Antim Premiere showನಲ್ಲಿ ಸಲ್ಮಾನ್‌ ಎಕ್ಸ್‌ಗರ್ಲ್‌ಫ್ರೆಂಡ್‌!

First Published Nov 27, 2021, 8:18 PM IST

ಸಲ್ಮಾನ್ ಖಾನ್  (Salman khan) ಆಯುಷ್ ಶರ್ಮಾ (Aayush sharma) ಅವರ ಚಿತ್ರ 'ಆಂಟಿಮ್ - ದಿ ಫೈನಲ್ ಟ್ರುತ್'  (Antim the final truth) ನವೆಂಬರ್ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದರೆ, ಆಯುಷ್ ಶರ್ಮಾ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪುಣೆಯ ಅತ್ಯಂತ ಅಪಾಯಕಾರಿ ಭೂ ಮಾಫಿಯಾದಲ್ಲಿ ಒಬ್ಬನಾದ ರಾಹುಲ್ (ಆಯುಷ್ ಶರ್ಮಾ) ಎಂಬ ಸಣ್ಣ-ಪಟ್ಟಣದ ಯುವಕನ ಕಥೆಯು ಈ ಚಿತ್ರವಾಗಿದೆ. ಅಂತಿಮ್‌ನ ಪ್ರೀಮಿಯರ್ ಶೋ ಅನ್ನು ನವೆಂಬರ್ 25 ರಂದು ನಡೆಸಲಾಯಿತು. ಇದರಲ್ಲಿ ಚಿತ್ರದ ತಾರಾಬಳಗದ ಹೊರತಾಗಿ ಗ್ಲಾಮರ್ ಇಂಡಸ್ಟ್ರಿಯ ಫೇಮಸ್ ವ್ಯಕ್ತಿಗಳು ವೀಕ್ಷಿಸಲು ಬಂದಿದ್ದರು.

ಅಂತಿಮ್‌ ಸಿನಿಮಾದಲ್ಲಿ ಸಲ್ಮಾನ್ ಖಾನ್ ಪ್ರಮುಖ ಪಾತ್ರದಲ್ಲಿದ್ದಾರೆ. ಅವರು ಪೊಲೀಸ್ ಇನ್ಸ್‌ಪೆಕ್ಟರ್ ರಾಜವೀರ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಂದಿನಂತೆ, ಅವನು ಅಪರಾಧವನ್ನು ಕೊನೆಗೊಳಿಸುವ ಪೋಲಿಸ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಮುಂಬೈ ಪಿವಿಆರ್ ಜುಹುದಲ್ಲಿ ನಡೆದ ಅಂತಿಮ್‌ ಪ್ರೀಮಿಯರ್ ಶೋನಲ್ಲಿ 'ದಬಾಂಗ್' ಖ್ಯಾತಿಯ ಸಲ್ಮಾನ್ ಖಾನ್ ಅವರ ಸ್ವಾಗ್‌ ಕಂಡು ಬಂದಿದೆ. ಎಂದಿನಂತೆ ಅವರು ತಮ್ಮ ಆಟಿಟ್ಯೂಡಿನಲ್ಲಿ ಕಾಣಿಸಿಕೊಂಡರು. ಅವರು ಪ್ರೀಮಿಯರ್ ತಲುಪಿದ ತಕ್ಷಣ, ಎಲ್ಲಾ ಕ್ಯಾಮೆರಾಗಳು ಅವರನ್ನು ಕ್ಲಿಕ್‌ ಮಾಡಲು ಪ್ರಾರಂಭಿಸಿದವು.

ಆಯುಷ್ ಶರ್ಮಾ ಕುಟುಂಬ ಸಮೇತ ಸಿನಿಮಾ ವೀಕ್ಷಿಸಲು ಬಂದಿದ್ದರು. ಸಲ್ಮಾನ್‌ ಖಾನ್‌ ಸಹೋದರಿ ಹಾಗೂ ಅಯುಷ್‌ ಶರ್ಮಾ ಪತ್ನಿ ಅರ್ಪಿತಾ ಮತ್ತು ಆಕೆಯ ಅತ್ತೆ ಕೂಡ ಅವರೊಂದಿಗೆ ಇದ್ದರು. ಇವಲ್ಲದೆ ಇನ್ನೂ ಅನೇಕ ಬಂಧುಗಳು ಕಂಡರು.

ಟಿವಿ ಕ್ವೀನ್ ಏಕ್ತಾ ಕಪೂರ್ ಕೂಡ ಸಲ್ಮಾನ್ ಖಾನ್ ಸಿನಿಮಾದ ಪ್ರೀಮಿಯರ್‌ ಶೊನಲ್ಲಿ ಹಾಜರಾರಿದ್ದರು. ಅದೇ ಸಮಯದಲ್ಲಿ, ಬಾಬಿ ಡಿಯೋಲ್ ಕೂಡ ಪ್ರೀಮಿಯರ್ ಶೋ ಕಾಣಿಸಿಕೊಂಡರು. ಏಕ್ತಾ ಕಪೂರ್ ಕೆಂಪು ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಬಾಬಿ ಬಿಳಿ ಟಿ-ಶರ್ಟ್‌ನಲ್ಲಿ ಕೂಲ್ ಆಗಿ ಕಾಣಿಸಿಕೊಂಡರು.
 

ಬಾಲಿವುಡ್ ಹಾಟ್‌ ಹಾಗೂ ಟ್ಯಾಲೆಂಟೆಡ್‌ ನಟಿ ದಿಶಾ ಪಟಾನಿ ಮತ್ತು ಸುನೀಲ್ ಶೆಟ್ಟಿ ಕೂಡ ಚಿತ್ರ ವೀಕ್ಷಿಸಲು ಬಂದಿದ್ದರು.  ಈ ಸಮಯದಲ್ಲಿ ದಿಶಾ ಪಟಾನಿ ಎಂದಿನಂತೆ ಸೆಕ್ಸಿ ಔಟ್‌ಪಿಟ್‌ನಲ್ಲಿ ಕಾಣಿಸಿಕೊಂಡರೆ, ಧಡ್ಕನ್ ಖ್ಯಾತಿಯ ಶೆಟ್ಟಿ ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.

ತಮ್ಮ ಕ್ಯೂಟ್‌ ಸ್ಮೈಲ್‌ಗೆ ಫೇಮಸ್‌ ಆಗಿರುವ ಬಾಲಿವುಡ್‌ ನಟಿ ಜೆನಿಲಿಯಾ ಡಿಸೋಜಾ ಕೂಡ ಸಲ್ಮಾನ್‌ ಖಾನ್‌ ಅವರ ಚಿತ್ರವನ್ನು ವೀಕ್ಷಿಸಲು ಆಗಮಿಸಿದರು. ಈ ಸಮಯದಲ್ಲಿ ಜೆನಿಲಿಯಾ ತುಂಬಾ ಮುದ್ದಾಗಿ ಕಾಣುತ್ತಿದ್ದರು.

ಸಲ್ಮಾನ್ ಖಾನ್ ಅವರ ಸ್ವೇಷಲ್‌ ಫ್ರೆಂಡ್‌  ಅಥವಾ ಮಾಧ್ಯಮಗಳಲ್ಲಿ ಅವರ ಪ್ರಸ್ತುತ ಗರ್ಲ್‌ಫ್ರೆಂಡ್‌ ಎಂದೇ ಕರೆಯಲ್ಪಡುವ ನಟಿ ಯುಲಿಯಾ ವಂಟೂರ್ (Iulia Vantur) ಕಾಣಿಸಿಕೊಂಡಿದ್ದು ಹೀಗೆ.

ಬಾಲಿವುಡ್‌ನ ಸಂಗೀತ ನಿರ್ದೇಶಕ ಹಿಮೇಶ್ ರೇಶಮಿಯಾ ಪತ್ನಿಯೊಂದಿಗೆ ಶೋನಲ್ಲಿ ಹಾಜರಿದ್ದರು. ಹಿಮೇಶ್ ರೇಶಮಿಯಾ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಜೊತೆ ಉತ್ತಮ ಬಾಂಡಿಂಗ್‌ ಹೊಂದಿದ್ದಾರೆ. ಹಿಮೇಶ್ ಅವರ ಬಾಲಿವುಡ್‌ ಕೆರಿಯರ್‌ ಹಿಂದೆ ಸಲ್ಮಾನ್‌ ಅವರ ದೊಡ್ಡ ಸಹಾಯವಿದೆ.

ಸಲ್ಮಾನ್ ಖಾನ್ ಅವರ ಮಾಜಿ ಗರ್ಲ್‌ ಫ್ರೆಂಡ್‌ ಸಂಗೀತಾ ಬಿಜಲಾನಿ ಕೂಡ ಪ್ರೀಮಿಯರ್ ಶೋಗೆ ಆಗಮಿಸಿ ಎಲ್ಲರಿಗೂ ಶಾಕ್‌ ನೀಡಿದರು. ಈ ಸಮಯದಲ್ಲಿ ಸಂಗೀತಾ ತುಂಬಾ ಸುಂದರವಾಗಿ ಕಾಣುತ್ತಿದ್ದರು.

click me!