಹಾರಾಜ' ಸಿನಿಮಾ ನಿರ್ದೇಶಕ ನಿತಿಲನ್ ಹಾಗೂ ಆಕ್ಸ್ ಹಂಡ್ರೆಡ್ ಮೂವಿ ಡೈರೆಕ್ಟರ್ ಅಜಯ್ ಭೂಪತಿ ತೆಲುಗು, ತಮಿಳಿನಲ್ಲಿ ಉಪ್ಪಿ ಹವಾ ಹೇಗಿದೆ ಅನ್ನೋದನ್ನ ಸಖತ್ತಾಗಿ ಹೇಳಿದ್ದರು.
ಪಾರ್ವತಿ ಅಲ್ಲ, ಪಾರ್ವತಿ ಶಿವು ಅನ್ಬೇಕು! ಅಣ್ಣಯ್ಯ ಸೀರಿಯಲ್‌ನಲ್ಲಿ ಪಾರು ರಾಕ್ಸ್ ವೀರಭದ್ರ ಮೋಯೆ ಮೋಯೆ
ಸದ್ಯ ಉಪೇಂದ್ರ ಹಾಗೂ ಸುದೀಪ್ ನಡುವೆ ಬಿಗ್‌ಬಾಸ್‌ನಲ್ಲಿ ನಡೆದ ಹಳೆಯ ಮಾತುಕತೆಯೊಂದು ಸಖತ್ ವೈರಲ್ ಆಗ್ತಿದೆ. ಇದರಲ್ಲಿ ಉಪೇಂದ್ರ ಅವರು ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಮಾತೊಂದನ್ನು ತಗೊಂಡ ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಾರೆ. ಅವರ ಮಾತಿಗೆ, ಅವರ ಬುದ್ಧಿವಂತಿಕೆಗೆ ನೆಟ್ಟಿಗರು ಮಾತ್ರ ಅಲ್ಲ, ಸುದೀಪ್ ಕೂಡ ಫಿದಾ ಆಗಿದ್ದಾರೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳುವ ಮಾತು - 'ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ. ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |ಸಮೋಭೂತ್ವಾ ಸಮತ್ವಂ ಯೋಗ ಉಚ್ಯತೇ'. ಅಂದರೆ ನಿನಗೆ ನಿನ್ನ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ, ಅದರ ಫಲದಲ್ಲಿ ಇಲ್ಲ. ಆದ್ದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷಿಯಾಗಿ ಫಲಕ್ಕೆ ಕಾರಣನೂ ನೀನೆಂದುಕೊಳ್ಳಬೇಡ ಮತ್ತು ಕರ್ಮಮಾಡದೇ ಜೀವಿಸಬೇಕೆಂಬ ಹಂಬಲ ನಿನ್ನಲ್ಲಿ ಹುಟ್ತದಿರಲಿ. ಹಾಗೆ ಗೆಲವು-ಸೋಲುಗಳಿಗೆ ಕುಂದದೆ ಎರಡನ್ನೂ ಸಮಾನಚಿತ್ತದಿಂದ ಸ್ವೀಕರಿಸುತ್ತ ನಿನ್ನ ಕರ್ತವ್ಯಗಳನ್ನು ಮಾಡು. ಈ ಸಮತ್ತ್ವಭಾವವೇ ಯೋಗ ಎಂಬ ಅರ್ಥ.
ಕೃಷ್ಣನ ಈ ಮಾತು ಉಪೇಂದ್ರ ಅವರಿಗೆ ತಲೆಗೆ ಹುಳ ಬಿಟ್ಟಂತಾಗಿದೆ. 'ಕೆಲಸ ಮಾಡೋದೆ ಫಲ ಸಿಗಲಿ ಅಂತ. ಅಂಥಾದ್ರಲ್ಲಿ, ಫಲದ ಅಪೇಕ್ಷೆ ಇಲ್ಲದೆ ಕೆಲಸ ಮಾಡು ಅಂತಾನಲ್ಲ ಕೃಷ್ಣ..' ಅನ್ನೋ ಯೋಚನೆ ತೀವ್ರವಾಗಿ ಮನಸ್ಸಿಗೆ ಬಂದಿದೆ. ಕೊಂಚ ಚಿಂತಿಸದ ಮೇಲೆ ಕೃಷ್ಣ ಹೀಗೆ ಯಾಕೆ ಹೇಳಿದ ಅನ್ನೋದರ ಮರ್ಮವೂ ತಿಳಿದಿದೆ. 'ನಾವು ಫಲದ ಬಗ್ಗೆ ಚಿಂತಿಸಿ ಕೆಲಸ ಮಾಡಿದರೆ ಕೆಲಸವನ್ನ ಎನ್‌ಜಾಯ್ ಮಾಡಲಾಗೋದಿಲ್ಲ. ಫಲವೂ ಸಿಗಲ್ಲ. ಕೆಲಸವನ್ನಷ್ಟೇ ಶ್ರದ್ಧೆಯಿಂದ ಮಾಡಿದರೆ ಕೆಲಸದ ಖುಷಿ ಸಿಗುತ್ತದೆ. ಫಲ ಬಂದರೆ ಅದು ಬೋನಸ್ಸು. ಬರದಿದ್ದರೆ ಬೇಜಾರಿಲ್ಲ' ಅಂತ ಉಪ್ಪಿ ಈ ಮಾತಿನ ಭಾವ ವಿವರಿಸಿದ್ದಾರೆ.
ಒಂದೇ ಮನೆಯಲ್ಲಿ ಇಬ್ರು ರಕ್ಷಿತಾ; ಅವಳ ಹೆಸರಲ್ಲಿ ಇವಳನ್ನ ಕೂಗ್ಬುಟ್ಟು ಜೀವಂತ ಉಳ್ಕೊಂತಾರಾ ಜೋಗಿ ಪ್ರೇಮ್?
ಇದನ್ನು ಕೇಳಿ ಸುದೀಪ್ ಗೂ ಅರ್ಥಫೂರ್ಣ ಅನಿಸಿದೆ. ಉಪ್ಪಿಯ ಬುದ್ಧಿವಂತಿಕೆಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.
ಸದ್ಯ ನಮ್ಮ ಉಪ್ಪಿ ಸಾರ್ 'ಯುಐ' ಸಿನಿಮಾ ರಿಲೀಸ್ ಗಡಿಬಿಡಿಯಲ್ಲಿದ್ದಾರೆ. ಇಂಥಾ ಟೈಮಲ್ಲಿ ಅವರ ಈ ಮಾತು ಸಹಜವಾಗಿಯೇ ಜನರಿಗೆ ವಿವಿಧಾರ್ಥ ಹೊಳೆಸಿದೆ ಅಂತ ಹೇಳಬಹುದು.