ಕತ್ರಿನಾ ಜೊತೆ ರಣಬೀರ್ ಡೇಟಿಂಗ್, ವಿಷ್ಯ ಗೊತ್ತಿದ್ರೂ ಮದುವೆ ಕನಸು ಕಾಣ್ತಿದ್ದ ಆಲಿಯಾ

By Roopa Hegde  |  First Published Sep 20, 2024, 3:29 PM IST

ಬಾಲಿವುಡ್ ಸ್ಟಾರ್ ಜೋಡಿ, ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್. ಮದುವೆಯಾಗಿ ಎರಡು ವರ್ಷವಾಗಿದ್ರೂ ಅವರ ಲವ್ ಸ್ಟೋರಿ ಫ್ಯಾನ್ಸ್ ಗಮನ ಸೆಳೆಯುತ್ತದೆ. ಅದ್ರಲ್ಲೂ ಆಲಿಯಾ ಕಾನ್ಫೆಡೆನ್ಸನ್ನು ಅಭಿಮಾನಿಗಳು ಮೆಚ್ಚಿದ್ದಸಾರೆ. 


ಬಾಲಿವುಡ್ ಪ್ರಸಿದ್ಧ ನಟಿ ಆಲಿಯಾ ಭಟ್ (Bollywood famous actress Alia Bhatt) ಪ್ರೀತಿ ವಿಷ್ಯದಲ್ಲೂ ಲಕ್ಕಿ. ಪ್ರೀತಿಸಿದ ಹುಡುಗನನ್ನೇ ಮದುವೆಯಾಗಿ ತಮ್ಮ ಕನಸನ್ನು ನನಸು ಮಾಡ್ಕೊಂಡಿದ್ದಾರೆ. ಸ್ಟಾರ್ ಕಲಾವಿದರು, ಸಾಮಾನ್ಯ ಹುಡುಗಿಯರ ಡ್ರೀಮ್ ಬಾಯ್ (dream boy) ಆಗಿರೋದು ಸಹಜ. ಆದ್ರೆ ಅಲಿಯಾ ಭಟ್ ಕನಸಿನ ರಾಜಕುಮಾರ ರಣಬೀರ್ ಕಪೂರ್ (Ranbir Kapoor) ಆಗಿದ್ರು. ಫಸ್ಟ್ ಸೈಟ್ ನಲ್ಲೇ ಲವ್ ಆಗಿತ್ತು ಆಲಿಯಾಗೆ. ತನ್ನ ಹುಡುಗ ಬೇರೆ ಹುಡುಗಿಯ ಜೊತೆ ಡೇಟ್ ಮಾಡ್ತಿದ್ದಾನೆ ಎಂಬುದು ಗೊತ್ತಿದ್ರೂ ಆಲಿಯಾ ಟೆನ್ಷನ್ ಮಾಡ್ಕೊಳ್ಳಲಿಲ್ಲ. ಕೂಲ್ ಆಗಿ ಎಲ್ಲವನ್ನೂ ಹ್ಯಾಂಡಲ್ ಮಾಡಿದ್ದ ಆಲಿಯಾ, ರಣಬೀರ್, ಕತ್ರಿನಾ ಕೈಫ್ (Katrina Kaif) ಪ್ರೀತಿಯಲ್ಲಿದ್ರೂ ನಾನು ರಣಬೀರ್ ಮದುವೆ ಆಗ್ತೇನೆ ಎಂದು ಕಾನ್ಫಿಡೆನ್ಸ್ ಆಗಿ ಹೇಳಿದ್ದರು. ಅದನ್ನು ಜನರು ತಮಾಷೆ ಅಂದ್ಕೊಂಡ್ರೂ, ಆಲಿಯಾ ಮಾತ್ರ ಪ್ರೀತಿ ಪಡೆಯೋದ್ರಲ್ಲಿ ಸಕ್ಸಸ್ ಆಗಿದ್ದಾರೆ. 

ಮಕ್ಕಳು‌ ಅಮ್ಮನ‌‌ ಮುಂದೆ ‌‌ಬೇರೆಯವರನ್ನು‌ ಹೊಗಳಿದ್ರೆ‌ ಸಹಿಸೋದು ಕಷ್ಟ..ಸೀತಾ‌ ನೋವು‌ ಸಿಹಿಗೆ ಗೊತ್ತಾಗ್ತಿಲ್ಲ

Tap to resize

Latest Videos

ರಣಬೀರ್ ಕಪೂರ್ ಹೆಸರಿಗೆ ಒಂದಾದ್ಮೇಲೆ ಒಂದು ಹುಡುಗಿ ಹೆಸರು ಥಳುಕು ಹಾಕಿಕೊಳ್ತಿದ್ದ ಸಮಯ ಅದು. ಬ್ಲಾಕ್ ಸಿನಿಮಾ ಸೆಟ್ ನಲ್ಲಿ ರಣಬೀರ್ ಅವರನ್ನು ಮೊದಲು ನೋಡಿದ್ದ ಆಲಿಯಾ, ಅಲ್ಲೇ ಕ್ಲೀನ್ ಬೋಲ್ಡ್ ಆಗಿದ್ದರು. ಕರಣ್ ಜೋಹರ್ ಶೋ ಕಾಫಿ ವಿತ್ ಕರಣ್ (Koffee With Karan) ನಲ್ಲಿ ಮಾತನಾಡಿದ್ದ ಆಲಿಯಾ, ತಮ್ಮ ಪ್ರೀತಿ, ದೃಢ ನಿರ್ಧಾರದ ಬಗ್ಗೆ ಹೇಳಿದ್ದರು. ಈ ಶೋನಲ್ಲಿ ರಣಬೀರ್ ಹೊಗಳಿದ್ದ ಆಲಿಯಾ, ಅವರನ್ನು ಮದುವೆ ಆಗುವ ಬಯಕೆ ವ್ಯಕ್ತಪಡಿಸಿದ್ದರು. ಆಲಿಯಾ ಈ ಓಪನ್ ಮಾತು ಕೇಳಿ ಕರಣ್ ಜೋಹರ್ ದಂಗಾಗಿದ್ದರು. ಈ ಸಮಯದಲ್ಲಿ ಕತ್ರಿನಾ ಜೊತೆ ರಣಬೀರ್ ಹೆಸರು ಸೇರಿತ್ತು, ಇಬ್ಬರು ಡೇಟ್ ಮಾಡ್ತಿದ್ದು, ಮದುವೆ ಆಗ್ತಾರೆ ಎನ್ನುವ ಸುದ್ದಿ ಇತ್ತು. ಆದ್ರೆ ಅದ್ಯಾವುದಕ್ಕೂ ಆಲಿಯಾ ಕ್ಯಾರೆ ಎಂದಿರಲಿಲ್ಲ. ರಣಬೀರ್ ಕನಸಿನಲ್ಲಿ ಕಳೆದುಹೋಗಿದ್ದ ಆಲಿಯಾ, ತಮ್ಮ ಪ್ಲಾನ್ ಬಗ್ಗೆ ವಿವರಿಸಿದ್ದರು. ಈ ವಿಷ್ಯ ನನ್ನ ತಂದೆ ಹಾಗೂ ರಣಬೀರ್ ಕಪೂರ್ ತಾಯಿ ನೀತೂ ಕಪೂರ್ ಗೆ ಗೊತ್ತು ಎಂದಿದ್ದ ಆಲಿಯಾ, ರಣಬೀರ್ ಕಪೂರ್ ಗೆ ಮಾತ್ರ ತಿಳಿದಿಲ್ಲ ಎಂದಿದ್ದರು. 

ಕತ್ರಿನಾ ಬ್ರೇಕ್ ಅಪ್ ಆಗ್ತಿದ್ದಂತೆ ಆಲಿಯಾಗೆ ಬ್ರಹ್ಮಾಸ್ತ್ರದ ರೂಪದಲ್ಲಿ ರಣಬೀರ್ ಸಿಕ್ಕಿದ್ರು. ಇಬ್ಬರು ಒಟ್ಟಿಗೆ ಸಿನಿಮಾ ಮಾಡಿದ್ದಲ್ಲದೆ ಡೇಟಿಂಗ್ ಶುರು ಮಾಡಿದ್ದರು. ಫಿಲ್ಮಂ ಫೇರ್ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಒಂದಾಗಿ ಕಾಣಿಸಿಕೊಳ್ತಿದ್ದ ಜೋಡಿ ಬಗ್ಗೆ ವದಂತಿ ಹಬ್ಬಲು ಶುರುವಾಗ್ತಿರುವಾಗ್ಲೇ ಆಲಿಯಾ ತಮ್ಮ ರಿಲೇಶನ್ಶಿಪ್ ದೃಢಪಡಿಸಿದ್ದರು. ಏಪ್ರಿಲ್ 14, 2022ರಲ್ಲಿ ಮದುವೆಯಾದ ಜೋಡಿಗೆ ಎಂಟು ತಿಂಗಳ ನಂತ್ರ ಮಗುಹುಟ್ಟಿತ್ತು. ಆಲಿಯಾ – ರಣಬೀರ್ ಮದುವೆಯಾಗಿ ಎರಡು ವರ್ಷ ಕಳೆದಿದೆ. ಮದುವೆಗೆ ಮುನ್ನವೂ ತಮ್ಮ ರಿಲೇಶನ್ಶಿಪ್ ಓಪನ್ ಆಗಿಟ್ಟುಕೊಂಡಿದ್ದ ಜೋಡಿ ಈಗ್ಲೂ ತಮ್ಮಿಬ್ಬರ ಸಂಬಂಧದ ಬಗ್ಗೆ ಆಗಾಗ ಮಾತನಾಡ್ತಿರುತ್ತಾರೆ. ಆಲಿಯಾ ಸ್ವಭಾವ ನನ್ನಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂದು ಈ ಹಿಂದೆ ರಣಬೀರ್ ಹೇಳಿದ್ದರು. 

ಜೊಳ್ಳು ಹೋಗಿ, ಹೊಸ ಎಪಿಸೋಡ್​ ​ ಬಂದಿದೆ... ಹಳೆಯದ್ದನ್ನು ಮರೆತಿರುವೆ: ಡಿವೋರ್ಸ್​ ಬಗ್ಗೆ ಕಿರಿಕ್​ ಕೀರ್ತಿ ಓಪನ್​ ಮಾತೇನು?

ಆ ಟೈಂನಲ್ಲಿ ಕತ್ರಿನಾಗೆ ಹತ್ತಿರವಾಗಿದ್ದ ಆಲಿಯಾ ಭಟ್, ತಮಾಷೆ ಮಾಡ್ತಾರೆಂದು ಅಭಿಮಾನಿಗಳು ಭಾವಿಸಿದ್ದರು. ಆದ್ರೆ ಆಲಿಯಾ ಸತ್ಯವನ್ನೇ ಹೇಳಿದ್ರು. ತಮ್ಮಿಷ್ಟದಂತೆ ರಣಬೀರ್ ಕಪೂರ್ ಮದುವೆ ಆಗಿದ್ದಾರೆ. ಇಬ್ಬರ ಆಲಿಯಾ ಹಾಗೂ ರಣಬೀರ್ ಕಪೂರ್ ಮಧ್ಯೆ 10 ವರ್ಷಗಳ ಅಂತರವಿದೆ. ಕತ್ರಿನಾ, ದೀಪಿಕಾ ಪಡುಕೋಣೆ (Deepika Padukone) ಸೇರಿದಂತೆ ಇನ್ನೂ ಕೆಲ ನಟಿಯರ ಜೊತೆ ರಣಬೀರ್ ಸುತ್ತಾಡುವ ಸುದ್ದಿ ಕೇಳಿದ್ದ ಜನರು ಆಲಿಯಾ ಇನ್ನೊಬ್ಬರಾಗ್ತಾರೆ ಎಂದ್ಕೊಂಡಿದ್ದರು. ಆದ್ರೆ ಆಲಿಯಾ ಇದನ್ನು ಸುಳ್ಳು ಮಾಡಿದ್ದಾರೆ. 

click me!