ಬಾತ್​ ರೂಂ ಫೋಟೋಸ್ ಶೇರ್ ಮಾಡಿದ ನಟಿ ಸಮಂತಾ: ಇದ್ರೂ ಬಗ್ಗೆ ನಂಗೆ 'ಚಿಂತೆಯಿಲ್ಲ' ಅನ್ನೋದಾ!

First Published Mar 4, 2024, 1:00 AM IST

ಟಾಲಿವುಡ್ ನಟಿ ಸಮಂತಾ ಸದ್ಯಕ್ಕೆ ಯಾವುದೇ ಸಿನಿಮಾ ಮಾಡ್ತಿಲ್ಲ. ಬ್ರ್ಯಾಂಡ್ ಫೋಟೋಶೂಟ್​ಗಳಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಇದೀಗ ಸ್ಟೈಲಿಶ್ ಲುಕ್​ನಲ್ಲೂ ಸಮಂತಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಸಮಂತಾ ರುತ್​ ಪ್ರಭು ಅವರು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಆ ಮೂಲಕ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಜೊತೆಗೆ ಇನ್​ಸ್ಟಾಗ್ರಾಮ್​ನಲ್ಲಿ ಆಗಾಗ ಫೋಟೋ ಹಂಚಿಕೊಳ್ಳುತ್ತಾರೆ. 

ಬಾತ್​ ರೂಮ್​ನಲ್ಲಿ ಸಮಂತಾ ವೈಟ್​ ಶರ್ಟ್​, ಡೆನಿಮ್ ಪ್ಯಾಟ್​ ತೊಟ್ಟು ಬಗೆ ಬಗೆಯ ಪೋಸ್​ ಕೊಟ್ಟಿದ್ದಾರೆ. ವಿಶೇಷವಾಗಿ 'ಚಿಂತೆಯಿಲ್ಲದೇ..' ಎಂದು ಅವರು ಈ ಫೋಟೋಗಳಿಗೆ ಕ್ಯಾಪ್ಷನ್​ ನೀಡಿದ್ದಾರೆ.

Latest Videos


ಸಮಂತಾ ಫೋಟೋಸ್ ವೈರಲ್ ಆಗಿದ್ದು, ಈ ಫೋಟೋಶೂಟ್​ಗೆ ಅವರು ಬಾತ್​ ರೂಮ್​ ಅನ್ನು ಲೊಕೇಷನ್​ ಆಗಿ ಆಯ್ಕೆ ಮಾಡಿಕೊಂಡಿದ್ದಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಾನಾ ಕಮೆಂಟ್​ಗಳು ಹರಿದು ಬರ್ತಿದೆ. 

ಮೈಯೋಸಿಟಿಸ್​ ಕಾಯಿಲೆಯಿಂದ ಬಳಲುತ್ತಿರುವ ಸ್ಯಾಮ್​, ಕೆಲ ಕಾಲ ಸಿನಿಮಾ ಕೆಲಸದಿಂದ ಬ್ರೇಕ್ ತೆಗೆದುಕೊಂಡಿದ್ರು. ಇದೀಗ ಸಮಂತಾ ಮತ್ತೆ ಸಿನಿಮಾಗೆ ರೀ ಎಂಟ್ರಿ ಕೊಡಲು ಭರ್ಜರಿ ತಯಾರಿ ನಡೆಸುತ್ತಿರುವಂತೆ ಕಾಣ್ತಿದೆ.

ದಿನ ಕಳೆದಂತೆಲ್ಲ ಸಮಂತಾ ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ. ಸಮಂತಾ ಅವರಿಗೆ ಈಗ 36 ವರ್ಷ ವಯಸ್ಸು. ಸದ್ಯಕ್ಕೆ ಅವರು ಸಿಂಗಲ್​ ಆಗಿದ್ದಾರೆ. ಯಾವುದೇ ರಿಲೇಷನ್​ಶಿಪ್​ ತಂಟೆಗೆ ಅವರು ಹೋಗಿಲ್ಲ. ಫಿಟ್ನೆಸ್​ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. 

2023ರಲ್ಲಿ ಸಮಂತಾ ರುತ್​ ಪ್ರಭು ನಟನೆಯ 2 ಸಿನಿಮಾಗಳು ಬಿಡುಗಡೆ ಆದವು. ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ‘ಶಾಕುಂತಲಂ’ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಹಿಟ್​ ಆಗಲಿಲ್ಲ. ಅದೇ ರೀತಿ, ‘ಖುಷಿ’ ಸಿನಿಮಾ ಕೂಡ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. 

ಸಮಂತಾ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ 3.2 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದು, ಶೀಘ್ರದಲ್ಲೇ ವರುಣ್ ಧವನ್ ಜೊತೆ ಸಿಟಾಡೆಲ್ ಇಂಡಿಯಾ ಸೀರಿಸ್ ಮೂಲಕ ಜನರ ಮುಂದೆ ಮತ್ತೆ ಸಮಂತಾ ಬರಲಿದ್ದಾರೆ.

click me!