ವಿಮಾನದಲ್ಲಿ ಬಾಯ್‌ಫ್ರೆಂಡ್‌ಗೆ ರೆಡ್‌ಹ್ಯಾಂಡ್ ಆಗಿ ಮತ್ತೊಬ್ಬನೊಂದಿಗೆ ಸಿಕ್ಕಿಬಿದ್ದ ಯುವತಿ: ಆಮೇಲೇನಾಯ್ತು ನೋಡಿ

By Anusha Kb  |  First Published Sep 21, 2024, 3:31 PM IST

  ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವನಿಗೆ ಅದೇ ವಿಮಾನದಲ್ಲಿ ಆತನ ಗರ್ಲ್‌ಫ್ರೆಂಡ್ ಬೇರೊಬ್ಬನ ಜೊತೆ ಕುಳಿತು  ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಇದರಿಂದ ಸಿಟ್ಟಿಗೆದ್ದ ಯುವಕ ವಿಮಾನದಲ್ಲೇ ಜಗಳ ಶುರು ಮಾಡಿದ್ದಾನೆ. 


ಕೆಲವು ತಿಂಗಳುಗಳ ಹಿಂದೆ ಗಂಡ ಹೆಂಡತಿಯ ವಿಮಾನದಲ್ಲಿ ಪರಸ್ಪರ ಕಿತ್ತಾಟ ನಡೆಸಿದ್ದರಿಂದ ವಿಮಾನವನ್ನೇ ನಿಗದಿತ ಗುರಿ ಬಿಟ್ಟು ಬೇರೆಡೆ ಡೈವರ್ಟ್ ಮಾಡಿದ ಘಟನೆ ನಡೆದಿತ್ತು. ಈಗ ಪ್ರೇಮಿಗಳ ಸರದಿ,  ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವನಿಗೆ ಅದೇ ವಿಮಾನದಲ್ಲಿ ಆತನ ಗರ್ಲ್‌ಫ್ರೆಂಡ್ ಬೇರೊಬ್ಬನ ಜೊತೆ ಕುಳಿತು  ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಇದರಿಂದ ಸಿಟ್ಟಿಗೆದ್ದ ಯುವಕ ವಿಮಾನದಲ್ಲೇ ಜಗಳ ಶುರು ಮಾಡಿದ್ದಾನೆ. ಬಾಯ್‌ಫ್ರೆಂಡ್ ಯುವತಿ ಹಾಗೂ ಯುವತಿಯ ಹೊಸ ಬಾಯ್‌ಫ್ರೆಂಡ್ ನಡುವಣ ಈ ಕಿತ್ತಾಟದಿಂದ ಏರ್‌ಲೈನ್ಸ್ ಸಿಬ್ಬಂದಿ ಕಂಗಾಲಾಗಿದ್ದು, ಜಗಳ ಬಿಡಿಸಲು ಹರಸಾಹಸ ಪಟ್ಟಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಅಚ್ಚರಿಯ ಜೊತೆ ಹಲವು ತಮಾಷೆಯ ಕಾಮೆಂಟ್ ಮಾಡಿದ್ದಾರೆ.

ವೀಡಿಯೋದಲ್ಲೇನಿದೆ?

Tap to resize

Latest Videos

undefined

ವಿಮಾನದಲ್ಲಿ ಯುವತಿ ಹಾಗೂ ಆಕೆಯ ಹೊಸ ಗೆಳೆಯ ಜೊತೆಯಾಗಿ ಅಕ್ಕಪಕ್ಕದ ಸೀಟಿನಲ್ಲಿ ಕುಳಿತಿದ್ದಾರೆ.  ಅದೇ ವಿಮಾನದಲ್ಲಿ ಯುವತಿಯ ಬಾಯ್‌ಫ್ರೆಂಡ್‌ಗೆ ತನ್ನ ಗೆಳತಿ ಇನ್ನೊರ್ವ ಯುವಕನೊಂದಿಗೆ ಇರುವುದನ್ನು ನೋಡಿ ಶಾಕ್ ಆಗಿದ್ದು, ಆತ ಕೂಡಲೇ ತನ್ನ ಮೊಬೈಲ್‌ನಲ್ಲಿದ್ದ ಫೋಟೋ ತೆಗೆದು ಹುಡುಗಿ ಪಕ್ಕ ಇದ್ದ ಆಕೆಯ ಹೊಸ ಬಾಯ್‌ಫ್ರೆಂಡ್‌ಗೆ ತೋರಿಸಿದ್ದಾನೆ. ಇದನ್ನು ನೋಡಿ ಹೊಸ ಬಾಯ್‌ಫ್ರೆಂಡ್ ಕೂಡ ಸಿಟ್ಟಿಗೆದ್ದಿದ್ದು, ಇದೇನಿದು ಎಂದು ಆಕೆಯನ್ನು ಕಿರುಚುತ್ತಾ ಕೇಳುತ್ತಾನೆ. ಇದಕ್ಕೆ ಗಲಿಬಿಲಿಗೊಂಡ ಆಕೆ ಅದು ನನ್ನ ಫೋಟೋ ಅಲ್ಲ ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಾ ಆತ ಕೈ ಹಿಡಿದುಕೊಳ್ಳುತ್ತಾಳೆ. ಆದರೆ ಕೈ ಕೊಡವಿಕೊಂಡ ಇದೇನಿದು ಹೇಳು ಎಂದು ಪ್ರಶ್ನಿಸುತ್ತಾನೆ.

ವಿಮಾನದಲ್ಲಿ ಅಳುತ್ತಿದ್ದ ಮಗುವಿಗೆ ಬುದ್ಧಿ ಕಲಿಸಲು ಟಾಯ್ಲೆಟ್‌ಗೆ ಹಾಕಿ ಲಾಕ್ ಮಾಡಿದ ಮಹಿಳೆ

ಅದಕ್ಕೆ ಆಕೆ ಅದು ನನ್ನ ಫೋಟೋ ಅಲ್ಲ ಎಡಿಟೆಡ್ ಫೋಟೋ ಅದು ಎಂದು ಹೊಸ ಗೆಳೆಯನನ್ನು ಸಮಾಧಾನಪಡಿಸಲು ಯತ್ನಿಸಿದ್ದರೆ, ಅತ್ತ ಆಕೆಯ ಹಾಲಿ ಬಾಯ್‌ಫ್ರೆಂಡ್ ಆಗಿದ್ದತ್ತ, ಹೌದಾ, ಇದು ಎಡಿಟೆಡ್ಡಾ, ಹಾಗಾದ್ರೆ ಇದೇನು? ಇದೇನು ಎಂದು ಆತನ ಮೊಬೈಲ್‌ನಲ್ಲಿ ಅವರಿಬ್ಬರಿದ್ದ ಒಂದೊಂದೇ ಫೋಟೋಗಳನ್ನು ತೋರಿಸುತ್ತಾನೆ. ಇದರಿಂದ ಹೊಸ ಗೆಳೆಯನ ಕೋಪ ಮತ್ತಷ್ಟು ಜೋರಾಗಿದ್ದು, ನನ್ನ ಪ್ರಶ್ನೆಗೆ ಉತ್ತರಿಸು, ಇಷ್ಟು ದಿನ ನೀನು ನನ್ನ ಜೊತೆ ಮಾಡ್ತಿದ್ದಿದ್ದು ಏನು ಎಂದು ಕೇಳಿದ್ದಾನೆ. ಇದಕ್ಕೂ ಮೊದಲು ಆಕೆ ನನ್ನ ಜೊತೆಗೆ ಇದ್ದಳು ಎಂದು ಹಳೆ ಬಾಯ್‌ಫ್ರೆಂಡ್ ಹೇಳಿದ್ದಾನೆ. ಆಗ ಹೊಸಬ್ಬ ಆತನ ಜೊತೆ ಏನಾಗಿತ್ತು ಎಂದು ಪ್ರಶ್ನೆ ಮಾಡುತ್ತಾನೆ. ಹೀಗೆ ಹಳಬ ಹೊಸಬ್ಬ ಇಬ್ಬರೂ ಸೇರಿ ಯುವತಿಗೆ ವಿಮಾನದಲ್ಲೇ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. 

ನೀನು ಬರೀ ಸುಳ್ಳೇ ಹೇಳುತ್ತಿದ್ದೀಯಾ ನನ್ನ ಹತ್ತಿರ ಬರಬೇಡ, ನನ್ನಿಂದ ದೂರ ಇರು ಎಂದು ಹೊಸ ಬಾಯ್‌ಫ್ರೆಂಡ್ ಹೇಳುತ್ತಿದ್ದರೆ, ಅತ್ತ ಹಳೆ ಬಾಯ್ಫ್ರೆಂಡ್ ಆತ ನಿನ್ನ ಬಾಯ್‌ಫ್ರೆಂಡ್ ಆಗಿದ್ದರೆ, ನೀನು ನನ್ನ ಜೊತೆ ಏನು ಮಾಡುತ್ತಿದೆ ಎಂದು ಕೇಳಿದ್ದಾನೆ. ಅದಕ್ಕೆ ಆಕೆ ಅದು ನನ್ನ ವೈಯಕ್ತಿಕ ವಿಚಾರ ಎಂದಿದ್ದಾಳೆ. ಅಲ್ಲದೇ ಹೊಸ ಗೆಳೆಯ ಕೈ ಹಿದಿಡುಕೊಂಡು ಮತ್ತೆ ಅದೇ ಸೀಟಿನಲ್ಲಿ ಇಬ್ಬರು ಕೂತಿದ್ದಾರೆ. ಅಲ್ಲದೇ ಹಳೆ ಗೆಳೆಯನಿಗೆ ಬಾಯ್ ಮುಚ್ಚು ಎಂದು ಬೈದಿದ್ದಾಳೆ. ಇಷ್ಟೆಲ್ಲಾವನ್ನು ನೋಡಿದ ವಿಮಾನದ ಸಿಬ್ಬಂದಿ ಮಧ್ಯಪ್ರವೇಶಿಸಿದ್ದು,  ಗರ್ಲ್‌ಫ್ರೆಂಡ್‌ನಿಂದ ಮೋಸಕ್ಕೊಳಗಾದ ಯುವಕನಿಗೆ ಸಮಾಧಾನ ಪಡಿಸಲು ಯತ್ನಿಸಿದ್ದಾರೆ. 

ವಿಮಾನದಲ್ಲಿ ಯಾರ್ ಜೊತೆ ಕೂತ್ರು ಈ ಶಿಲ್ಪಾ ಶೆಟ್ಟಿ ಜೊತೆ ಮಾತ್ರ ಕೂರ್ಬೇಡಿ ಎಂದ ಫರ್ಹಾ ಖಾನ್‌

ದಯವಿಟ್ಟು ನಿಮ್ಮ ಆಸನದಲ್ಲಿ ಹೋಗಿ ಕುಳಿತುಕೊಳ್ಳಿ ಎಂದು ಯುವಕನಿಗೆ ಗಗನಸಖಿ ಹೇಳಿದ್ದಾಳೆ. ನೀರು ಬೇಕೆ ಎಂದು ಕೇಳಿದ್ದಾಳೆ. ಅದಕ್ಕೆ ಆತ ಕ್ಷಮಿಸಿ ತೊಂದರೆ ಮಾಡಿದ್ದಕ್ಕೆ ಎಂದು ಹೇಳಿ ಆತನ ಸೀಟಿನಲ್ಲಿ ಹೋಗಿ ಕುಳಿತಿದ್ದಾನೆ. ಈ ವೇಳೆ ಆತನ ಪಕ್ಕ ಇರುವ ಸೀಟಿನಲ್ಲಿ ನಾನು ಕೂರಬಹುದೇ ಎಂದು ವಿಮಾನದ ಗಗನಸಖಿಯನ್ನು ಯುವತಿಯ ಹೊಸ ಬಾಯ್‌ಫ್ರೆಂಡ್ ಕೇಳಿದ್ದು,  ನಂತರ ಗಗನಸಖಿ ಇಬ್ಬರಿಗೂ ಅಕ್ಕಪಕ್ಕದಲ್ಲಿ ಸೀಟು ಕೊಟ್ಟಿದ್ದಾರೆ. ಈ ವೇಳೆ ಹಳೆ ಗೆಳೆಯ ಸಹೋದರ ನಿನಗೆ ಆಕೆಯ ಬಗ್ಗೆ ಸ್ವಲ್ಪ ತಿಳಿಸಬೇಕು ಎಂದು ಹೇಳಿದ್ದು, ಅಲ್ಲಿಗೆ ಈ ವಿಡಿಯೋ ಮುಕ್ತಾಯವಾಗಿದೆ.

ಪ್ಲೈಯಿಂಗ್ ಇನ್ಸ್ಟಿಟ್ಯೂಟ್‌ ನಾಗಪುರ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ. 

ವಿಮಾನದ ಸಿಬ್ಬಂದಿ ಕೆಲವೊಮ್ಮೆ ಇಂತಹ ಸ್ಥಿತಿಯನ್ನು ಕೂಡ ನಿಭಾಯಿಸಬೇಕಾಗುತ್ತದೆ. ಆದರೆ ಇಂತಹ ಸ್ಥಿತಿ ತೀರಾ ಅಪರೂಪ ಆದರೂ ಯಾರೊಬ್ಬರ ಸುರಕ್ಷತೆಗೂ ಹಾನಿಯಾಗದಂತೆ ಈ ಪರಿಸ್ಥಿತಿಯನ್ನು ವಿಮಾನ ಸಿಬ್ಬಂದಿ ಯಾರ ಪರ ಪೂರ್ವಾಗ್ರಹಪೀಡಿತರಾಗದೇ ನಿಭಾಯಿಸಬೇಕಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಆದರೆ ಎಲ್ಲಿ ಯಾವಾಗ ಈ ಘಟನೆ ನಡೆದಿದೆ ಎಂಬುದನ್ನು ಎಲ್ಲೂ ಉಲ್ಲೇಖಿಸಿಲ್ಲ, ಕೆಲವರು ಇದು ಸ್ಕ್ರಿಪ್ಟೆಡ್ ವೀಡಿಯೋ ಆಗಿದೆ ಎಂದು ಹೇಳಿದ್ದಾರೆ. 

 

 

 

click me!