ಎಸ್​ಎಸ್​ಎಲ್​ಸಿ ಮಾಡಿದ್ರೂ ಬೇಸಿಕ್​ ಇಂಗ್ಲಿಷ್​ ಬರಲ್ವಾ? ಟ್ರೋಲ್​ ಆಗ್ತಿರೋ ಭಾಗ್ಯಲಕ್ಷ್ಮಿ!

By Suvarna News  |  First Published May 6, 2024, 5:48 PM IST

ಭಾಗ್ಯ ಎಸ್​ಎಸ್​​ಎಲ್​ಸಿ ಮಾಡಿದ್ದರೂ ಬೇಸಿಕ್​ ಇಂಗ್ಲಿಷ್​ ಮಾತನಾಡಲು ಬರದೇ ಇರುವುದಕ್ಕೆ ಸಕತ್​ ಟ್ರೋಲ್​ ಆಗುತ್ತಿದೆ. 
 


ಭಾಗ್ಯ ಹಲವಾರು ಅಡೆತಡೆಗಳನ್ನು ಮೀರಿ ಎಸ್​​ಎಸ್​​ಎಲ್​ಸಿ ಪರೀಕ್ಷೆ ಬರೆದಿದ್ದಾಳೆ. ಆದರೆ ಇದೀಗ ಪರಿಸ್ಥಿತಿ ಚಿಂತಾಜನಕವಾಗಿದೆ. ಗಂಡ- ಹೆಂಡತಿ ನಡುವೆ ಬಿರುಕು ಮೂಡಿದೆ. ಮನೆ ಎರಡು ಭಾಗವಾಗಿದೆ. ಅಷ್ಟಕ್ಕೂ ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್​ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಮಗಳು ತನ್ವಿ ನಿನ್ನ ಅಡುಗೆ ಸಕತ್​ ರುಚಿಯಾಗಿರುತ್ತದೆ ಎಂದಿದ್ದಾಳೆ. ಹಾಗಿದ್ದರೆ ನಾನು ಯಾವುದಾದರೂ ಹೋಟೆಲ್​ನಲ್ಲಿ ಅಡುಗೆಗೆ ಸೇರಿಕೊಳ್ಳಬೇಕು ಎಂದು ಭಾಗ್ಯ ಮನಸ್ಸು ಮಾಡುತ್ತಾಳೆ. ಧೈರ್ಯ ಮಾಡಿ ಒಂದು ಹೋಟೆಲ್​ಗೆ ಹೋದಾಗ ಅವಳನ್ನು ಹೋಟೆಲ್​ ಮಾಲೀಕ ಕೆಲಸ ಇಲ್ಲ ಎಂದು ಹೇಳಿ ಕಳುಹಿಸುತ್ತಾನೆ. ಸಾಲದು ಎನ್ನುವುದಕ್ಕೆ ಆಕೆಗೆ ಅಲ್ಲಿ ಒಂದಿಷ್ಟು ಅವಮರ್ಯಾದೆಯೂ ಆಗುತ್ತದೆ.  

ಹೇಗಾದರೂ ಮಾಡಿ ಭಾಗ್ಯಳನ್ನು ಮನೆಯಿಂದ ಓಡಿಸಲು ತಾಂಡವ್​ ಪ್ರಯತ್ನಿಸುತ್ತಿದ್ದಾನೆ. ಅವನಿಗೆ ಏನಿದ್ದರೂ ಬೇಕಿರುವುದು ಶ್ರೇಷ್ಠಾ ಮಾತ್ರ. ಆದರೆ ಭಾಗ್ಯ ಈಗ ಸುಲಭದಲ್ಲಿ ಜಗ್ಗುತ್ತಿಲ್ಲ.  ಇದೇ  ಕಾರಣಕ್ಕೆ ತಾಂಡವ್​ ಕನಸಿನಲ್ಲಿಯೂ ಭಾಗ್ಯ ಕಾಡುತ್ತಿದ್ದಾಳೆ. ತಾಂಡವ್​ಗೆ ಪತ್ನಿ ಎದುರು ಸೋಲನ್ನು ಅನುಭವಿಸಿದ ಹಾಗಾಗುತ್ತಿದೆ. ಗಂಡಸಾಗಿ ತಾನು ಸೋತೆ ಎನ್ನುವ ಅಹಂ ಅಡ್ಡ ಬರುತ್ತಿದೆ. ಏನೂ ಅರಿಯದ ಪೆದ್ದು ಪತ್ನಿಯನ್ನು ಸುಲಭದಲ್ಲಿ ಮನೆಯಿಂದ ಹೊರಕ್ಕೆ ಹಾಕಬಹುದು ಎಂದುಕೊಂಡಿದ್ದ ತಾಂಡವ್​ಗೆ ಅದು ಸಾಧ್ಯವೇ  ಆಗದ ಸ್ಥಿತಿ. ಪತ್ನಿಗೆ ಎಷ್ಟು ಟಾರ್ಚರ್​ ಕೊಡಬೇಕೋ ಅಷ್ಟನ್ನೆಲ್ಲಾ ಕೊಟ್ಟಾಯ್ತು. ಈತನ ಟಾರ್ಚರ್​ ತಾಳದೇ ಖುದ್ದು ಭಾಗ್ಯಳ ಮಾವನೇ ತನ್ನ ಮಗನಿಗೆ ಡಿವೋರ್ಸ್​ ಕೊಟ್ಟುಬಿಡಮ್ಮಾ, ನಿನ್ನ ಈ ಕಷ್ಟ ನೋಡಲು ಆಗ್ತಿಲ್ಲ ಎಂದೂ ಹೇಳಿ ಆಯ್ತು. ಆದರೆ ಈಕೆ ಭಾಗ್ಯ. ಪತ್ನಿಗಿಂತ ಹೆಚ್ಚಾಗಿ ಇಬ್ಬರು ಮಕ್ಕಳ ಅಮ್ಮ ಈಕೆ. ಸುಲಭದಲ್ಲಿ ಸೋಲನ್ನು ಒಪ್ಪಿಕೊಳ್ತಾಳಾ? ಸಾಧ್ಯವೇ ಇಲ್ಲ.  

Tap to resize

Latest Videos

undefined

ಸ್ವಾಭಿಮಾನದ ಹೆಸ್ರಲ್ಲಿ ನಾಯಕಿಯದ್ದು ಇದ್ರಲ್ಲೂ ಓವರ್​ ಆ್ಯಕ್ಟಿಂಗಾ? ಇದೇನು ಡೈರೆಕ್ಟರೇ... ಫ್ಯಾನ್ಸ್​ ಅಸಮಾಧಾನ

ಕೆಲಸ ಹುಡುಕಿ ಹೋಗಿದ್ದಾಳೆ ಭಾಗ್ಯ. ಬ್ರೋಕರ್​ ಮೂಲಕ ದೊಡ್ಡ ಹೋಟೆಲ್​ಗೆ ಹೋಗಿದ್ದಾಳೆ. ಅಲ್ಲಿ ರಿಸೆಪ್ಷನಿಸ್ಟ್​ ಇಂಗ್ಲಿಷ್​ನಲ್ಲಿ ಏನು ಬೇಕು ಎಂದು ಕೇಳಿದ್ದಾಳೆ. ಆದರೆ ಇದು ಭಾಗ್ಯಳಿಗೆ ಅರ್ಥವಾಗ್ತಿಲ್ಲ, ವಾಪಸ್​ ಇಂಗ್ಲಿಷ್​ನಲ್ಲಿ ರಿಪ್ಲೈ ಮಾಡಲು ಗೊತ್ತಾಗುತ್ತಿಲ್ಲ. ಇದು ಸಾಕಷ್ಟು ಟ್ರೋಲ್​ಗೆ ಒಳಗಾಗುತ್ತಿದೆ. ಭಾಗ್ಯ ಮಗಳ ಜೊತೆ ಇಂಗ್ಲಿಷ್​ ಮೀಡಿಯಂನಲ್ಲಿ ಕಲಿತವಳು. ಬೇಸಿಕ್ ಇಂಗ್ಲಿಷೂ ಮಾತನಾಡಲು ಬರುವುದಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸುತ್ತಿದ್ದಾರೆ. ಪ್ರೈಮರಿಗೆ ಹೋಗುವ ಮಕ್ಕಳೇ ಬೇಸಿಕ್​ ಇಂಗ್ಲಿಷ್​ ಮಾತನಾಡುತ್ತಾರೆ. ಅದೂ ನಾನು ಕೆಲಸ ಹುಡುಕಿಕೊಂಡು ಬಂದಿದ್ದೇನೆ ಎನ್ನುವುದನ್ನು ಇಂಗ್ಲಿಷ್​ನಲ್ಲಿ ಹೇಳಲು ಬರುತ್ತಿಲ್ಲವೆಂದರೆ ನಾಚಿಕೆಗೇಡು ಎನ್ನುತ್ತಿದ್ದಾರೆ.

ಇದು ಭಾಗ್ಯಳಿಗೆ, ಅವಳ ಯೋಗ್ಯತೆಗೆ ಮಾಡುತ್ತಿರುವ ಅವಮಾನ ಎಂದು ಹಲವರು ಹೇಳುತ್ತಿದ್ದಾರೆ. ನಿರ್ದೇಶಕರು ಇಂಥದ್ದನ್ನು ಮಾಡುವಾಗ ಸ್ವಲ್ಪ ತಲೆಯಿಂದ ಯೋಚಿಸಬೇಕು. ಸುಮ್ಮನೇ ಏನನ್ನೋ ತೋರಿಸಲು ಹೋಗಿ ಅಪಹಾಸ್ಯಕ್ಕೆ ಒಳಗಾಗುವುದು ಸರಿಯಲ್ಲ ಎನ್ನುತ್ತಿದ್ದಾರೆ. ಈ ಮೊದಲು ಕೆಲಸ ಕೇಳಿಕೊಂಡು ಹೋಗಿರೋ ಭಾಗ್ಯಳಿಗೆ ಸಿಕ್ಕಾಪಟ್ಟೆ ಅವಮಾನ ಮಾಡಿ ಕಳಿಸಿದ್ದಳು ಲೇಡಿ ಓನರ್​. ನನಗೆ ಈ ಕೆಲಸ ಬೇಕೇ ಬೇಕು ಎಂದು ಭಾಗ್ಯ ಮನವಿ ಮಾಡಿಕೊಂಡ್ರೆ, ಅದೂ ಆ ಓನರ್​ ತಂದೆನೇ ಕೆಲಸಕ್ಕೆ ಓಕೆ ಅಂದಿರುವಾಗಿ ಕೇಳಿನೋಡಿ ಎಂದ್ರೂ ಅವರಿಗೆ ಅರಳುಮರಳು ಎಂದು ಈಕೆ ದಬಾಯಿಸಿದ್ದಳು. ಸಾಲದು ಎನ್ನುವುದಕ್ಕೆ ಕೈ ಹಿಡಿದು ಬೀದಿಗೆ ನೂಕಿದ್ದಳು. ಅಮಾಯಕ ಭಾಗ್ಯ ರಸ್ತೆಯ ಮೇಲೆ ಬಿದ್ದಿದ್ದಳು.
 

ರಾಹುಲ್​ ಗಾಂಧಿ ವಿಡಿಯೋ ವೈರಲ್​: ಥೂ ನಾಚಿಕೆ ಆಗ್ಬೇಕು, ದೇಶ ಬಿಟ್ಟು ಹೋಗಿ ಎಂದ ನಟಿ ಮೇಘಾ!

click me!