ದಾರಿಯಲ್ಲಿ ಬಿದ್ದ ಹಿರಿಯರೊಬ್ಬರ ನೆರವಿಗೆ ಧಾವಿಸಿದ ಯುವಕ ವಿದ್ಯುತ್ ಸ್ಪರ್ಶಿಸಿ ಸಾವು!

By Chethan KumarFirst Published Sep 21, 2024, 3:58 PM IST
Highlights

ಹಿರಿಯರೊಬ್ಬರು ದಾರಿಯಲ್ಲಿ ಬಿದ್ದು ತೀವ್ರ ಪರದಾಡಿದ್ದನ್ನು ನೋಡಿದ 22ರ ಯುವಕ ಬೈಕ್ ನಿಲ್ಲಿಸಿ ವೃದ್ಧನ ನೆರವಿಗೆ ಧಾವಿಸಿದ್ದಾನೆ. ಆದರೆ ನೆರವು ನೀಡುತ್ತಿದ್ದಂತೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ದಾರುಣ ಘಟನೆ ನಡೆದಿದೆ. 

ಘಾಜಿಯಾಬಾದ್(ಸೆ.21) ದಾರಿಯಲ್ಲಿ ನಡೆದು ಸಾಗುತ್ತಿದ್ದ ವೃದ್ಧರೊಬ್ಬರು ಜೋತು ಬಿದ್ದ ವಿದ್ಯುತ್ ವೈಯರ್ ತಾಗಿ ಕುಸಿದು ಬಿದ್ದಿದ್ದಾರೆ. ವೃದ್ಧ ಕುಸಿದು ಬಿದ್ದಿರುವುದನ್ನು ನೋಡಿದ 22ರ ಯುವಕ ತನ್ನ ಬೈಕ್ ನಿಲ್ಲಿಸಿ ಓಡೋಡಿ ವೃದ್ಧರ ನೆರವಿಗೆ ಧಾವಿಸಿದ್ದಾರೆ. ಆದರೆ ನೆರವು ನೀಡುತ್ತಿದ್ದಂತೆ ಜೋತು ಬಿದ್ದ ವಿದ್ಯುತ್ ವೈಯರ್ ಸ್ವರ್ಶಗೊಂಡು ಕ್ಷಣದಲ್ಲೇ ಸ್ಫೋಟ ಹಾಗೂ ಹೊತ್ತಿ ಉರಿದು ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ.

ಮಸೂರಿ ಬಳಿ ಗಂಗಾ ನದಿ ನೀರು ಹರಿದು ಹೋಗಲು ಮಾಡಿರುವ ಕಾಲುವೆ ಬಳಿ ಈ ಘಟನೆ ನಡೆದಿದೆ. ಚಾಂದ್ ಮೊಹಮ್ಮದ್ ಅನ್ನೋ ಹಿರಿಯ ವ್ಯಕ್ತಿ ಈ ದಾರಿ ಮೂಲಕ ಸಾಗುವಾಗ ವಿದ್ಯುತ್ ಸ್ಪರ್ಶಿಸಿ ನೆಲಕ್ಕುರುಳಿದ್ದಾರೆ. ಇದೇ ದಾರಿಯಲ್ಲಿ ಸಂಬಂಧಿಕನ ಜೊತೆ ಬೈಕ್ ಮೂಲಕ ತೆರಳುತ್ತಿದ್ದ ಮೊಹಮ್ಮದ್ ಕೈಫ್, ವೃದ್ಧರೊಬ್ಬರು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿದ್ದಾನೆ. ತಕ್ಷಣವೇ ಕೆಲ ದೂರದಲ್ಲೇ ಬೈಕ್ ನಿಲ್ಲಿಸಿದ ಮೊಹಮ್ಮದ್ ಕೈಫ್ ನೇರವಾಗಿ ವೃದ್ಧನ ರಕ್ಷಣೆಗೆ ಧಾವಿಸಿದ್ದಾನೆ.

Latest Videos

ಚಿತ್ರದುರ್ಗ: ಪಾರಿವಾಳ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ಬಲಿಕೊಟ್ಟ ಬಾಲಕ!

ಓಡೋಡಿ ಬಂದ ಕೈಫ್, ಅಸ್ವಸ್ಥಗೊಂಡು ರಸ್ತೆ ಮೇಲೆ ಬಿದ್ದಿದ್ದ ವೃದ್ಧನ ಮೇಲಕ್ಕೆತ್ತಲು ಪ್ರಯತ್ನಿಸಿದ್ದಾನೆ. ಆದರೆ ನೆಲದಿಂದ ಕೆಲ ಎತ್ತರದಲ್ಲಿ ಜೋತು ಬಿದ್ದಿದ್ದ 11 ಕಿಲೋವ್ಯಾಟ್ ವಿದ್ಯುತ್ ವೈಯರ್ ಕೈಫ್ ಎದೆಗೆ ಸ್ಪರ್ಶಸಿಸಿದೆ. ನೋಡ ನೋಡುತ್ತಿದ್ದಂತೆ ಕೈಫ್ ದೇಹದಲ್ಲಿ ವಿದ್ಯುತ್ ಪ್ರವಹಿಸಿದೆ. ಪರಿಣಾಮ ಕೈಫ್ ದೇಹ ಸುಟ್ಟು ಬೂದಿಯಾಗಿದೆ. ಕೈಫ್ ಜೊತೆ ಬಂದ ಸಂಬಂಧಿ ಕೂಡ ಓಡೋದಿ ವೃದ್ಧನ ನೆರವಿಗೆ ಧಾವಿಸಿದಾನೆ. ಆದರೆ ಹತ್ತಿರ ತಲುಪುವ ಮೊದಲೇ ಮೊಹಮ್ಮದ್ ಕೈಫ್ ವಿದ್ಯುತ್ ಪ್ರವಹಿಸಿ ಬಲಿಯಾಗಿದ್ದಾನೆ. 

ನೆಲದ ಮೇಲೆ ಬಿದ್ದಿದ್ದ ವೃದ್ಧ ಚಾಂದ್ ಮೊಹಮ್ಮದ್ ಪಕ್ಕದಲ್ಲೇ ಇದ್ದ ಕಾರಣ ಕೆಲ ಸುಟ್ಟಗಳಾಗಳಾಗಿದೆ. ವೃದ್ಧನ ಆಸ್ಪತ್ರೆ ದಾಖಲಿಸಲಾಗಿದೆ. ಇತ್ತ ಮತ ಯುವಕ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ವಿದ್ಯುತ್ ಪ್ರಸರಣ ನಿಗಮ ವಿರುದ್ಧ ದೂರು ನೀಡಿ ನಿರ್ಲಕ್ಷ್ಯಕ್ಕೆ ಪುತ್ರ ಬಲಿಯಾಗಿರುವ ಆರೋಪ ಮಾಡಿದ್ದಾರೆ. ಇತ್ತ ಸ್ಥಳೀಯರು ವಿದ್ಯುತ್ ಪ್ರಸರಣ ನಿಗಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಲವು ದಿನಗಳಿಂದ ಈ ವಿದ್ಯುತ್ ವೈಯರ್ ಜೋತು ಬಿದ್ದಿದೆ. ಇದನ್ನು ಸರಿಪಡಿಸುವ ಕೆಲಸವನ್ನು ಇಲಾಖೆ ಮಾಡಿಲ್ಲ. ಇದರಿಂದ ಅಮಾಯಕ ಜೀವ ಬಲಿಯಾಗಿದೆ ಎಂದು ಪೋಷಕರು ಅಳಲತ್ತುಕೊಂಡಿದ್ದಾರೆ. 

ರಸ್ತೆ ಬದಿ ನಿಂತಿದ್ದ ಮಳೆನೀರಿಗೆ ಕಾಲಿಡುತ್ತಿದ್ದಂತೆ ಕರೆಂಟ್ ಶಾಕ್: IAS ಪರೀಕ್ಷೆಗೆ ಸಿದ್ದಗೊಳ್ಳುತ್ತಿದ್ದ ವಿದ್ಯಾರ್ಥಿ ಸಾವು
 

click me!