ಗಂಡನಿಂದ ವಿಷ್ಯ ಮುಚ್ಚಿಡೋ ಮೊದ್ಲು ಸ್ವಲ್ಪ ಯೋಚ್ನೆ ಮಾಡ್ರಮ್ಮಾ ಅಂತಿರೋದ್ಯಾಕೆ ನೆಟ್ಟಿಗರು!

By Suvarna News  |  First Published May 6, 2024, 12:21 PM IST

ತನ್ನಿಂದ ಒಡವೆ ವಿಷಯ ಮುಚ್ಚಿಟ್ಟು ಅದನ್ನು ಅಡವಿಟ್ಟಿರುವ ಭೂಮಿಕಾ ಮೇಲೆ ಗೌತಮ್​ಗೆ ಬೇಸರವಾಗಿದೆ. ಇದಕ್ಕೆ ನೆಟ್ಟಿಗರು ಕೊಡ್ತಿರೋ ಸಲಹೆ ಏನು? 
 


ಕೆಲವೊಮ್ಮೆ ಯಾವುದೋ ಕಾರಣಕ್ಕೆ ಗಂಡನಿಂದ ಹೆಣ್ಣುಮಕ್ಕಳು ವಿಷಯವನ್ನು ಮುಚ್ಚಿಡುತ್ತಾರೆ. ಮುಂದೆ ಯಾವಾಗಲಾದರೂ ಈ ವಿಷಯವನ್ನು ಹೇಳಿದರಾಯ್ತು, ಸಮಯ ಸಂದರ್ಭ ಬಂದಾಗ ಹೇಳಬಹುದು ಎಂದೆಲ್ಲಾ ಯೋಚನೆ ಮಾಡಿರುತ್ತಾರೆ. ಕೆಲವು ಸಮಯದಲ್ಲಿ ಇದು ಅನಿವಾರ್ಯವೂ ಆಗಿರುತ್ತದೆ. ಆದರೆ ಇದೇ ಒಂದು ಘಟನೆ ಸಂಸಾರವನ್ನೇ ಹಾಳು ಮಾಡಬಲ್ಲುದು. ಆದ್ದರಿಂದ ಕೊನೆಗೆ ವಿಷಯ ಹೇಳುವ ಬದಲು ಮೊದಲೇ ವಿಷಯ ಹೇಳಿಬಿಡಿ, ಆ ವಿಷಯ ನಿಮಗೆ ಚಿಕ್ಕದ್ದು ಎನಿಸಿದ್ರೂ ಅದು ಗಂಡನಿಗೆ ದೊಡ್ಡ ವಿಷಯವೇ ಆಗಿರಬಹುದು. ಇದು ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಗಂಡಸರಿಗೂ ಅನ್ವಯಿಸುತ್ತದೆ ಎಂದು ಬುದ್ಧಿಮಾತು ಹೇಳುತ್ತಿದ್ದಾರೆ ಅಮೃತಧಾರೆ ಫ್ಯಾನ್ಸ್​.

ಅಷ್ಟಕ್ಕೂ ಇವರು ಈ ರೀತಿ ಬುದ್ಧಿಮಾತು ಹೇಳುವುದಕ್ಕೆ ಕಾರಣವೂ ಇದೆ. ಅದೇನೆಂದರೆ, ಭೂಮಿಕಾ ಮತ್ತು ಗೌತಮ್​ ನಡುವೆ ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನ್ನುವಾಗಲೇ ಚಿನ್ನದ ಒಡವೆ ಅಡವಿಟ್ಟ ವಿಷಯದಿಂದ ಇಬ್ಬರ ನಡುವೆ ಬಿರುಕು ಮೂಡುವ ಮಟ್ಟಿಗೆ ಸ್ಥಿತಿ ಬಂದಿದೆ.  ಇಲ್ಲಿ ಗೌತಮ್​ ಮತ್ತು ಭೂಮಿಕಾಳನ್ನು ಬೇರೆ ಮಾಡಲು, ಅವರಿಬ್ಬರ ನಡುವೆ ಮೂಡುತ್ತಿರುವ ಪ್ರೀತಿಯನ್ನು ದ್ವೇಷಕ್ಕೆ ಬದಲಿಸಲು ಶಕುಂತಲಾ ತಂತ್ರ ರೂಪಿಸುತ್ತಲೇ ಬಂದಿದ್ದಾಳೆ. ಅವರ ಎಲ್ಲಾ ತಂತ್ರಗಳೂ ಸದ್ಯ ಬೇರೆ ಸೀರಿಯಲ್​ಗಳ ರೀತಿಯಲ್ಲಿ ಸಫಲವಾಗದೇ ಗೌತಮ್​ ಮತ್ತು ಭೂಮಿಕಾ ನಡುವೆ ಇರುವ ಪ್ರೀತಿಯಿಂದ ವಿಫಲವಾಗುತ್ತಲೇ ಬಂದಿವೆ. ಅಲ್ಲದೇ ಶಕುಂತಲಾ ತಂತ್ರ ರೂಪಿಸಿದಷ್ಟೂ ಪತಿ-ಪತ್ನಿ ಹತ್ತಿರವಾಗುತ್ತಿದ್ದಾರೆ. ಆದರೆ  ಇದೀಗ ಈ ವಿಷಯವೇ ದೊಡ್ಡದಾಗುವ ಹಾಗೆ ಕಾಣಿಸುತ್ತಿದೆ.

Tap to resize

Latest Videos

ಬಿಂಕದ ಸಿಂಗಾರಿಗೆ ಸಿಹಿಯ ಭರ್ಜರಿ ಸ್ಟೆಪ್​: ಅಶೋಕ್​ ಜತೆ ಪ್ರಿಯಾ ಬದ್ಲು ಚಾಂದನಿ ಯಾಕೆ ಅಂತಿದ್ದಾರೆ ನೆಟ್ಟಿಗರು!

ಆನಂದ್​ ಈ ವಿಷಯವನ್ನು ಗೌತಮ್​ಗೆ ಹೇಳುವಂತೆ ಹೇಳಿದ್ದಾನೆ. ಟೈಮ್​ ನೋಡಿಕೊಂಡು ಈ ವಿಷಯ ಹೇಳುವುದಾಗಿ ಭೂಮಿಕಾ ಹೇಳುವಷ್ಟರಲ್ಲಿಯೇ ಗೌತಮ್​ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾನೆ. ತನಗೆ ಹೇಳದೇ ಭೂಮಿಕಾ ಈ ರೀತಿ ಮಾಡಿರುವುದು, ಅದಕ್ಕೆ ಶಕುಂತಲಾ ದೇವಿ ಉಪ್ಪು-ಖಾರ ಸೇರಿಸಿ ಹೇಳಿರುವ ಕಾರಣ, ಪತ್ನಿಯ ಬಗ್ಗೆ ಗೌತಮ್​ಗೆ ನೋವಾಗಿದೆ. ಅಷ್ಟಕ್ಕೂ  ಕೆಲಸ ಕಳೆದುಕೊಂಡಿರೋ ತಮ್ಮನಿಗೆ ಹಣದ ಸಹಾಯ ಮಾಡಲು ಸ್ವಾಭಿಮಾನಿ ಭೂಮಿಕಾ, ತನ್ನ ಚಿನ್ನವನ್ನು ಅಡುವು ಇಟ್ಟು ಐದು ಲಕ್ಷ ರೂಪಾಯಿ ಕೊಟ್ಟಿದ್ದಾಳೆ. ಇದು ಯಾರಿಗೂ ಗೊತ್ತಿಲ್ಲದ ವಿಷಯ. ಗಂಡ ಗೌತಮ್​ಗೆ ಹೇಳಿದರೆ ಚಿಟಿಕೆ ಹೊಡೆಯುವಷ್ಟರಲ್ಲಿ ಕೋಟಿ ಕೋಟಿ ಹಣವನ್ನೇ ಕೊಡುತ್ತಿದ್ದ. ಆದರೆ ಭೂಮಿಕಾ ಸ್ವಾಭಿಮಾನಿಯಾಗಿರೋ ಕಾರಣ, ಐದು ಲಕ್ಷ ರೂಪಾಯಿ ಸಾಲವನ್ನು ತಾನೇ ತೀರಿಸಲು ಕೆಲಸಕ್ಕೆ ಹೋಗುತ್ತಿದ್ದಾಳೆ. ಈ ವಿಷಯ ಅತ್ತೆ ಶಕುಂತಲಾಗೆ ತಿಳಿದಿದೆ. ಐದು ಲಕ್ಷ ರೂಪಾಯಿ ಹಣದ ಚೀಟಿ ಅವಳಿಗೆ ಸಿಕ್ಕಿದೆ. ಇದರೊಂದಿದಲೇ ಇಬ್ಬರನ್ನೂ ಬೇರೆ ಬೇರೆ ಮಾಡಬಹುದು ಎನ್ನುವ ಪ್ಲ್ಯಾನ್​ ಮಾಡಿದ್ದಾಳೆ ಅವಳು.
 
ಅದನ್ನು ಗೌತಮ್​ಗೆ ಹೇಳಿದ್ದಾಳೆ.  ತನಗೆ ಹೇಳದೇ ಒಡವೆಗಳನ್ನೇ ಭೂಮಿಕಾ ಒತ್ತೆ ಇಟ್ಟಿರುವ ಕಾರಣ ಗೌತಮ್​ ಕೆಂಡಾಮಂಡಲನಾಗಿ ಇಬ್ಬರ ನಡುವೆ ದೊಡ್ಡ ಗಲಾಟೆ ಮಾಡಿಸುವ ಪ್ಲ್ಯಾನ್​ ಶಕುಂತಲಾದ್ದು.  ಈ ಪ್ಲ್ಯಾನ್​ ಸಕ್ಸಸ್​ ಆಗದೇ ಇರಲಿ ಎನ್ನುವುದು ಅಭಿಮಾನಿಗಳ ಅಭಿಮತ. ಅದೇ ವೇಳೆ, ಹೀಗೆಲ್ಲಾ ಗಂಡನಿಗೆ ಹೇಳದೇ ವಿಷಯ ಮುಚ್ಚಿಡಬೇಡಿ, ಇದು ದೊಡ್ಡದಾಗಿ ಬೆಳೆಯಬಹುದು ಎಂದು ಸೀರಿಯಲ್​ ಪ್ರೇಮಿಗಳು ಮಹಿಳೆಯರಿಗೆ ಬುದ್ಧಿಮಾತನ್ನೂ ಹೇಳುತ್ತಿದ್ದಾರೆ. 
 

ಮಂಟಪಕ್ಕೆ ನನ್​ ಕರ್ಕೊಂಡು ಬರ್ಬೇಕಿದ್ದ ಮಾವ ಕಾಣೆಯಾಗೋದ್ರು! ಅದೊಂದ್​ ದೊಡ್ಡ ಕಥೆ, ಆ ದಿನ ಸ್ಮರಿಸಿದ ರಕ್ಷಿತಾ

click me!