ಚಿತ್ರ ನಟಿಯರಾಗಲು ಕೆಲವು ಯುವತಿಯರು ಯಾವ ಮಟ್ಟಿಗೆ ಇಳಿಯುತ್ತಿದ್ದಾರೆ ಎನ್ನುವ ಸಿನಿ ಇಂಡಸ್ಟ್ರಿಯ ಭಯಾನಕ ರೂಪವನ್ನು ಬಿಚ್ಚಿಟ್ಟಿದ್ದಾರೆ ನಟಿ ರಾಖಿ ಸಾವಂತ್.
ಚಿತ್ರರಂಗ ಎಂದರೆ ಕಾಸ್ಟಿಂಗ್ ಕೌಚ್ ಎನ್ನುವುದನ್ನು ಇದುವರೆಗೆ ಕೇಳಿಕೊಂಡು ಬಂದಿದ್ದೇವೆ. ಯುವತಿಯರನ್ನು ನಟಿಯರನ್ನಾಗಿ ಮಾಡಬೇಕು ಎಂದರೆ ಡೈರೆಕ್ಟರ್, ಪ್ರೊಡ್ಯೂಸರ್... ಹೀಗೆ ಚಿತ್ರರಂಗದ ಕೆಲವರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು, ಅವರು ಮಂಚಕ್ಕೆ ಕರೆದಾಗ ಹೋಗಬೇಕು... ಇತ್ಯಾದಿ ಇತ್ಯಾದಿ. ಈ ಬಗ್ಗೆ ಇದಾಗಲೇ ಹಲವಾರು ಮಂದಿ ನಟಿಯರು ತಮಗಾಗಿರುವ ಕರಾಳ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ. ಬಟ್ಟೆ ಬಿಚ್ಚು ಎಂದರು, ಮಲಗಲು ಬಾ ಎಂದರು, ಅಡ್ಜೆಸ್ಟ್ ಮಾಡ್ಕೋ ಎಂದರು... ಹಾಗೆ ಹೀಗೆ ಎಂದೆಲ್ಲಾ ನಟಿಯರು ಹೇಳಿಕೊಂಡಿದ್ದಾರೆ. ಇದರ ಜೊತೆಗೆ ತಾವು ಯಾವುದೇ ರೀತಿಯ ಅಡ್ಜೆಸ್ಟ್ ಮಾಡಿಕೊಳ್ಳಲು ತಯಾರಿಲ್ಲದ ಹಿನ್ನೆಲೆಯಲ್ಲಿ ತಮಗೆ ಛಾನ್ಸ್ ಸಿಕ್ಕಿಲ್ಲ ಎಂದು ಕೆಲವರು ಹೇಳಿಕೊಂಡಿದ್ದರೆ, ತಮ್ಮ ಸ್ವಂತ ಪ್ರಯತ್ನದ ಬಲದಿಂದ ಕಷ್ಟಪಟ್ಟು ಮೇಲಕ್ಕೆ ಬಂದಿರುವುದಾಗಿ ಇನ್ನು ಕೆಲವರು ಹೇಳಿದ್ದಾರೆ. ಇದು ಸಿನಿ ಇಂಡಸ್ಟ್ರಿಯ ಒಂದು ಮುಖ.
ಆದರೆ ಇನ್ನೊಂದು ಮುಖದ ಬಗ್ಗೆಗಿನ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್. ರಾಖಿ ಸಾವಂತ್ ಎಂದಾಕ್ಷಣ ಕಣ್ಣೆದುರಿಗೆ ಬರುವ ಚಿತ್ರಣವೇ ಬೇರೆ. ಸದಾ ಕಾಂಟ್ರವರ್ಸಿಗಳಿಂದಲೇ ಫೇಮಸ್ ಆಗಿರೋ ಇವರು ಮಾಡಿದ್ದೆಲ್ಲಾ ನಾಟಕ, ಇವರಿಗೆ ಮಾನಸಿಕ ಸಮಸ್ಯೆ ಇದೆ ಎಂದೆಲ್ಲಾ ಅಂದುಕೊಳ್ಳುವವರೇ ಹೆಚ್ಚು. ಅದರಲ್ಲಿಯೂ ಆದಿಲ್ ಖಾನ್ ದುರ್ರಾನಿ ಅವರನ್ನು ಮದುವೆಯಾದ ಮೇಲೆ ನಡೆದಿರುವ ನಾಟಕಗಳು ಎಲ್ಲರಿಗೂ ತಿಳಿದದ್ದೇ.
ಎದೆ ಮೇಲಿಂದ ಜಾರಿ ಬೀಳ್ತಿರೋ ಶೆರ್ಲಿನ್ ಬಟ್ಟೆ: ವಿಡಿಯೋ ನೋಡಿ ಬಂದು ಸರಿ ಮಾಡ್ಲಾ ಕೇಳ್ತಿದ್ದಾರೆ ಫ್ಯಾನ್ಸ್!
ಆದರೆ ಇದೀಗ ನಟಿ ಯುವತಿಯರ ಭಯಾನಕ, ಕರಾಳ ರೂಪವನ್ನು ತೆರೆದಿಟ್ಟಿದ್ದಾರೆ. ನಟಿಯಾಗ ಬಯಸಲು ನಿರ್ದೇಶಕರು, ನಿರ್ಮಾಪಕರ ಬಳಿ ಇರುವ ಹಲವು ಯುವತಿಯರು ಹೇಗೆ ನಡೆದುಕೊಳ್ಳುತ್ತಾರೆ ಎಂದು ರಾಖಿ ಈ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಂಡಸ್ಟ್ರಿಯಲ್ಲಿ ರೇಪ್ ನಡೆಯುವುದಿಲ್ಲ. ಬದಲಿಗೆ ರೇಪ್ ಮಾಡಿಸಿಕೊಳ್ಳಲು ಯುವತಿಯರು ಮುಂದೆ ಬರುತ್ತಾರೆ. ತೀರಾ ಅಸಭ್ಯ, ಅಶ್ಲೀಲ ರೀತಿಯಲ್ಲಿ ನಡೆದುಕೊಂಡು, ಮುಂದೆ ಇರುವವರನ್ನು ಉತ್ತೇಜಿಸಿ ನಂತರ ಎಲ್ಲವನ್ನೂ ರಿಕಾರ್ಡ್ ಮಾಡಿಕೊಂಡು ನಿರ್ದೇಶಕರು, ನಿರ್ಮಾಪಕರನ್ನೇ ಬ್ಲ್ಯಾಕ್ಮೇಲ್ ಮಾಡುತ್ತಾರೆ. ಅವರಿಗೆ ಅಭಿನಯದ ಗಂಧಗಾಳಿಯೂ ಇರುವುದಿಲ್ಲ, ಎಬಿಸಿಡಿಯೂ ಗೊತ್ತಿರುವುದಿಲ್ಲ. ಆದರೆ ಆ ವಿಡಿಯೋ ಹಿಡಿದುಕೊಂಡು ಬ್ಲ್ಯಾಕ್ಮೇಲ್ ಮಾಡಿ, ಇದನ್ನು ನಿಮ್ಮ ಮನೆಯವರಿಗೆ ತೋರಿಸಲಾ ಅಥವಾ ನಟಿಯರನ್ನಾಗಿ ಮಾಡುತ್ತೀರಾ ಎಂದು ಬ್ಲ್ಯಾಕ್ಮೇಲ್ ಮಾಡುತ್ತಾರೆ. ಇದರಿಂದ ಬೇರೆ ದಾರಿ ಕಾಣದೇ ಅವರನ್ನು ನಟಿಯರನ್ನಾಗಿ ಮಾಡಲಾಗುತ್ತದೆ ಎಂದಿದ್ದಾರೆ.
ಇದನ್ನು ನೋಡಿದ ಕೆಲವರು ಈಕೆ ದೀಪಿಕಾ ಪಡುಕೋಣೆಯವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಅವರು ಯಾರನ್ನು ಟಾರ್ಗೆಟ್ ಮಾಡಿದ್ದಾರೋ ಗೊತ್ತಿಲ್ಲ, ಆದರೆ ಕಾಸ್ಟಿಂಗ್ ಕೌಚ್ ಎಂದು ಹಲವು ನಟಿಯರು ಹೇಳಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಯುವತಿಯರೇ ಹೇಗೆ ಬ್ಲ್ಯಾಕ್ ಮಾಡುವ ಸನ್ನಿವೇಶವೂ ಇದೆ ಎನ್ನುವುದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಲ್ಚಲ್ ಸೃಷ್ಟಿಸುತ್ತಿದೆ.
ಬೆಡ್ರೂಮ್ ಕಮಿಟ್ಮೆಂಟ್ ಇಲ್ಲದಿದ್ರೆ ಟಾಪ್ ನಾಯಕಿಯಾಗೋದು ಕಷ್ಟ! ರಮ್ಯಾ ಕೃಷ್ಣನ್ ಹೇಳಿಕೆ ವೈರಲ್...